
ದುಬೈ(ಮಾ.02) ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಮತ್ತೊಂದು ಗೆಲುವಿನೊಂದಿಗೆ ಸೆಮಿಫೈನಲ್ ಪ್ರವೇಶಿಸಿದೆ. ನ್ಯೂಜಿಲೆಂಡ್ ವಿರುದ್ಧದ ಕೊನೆಯ ಲೀಗ್ ಪಂದ್ಯದಲ್ಲಿ ಭಾರತ 44 ರನ್ ಗೆಲುವು ದಾಖಲಿಸಿದೆ. ನ್ಯೂಜಿಲೆಂಡ್‌ಗೆ 250 ರನ್ ಟಾರ್ಗೆಟ್ ನೀಡಿದ ಭಾರತ ಈ ಪಂದ್ಯ ಕೈಚೆಲ್ಲಿತ್ತು ಎಂದು ಭಾವಿಸಲಾಗಿತ್ತು. ಆದರೆ ವರುಣ್ ಚಕ್ರವರ್ತಿ ದಾಳಿಗೆ ನ್ಯೂಜಿಲೆಂಡ್ ತತ್ತರಿಸಿದೆ. 5 ವಿಕೆಟ್ ಕಬಳಿಸಿ ಮಿಂಚಿದ್ದಾರೆ. ವರುಣ್ ಚಕ್ರವರ್ತಿ ದೇಶಿಯ ಮಟ್ಟದಲ್ಲಿ ತಮಿಳುನಾಡು ತಂಡವನ್ನು ಪ್ರತಿನಿಧಿಸುತ್ತಾರೆ. ಆದರೆ ವರುಣ್ ಚಕ್ರವರ್ತಿ ಒಬ್ಬ ಕನ್ನಡಿಗನೂ ಹೌದ. ಕಾರಣ ಈ ಕ್ರಿಕೆಟಿಗ ಹುಟ್ಟಿದ್ದು ಕರ್ನಾಟಕದ ಬೀದರ್‌ನಲ್ಲಿ.
ಹೌದು, ವರುಣ್ ಚಕ್ರವರ್ತಿ ಹುಟ್ಟಿದ್ದು ಆಗಸ್ಟ್ 29, 1991ರಲ್ಲಿ, ಬೀದರ್‌ನಲ್ಲಿ ಹುಟ್ಟಿದ ವರುಣ್ ಚಕ್ರವರ್ತಿ ಬಾಲ್ಯದ ಕೆಲ ವರ್ಷಗಳನ್ನು ಬೀದರ್‌ನಲ್ಲೇ ಕಳೆದಿದ್ದಾರೆ. ಆದರೆ ತಂದೆ ವಿನೋದ್ ಚಕ್ರವರ್ತಿಗೆ ಸ್ಥಳಾಂತರಗೊಂಡ ಕಾರಣ ತಮಿಳುನಾಡಿನಲ್ಲಿ ಶಾಲಾ ಕಾಲೇಜು ಪೂರೈಸಿದ್ದರು. ಹೀಗಾಗಿ ತಮಿಳುನಾಡು ತಂಡವನ್ನು ಪ್ರತಿನಿಧಿಸಿದರು.
ನ್ಯೂಜಿಲೆಂಡ್ ವಿರುದ್ದ ಭಾರತಕ್ಕೆ ಗೆಲುವು, ಸೆಮಿಫೈನಲ್‌ನಲ್ಲಿ ಆಸ್ಟ್ರೇಲಿಯಾ ಎದುರಾಳಿ
ವರುಣ್ ಚಕ್ರವರ್ತಿ ತಂದೆ ವಿನೋದ್ ಚಕ್ರವರ್ತಿ ಬಿಎಸ್‌ಎನ್‌ಎಲ್ ಸಂಸ್ಥಯಲ್ಲಿ ಚೀಫ್ ಜನರಲ್ ಮ್ಯಾನೇಜರ್ ಆಗಿ ನಿವೃತ್ತಿಯಾಗಿದ್ದಾರೆ. ಆರಂಭಿಕ ದಿನಗಳಲ್ಲಿ ವಿನೋದ್ ಚಕ್ರವರ್ತಿ ವೃತ್ತಿಯ ಸ್ಥಳಾಂತರದ ಕಾರಣದಿಂದ ಕೆಲ ರಾಜ್ಯಗಳಲ್ಲಿ ಕೆಲಸ ಮಾಡಿದ್ದಾರೆ. ವಿನೋದ್ ಚಕ್ರವರ್ತಿ ಮೂಲಕ ಚೆನ್ನೈ. ವಿನೋದ್ ಚಕ್ರವರ್ತಿ ತಾಯಿ ಅಂದರೆ ವರುಣ್ ಚಕ್ರವರ್ತಿ ಅಜ್ಜಿ ವಿಮಲಾ ಕೇರಳ ಮೂಲದವರು. ವಿನೋದ್ ಚಕ್ರವರ್ತಿ 1990-91ರ ಸಮಯದಲ್ಲಿ ಬೀದರ್‌ನಲ್ಲಿ ಕೆಲಸ ಮಾಡುತ್ತಿದ್ದರು. ಹೀಗಾಗಿ ವರುಣ್ ಚಕ್ರವರ್ತಿ ಬೀದರ್‌ನಲ್ಲಿ ಹುಟ್ಟಿದ್ದಾರೆ.
ಚೆನ್ನೈನ ಎಸ್ಆರ್‌ಎಂ ವಿಶ್ವಿವಿದ್ಯಾಲಯದಲ್ಲಿ ಆರ್ಕಿಟೆಕ್ಟ್ ಪದವಿ ಪಡೆದಿರುವ ವರುಣ್ ಚಕ್ರವರ್ತಿಗೆ ಕ್ರಿಕೆಟ್ ಎಂದರೆ ಪಂಚ ಪ್ರಾಣವಾಗಿತ್ತು. ಹೀಗಾಗಿ ಶಾಲಾ ದಿನಗಳಲ್ಲೇ ಕ್ರಿಕೆಟ್ ಬಗ್ಗೆ ಒಲವು ಮೂಡಿತ್ತು. ಇಷ್ಟೇ ಅಲ್ಲ ಉತ್ತಮ ಪ್ರದರ್ಶನ ಮೂಲಕ ಶಾಲಾ ತಂಡ, ಕಾಲೇಜು, ವಿಶ್ವವಿದ್ಯಾಲಯ ತಂಡಗಳ ಮೂಲಕ ತಮಿಳುನಾಡು ರಾಜ್ಯ ತಂಡ ಪ್ರತಿನಿಧಿಸುತಾಯಿತು.
ಇತ್ತೀಚೆಗೆ ನಡೆದಿದ್ದ ಇಂಗ್ಲೆಂಡ್ ವಿರುದ್ದ ಸರಣಿಯಲ್ಲಿ ಏಕದಿನ ಮಾದರಿಗೆ ಪಾದರ್ಪಣೆ ಮಾಡಿದ್ದರು. ಇದೀಗ ಚಾಂಪಿಯನ್ಸ್ ಟ್ರೋಫಿಯಲ್ಲಿ ತಮ್ಮ ಸಾಮರ್ಥ್ಯ ಸಾಬೀತು ಪಡಿಸಿದ್ದಾರೆ. ನ್ಯೂಜಿಲೆಂಡ್ ವಿರುದ್ದದ ಉತ್ತಮ ದಾಳಿಗೆ ದಾಖಲೆ ನಿರ್ಮಾಣವಾಗಿದೆ. ಚಾಂಪಿಯನ್ಸ್ ಟ್ರೋಫಿ ಡೆಬ್ಯೂ ಸೀರಿಸ್‌ನಲ್ಲಿ ಬೆಸ್ಟ್ ಬೌಲಿಂಗ್ ಮಾಡಿದ 2ನೇ ಕ್ರಿಕೆಟಿಗ ಅನ್ನೋ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಚಾಂಪಿಯನ್ಸ್ ಟ್ರೋಫಿ ಡೆಬ್ಯೂ ಸೀರಿಸ್‌ನಲ್ಲಿ ಬೆಸ್ಟ್ ಬೌಲಿಂಗ್
ಜೋಶ್ ಹೇಜಲ್‌ವುಡ್, 6/52 (2017)
ವರುಣ್ ಚಕ್ರವರ್ತಿ, 5/42 (2025)
ಮೊಹಮ್ಮದ್ ಶಮಿ, 5/53 (2025)
ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತೀಯರ ಉತ್ತಮ ಬೌಲಿಂಗ್ ಪ್ರದರ್ಶನ
ರವೀಂದ್ರ ಜಡೇಜಾ 5/36 (2013)
ವರುಣ್ ಚಕ್ರವರ್ತಿ 5/42 (2025)
ಮೊಹಮ್ಮದ್ ಶಮಿ 5/53 (2025)
ಸಚಿನ್ ತೆಂಡೂಲ್ಕರ್ 4/38 (1998)
ಜಹೀರ್ ಖಾನ್ 4/45 (2002)
ಏಕದಿನ ಕ್ರಿಕೆಟ್‌ನಲ್ಲಿ ಟಾಸ್ ಸೋಲುವುದರಲ್ಲೂ ಹೊಸ ದಾಖಲೆ ಬರೆದ ರೋಹಿತ್ ಶರ್ಮಾ!
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.