RCB ಕಪ್ ಗೆಲ್ಲುವ ಮೊದಲು ದಿನೇಶ್ ಕಾರ್ತಿಕ್ ಹೇಳಿದ್ದ ಗುಟ್ಟು ಬಿಚ್ಚಿಟ್ಟ ಭುವನೇಶ್ವರ್ ಕುಮಾರ್!

Published : Nov 20, 2026, 06:15 PM IST
Bhuvneshwar Kumar Speaks About His Experience Of Joining RCB

ಸಾರಾಂಶ

ಭುವನೇಶ್ವರ್ ಕುಮಾರ್ ಆರ್‌ಸಿಬಿ ತಂಡದ ಯಶಸ್ಸು ಮತ್ತು ಡ್ರೆಸ್ಸಿಂಗ್ ರೂಂ ವಾತಾವರಣದ ಬಗ್ಗೆ ಮಾತನಾಡಿದ್ದಾರೆ. ಇದುವರೆಗೆ ಟ್ರೋಫಿ ಗೆದ್ದಿಲ್ಲ ಎಂಬುದನ್ನು ಸವಾಲಾಗಿ ಸ್ವೀಕರಿಸಿದ್ದೇ ತಂಡದ ಗೆಲುವಿಗೆ ಕಾರಣ ಎಂದು ಅವರು ಹೇಳಿದ್ದಾರೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಬೌಲಿಂಗ್ ಮಾಡುವ ಸವಾಲಿನ ಬಗ್ಗೆಯೂ ಅವರು ವಿವರಿಸಿದ್ದಾರೆ.

ಬೆಂಗಳೂರು: RCB ಯಶಸ್ಸಿನ ಹಿಂದಿನ ಮನಸ್ಥಿತಿ ಮತ್ತು ಡ್ರೆಸ್ಸಿಂಗ್ ರೂಂ ವಾತಾವರಣದ ಬಗ್ಗೆ 'ಸ್ವಿಂಗ್ ಕಿಂಗ್' ಭುವನೇಶ್ವರ್ ಕುಮಾರ್ ಮನಬಿಚ್ಚಿ ಮಾತನಾಡಿದ್ದಾರೆ. ಬಿಗ್ ಬಾಸ್ಕೆಟ್ ಪ್ರೆಸೆಂಟ್ಸ್ ಆರ್‌ಸಿಬಿ ಪಾಡ್‌ಕಾಸ್ಟ್‌ನಲ್ಲಿ ಮಾತನಾಡಿರುವ ಭುವಿ.. ತಾವು ಆರ್‌ಸಿಬಿ ಬಳಗ ಸೇರಿದ ಆರಂಭಿಕ ದಿನಗಳ ಬಗ್ಗೆ ಕುತೂಹಲಕಾರಿ ಸಂಗತಿಗಳನ್ನ ಹಂಚಿಕೊಂಡಿದ್ದಾರೆ.

ಆರ್‍‌ಸಿಬಿ Never won was never a burden. It was a challenge ಎಂಬ ಶೀರ್ಷಿಕೆಯೊಂದಿಗೆ (ಇದುವರೆಗೆ ಗೆದ್ದಿಲ್ಲ ಅನ್ನೋದು ನಮಗೆಂದೂ ಹೊರೆಯಾಗಿರಲಿಲ್ಲ, ಅದೊಂದು ಸವಾಲಾಗಿತ್ತು) ಭುವಿ ವಿಡಿಯೋನ್ನು ಹಂಚಿಕೊಳ್ಳಲಾಗಿದೆ. ಭುವಿ ಹೇಳಿದ್ದು ಏನೆಂದರೆ.. 2025ರ ಐಪಿಎಲ್ ಹರಾಜಿನಲ್ಲಿ ಆರ್‌ಸಿಬಿಗೆ ಆಯ್ಕೆ ಬೆನ್ನಲ್ಲೇ ತಂಡದ ಮ್ಯಾನೇಜ್ಮೆಂಟ್ ಭೇಟಿಯಾದೆ. ಮೋ ಬೊಬಾಟ್, ಮುಖ್ಯ ಕೋಚ್ ಆ್ಯಂಡಿ ಫ್ಲವರ್ ಮತ್ತು ಮೆಂಟರ್ ದಿನೇಶ್ ಕಾರ್ತಿಕ್ ಅವರನ್ನು ಭೇಟಿಯಾದೆ.

ಈ ವೇಳೆ ನನಗೆ ಒಂದು ಡೈಲಾಗ್ ಕೇಳಿಸಿತು. ಅದು ನನ್ನ ಕಿವಿಯಲ್ಲಿ ಇನ್ನೂ ಗುಂಯ್‌ಗುಡುತ್ತಿದೆ. ಆರ್‌ಸಿಬಿ ಇದುವರೆಗೆ ಟೈಟಲ್ ಗೆದ್ದಿಲ್ಲ ಎಂದು ಗೊತ್ತು. ಇದನ್ನು ನಾವು ಸವಾಲಾಗಿ ಸ್ವೀಕರಿಸಬಹುದು. ಹೇಗೂ ಇದುವರೆಗೆ ಗೆದ್ದಿಲ್ಲ, ಸರಿ ಇನ್ನೊಂದು ವರ್ಷ ಗೆಲ್ಲದೆ ಇದ್ದರೇನಂತೆ ಅಂತ ಒತ್ತಡವಿಲ್ಲದೇ ಆಡಬಹುದು. ಅದು ನಮ್ಮ ಕೈಯಲ್ಲೇ ಇದೆ ಎಂದಿದ್ದರು. ಆ ಮಾತು ನನ್ನ ಮನಸ್ಸಿಗೆ ನಾಟಿತು. ಕೊನೆಗೆ ಅದನ್ನು ಸವಾಲಾಗಿಯೇ ಸ್ವೀಕರಿಸಿದೆವು ಎಂದು ಭುವಿ ಹೇಳಿದ್ದಾರೆ.

ಭುವಿಗೆ ಇದ್ದ ಭರವಸೆ ಏನು?

ಆರ್‌ಸಿಬಿ ತಂಡದ ಭಾಗವಾಗುವುದು ಪ್ರತಿಯೊಬ್ಬ ಆಟಗಾರನಿಗೂ ಎಂಥ ಹೆಮ್ಮೆ ಮತ್ತು ಸವಾಲು. ನಾನು ಮೊದಲ ಬಾರಿ ಸೇರಿದಾಗಲೇ, ಆರ್‍‌ಸಿಬಿ ಅಭಿಮಾನಿ ಬಳಗ ಹೇಗಿದೆ? ಇದು ಎಂಥ ಶ್ರೇಷ್ಠ ತಂಡ ಅನ್ನೋದು ನನಗೆ ತಿಳಿದಿತ್ತು. ನಾನು ತಂಡದಲ್ಲಿ ಇಲ್ಲದಿದ್ದಾಗಲೂ ಆರ್‌ಸಿಬಿ ಬಗ್ಗೆ ಒಳ್ಳೆಯ ಮಾತುಗಳನ್ನೇ ಕೇಳಿದ್ದೆ. ಹೀಗಾಗಿ ನನಗೆ ತುಂಬಾ ಖುಷಿಯಾಗಿತ್ತು ಎಂಬ ಸಂತಸವನ್ನು ಹಂಚಿಕೊಂಡಿದ್ದಾರೆ.

ಚಿನ್ನಸ್ವಾಮಿಯಲ್ಲಿ ಬೌಲಿಂಗ್ ಸವಾಲಿನ ಬಗ್ಗೆ ಮಾತನಾಡಿರುವ ಅವರು.. ಚಿನ್ನಸ್ವಾಮಿಯಲ್ಲಿ ಬೌಲರ್‌ಗಳಿಗೆ ಅಷ್ಟೊಂದು ಸಹಾಯಕವಾಗಿಲ್ಲ ಅನ್ನೋದು ಎಲ್ಲರಿಗೂ ಗೊತ್ತಿದೆ. ಆದರೆ ಪಂದ್ಯದ ಆರಂಭದಲ್ಲಿ ಚೆಂಡು ಸ್ವಿಂಗ್ ಆಗುತ್ತದೆ ಎಂಬ ಸಣ್ಣ ಭರವಸೆ ನನಗೆ ಇತ್ತು. ಆ ಒಂದು ಭರವಸೆಯೇ ನನಗೆ ಇನ್ನಷ್ಟು ಕಷ್ಟಪಟ್ಟು ಅಭ್ಯಾಸ ಮಾಡಲು ಸ್ಫೂರ್ತಿ ನೀಡಿತು ಎಂದಿದ್ದಾರೆ.

ಆ್ಯಂಡಿ ಮತ್ತು ಡಿಕೆಯನ್ನು ಭೇಟಿಯಾದಾಗ.. ಇಡೀ ತಂಡ ಏನನ್ನು ಸಾಧಿಸಲು ಬಯಸಿದೆ ಎಂಬುದರ ಬಗ್ಗೆ ನನಗೆ ಸ್ಪಷ್ಟವಾಗಿ ತಿಳಿಯಿತು. ತಂಡದಲ್ಲಿರುವ ಪ್ರತಿಯೊಬ್ಬ ಆಟಗಾರನನ್ನೂ ಒಳಗೊಳ್ಳುವ ದೂರದೃಷ್ಟಿಯೊಂದಿಗೆ ಹರಾಜಿನಲ್ಲಿ ಸರಿಯಾದ ಆಟಗಾರರನ್ನು ಖರೀದಿಸಿದ್ದರು. ಅಂದು ತಂಡದ ಮ್ಯಾನೇಜ್‌ಮೆಂಟ್ ಮತ್ತು ಆಟಗಾರರು ತೋರಿದ ಇದೇ ಸ್ಪಷ್ಟ ಗುರಿ ಮತ್ತು ಒತ್ತಡರಹಿತ ಸವಾಲಿನ ಮನೋಭಾವವೇ, 17 ವರ್ಷಗಳ ಸುದೀರ್ಘ ಕಾಯುವಿಕೆಗೆ ತೆರೆ ಎಳೆದು ಆರ್‌ಸಿಬಿ ಚೊಚ್ಚಲ ಐಪಿಎಲ್ ಟ್ರೋಫಿ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿತು ಎಂಬುದನ್ನು ಇಲ್ಲಿ ಸ್ಮರಿಸಬಹುದು.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

'ನಾನಿಲ್ಲಿ ಸೆಹ್ವಾಗ್ 2.0 ಆಗಲು ಬಂದಿಲ್ಲ, ಮೊದಲ ಆರ್ಯವೀರ್ ಆಗಬೇಕು': ತಂದೆಯೊಂದಿಗಿನ ಹೋಲಿಕೆ ಬಗ್ಗೆ ವೀರೂ ಪುತ್ರನ ಖಡಕ್ ಮಾತು
ಕೇವಲ 1 ಸೆಕೆಂಡ್ ಬಾಕಿ, DRS ಕೈಬಿಟ್ಟ ನ್ಯೂಜಿಲೆಂಡ್! ಔಟ್ ಆಗಿದ್ದ ಕನ್ನಡಿಗ ಕೆಎಲ್ ರಾಹುಲ್‌ಗೆ ಸಿಕ್ತು ಜೀವದಾನ..! ಸಿಟ್ಟಾದ ಬೌಲರ್