ಶೇನ್ ವಾರ್ನ್ ರೆಕಾರ್ಡ್ ಸರಿಗಟ್ಟಿದ ಅಶ್ವಿನ್; ರವಿ ಯಶಸ್ಸಿನಲ್ಲಿ ಧೋನಿಗೂ ಸಲ್ಲಬೇಕು ಕ್ರೆಡಿಟ್..!

By Suvarna News  |  First Published Sep 23, 2024, 1:22 PM IST

ರವಿಚಂದ್ರನ್ ಅಶ್ವಿನ್‌ ಟೆಸ್ಟ್‌ ಕ್ರಿಕೆಟ್‌ನಲ್ಲಿ ಇದೀಗ ಕ್ರಿಕೆಟ್ ದಂತಕಥೆ ಶೇನ್ ವಾರ್ನ್ ದಾಖಲೆ ಸರಿಗಟ್ಟಿದ್ದಾರೆ. ಇಂದು ಅಶ್ವಿನ್ ಚಾಂಪಿಯನ್ ಬೌಲರ್ ಆಗುವುದರ ಹಿಂದೆ ಧೋನಿ ಅವರ ಪಾತ್ರವಿದೆ. ಈ ಕುರಿತಾದ ರಿಪೋರ್ಟ್‌ ಇಲ್ಲಿದೆ ನೋಡಿ


ಬೆಂಗಳೂರು: ಎಂ ಎಸ್ ಧೋನಿ ಗ್ರೇಟ್ ಕ್ಯಾಪ್ಟನ್ ಮಾತ್ರ ಅಲ್ಲ. ಟ್ಯಾಲೆಂಟ್ ಗುರುತಿಸೋದ್ರಲ್ಲೂ ಅವರನ್ನ ಮೀರಿಸೋರಿಲ್ಲ. ಸದ್ಯ ಟೀಂ ಇಂಡಿಯಾ ಪರ ಮಿಂಚ್ತಿರೋ ಈ ಆಟಗಾರನ ಟ್ಯಾಲೆಂಟ್‌ನ ಧೋನಿ, 12 ವರ್ಷಗಳ ಹಿಂದೆಯೇ ಗುರುತಿಸಿದ್ರು. ಧೋನಿ ಇಲ್ಲದೇ ಇದ್ರೆ, ಈ ಆಟಗಾರ ಲೆಜೆಂಡ್ ಪಟ್ಟಕ್ಕೇರುತ್ತಿರಲಿಲ್ಲ. ಇವರು ಯಾರ ಬಗ್ಗೆ ಹೇಳ್ತಿದ್ದಾರೆ ಅನ್ಕೊಂಡ್ರಾ..? ಇಲ್ಲಿದೆ ನೋಡಿ ಡಿಟೇಲ್ಸ್..!

ತವರಿನಲ್ಲಿ ಕೇರಂ ಬೌಲ್ ಸ್ಪೆಷಲಿಸ್ಟ್ ಹಲವು ದಾಖಲೆ!

Latest Videos

undefined

ಯೆಸ್, ಬಾಂಗ್ಲಾದೇಶ ವಿರುದ್ಧದ ಮೊದಲ ಟೆಸ್ಟ್‌ನಲ್ಲಿ ರೋಹಿತ್ ಶರ್ಮಾ ಪಡೆ ಅದ್ಭುತ ಗೆಲುವು ಸಾಧಿಸಿದೆ. ಅ ಮೂಲಕ ನಿಮ್ಮ ಆಟ ನಮ್ಮ ಮುಂದೆ ನಡೆಯಲ್ಲ. ತವರಿನಲ್ಲಿ ನಮ್ಮನ್ನ ಸೋಲಿಸೋದು ಸುಲಭವಲ್ಲ ಅಂತ ಬಾಂಗ್ಲಾ ಪಡೆಗೆ ಪ್ರೂವ್ ಮಾಡಿದೆ. ಆದ್ರೆ, ರೋಹಿತ್ ಪಡೆಯ ಈ ಗೆಲುವಿಗೆ ಪ್ರಮುಖ ಕಾರಣ ಆಲ್ರೌಂಡರ್ ಅಶ್ವಿನ್‌ರ ಅದ್ಭುತ ಪ್ರದರ್ಶನ.! 

ಟೆಸ್ಟ್‌ನಲ್ಲಿ ಗರಿಷ್ಠ ವಿಕೆಟ್ ಕಬಳಿಸಿದ ಟಾಪ್-10 ಬೌಲರ್ಸ್‌; ಅಶ್ವಿನ್‌ಗೆ ಎಷ್ಟನೇ ಸ್ಥಾನ?

ಯೆಸ್, ಹೋಮ್‌ ಗ್ರೌಂಡ್‌ನಲ್ಲಿ ಮಿಂಚಬೇಕು ಅನ್ನೋದು ಪ್ರತಿಯೊಬ್ಬ ಆಟಗಾರನ ಕನಸು. ಅದರಂತೆ ತವರಿನ ಅಂಗಳದಲ್ಲಿ ಅಶ್ವಿನ್ ನಿಜಕ್ಕೂ ಮ್ಯಾಚ್ ವಿನ್ನಿಂಗ್ ಪರ್ಫಾಮೆನ್ಸ್ ನೀಡಿದ್ರು. ಬ್ಯಾಟಿಂಗ್‌ನಲ್ಲಿ ತಂಡ ಸಂಕಷ್ಟಕ್ಕೆ ಸಿಲುಕಿದಾಗ, ಭರ್ಜರಿ ಶತಕ ಸಿಡಿಸಿ ಅಬ್ಬರಿಸಿದ್ರು. ಇನ್ನು ಬೌಲಿಂಗ್‌ನಲ್ಲಿ ಅಕ್ಷರಶ: ಸ್ಪಿನ್ ಮೋಡಿ ಮಾಡಿದ್ರು. ಎರಡನೇ ಇನ್ನಿಂಗ್ಸ್ನಲ್ಲಿ 6 ವಿಕೆಟ್ ಉರುಳಿಸಿ ತಂಡದ ಗೆಲುವಿನಲ್ಲಿ ಮಿಂಚಿದ್ರು. ಅಲ್ಲದೇ ಹಲವು ದಾಖಲೆಗಳನ್ನ ಬರೆದ್ರು. 

ಶೇನ್ ವಾರ್ನ್ ರೆಕಾರ್ಡ್ ಸರಿಗಟ್ಟಿದ ಆಫ್ ಸ್ಪಿನ್ನರ್!

ಯೆಸ್, ಬಾಂಗ್ಲಾ ವಿರುದ್ಧ 6 ವಿಕೆಟ್ ಪಡೆದು, ಸ್ಪಿನ್ನರ್ ಲೆಜೆಂಡ್‌ ಶೇನ್ ವಾರ್ನ್ ಅವರ ವಿಶ್ವದಾಖಲೆಯನ್ನು ಅಶ್ವಿನ್ ಸರಿಗಟ್ಟಿದ್ದಾರೆ. ಟೆಸ್ಟ್ ಕ್ರಿಕೆಟ್‌ ಇನ್ನಿಂಗ್ಸ್‌ವೊಂದರಲ್ಲಿ ಅತಿಹೆಚ್ಚು ಬಾರಿ 5 ವಿಕೆಟ್ ಪಡೆದ 2ನೇ ಬೌಲರ್ ಅನ್ನೋ ದಾಖಲೆ ಶೇನ್ ವಾರ್ನ್ ಹೆಸರಿನಲ್ಲಿತ್ತು. 273 ಇನಿಂಗ್ಸ್‌ಗಳಲ್ಲಿ ಬೌಲಿಂಗ್ ಮಾಡಿರೋ ವಾರ್ನ್, ಒಟ್ಟು 37 ಬಾರಿ 5 ವಿಕೆಟ್ ಪಡೆದುಕೊಂಡಿದ್ರು. ಈಗ ಅಶ್ವಿನ್ 191 ಇನಿಂಗ್ಸ್ಗಳಲ್ಲೇ 37 ಬಾರಿ 5 ವಿಕೆಟ್ ಬೇಟೆಯಾಡಿದ್ದಾರೆ. 

ಧೋನಿ ಇಲ್ಲದೇ ಹೋಗಿದ್ರೆ ಅಶ್ವಿನ್ ಲೆಜೆಂಡ್ ಆಗ್ತಿರಲಿಲ್ಲ! 

ಅಶ್ವಿನ್ ಟೀಂ ಇಂಡಿಯಾಗೆ ಎಂಟ್ರಿ ಕೊಟ್ಟಾಗ ಮತ್ತೊಬ್ಬ ಸ್ಪಿನ್ನರ್ ಹರ್ಭಜನ್ ಸಿಂಗ್ ತಂಡದಲ್ಲಿದ್ರು. ಇದರಿಂದ ಭಜ್ಜಿಯನ್ನ ಸೈಡ್ಲೈನ್ ಮಾಡಲು ಅಶ್ವಿನ್‌ರನ್ನು ಆಯ್ಕೆ ಮಾಡಲಾಗಿದೆ ಅಂತ ಮಾಜಿ ಆಟಗಾರರು ಅಸಮಾಧಾನ ವ್ಯಕ್ತಪಡಿಸಿದ್ರು.  ಆದ್ರೆ, ಧೋನಿ ಮಾತ್ರ ಅಶ್ವಿನ್‌ರನ್ನು  ಬಿಟ್ಟುಕೊಡಲಿಲ್ಲ. ಐಪಿಎಲ್‌ನಲ್ಲಿ ಸಿಎಸ್‌ಕೆ ಪರ ಅಶ್ವಿನ್ ಆಡ್ತಿದ್ದರಿಂದ ಧೋನಿಗೆ ಅಶ್ವಿನ್ ಟ್ಯಾಲೆಂಟ್ ಮತ್ತು ಸಾಮರ್ಥ್ಯದ ಬಗ್ಗೆ ಚೆನ್ನಾಗಿ ಅರಿವಿತ್ತು. ಇದರಿಂದ ಧೋನಿ ಜಿದ್ದಿಗೆ ಬಿದ್ದು ಅಶ್ವಿನ್ರನ್ನ ತಂಡಕ್ಕೆ ಸೇರಿಸಿಕೊಂಡ್ರು. 

ಅವತ್ತು ಧೋನಿ ತಮ್ಮ ಮೇಲಿಟ್ಟಿದ್ದ ನಂಬಿಕೆಯನ್ನ ಅಶ್ವಿನ್ ಇವತ್ತಿಗೂ ಉಳಿಸಿಕೊಂಡಿದ್ದಾರೆ. ಟೀಂ ಇಂಡಿಯಾದ ಮ್ಯಾಚ್ ವಿನ್ನರ್ ಆಗಿ ಬದಲಾಗಿದ್ದಾರೆ. ಆವತ್ತು ಯಾರು ಅಶ್ವಿನ್ ತಂಡ ಬೇಡ ಅಂದಿದ್ರೋ ಅವ್ರೇ ಈಗ ಅಶ್ವಿನ್ನ ಕೊಂಡಾಡ್ತಿದ್ದಾರೆ. ಈ ನಡುವೆ ಅಶ್ವಿನ್, ಹರ್ಭಜನ್ ಸಿಂಗ್‌ ಅವರ ದಾಖಲೆಗಳನ್ನ ಪುಡಿ ಪುಡಿ ಮಾಡ್ತಿದ್ದಾರೆ. 

ಒಟ್ಟಿನಲ್ಲಿ ಇವತ್ತು ಅಶ್ವಿನ್ ಭಾರತದ ಸ್ಪಿನ್ ಲೆಜಂಡ್ ಆಗಿರೋದ್ರಲ್ಲಿ ಧೋನಿಯ ಪಾತ್ರವೂ ಇದೆ. ಅಂದು ಧೋನಿ ಅಶ್ವಿನ್ ಬೆನ್ನಿಗೆ ನಿಲ್ಲದೇ ಇದ್ರೆ, ಅಶ್ವಿನ್ ಟೀಂ ಇಂಡಿಯಾಗೆ ಎಂಟ್ರಿ ನೀಡ್ತಿರಲಿಲ್ಲ. ದಾಖಲೆಗಳ ಮೇಲೆ ದಾಖಲೆಯನ್ನ ಬರೀತಾ ಇರಲಿಲ್ಲ. 

ಸ್ಪೋರ್ಟ್ಸ್ ಬ್ಯುರೋ, ಏಷ್ಯಾನೆಟ್ ಸುವರ್ಣ ನ್ಯೂಸ್ 
 

click me!