ಆಫ್ಘಾನ್ ಅಭಿಮಾನಿಗೆ ಲಕ್ನೋದಲ್ಲಿ ಸಿಗಲಿಲ್ಲ ರೂಂ; ನೆರವಿಗೆ ಧಾವಿಸಿದ ಪೊಲೀಸ್!

By Web DeskFirst Published Nov 6, 2019, 8:52 PM IST
Highlights

ಆಫ್ಘಾನಿಸ್ತಾನ ಹಾಗೂ ವೆಸ್ಟ್ ಇಂಡೀಸ್ ನಡುವಿನ ಕ್ರಿಕೆಟ್ ಪಂದ್ಯಕ್ಕಾಗಿ ಅಫ್ಘಾನ್ ಅಭಿಮಾನಿಯೋರ್ವ ಭಾರತಕ್ಕೆ ಆಗಮಿಸಿದ್ದಾನೆ. ಲಕ್ನೋಗೆ ಬಂದ ಅಭಿಮಾನಿಗೆ ನಗರದಲ್ಲೇ ಎಲ್ಲೇ ಹೋದರು ಯಾರೂ ಕೂಡ ಉಳಿದುಕೊಳ್ಳಲು ರೂಂ ನೀಡಿಲ್ಲ.
 

ಲಕ್ನೋ(ನ.06): ಆಫ್ಘಾನಿಸ್ತಾನ ಹಾಗೂ ವೆಸ್ಟ್ ಇಂಡೀಸ್ ನಡುವಿನ ದ್ವಿಪಕ್ಷೀಯ ಕ್ರಿಕೆಟ್ ಸರಣಿಗೆ ಭಾರತ ಆತಿಥ್ಯ ವಹಿಸಿದೆ. ಅಟಲ್ ಬಿಹಾರಿ ವಾಜಪೇಯಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಏಕದಿನ ಸರಣಿಗಾಗಿ ಅಫ್ಘಾನಿಸ್ತಾನದಿಂದ ಅಭಿಮಾನಿಯೋರ್ವ ಲಕ್ನೋಗೆ ಆಗಮಿಸಿದ್ದಾನೆ. ಆದರೆ ಈತನಿಗೆ ಲಕ್ನೋದಲ್ಲಿ ಉಳಿದುಕೊಳ್ಳಲು ರೂಂ ವ್ಯವಸ್ಥೆ ಸಿಗದೆ ಕೊನೆಗೆ ಪೊಲೀಸ್ ಠಾಣೆ ಮೆಟ್ಟಿಲೇರಿದ ಘಟನೆ ನಡೆದಿದೆ.

ಇದನ್ನೂ ಓದಿ: ಆಫ್ಘಾನಿಸ್ತಾನ ಕ್ರಿಕೆಟ್ ತಂಡಕ್ಕೆ ಆಫ್ರಿಕಾ ಸ್ಟಾರ್ ಆಲ್ರೌಂಡರ್ ಕೋಚ್..!

ಶೇರ್ ಖಾನ್ ಅನ್ನೋ ಆಫ್ಘಾನ್ ಅಭಿಮಾನಿ ಕಾಬೂಲ್‌ನಿಂದ ಪಂದ್ಯ ನೋಡು ಲಕ್ನೋಗೆ ಆಗಮಿಸಿದ್ದಾನೆ. ಈತ ಬರೋಬ್ಬರಿ 8 ಅಡಿ 2 ಇಂಚು ಎತ್ತರ ಹಾಗೂ ಈತನ ಲುಕ್‌ಗೆ ಯಾರೂ ಕೂಡ ರೂಂ ನೀಡಿಲ್ಲ. ಸಾಮಾನ್ಯ ಹೊಟೆಲ್‌ನಲ್ಲಿ ಈತನಿಗೆ ಉಳಿದುಕೊಳ್ಳಲು ಎತ್ತರ ಸಾಕಾಗಿಲ್ಲ. ಇತರ ಹೊಟೆಲ್‌ಗಳಲ್ಲಿ ರೂಂ ನೀಡಿಲ್ಲ.  ಹೀಗಾಗಿ ಬೇರೆ ದಾರಿ ಕಾಣದ ಶೇರ್ ಖಾನ್ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾನೆ. 

ಇದನ್ನೂ ಓದಿ: 7 ಬಾಲ್‌ಗೆ 7 ಸಿಕ್ಸರ್: ಇತಿಹಾಸ ಬರೆದ ಆಫ್ಘನ್ ಕ್ರಿಕೆಟರ್ಸ್...!

ಶೇರ್ ಖಾನ್ ದಾಖಲೆಗಳನ್ನು ಪರಿಶೀಲಿಸಿದ ಪೊಲೀಸರು ರೂಂ ವ್ಯವಸ್ಥೆ ಮಾಡಿದ್ದಾರೆ. ಶೇರ್ ಖಾನ್ ಎತ್ತರವಿದ್ದರೂ ಮೃದು ಸ್ವಭಾವದವನು. ಎತ್ತರದಿಂದಲೇ ಕಾಬೂಲ್‌ನಲ್ಲಿ ಹೆಚ್ಚು ಜನಪ್ರೀಯ. ತನ್ನ ದೇಶದ ಪಂದ್ಯ ನೋಡಲು ಭಾರತಕ್ಕೆ ಆಗಮಿಸಿದ ಶೇರ್ ಖಾನ್ ರೂಂಗಾಗಿ ಪರದಾಡೋ ಪರಿಸ್ಥಿತಿ ಎದುರಾಗಿತ್ತು. ಪೊಲೀಸರ ಮಧ್ಯಪ್ರವೇಶದಿಂದ ಎಲ್ಲವೂ ಸುಖಾಂತ್ಯ ಕಂಡಿದೆ. 
 

click me!