ನಿಮ್ಮ ಟಿವಿ ಸ್ಕ್ರೀನ್ ಮೇಲೂ ಕಾಣುತ್ತಾ ಇಂತಹ ನಂಬರ್? ಕಡೆಗಣಿಸಬೇಡಿ, ಎಚ್ಚರ!
First Published Dec 28, 2020, 3:24 PM IST
ಇಂದು ಬಹುತೇಕ ಎಲ್ಲರ ಮನೆಯಲ್ಲೂ ಟಿವಿ ಇದೆ, ಹಾಗೂ ಇಸನ್ನು ವೀಕ್ಷಿಸುವವರಿದ್ದಾರೆ. ಇನ್ನು ಇದನ್ನು ವೀಕ್ಷಿಸುವ ಪರಿ ಬಹುತೇಕ ಎಲ್ಲರದ್ದೂ ಸಮನಾಗಿರುತ್ತದೆಡ. ಎಲ್ಲಿಯವರೆಗೆ ಟಿವಿಯಲ್ಲಿ ಬರುವ ಕಾರ್ಯಕ್ರಮ ಹಿಡಿಸುತ್ತದೋ ಅಲ್ಲಿಯವರೆಗೆ ವೀಕ್ಷಿಸುತ್ತಿರುತ್ತಾರೆ. ಬಳಿಕ ಚಾನೆಲ್ ಬದಲಾಯಿಸುತ್ತಾರೆ. ಹೀಗಾಗಿ ವೀಕ್ಷಕರ ಗಮನ ಚಾನೆಲ್ ಮೇಲಿರುತ್ತದೆ. ಆದರೆ ನೀವು ಯಾವತ್ತಾದರೂ ಟಿವಿ ಸ್ಕ್ರೀನ್ ಮೇಲೆ ಕಾಣಿಸಿಕೊಳ್ಳುವ ನಂಬರ್ ಗಮನಿಸಿದ್ದೀರಾ? ಯಾವತ್ತೂ ಈ ನಂಬರ್ ಸ್ಕ್ರೀನ್ ಮೇಲಿರುವುದಿಲ್ಲ. ಆಗೊಮ್ಮೆ, ಈಗೊಮ್ಮೆ ಕಾಣಿಸಿಕೊಳ್ಳುವ ಈ ನಂಬರ್ ಮಾಯವಾಗುತ್ತವೆ. ಆದರೆ ನೆನಪಿರಲಿ ಈ ನಂಬರ್ ಸುಮ್ ಸುಮ್ಮನೆ ಟಿವಿಯಲ್ಲಿ ಕಾಣಿಸುವುದಿಲ್ಲ. ಇದಕ್ಕೇನು ಕಾರಣ? ಇಲ್ಲಿದೆ ವಿವರ

2020ರಲ್ಲಿ ಅನೇಕ ಮಂದಿ ವಿಡಿಯೋ ವೀಕ್ಷಿಸಲು ಫೋನ್ ಬಳಸುತ್ತಾರೆ. ಹೀಗಿದ್ದರೂ ಮನೆಯಲ್ಲಿ ಟಿವಿ ಇದ್ದೇ ಇರುತ್ತದೆ. ಅದೆಷ್ಟೇ ಆನ್‌ಲೈನ್‌ನಲ್ಲಿ ವಿಡಿಯೋ ವೀಕ್ಷಿಸಿದರೂ ಟಿವಿ ಅದೊಂದು ಮೂಲೆಯಲ್ಲಿ ಆನ್ ಆಗಿರುತ್ತದೆ. ಹೀಗಿರುವಾಗ ಟಿವಿಯಲ್ಲಿ ರ್ಯಾಂಡಮ್ ನಂಬರ್ ಕಾಣಿಸಿಕೊಳ್ಳುತ್ತವೆ. ಆದರೆ ಇವು ಯಾಕೆ ಕಾಣಿಸಿಕೊಳ್ಳುತ್ತವೆ ಎಂದು ನೀವೆಂದಾದರೂ ಯೋಚಿಸಿದ್ದೀರಾ?

ಟಿವಿಯಲ್ಲಿ ಕಾಣಿಸಿಕೊಳ್ಳುವ ಈ ನಂಬರ್‌ನ್ನು ಜನರು ಅನೇಕ ಬಾರಿ ಕಡೆಗಣಿಸುತ್ತಾರೆ. ಇಲ್ಲವೆಂದಾದರೆ ಇವು ಹೋಗಲಿ ಎಂದು ಕಾಯುತ್ತಿರುತ್ತಾರೆ, ಯಾಕೆಂದರೆ ಇವನ್ನು ರಿಮೋಟ್ ಮೂಲಕ ಎಕ್ಸಿಟ್ ಮಾಡಲು ಆಗುವುದಿಲ್ಲ. ಆದರೆ ನೆನಪಿರಲಿ ಇದು ನಿಮಗೆ ಕಿರಿ ಕಿರಿಯುಂಟು ಮಾಡಲು ಪರದೆ ಮೇಲೆ ಕಾಣಿಸಿಕೊಳ್ಳುವುದಲ್ಲ.
Today's Poll
ಎಷ್ಟು ಜನರೊಂದಿಗೆ ಆನ್ಲೈನ್ ಗೇಮ್ ಆಡಲು ಇಚ್ಛಿಸುತ್ತೀರಿ?