ಟೀಂ ಇಂಡಿಯಾದಲ್ಲಿ ರಾಹುಲ್‌ಗೆ ಮಹಾ ಅನ್ಯಾಯ: ಕನ್ನಡಿಗನ ಮೇಲೆ ಗಂಭೀರ್ & ರೋಹಿತ್‌ಗೆ ನಂಬಿಕೆ ಇಲ್ವಾ?

By Kannadaprabha NewsFirst Published Sep 23, 2024, 1:48 PM IST
Highlights

ಬಾಂಗ್ಲಾದೇಶ ಎದುರಿನ ಮೊದಲ ಟೆಸ್ಟ್‌ ಪಂದ್ಯದಲ್ಲಿ ಕನ್ನಡಿಗ ಕೆ ಎಲ್ ರಾಹುಲ್‌ಗೆ ದೊಡ್ಡ ಶಾಕ್ ಎದುರಾಗಿದೆ. ಕೆಲವು ಘಟನೆಗಳನ್ನು ಗಮನಿಸಿದ್ರೆ ರಾಹುಲ್‌ ಮೇಲೆ ನಾಯಕ ರೋಹಿತ್ ಶರ್ಮಾ ನಂಬಿಕೆ ಕಳೆದುಕೊಂಡ್ರಾ ಎನ್ನುವ ಅನುಮಾನ ಕಾಡಲಾರಂಭಿಸಿದೆ. 

ಚೆನ್ನೈ: ಕನ್ನಡಿಗ ಕೆ.ಎಲ್ ರಾಹುಲ್ ಈವರೆಗೂ ಟೆಸ್ಟ್‌ನಲ್ಲಿ 8 ಶತಕ ಬಾರಿಸಿದ್ದಾರೆ. ಇದ್ರಲ್ಲಿ 7 ಶತಕಗಳು ವಿದೇಶದಲ್ಲಿ ಸಿಡಿಸಿದ್ದಾರೆ. ಅದರಲ್ಲೂ ಇಂಗ್ಲೆಂಡ್ ಮತ್ತು ದಕ್ಷಿಣ ಆಫ್ರಿಕಾದಲ್ಲಿ ಎರಡೆರೆಡು ಶತಕ ಅಂದ್ರೆ, ಸಾಮಾನ್ಯ ಸಾಧನೆ ಅಲ್ಲ. ಇಷ್ಟೆಲ್ಲಾ ಇದ್ರೂ ರಾಹುಲ್ ಟ್ಯಾಲೆಂಟ್ ಮತ್ತು ಸಾಮರ್ಥ್ಯಕ್ಕೆ ಬೆಲೆಯೇ ಇಲ್ಲದಂತಾಗಿದೆ. ಅದು ಹೇಗೆ ಅಂತೀರಾ? ಈ ಸ್ಟೋರಿ ನೋಡಿ ನಿಮಗೆ ಗೊತ್ತಾಗುತ್ತೆ.

ಟೀಂ ಇಂಡಿಯಾದಲ್ಲಿ ರಾಹುಲ್‌ಗೆ ಅನ್ಯಾಯ? 

Latest Videos

ಸದ್ಯ ಕ್ರಿಕೆಟ್ ದುನಿಯಾದ ಕ್ಲಾಸ್ ಬ್ಯಾಟರ್‌ಗಳಲ್ಲಿ  ಕನ್ನಡಿಗ ಕೆ.ಎಲ್ ರಾಹುಲ್ ಕೂಡ ಒಬ್ರು. ಅಷ್ಟೇ ಅಲ್ಲ, ಒನ್ಡೇ ಫಾರ್ಮೆಟ್ನಲ್ಲಿ ಟೀಂ ಇಂಡಿಯಾದ ಕೀ ಪ್ಲೇಯರ್. ಕಳೆದ 3 ವರ್ಷಗಳಿಂದಲೂ ತಂಡದ ಮಿಡಲ್ ಅರ್ಡರ್ ಬ್ಯಾಟಿಂಗ್‌ನ ಮೇನ್ ಪಿಲ್ಲರ್. ಕಳೆದ ವರ್ಷ ನಡೆದ ಏಕದಿನ ಟೂರ್ನಿಯೇ ಅದಕ್ಕೆ ಸಾಕ್ಷಿ. ಟೂರ್ನಿಯಲ್ಲಿ ರಾಹುಲ್ ಅಬ್ಬರಿಸಿದ್ರು.  11 ಪಂದ್ಯಗಳಿಂದ 75.33ರ ಸರಾಸರಿಯಲ್ಲಿ  452 ರನ್ ಕಲೆಹಾಕಿದ್ರು. 

ಶೇನ್ ವಾರ್ನ್ ರೆಕಾರ್ಡ್ ಸರಿಗಟ್ಟಿದ ಅಶ್ವಿನ್; ರವಿ ಯಶಸ್ಸಿನಲ್ಲಿ ಧೋನಿಗೂ ಸಲ್ಲಬೇಕು ಕ್ರೆಡಿಟ್..!

ಏಕದಿನ ಕ್ರಿಕೆಟ್ ಅಷ್ಟೇ ಅಲ್ಲ. ಟೆಸ್ಟ್ ಕ್ರಿಕೆಟ್ನಲ್ಲಿ ರಾಹುಲ್ ಹಲವು ಅದ್ಭುತ ಇನ್ನಿಂಗ್ಸ್‌ಗಳನ್ನಾಡಿದ್ದಾರೆ. 2021ರಲ್ಲಿ ಲಾರ್ಡ್ಸ್ನಲ್ಲಿ ಇಂಗ್ಲೆಂಡ್ ವಿರುದ್ಧ ಅದ್ಭುತ ಶತಕ ಬಾರಿಸಿದ್ರು. ಆ ಮೂಲಕ ತಂಡದ ಗೆಲುವಿಗೆ ಕಾರಣವಾಗಿದ್ರು. ಇನ್ನು ಕಳೆದ ವರ್ಷ ದಕ್ಷಿಣ ಆಫ್ರಿಕಾ ವಿರುದ್ಧ ಶತಕ ಬಾರಿಸಿ, ತಂಡದ ಮಾನ ಕಾಡಿದ್ರು. ಇವೆರೆಡು ಇನ್ನಿಂಗ್ಸ್‌ಗಳೇ ಸಾಕು, ರಾಹುಲ್ ವರ್ಲ್ಡ್‌ ಕ್ಲಾಸ್ ಬ್ಯಾಟ್ಸ್‌ಮನ್ ಅಂತ ಹೇಳೋದಕ್ಕೆ! ಇಷ್ಟೆಲ್ಲಾ ಇದ್ರೂ ರಾಹುಲ್‌ಗೆ ಪದೇ ಪದೇ ಅನ್ಯಾಯ ಮಾಡಲಾಗ್ತಿದೆ. ಬಾಂಗ್ಲಾದೇಶ ವಿರುದ್ಧದ ಮೊದಲ ಟೆಸ್ಟ್‌ನಲ್ಲೂ ರಾಹುಲ್‌ಗೆ ಅನ್ಯಾಯವಾಗಿದೆ. 

ರಾಹುಲ್ ಟ್ಯಾಲೆಂಟ್ & ಸಾಮರ್ಥ್ಯಕ್ಕೆ ಬೆಲೆಯೇ ಇಲ್ವಾ? 

ಯೆಸ್, ರಾಹುಲ್ ಈವರೆಗು ಟೆಸ್ಟ್‌ನಲ್ಲಿ 8 ಶತಕ ಬಾರಿಸಿದ್ದಾರೆ. ಇದ್ರಲ್ಲಿ 7 ಶತಕಗಳು ವಿದೇಶದಲ್ಲಿ ಸಿಡಿಸಿದ್ದಾರೆ. ಅದರಲ್ಲೂ ಇಂಗ್ಲೆಂಡ್ ಮತ್ತು ದಕ್ಷಿಣ ಆಫ್ರಿಕಾದಲ್ಲಿ ಎರಡೆರೆಡು ಶತಕ ಅಂದ್ರೆ, ಸಾಮಾನ್ಯ ಸಾಧನೆ ಅಲ್ಲ. ಇಷ್ಟೆಲ್ಲಾ ಇದ್ರೂ ರಾಹುಲ್ ಟ್ಯಾಲೆಂಟ್ ಮತ್ತು ಸಾಮರ್ಥ್ಯಕ್ಕೆ ಬೆಲೆಯೇ ಇಲ್ಲದಂತಾಗಿದೆ. 

ಮಯಾಂಕ್‌ ಅಗರ್‌ವಾಲ್ ನೇತೃತ್ವದ ಭಾರತ ಎ ದುಲೀಪ್ ಟ್ರೋಫಿ ಚಾಂಪಿಯನ್

ಬಾಂಗ್ಲಾದೇಶ ವಿರುದ್ಧದ ಮೊದಲ ಟೆಸ್ಟ್ನ ಮೊದಲ ಇನ್ನಿಂಗ್ಸ್ನಲ್ಲಿ ರೋಹಿತ್ ಪಡೆ, 34 ರನ್‌ಗೆ 3 ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಈ ವೇಳೆ ರಾಹುಲ್ ಕ್ರೀಸ್ಗಿಳಿತಾರೆ ಅಂತ ಎಲ್ಲಾ ಅಂದುಕೊಂಡಿದ್ರು. ಯಾಕಂದ್ರೆ ಪಂತ್‌ಗೆ ಕಂಪೇರ್ ಮಾಡಿದ್ರೆ, ರಾಹುಲ್ ಟಾಪ್ ಕ್ವಾಲಿಟಿ ಪ್ಲೇಯರ್. ಅನುಭವದಲ್ಲೂ ಸೀನಿಯರ್. ಹೀಗಿದ್ರೂ ರಾಹುಲ್ ಬದಲು ಪಂತ್ ಕಣಕ್ಕಿಳಿದ್ರು. 39 ರನ್‌ ಗಳಿಸಿ ಡೆಲ್ಲಿ ಡ್ಯಾಶರ್ ಔಟಾದ್ರು. ರಾಹುಲ್ 6ನೇ ಕ್ರಮಾಂಕದಲ್ಲಿ ಆಡಿ 16 ರನ್‌ಗಳಿಸಿ ಔಟಾದ್ರು. 

2ನೇ ಇನ್ನಿಂಗ್ಸ್ನಲ್ಲೂ ಅದೇ ಕಥೆ. ರಾಹುಲ್‌ಗಿಂತ ಮೊದಲೇ ಪಂತ್ರನ್ನ ಕಳಿಸಲಾಯ್ತು. ಭರ್ಜರಿ ಶತಕ ಸಿಡಿಸಿ ಪಂತ್ ಮಿಂಚಿದ್ರು. ಪಂತ್ ಇನ್ನಿಂಗ್ಸ್ ಬಗ್ಗೆ ಎರಡು ಮಾತಿಲ್ಲ. ಆದ್ರೆ, ಕೋಚ್ ಗೌತಮ್ ಗಂಭೀರ್ ಮತ್ತು ಕ್ಯಾಪ್ಟನ್ ರೋಹಿತ್‌ಗೆ ರಾಹುಲ್ ಮೇಲೆ ನಂಬಿಕೆ ಇರಲಿಲ್ವಾ? ಯಾಕಂದ್ರೆ ಸಾಮಾನ್ಯವಾಗಿ ಎಡಗೈ ಸ್ಪಿನ್ನರ್ಗಳಿದ್ದಾಗ ಮಾತ್ರ ಎಡಗೈ ಬ್ಯಾಟರ್‌ಗಳನ್ನು ಕಳಿಸಲಾಗುತ್ತೆ.  ಪಂತ್‌ರನ್ನ ಕಳಿಸಿದಾಗ ಎಡಗೈ ಸ್ಪಿನ್ನರ್‌ಗಳು ಇರಲಿಲ್ಲ. ಇಷ್ಟಾದ್ರೂ ರಾಹುಲ್ ಬದಲು ಪಂತ್‌ರನ್ನ ಅಪ್ ದಿ ಆರ್ಡರ್ ಕಳಿಸಿದ್ಯಾಕೆ ಅನ್ನೋ ಪ್ರಶ್ನೆ ಮೂಡಿದೆ. 

ಶ್ರೀಲಂಕಾ ವಿರುದ್ಧದ ಏಕದಿನ ಸರಣಿಯಲ್ಲಿ ಅನ್ಯಾಯ!

ಶ್ರೀಲಂಕಾ ವಿರುದ್ಧದ ಏಕದಿನ ಸರಣಿಯಲ್ಲೂ ರಾಹುಲ್‌ಗೆ ಅನ್ಯಾಯ ಮಾಡಲಾಗಿತ್ತು. ಸರಣಿಯ 3ನೇ ಏಕದಿನ ಪಂದ್ಯದಲ್ಲಿ ರಾಹುಲ್‌ರನ್ನ ಪ್ಲೇಯಿಂಗ್ ಇಲೆವೆನ್ನಿಂದ ಹೊರಗಿಡಲಾಗಿತ್ತು.  2ನೇ ಪಂದ್ಯದಲ್ಲಿ ರಾಹುಲ್ ಫ್ಲಾಪ್ ಶೋ ನೀಡಿದ್ರು. ಹಾಗಂತ, ರಾಹುಲ್ ಒಬ್ಬರೇ ತಂಡದ ಸೋಲಿಗೆ ಕಾರಣರಾಗಿರಲಿಲ್ಲ.  ಹೀಗಿದ್ರೂ, ರಾಹುಲ್‌ರನ್ನ ಮಾತ್ರ ಡ್ರಾಪ್ ಮಾಡಲಾಗಿತ್ತು. 

ಒಟ್ಟಿನಲ್ಲಿ  ಯಾರದ್ದೋ ಸ್ವಾರ್ಥಕ್ಕೆ, ಹಿತಕ್ಕೆ ಇನ್ಯಾರೋ ಬಲಿಯಾಗ್ತಿದ್ದಾರೆ. ಇದು ಹೀಗೆ ಮುಂದುವರಿದ್ರೆ, ಕನ್ನಡಿಗನ ಕರಿಯರ್ ಸಂಕಷ್ಟಕ್ಕೆ ಸಿಲುಕೋದು ಪಕ್ಕಾ! 

- ಸ್ಪೋರ್ಟ್ಸ್ ಬ್ಯುರೋ, ಏಷ್ಯಾನೆಟ್ ಸುವರ್ಣ ನ್ಯೂಸ್ 

click me!