* ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾದ ಆತಿಯಾ ಶೆಟ್ಟಿ-ಕೆಎಲ್ ರಾಹುಲ್ ಜೋಡಿ
* ಮಗಳ ಮದುವೆಗೆ ಗ್ರೀನ್ ಸಿಗ್ನಲ್ ನೀಡಿದ ನಟ ಸುನಿಲ್ ಶೆಟ್ಟಿ
* ವರ್ಷಾಂತ್ಯದಲ್ಲಿ ರಾಹುಲ್-ಆತಿಯಾ ವಿವಾಹ ಸಾಧ್ಯತೆ
ಬೆಂಗಳೂರು(ಮೇ.14): ಟೀಂ ಇಂಡಿಯಾಗೂ, ಬಾಲಿವುಡ್ಗೂ ಅವಿನಾವಭಾವ ಸಂಬಂಧವಿದೆ. ಅದು ಇಂದು ನಿನ್ನೆದಲ್ಲ. ಹಲವು ದಶಕಗಳ ಇತಿಹಾಸವಿದೆ. ವಿರಾಟ್ ಕೊಹ್ಲಿಯಿಂದ ಹಿಡಿದು ಟೀಂ ಇಂಡಿಯಾದ ಅನೇಕ ಪ್ಲೇಯರ್ಸ್ ಬಾಲಿವುಡ್ ನಟಿಯರನ್ನ ವರಿಸಿದ್ದಾರೆ. ಸದ್ಯ ಈ ಲಿಸ್ಟ್ಗೆ ಮತ್ತೊಂದು ಜೋಡಿ ಶೀಘ್ರವೇ ಸೇರ್ಪಡೆಯಾಗಲಿದೆ ಅದುವೇ ಲವ್ಲಿ ಕಪಲ್ಸ್ ಕೆ.ಎಲ್ ರಾಹುಲ್ ಮತ್ತು ಆತಿಯಾ ಶೆಟ್ಟಿ.
ಯೆಸ್, ಟೀಂ ಇಂಡಿಯಾದ ಸ್ಟಾರ್ ಕ್ರಿಕೆಟಿಗ ಕೆ.ಎಲ್ ರಾಹುಲ್ ಲವ್ವಲ್ಲಿ ಬಿದ್ದಿದ್ದಾರೆ. ಬಾಲಿವುಡ್ನ ಸ್ಟಾರ್ ನಟ ಸುನೀಲ್ ಶೆಟ್ಟಿ ಮಗಳ ಜೊತೆ ಕನ್ನಡಿಗ ರಾಹುಲ್ ಕಳೆದ ಕೆಲ ವರ್ಷಗಳಿಂದ ಡೇಟಿಂಗ್ನಲ್ಲಿದ್ದಾರೆ. ಇಬ್ಬರ ಪ್ರೇಮ ಸಂಬಂಧದ ಕುರಿತು, ಗಾಸಿಪ್ಗಳು ಹರಿದಾಡುತ್ತಲೇ ಇವೆ. ಆತಿಯಾ ಶೆಟ್ಟಿ ಜೊತೆ 3 ವರ್ಷಗಳಿಂದ ಡೇಟಿಂಗ್ಸ್ ನಡೆಸ್ತಿರೋ ರಾಹುಲ್ ತಮ್ಮ ಪ್ರೀತಿ ಬಗ್ಗೆ ಇತ್ತೀಚೆಗಷ್ಟೇ ಹೇಳಿಕೊಂಡಿದ್ರು. ಆ ಮೂಲಕ ಇಬ್ಬರ ಲವ್ ಕಹಾನಿಗೆ ಅಧಿಕೃತ ಮುದ್ರೆ ಒತ್ತಿದ್ರು. ಬಳಿಕ ಲವ್ಲಿ ಕಪಲ್ಸ್ ಮ್ಯಾರೇಜ್ ಆಗ್ತಾರಾ ? ಇಲ್ವಾ ಅನ್ನೋ ಪ್ರಶ್ನೆ ಎಲ್ಲರನ್ನ ಕಾಡ್ತಿತ್ತು. ಸದ್ಯ ಆ ಗೊಂದಲಕ್ಕೆ ತೆರೆ ಬಿದ್ದಿದ್ದು ಶೀಘ್ರದಲ್ಲೇ ರಾಹುಲ್-ಆತಿಯಾ ಶೆಟ್ಟಿ ಹಸೆಮಣೆ ಏರಲಿದ್ದಾರೆ.
ಈ ವರ್ಷಾಂತ್ಯದಲ್ಲೇ ಬ್ಯೂಟಿಫುಲ್ ಜೋಡಿಗಳ ಮದುವೆ:
ರಾಹುಲ್-ಆತಿಯಾ ಶೆಟ್ಟಿ ಪ್ರಣಯ ಪಕ್ಷಿಗಳಂತೆ ಹಾರಾಡ್ತಿದ್ರು ಮದುವೆಗೆ ಎರಡು ಕುಟಂಬಂದಿಂದ ಕಡೆಯಿಂದ ಅಧಿಕೃತ ಒಪ್ಪಿಗೆ ಮಾತ್ರ ಸಿಕ್ಕಿರಲಿಲ್ಲ. ಫೈನಲಿ ಇಬ್ಬರ ಮ್ಯಾರೇಜ್ ಕುರಿತು ಆತಿಯಾ ಶೆಟ್ಟಿ ತಂದೆ ಸುನೀಲ್ ಶೆಟ್ಟಿ ಮಾತನಾಡಿದ್ದು, ಮದುವೆಗೆ ಗ್ರೀನ್ ಸಿಗ್ನಲ್ ನೀಡಿದ್ದಾರೆ. ರಾಹುಲ್ ಬಗ್ಗೆ ನನಗೆ ಉತ್ತಮ ಅಭಿಪ್ರಾಯವಿದೆ. ಆತ ಒಳ್ಳೆಯ ಹುಡುಗ. ಮದುವೆ ಬಗ್ಗೆ ಅವರಿಬ್ಬರೇ ನಿರ್ಧಾರ ಮಾಡಲಿ. ನನ್ನ ಆಶೀರ್ವಾದ ಸದಾ ಇರುತ್ತದೆ'' ಎಂದು ಆತಿಯಾ ಶೆಟ್ಟಿ ತಂದೆ ಸುನೀಲ್ ಶೆಟ್ಟಿ ಹೇಳಿದ್ದಾರೆ. ಒಟ್ಟಿನಲ್ಲಿ ಸುನೀಲ್ ಶೆಟ್ಟಿ ಮಾತಿನಿಂದ ರಾಹುಲ್ ಹಾಗೂ ಆತಿಯಾ ಶೆಟ್ಟಿ ಫುಲ್ ಖುಷ್ ಆಗಿರೋದಂತೂ ಸತ್ಯ. ಎಲ್ಲವೂ ಅಂದುಕೊಂಡಂತೆ ನಡೆದ್ರೆ ಈ ಲವ್ಲಿ ಫೇರ್ ವರ್ಷಾಂತ್ಯದಲ್ಲೇ ಸಪ್ತಪದಿ ತುಳಿಯಲಿದ್ದಾರೆ.
IPL 2022 ಮಿಂಚುತ್ತಿರುವ ನಾಯಕ ರಾಹುಲ್‌ಗೆ ಭಾರಿ ಡಿಮ್ಯಾಂಡ್, ಖಾಸಗಿ ಬ್ರ್ಯಾಂಡ್‌ಗೆ ರಾಯಭಾರಿಯಾಗಿ ನೇಮಕ!
ಕಳೆದ ಮಾರ್ಚ್ 15ರಂದು ಮುಂಬೈ ಏರ್ಪೋರ್ಟ್‌ನಲ್ಲಿ ಕೆ.ಎಲ್. ರಾಹುಲ್ ಹಾಗೂ ಆತಿಯಾ ಶೆಟ್ಟಿ ಒಟ್ಟಾಗಿಯೇ ಕಾಣಿಸಿಕೊಂಡಿದ್ದರು. 15ನೇ ಆವೃತ್ತಿಯ ಐಪಿಎಲ್ ಟೂರ್ನಿ ಆಡಲು ಮುಂಬೈಗೆ ಬಂದಿಳಿದ ಕೆ.ಎಲ್. ರಾಹುಲ್ ಅವರನ್ನು ಪಿಕ್ ಅಪ್ ಮಾಡಲು ಆತಿಯಾ ಶೆಟ್ಟಿ ಏರ್ಪೋರ್ಟ್‌ಗೆ ಬಂದಿದ್ದರು. ಇದೀಗ ಬಾಲಿವುಡ್ ಹಾಗೂ ಕ್ರಿಕೆಟ್ ಅಭಿಮಾನಿಗಳು ಈ ತಾರಾ ಜೋಡಿಯನ್ನು ಒಂದಾಗಿ ಕಂಡು ಖುಷಿ ಪಟ್ಟಿದ್ದಾರೆ.
ಇನ್ನು ಐಪಿಎಲ್ ವಿಚಾರಕ್ಕೆ ಬರುವುದಾದರೇ ಕೆ.ಎಲ್. ರಾಹುಲ್ ನೇತೃತ್ವದ ನೂತನ ತಂಡವಾದ ಲಖನೌ ಸೂಪರ್ ಜೈಂಟ್ಸ್ ತಂಡವು ಟೂರ್ನಿಯಲ್ಲಿ ಅದ್ಭುತ ಪ್ರದರ್ಶನ ತೋರುವ ಮೂಲಕ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಡಾ. ಸಂಜೀವ್ ಗೋಯೆಂಕಾ ಒಡೆತನದ ಲಖನೌ ಸೂಪರ್ ಜೈಂಟ್ಸ್ ತಂಡವು ಇದುವರೆಗೂ 12 ಪಂದ್ಯಗಳನ್ನಾಡಿ 8 ಗೆಲುವು ಹಾಗೂ 4 ಸೋಲುಗಳೊಂದಿಗೆ 16 ಅಂಕಗಳ ಸಹಿತ ಅಂಕಪಟ್ಟಿಯಲ್ಲಿ ಎರಡೇ ಸ್ಥಾನದಲ್ಲಿದ್ದು, ಇನ್ನೊಂದು ಗೆಲುವು ಲಖನೌ ತಂಡದ ಪ್ಲೇ ಆಫ್ ಸ್ಥಾನವನ್ನು ಖಚಿತಪಡಿಸಲಿದೆ.