ಬಾಂಗ್ಲಾ ಪ್ರೀಮಿಯರ್ ಲೀಗ್ ಉದ್ಘಾಟನಾ ಸಮಾರಂಭಕ್ಕೆ ಬಾಲಿವುಡ್ ಸ್ಟಾರ್ಸ್!

Published : Nov 06, 2019, 09:50 PM IST
ಬಾಂಗ್ಲಾ ಪ್ರೀಮಿಯರ್ ಲೀಗ್ ಉದ್ಘಾಟನಾ ಸಮಾರಂಭಕ್ಕೆ ಬಾಲಿವುಡ್ ಸ್ಟಾರ್ಸ್!

ಸಾರಾಂಶ

ಬಾಂಗ್ಲಾ ಪ್ರೀಮಿಯರ್ ಲೀಗ್ ಟೂರ್ನಿ ಉದ್ಘಾಟನಾ ಸಮಾರಂಭಕ್ಕೆ ಕ್ರಿಕೆಟ್ ಮಂಡಳಿ ಸಜ್ಜಾಗಿದೆ. ಬಾಲಿವುಡ್ ಸ್ಟಾರ್ ಸೆಲೆಬ್ರೆಟಿಗಳು ಬಾಂಗ್ಲಾ ಪ್ರೀಮಿಯರ್ ಉದ್ಘಾಟನಾ ಸಮಾರಂಭದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಢಾಕಾ(ನ.06): ಭಾರತ ಪ್ರವಾಸದಲ್ಲಿರುವ ಬಾಂಗ್ಲಾದೇಶ ತಂಡ ಇನ್ನುಳಿದ 2 ಟಿ20 ಹಾಗೂ 2 ಟೆಸ್ಟ್ ಪಂದ್ಯ ಮುಗಿಸಿ ತವರಿಗೆ ತೆರಳಲಿದೆ. ಡಿಸೆಂಬರ್ 8 ರಿಂದ ಬಾಂಗ್ಲಾದೇಶ ಪ್ರೀಮಿಯರ್ ಲೀಗ್ ಟೂರ್ನಿ ಆರಂಭಗೊಳ್ಳಲಿದೆ. ಈ ಬಾರಿ ಬಿಬಿಎಲ್ ಟೂರ್ನಿ ಉದ್ಘಾಟನಾ ಸಮಾರಂಭವನ್ನು ಸ್ಮರಣೀಯವಾಗಿಸಲು ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ ಬಾಲಿವುಡ್ ನಟ-ನಟಿಯರಿಗೆ ಆಹ್ವಾನ ನೀಡಿದೆ.

ಇದನ್ನೂ ಓದಿ: IPL ಉದ್ಘಾಟನಾ ಸಮಾರಂಭ; ಕಳೆದ ಬಾರಿ ಪುಲ್ವಾಮಾ, ಈಗ ಮತ್ತೊಂದು ಕಾರಣಕ್ಕೆ ರದ್ದು?

ಬಾಂಗ್ಲಾ ಪ್ರೀಮಿಯರ್ ಲೀಗ್ ಒಪನಿಂಗ್ ಸೆರೆಮನಿಯಲ್ಲಿ ಬಾಲಿವುಡ್ ನಟಿ ಕತ್ರಿನಾ ಕೈಫ್, ನಟ ಟೈಗರ್ ಶ್ರಾಫ್, ಜಾನ್ ಆಬ್ರಹಾಂ, ಗಾಯಕ ಅರ್ಜೀತ್ ಸಿಂಗ್ ಸೇರಿದಂತೆ ಪ್ರಮುಖ ಸೆಲೆಬ್ರೆಟಿಗಳು ಕಾರ್ಯಕ್ರಮ ನೀಡಿಲಿದ್ದಾರೆ. ಈಗಾಗಲೇ ಬಾಲಿವುಡ್ ಸೆಲೆಬ್ರೆಟಿಗಳಿಗೆ ಆಹ್ವಾನ ನೀಡಲಾಗಿದೆ.

ಇದನ್ನೂ ಓದಿ: ಐಪಿಎಲ್ ಹರಾಜು: ಕೋಲ್ಕ​ತಾದಲ್ಲಿ ಆಟಗಾರರ ಖರೀದಿಗೆ ಡೇಟ್ ಫೈನಲ್

ಬಾಲಿವುಡ್ ತಾರೆಯರ ಲಭ್ಯತೆ ಕುರಿತು ಶೀಘ್ರವೇ ಸ್ಪಷ್ಟ ಚಿತ್ರಣ ಸಿಗಲಿದೆ. ಭಾರತದ ಪ್ರಮುಖ ತಾರೆಯರು ಬಾಂಗ್ಲಾ ಪ್ರೀಮಿಯರ್ ಲೀಗ್ ಟೂರ್ನಿ ಒಪನಿಂಗ್ ಸೆರೆಮನಿಯಲ್ಲಿ ಪಾಲ್ಗೊಳ್ಳಲಿದ್ದಾರೆ. ಅದ್ಧೂರಿಯಾಗಿ ಸಮಾರಂಭ ನಡೆಸಲು ಬಾಂಗ್ಲಾ ಕ್ರಿಕೆಟ್ ಮಂಡಳಿ ಎಲ್ಲಾ ತಯಾರಿ ಮಾಡಿಕೊಂಡಿದೆ.

ಬಾಂಗ್ಲಾ ಲೀಗ್ ಟೂರ್ನಿ ಒಪನಿಂಗ್ ಸೆರೆಮನಿಗೆ ಸಜ್ಜಾದರೆ, ಬಿಸಿಸಿಐ ಉದ್ಘಾಟನಾ ಸಮಾರಂಭವನ್ನು ರದ್ದು ಮಾಡಲು ಮುಂದಾಗಿದೆ. ಹಣ ದುಂದು ವೆಚ್ಚ ಮಾಡೋ ಕಾರ್ಯಕ್ರಮ ಆಯೋಜನೆ ಬೇಡ. ಕ್ರಿಕೆಟ್ ಮುಖ್ಯವೇ ಹೊರತು, ಮನರಂಜನಾ ಕಾರ್ಯಕ್ರಮವಲ್ಲ ಎಂದು ಬಿಸಿಸಿಐ ಹೇಳಿದೆ. 
 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

WPL 2026: ಆರೆಂಜ್ ಕ್ಯಾಪ್ ರೇಸ್‌ನಲ್ಲಿ ಈ 5 ಬ್ಯಾಟರ್‌ಗಳು ಮುಂಚೂಣಿಯಲ್ಲಿದ್ದಾರೆ!
ಟಿ20 ವಿಶ್ವಕಪ್ ಟೂರ್ನಿಗೂ ಮೊದಲೇ ಭಾರತ ತಂಡದಲ್ಲಿ ದೊಡ್ಡ ಪ್ರಯೋಗದ ಸುಳಿವು ಬಿಚ್ಚಿಟ್ಟ ಸೂರ್ಯಕುಮಾರ್ ಯಾದವ್!