ಬಿಗ್‌ ಬ್ಯಾಶ್‌ ಟಿ20: ಇನ್ಮುಂದೆ ವೈಡ್‌ಗೂ ಫ್ರೀ ಹಿಟ್‌!

By Suvarna NewsFirst Published Jun 11, 2020, 4:05 PM IST
Highlights

ಇನ್ಮುಂದೆ ಟಿ20 ಕ್ರಿಕೆಟ್‌ನಲ್ಲಿ ವೈಡ್ ಬಾಲ್‌ಗೂ ಫ್ರೀ ಹಿಟ್ ನೋಡಲು ಸಿಕ್ಕರೂ ಅಚ್ಚರಿ ಪಡಬೇಕಿಲ್ಲ. ಕ್ರಿಕೆಟ್ ಆಸ್ಟ್ರೇಲಿಯಾ ಬಿಗ್ ಬ್ಯಾಶ್ ಲೀಗ್‌ನಲ್ಲಿ ಅಂತಹ ಪ್ರಯೋಗದ ಬಗ್ಗೆ ಒಲವು ತೋರಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

ಮೆಲ್ಬರ್ನ್(ಜೂ.11)‌: ಹೊಸತನ, ವಿಭಿ​ನ್ನತೆಗೆ ಹೆಸರುವಾಸಿ​ಯಾ​ಗಿ​ರುವ ಕ್ರಿಕೆಟ್‌ ಆಸ್ಪ್ರೇ​ಲಿಯಾ, ಇದೀಗ ಟಿ20 ಕ್ರಿಕೆಟ್‌ಗೆ ಮತ್ತಷ್ಟು ಹೊಸ ನಿಯ​ಮ​ಗ​ಳನ್ನು ಪರಿ​ಚ​ಯಿ​ಸಲು ಮುಂದಾ​ಗಿದೆ. 

ಬಿಗ್‌ ಬ್ಯಾಶ್‌ ಟಿ20 ಲೀಗ್‌ನ ಮುಂದಿ​ನ ಆವೃ​ತ್ತಿ​ಯಲ್ಲಿ ಹಲವು ಮಹತ್ವದ ಬದ​ಲಾ​ವಣೆಗಳನ್ನು ಮಾಡಲು ಪ್ರಸ್ತಾ​ಪಿ​ಸಿದೆ. ಹೊಸ ನಿಯ​ಮ​ಗ​ಳ ಪೈಕಿ ಪ್ರಮು​ಖವಾದ್ದದ್ದು ಎಂದರೆ ನೋಬಾಲ್‌ಗೆ ಇರು​ವಂತೆ ವೈಡ್‌ ಎಸೆ​ತಕ್ಕೂ ಫ್ರೀ ಹಿಟ್‌ ಇರ​ಲಿದೆ. ಇದೇ ವೇಳೆ ಮೊದಲ 10 ಓವರ್‌ಗಳಲ್ಲಿ ಗಳಿ​ಸಿದ ಮೊತ್ತದ ಆಧಾ​ರದ ಮೇಲೆ ತಂಡಗಳಿಗೆ ಬೋನಸ್‌ ಅಂಕ ದೊರೆ​ಯ​ಲಿದೆ. ಅಂಕ​ಪ​ಟ್ಟಿಯಲ್ಲಿ ಸ್ಥಾನ​ಗಳ ಮೇಲೆ ಈ ನಿಯಮ ಪರಿ​ಣಾಮ ಬೀರ​ಲಿದೆ.

ಇನ್ನು ನಿರ್ದಿಷ್ಟ ಸಮ​ಯ​ದಲ್ಲಿ ಬದಲಿ ಆಟ​ಗಾ​ರ​ರನ್ನು ಕಣ​ಕ್ಕಿ​ಳಿ​ಸುವ ಅವ​ಕಾಶ ಕಲ್ಪಿ​ಸುವ ಬಗ್ಗೆಯೂ ಪ್ರಸ್ತಾ​ಪಿ​ಸ​ಲಾ​ಗಿದೆ. ಆದರೆ ಈ ನಿಯ​ಮದ ಬಗ್ಗೆ ಹೆಚ್ಚಿನ ವಿವರ ನೀಡಿಲ್ಲ. ಸದ್ಯ ಟಿ20ಯಲ್ಲಿ ಮೊದಲ 6 ಓವರ್‌ ಪವರ್‌-ಪ್ಲೇ ಇರ​ಲಿದೆ. ಆದರೆ ಬಿಗ್‌ಬ್ಯಾಶ್‌ನಲ್ಲಿ ಮೊದಲ 4 ಹಾಗೂ ತಂಡ ಇಚ್ಛಿ​ಸುವ ಮತ್ತ್ಯಾ​ವುದೇ ಸಮ​ಯ​ದಲ್ಲಿ 2 ಓವರ್‌ ಪವರ್‌-ಪ್ಲೇ ಆಯ್ಕೆಗೆ ಅವ​ಕಾಶ ಕಲ್ಪಿ​ಸ​ಲಾ​ಗಿ​ದೆ. ಇನ್ನುಳಿದಂತೆ ಪ್ರತಿ 5 ಓವರ್‌ಗಳಿಗೊಮ್ಮೆ ಹೆಚ್ಚುವರಿ ಬ್ರೇಕ್ ನೀಡಲು ತೀರ್ಮಾನಿಸಲಾಗಿದೆ. ಇದು ಆಟಗಾರರಿಗೆ ಸ್ಟ್ರಾಟರ್ಜಿ ರೂಪಿಸಲು ನೆರವಾದರೆ, ಪ್ರಸಾರದ ಹಕ್ಕು ಹೊಂದಿರುವವರಿಗೆ ಜಾಹಿರಾತು ಲಾಭ ಪಡೆಯಲು ಸಹಾಯವಾಗಲಿದೆ.

ICC ಮಹತ್ವದ ಸಭೆ; ಮಂದಿನ ತಿಂಗಳು T20 ವಿಶ್ವಕಪ್, IPL ಭವಿಷ್ಯ ನಿರ್ಧಾರ!

ಈ ಹಿಂದೆ ಬಿಗ್‌ ಬ್ಯಾಷ್ ಲೀಗ್‌ನಲ್ಲಿ ನಾಣ್ಯ ಚಿಮ್ಮುವಿಕೆಯ ಬದಲು, ಬ್ಯಾಟ್ ಟಾಸ್ ನಿಯಮ ಪರಿಚಯಿಸಿ ಗಮನ ಸೆಳೆದಿತ್ತು. ಕೊರೋನಾ ವೈರಸ್‌ನಿಂದಾಗಿ ಆಸ್ಟ್ರೇಲಿಯಾ ಕ್ರಿಕೆಟ್ ಸಂಸ್ಥೆ ಈಗಾಗಲೇ ಸಾಕಷ್ಟು ನಷ್ಟ ಅನುಭವಿಸಿದೆ. ವೈಡ್‌ಗೆ ಫ್ರೀ ಹಿಟ್ ಜಾರಿಗೆ ಬಂದರೆ ಬೌಲರ್‌ಗಳ ಪರಿಸ್ಥಿತಿ ಮತ್ತಷ್ಟು ದಯಾನೀಯವಾಗಿರಲಿದೆ. ಈಗಾಗಲೇ ಟಿ20 ಕ್ರಿಕೆಟ್‌ನಲ್ಲಿ ಬೌಲರ್‌ಗಳ ಮಾರಣ ಹೋಮ ನಡೆಯುತ್ತಿದೆ. ಈ ಎಲ್ಲಾ ಬದಲಾವಣೆಗಳು ಬಿಬಿಎಲ್ ಅನ್ನು ಮತ್ತಷ್ಟು ರೋಚಕಗೊಳಿಸುವುದರಲ್ಲಿ ಎರಡು ಮಾತಿಲ್ಲ.  ಅಷ್ಟಕ್ಕೂ ನೋಡಲು ಮತ್ತೊಂದು ಫ್ರೀ ಹಿಟ್ ಸಿಗುತ್ತೆ ಅಂದ್ರೆ ಯಾರಿಗೆ ಇಷ್ಟ ಆಗಲ್ಲ ಹೇಳಿ..?  


 

click me!