IPL 2022: ವೃದ್ದ ಅಭಿಮಾನಿಯ ತಲೆಗೆ ಅಪ್ಪಳಿಸಿದ ಪಾಟೀದಾರ್ ಬಾರಿಸಿದ ಸಿಕ್ಸ್‌..! ವಿಡಿಯೋ ವೈರಲ್

By Naveen KodaseFirst Published May 14, 2022, 3:31 PM IST
Highlights

* ಪಂಜಾಬ್ ಕಿಂಗ್ಸ್‌ ಎದುರು ಮುಗ್ಗರಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು

* ರಜತ್ ಪಾಟೀದಾರ್ ಬಾರಿಸಿದ ಸಿಕ್ಸರ್‌ ವೃದ್ದನ ತಲೆಗೆ ಅಪ್ಪಳಿಸಿದ ವಿಡಿಯೋ ವೈರಲ್

* ಹಪ್ರೀತ್ ಬ್ರಾರ್ ಬೌಲಿಂಗ್‌ನಲ್ಲಿ 102 ಮೀಟರ್ ದೂರ ಸಿಕ್ಸರ್ ಚಚ್ಚಿದ ರಜತ್ ಪಾಟೀದಾರ್

ಮುಂಬೈ(ಮೇ.14): 15ನೇ ಆವೃತ್ತಿಯ ಇಂಡಿಯನ್‌ ಪ್ರೀಮಿಯರ್ ಲೀಗ್ (Indian Premier League) ಟೂರ್ನಿಯ 60ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್‌ ಬೆಂಗಳೂರು (Royal Challengers Bangalore) ಹಾಗೂ ಪಂಜಾಬ್ ಕಿಂಗ್ಸ್‌ (Punjab Kings) ತಂಡಗಳು ಮುಖಾಮುಖಿಯಾಗಿದ್ದವು. ಇಲ್ಲಿನ ಬ್ರೆಬೋರ್ನ್‌ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡದ ಬ್ಯಾಟರ್‌ ರಜತ್ ಪಾಟೀದಾರ್ (Rajat Patidar) ಬಾರಿಸಿದ ಸಿಕ್ಸರ್‌, ಮೈದಾನದಲ್ಲಿದ್ದ ವೃದ್ದ ಅಭಿಮಾನಿ ತಲೆಗೆ ಅಪ್ಪಳಿಸಿದ್ದು ವಿಡಿಯೋ ವೈರಲ್‌ ಆಗಿದೆ.

ರಾಯಲ್ ಚಾಲೆಂಜರ್ಸ್‌ ಬೆಂಗಳೂರು ಹಾಗೂ ಪಂಜಾಬ್ ಕಿಂಗ್ಸ್‌ ತಂಡಗಳ ನಡುವಿನ ಹೈವೋಲ್ಟೇಜ್‌ ಪಂದ್ಯವನ್ನು ಕಣ್ತುಂಬಿಕೊಳ್ಳಲು ಕ್ರಿಕೆಟ್ ಅಭಿಮಾನಿಗಳು ತುದಿಗಾಲಿನಲ್ಲಿ ನಿಂತಿದ್ದರು. ಪಂಜಾಬ್ ಕಿಂಗ್ಸ್ ನೀಡಿದ್ದ 210 ರನ್‌ಗಳ ಸವಾಲಿನ ಗುರಿ ಬೆನ್ನತ್ತಿದ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡವು ಸ್ಪೋಟಕ ಆರಂಭವನ್ನೇ ಪಡೆಯಿತು. ಇನಿಂಗ್ಸ್‌ನ 9ನೇ ಓವರ್‌ನಲ್ಲಿ ಹಪ್ರೀತ್ ಬ್ರಾರ್‌ ಎಸೆದ ಚೆಂಡನ್ನು ರಜತ್ ಪಾಟೀದಾರ್ 102 ಮೀಟರ್‌ ದೂರ ಸಿಕ್ಸರ್ ಬಾರಿಸಿದರು. ಪಾಟೀದಾರ್ ಬಾರಿಸಿದ ಸಿಕ್ಸ್‌ ಮೈದಾನದಲ್ಲಿದ್ದ ವೃದ್ದ ಪ್ರೇಕ್ಷಕರೊಬ್ಬರ ತಲೆಗೆ ಅಪ್ಪಳಿಸಿತ್ತು. ಚೆಂಡು ತಲೆಗೆ ಬಡಿದ ಬಳಿಕ ಅವರಿಗೆ ನೋವುಂಟು ಆದಂತೆ ಕಂಡು ಬಂದಿತು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

pic.twitter.com/MS8jUwdL3s

— Varma Fan (@VarmaFan1)

ಆರ್‌ಸಿಬಿ ಆಸೆಗೆ ಪಂಜಾಬ್‌ ಪೆಟ್ಟು!

ಮುಂಬೈ: ಪಂಜಾಬ್‌ ಕಿಂಗ್ಸ್‌ ವಿರುದ್ಧ ನಿರ್ಣಾಯಕ ಪಂದ್ಯದಲ್ಲಿ 54 ರನ್‌ ಹೀನಾಯ ಸೋಲು ಅನುಭವಿಸಿದ ಆರ್‌ಸಿಬಿ, 15ನೇ ಆವೃತ್ತಿಯ ಪ್ಲೇ-ಆಫ್‌ ರೇಸ್‌ನಲ್ಲಿ ಭಾರೀ ಹಿನ್ನಡೆ ಅನುಭವಿಸಿದೆ. ತಂಡದ ನೆಟ್‌ ರನ್‌ರೇಟ್‌ ಇನ್ನಷ್ಟುಕುಸಿದಿದ್ದು ಪ್ಲೇ-ಆಫ್‌ ಪ್ರವೇಶಿಸಬೇಕಿದ್ದರೆ ಬಾಕಿ ಇರುವ ಒಂದು ಪಂದ್ಯ ಗೆದ್ದು, ಉಳಿದ ತಂಡಗಳ ಫಲಿತಾಂಶ ತನ್ನ ಪರವಾಗಿ ಬರಬೇಕಿದೆ. ಪಂಜಾಬ್‌ ಗೆಲುವಿನೊಂದಿಗೆ ಪ್ಲೇ-ಆಫ್‌ ರೇಸ್‌ ಮತ್ತಷ್ಟು ಕುತೂಹಲ ಮೂಡಿಸಿದೆ.

ಟಾಸ್‌ ಗೆದ್ದು ಮೊದಲು ಪಂಜಾಬ್‌ ಪಡೆಯನ್ನು ಬ್ಯಾಟಿಂಗ್‌ಗೆ ಆಹ್ವಾನಿಸಿದ ಆರ್‌ಸಿಬಿ, ತೀರಾ ಕಳಪೆ ಬೌಲಿಂಗ್‌ ಪ್ರದರ್ಶನ ತೋರಿತು. ಜಾನಿ ಬೇರ್‌ಸ್ಟೋವ್‌ ಹಾಗೂ ಲಿಯಾಮ್‌ ಲಿವಿಂಗ್‌ಸ್ಟೋನ್‌ರ ಸ್ಫೋಟಕ ಅರ್ಧಶತಕಗಳ ನೆರವಿನಿಂದ ಪಂಜಾಬ್‌ 20 ಓವರಲ್ಲಿ 9 ವಿಕೆಟ್‌ಗೆ 209 ರನ್‌ಗಳ ಬೃಹತ್‌ ಮೊತ್ತ ಕಲೆಹಾಕಿತು. ಕಠಿಣ ಗುರಿ ಬೆನ್ನತ್ತಿದ ಆರ್‌ಸಿಬಿ, 20 ಓವರಲ್ಲಿ 9 ವಿಕೆಟ್‌ಗೆ 155 ರನ್‌ ಗಳಿಸಿ ಸೋಲೊಪ್ಪಿಕೊಂಡಿತು. ಗ್ಲೆನ್‌ ಮ್ಯಾಕ್ಸ್‌ವೆಲ್‌ 35, ರಜತ್‌ ಪತಿದಾರ್‌ 26 ರನ್‌ ಗಳಿಸಿದ್ದನ್ನು ಹೊರತುಪಡಿಸಿ ಉಳಿದ ಬ್ಯಾಟರ್‌ಗಳಿಂದ ನಿರೀಕ್ಷಿತ ಕೊಡುಗೆ ಸಿಗಲಿಲ್ಲ.

IPL 2022 ಪಂಜಾಬ್ ವಿರುದ್ಧ ಆರ್ ಸಿಬಿ ತಂಡಕ್ಕೆ ಮತ್ತೆ ಸೋಲಿನ ಬರೆ

ಇದಕ್ಕೂ ಮುನ್ನ ಪಂಜಾಬ್‌ ಬ್ಯಾಟರ್‌ಗಳು ಆರ್‌ಸಿಬಿ ಬೌಲರ್‌ಗಳ ಮೇಲೆ ಸವಾರಿ ನಡೆಸಿದರು. ಪವರ್‌-ಪ್ಲೇನಲ್ಲಿ 1 ವಿಕೆಟ್‌ಗೆ 83 ರನ್‌ ಚಚ್ಚಿದ ಪಂಜಾಬ್‌, 9ನೇ ಓವರಲ್ಲಿ 100 ರನ್‌ ದಾಟಿತು. ಬೇರ್‌ಸ್ಟೋವ್‌ 29 ಎಸೆತಗಳಲ್ಲಿ 4 ಬೌಂಡರಿ, 7 ಸಿಕ್ಸರ್‌ನೊಂದಿಗೆ 66 ರನ್‌ ಸಿಡಿಸಿದರೆ, ಲಿವಿಂಗ್‌ಸ್ಟೋನ್‌ 42 ಎಸೆತದಲ್ಲಿ 5 ಬೌಂಡರಿ, 4 ಸಿಕ್ಸರ್‌ನೊಂದಿಗೆ 70 ರನ್‌ ಗಳಿಸಿದರು. ಹೇಜಲ್‌ವುಡ್‌ ಹಾಗೂ ಸಿರಾಜ್‌ ಸೇರಿ 6 ಓವರಲ್ಲಿ 100 ರನ್‌ ಚಚ್ಚಿಸಿಕೊಂಡಿದ್ದು, ಆರ್‌ಸಿಬಿಗೆ ಮಾರಕವಾಯಿತು. ಈ ನಡುವೆ ಹಸರಂಗ 4 ಓವರಲ್ಲಿ ಕೇವಲ 15 ರನ್‌ ನೀಡಿ 2 ವಿಕೆಟ್‌ ಕಬಳಿಸಿ ಗಮನ ಸೆಳೆದರು. 
   

click me!