
ನ್ಯೂಜಿಲೆಂಡ್(ಡಿ. 27) ಕ್ರಿಕೆಟ್ ಪಂದ್ಯ ನಡೆಯುತ್ತಿದ್ದಾಗ ತಮ್ಮ ನೆಚ್ಚಿನ ನಟನ ನೋಡಲು ಅಭಿಮಾನಿಗಳೂ ಬೆತ್ತಲೆ ಓಡಿಬರುವುದು ಹೊಸದೇನೂ ಅಲ್ಲ.. ಅಂಥದ್ದೆ ಒಂದು ಪ್ರಕರಣ ನ್ಯೂಜಿಲೆಂಡ್ ಮತ್ತು ಪಾಕಿಸ್ತಾನ ನಡುವಿನ ಟೆಸ್ಟ್ ಪಂದ್ಯದ ವೇಳೆ ನಡೆದಿದೆ.
ನೆಚ್ಚಿನ ಆಟಗಾರ ಕೇನ್ ವಿಲಿಯಮ್ಸ್ ಸನ್ ಜತೆ ಸೆಲ್ಫಿ ತೆಗೆದುಕೊಳ್ಳುವ ಭರದಲ್ಲಿ ಅಭಿಮಾನಿ ಓಡೋಡಿ ಬಂದಿದ್ದಾನೆ. ಸೆಕ್ಯೂರಿಟಿ ಗಾರ್ಡ್ ಗಳನ್ನು ದಾಟಿ ಬೆತ್ತಲೆ ಓಟ ಮಾಡಿದ್ದಾನೆ.
ಥೈಲ್ಯಾಂಡ್ ರಾಜನ ಪ್ರೇಯಸಿಯ ಬೆತ್ತಲೆ ಪೋಟೋಗಲು ಲೀಕ್!
ಸೆಕ್ಯೂರಿಟಿ ಗಾರ್ಡ್ ಗಳು ಬೆತ್ತಲೆ ವ್ಯಕ್ತಿಯನ್ನು ಹಿಡಿಯಲು ಹರಸಾಹಸ ಮಾಡಿದ್ದಾರೆ. ಆದರೂ ಆತ ಮೈದಾನದ ಮಧ್ಯಭಾಗಕ್ಕೆ ಓಡೋಡಿ ಬಂದಿದ್ದಾನೆ.ಇಂಗ್ಲೆಂಡ್, ಆಸ್ಟ್ರೇಲಿಯಾದಲ್ಲಿ ಪಂದ್ಯಗಳು ನಡೆದಾಗ ಇಂಥ ಬೆತ್ತಲೆ ವ್ಯಕ್ತಿಗಳು ಕಾಟ ಕೊಟ್ಟ ಸಾಕಷ್ಟು ಉದಾಹರಣೆ ಇದೆ. ಫುಟ್ಬಾಲ್ ಪಂದ್ಯದ ವೇಳೆ ಇವರ ಆಟ ಇನ್ನಷ್ಟು ಜೋರಾಗಿ ಇರುತ್ತದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.