ಚಾಂಪಿಯನ್ಸ್ ಟ್ರೋಫಿ 2025 ರ ಗುಂಪು ಹಂತದ ಕೊನೆಯ ಪಂದ್ಯದಲ್ಲಿ ಭಾರತ ಮತ್ತು ನ್ಯೂಜಿಲೆಂಡ್ ಮುಖಾಮುಖಿಯಾಗಿದ್ದು, ದುಬೈ ಅಂತರಾಷ್ಟ್ರೀಯ ಸ್ಟೇಡಿಯಂನಲ್ಲಿ ಪಂದ್ಯ ನಡೆಯುತ್ತಿದೆ.
ಭಾರತದ ನಾಯಕ ರೋಹಿತ್ ಶರ್ಮಾ ಮತ್ತೊಮ್ಮೆ ಟಾಸ್ ಸೋತಿದ್ದಾರೆ. ನ್ಯೂಜಿಲೆಂಡ್ ನಾಯಕ ಮಿಚೆಲ್ ಸ್ಯಾಂಟ್ನರ್ ಟಾಸ್ ಗೆದ್ದು ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದರು.
ಹೀಗಾಗಿ ಟೀಂ ಇಂಡಿಯಾ ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಲು ಕಣಕ್ಕಿಳಿದಿದೆ. ಭಾರತದ ನಾಯಕ ಏಕದಿನ ಪಂದ್ಯದಲ್ಲಿ ಸತತವಾಗಿ ಟಾಸ್ ಸೋತ 13ನೇ ಸಂದರ್ಭ ಇದಾಗಿದೆ.
ಏಕದಿನ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಟಾಸ್ ಸೋತ ದಾಖಲೆಯನ್ನು ಹೊಂದಿರುವ 3 ನಾಯಕರ ಬಗ್ಗೆ ಇಂದು ನಾವು ನಿಮಗೆ ತಿಳಿಸುತ್ತೇವೆ.
ವೆಸ್ಟ್ ಇಂಡೀಸ್‌ನ ಮಾಜಿ ಶ್ರೇಷ್ಠ ಬ್ಯಾಟ್ಸ್‌ಮನ್ ಬ್ರಿಯಾನ್ ಲಾರಾ ಈ ದಾಖಲೆಯನ್ನು ಹೊಂದಿದ್ದಾರೆ. ಬ್ರಿಯಾನ್ ಅಕ್ಟೋಬರ್ 1998 ರಿಂದ ಮೇ 1999 ರವರೆಗೆ ಸತತ 12 ಬಾರಿ ಟಾಸ್ ಸೋತರು.
ಈ ಪಟ್ಟಿಯಲ್ಲಿ ನ್ಯೂಜಿಲೆಂಡ್‌ನ ಮಾಜಿ ನಾಯಕ ಪೀಟರ್ ಬೋರೆನ್ ಎರಡನೇ ಸ್ಥಾನದಲ್ಲಿದ್ದಾರೆ. ಅವರು ಮಾರ್ಚ್ 2011 ರಿಂದ ಆಗಸ್ಟ್ 2013 ರವರೆಗೆ 11 ಬಾರಿ ಟಾಸ್ ಸೋತಿದ್ದಾರೆ.
ಮೂರನೇ ಸ್ಥಾನದಲ್ಲಿ ಟೀಂ ಇಂಡಿಯಾದ ನಾಯಕ ರೋಹಿತ್ ಶರ್ಮಾ ಇದ್ದಾರೆ. ರೋಹಿತ್ ನವೆಂಬರ್ 2023 ರಿಂದ ಮಾರ್ಚ್ 2025 ರವರೆಗೆ 12 ಬಾರಿ ಟಾಸ್ ಸೋತು ಹೊಸ ದಾಖಲೆ ಬರೆದಿದ್ದಾರೆ.
ದುಬೈನಲ್ಲಿ ರವೀಂದ್ರ ಜಡೇಜಾ ಕಾಫಿ ಡೇಟ್?
ಟಾಟಾ ಸಂಸ್ಥೆಯ ಈ ಕಾರು ವಿರಾಟ್ ಕೊಹ್ಲಿಯ ಫೇವರೆಟ್! ನೀವೂ ಈ ಕಾರು ಖರೀದಿಸಬಹುದು!
ವಿರಾಟ್ ಕೊಹ್ಲಿ 100 ಶತಕಗಳಿಗೆ ಎಷ್ಟು ದೂರ? ಸಚಿನ್ ದಾಖಲೆಗೆ ಬ್ರೇಕ್ ಆಗುತ್ತಾ?
ಮಹಾಶಿವರಾತ್ರಿ: ಟೀಮ್ ಇಂಡಿಯಾದ ಈ ಇಬ್ಬರು ಆಟಗಾರರು ಶಿವನ ಅಪ್ಪಟ ಭಕ್ತರು!