ಚಿನ್ನಸ್ವಾಮಿಯಲ್ಲಿ ಐಪಿಎಲ್‌ಗೆ ನೀರು ಬಳಕೆ: ವರದಿ ಸಲ್ಲಿಸುವಂತೆ ಎನ್‌ಜಿಟಿ ಆದೇಶ!

By Kannadaprabha News  |  First Published Apr 6, 2024, 10:26 AM IST

ಕಬ್ಬನ್‌ ಉದ್ಯಾನದಿಂದ ಸಂಸ್ಕರಿಸಿದ ನೀರನ್ನು ಕ್ರೀಡಾಂಗಣಕ್ಕೆ ಬಳಕೆ ಮಾಡಲು ಕೆಎಸ್‌ಸಿಎಗೆ ಜಲಮಂಡಳಿಯು ಅನುಮತಿ ನೀಡಿತ್ತು. ಅದರಂತೆ ಚಿನ್ನಸ್ವಾಮಿಯಲ್ಲಿ ಈ ಬಾರಿ ನಡೆದ 3 ಪಂದ್ಯಗಳಿಗೆ ತಲಾ 75,000 ಲೀಟರ್‌ ನೀರು ಬಳಕೆ ಮಾಡಲಾಗಿದೆ ಎಂದು ಅಂದಾಜಿಸಲಾಗಿದೆ. ಕ್ರೀಡಾಂಗಣದಲ್ಲಿ ಇನ್ನೂ 4 ಪಂದ್ಯಗಳು ನಿಗದಿಯಾಗಿವೆ.


ಬೆಂಗಳೂರು: ನಗರದಲ್ಲಿ ನೀರಿನ ಅಭಾವ ತಲೆದೋರಿರುವುದರ ನಡುವೆಯೂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್‌ ಪಂದ್ಯಗಳಿಗೆ ನೀರಿನ ಬಳಕೆ ಮಾಡಿರುವುದನ್ನು ರಾಷ್ಟ್ರೀಯ ಹಸಿರು ನ್ಯಾಯಮಂಡಳಿ(ಎನ್‌ಜಿಟಿ)ಯು ಗಂಭೀರವಾಗಿ ಪರಿಗಣಿಸಿದ್ದು, ಈ ಬಗ್ಗೆ ವರದಿ ಸಲ್ಲಿಸುವಂತೆ ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆ(ಕೆಎಸ್‌ಇಎ) ಹಾಗೂ ರಾಜ್ಯ ಸರ್ಕಾರಕ್ಕೆ ಆದೇಶಿಸಿದೆ. ಜಲಮಂಡಳಿ, ವಾಯುಮಾಲಿನ್ಯ ನಿಯಂತ್ರಣ ಮಂಡಳಿಗೂ ನೋಟಿಸ್‌ ಜಾರಿಗೊಳಿಸಲಾಗಿದೆ.

ಕಬ್ಬನ್‌ ಉದ್ಯಾನದಿಂದ ಸಂಸ್ಕರಿಸಿದ ನೀರನ್ನು ಕ್ರೀಡಾಂಗಣಕ್ಕೆ ಬಳಕೆ ಮಾಡಲು ಕೆಎಸ್‌ಸಿಎಗೆ ಜಲಮಂಡಳಿಯು ಅನುಮತಿ ನೀಡಿತ್ತು. ಅದರಂತೆ ಚಿನ್ನಸ್ವಾಮಿಯಲ್ಲಿ ಈ ಬಾರಿ ನಡೆದ 3 ಪಂದ್ಯಗಳಿಗೆ ತಲಾ 75,000 ಲೀಟರ್‌ ನೀರು ಬಳಕೆ ಮಾಡಲಾಗಿದೆ ಎಂದು ಅಂದಾಜಿಸಲಾಗಿದೆ. ಕ್ರೀಡಾಂಗಣದಲ್ಲಿ ಇನ್ನೂ 4 ಪಂದ್ಯಗಳು ನಿಗದಿಯಾಗಿವೆ.

Tap to resize

Latest Videos

IPL 2024 ಸೋಲಿಲದ ರಾಯಲ್ಸ್‌ನ್ನು ಸೋಲಿಸುತ್ತಾ ಆರ್‌ಸಿಬಿ?

ಈ ಬಗ್ಗೆ ಪೀಠದ ಮುಖ್ಯಸ್ಥ ನ್ಯಾ.ಪ್ರಕಾಶ್‌ ಶ್ರಿವಾಸ್ತವ ಹಾಗೂ ಸದಸ್ಯ ಡಾ.ಎ. ಸೆಂಥಿಲ್‌ ವೇಲ್‌ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದು, ಮೇ 2ರ ಮೊದಲು ವರದಿ ಸಲ್ಲಿಸುವಂತೆ ತಾಕೀತು ಮಾಡಿದ್ದಾರೆ.

ಇನ್ನು, ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯ ನೋಟಿಸ್‌ ಬಗ್ಗೆ ಪ್ರತಿಕ್ರಿಯಿಸಿರುವ ಕೆಎಸ್‌ಸಿಎ ಸಿಇಒ ಶುಭೇಂದು ಘೋಷ್, ಕ್ರೀಡಾಂಗಣವು ಎನ್‌ಜಿಟಿ ಮಾನದಂಡಗಳಿಗೆ ಬದ್ಧವಾಗಿದೆ. ನಾವು ಟೂರ್ನಿಯ ಉಳಿದ ಪಂದ್ಯಗಳನ್ನೂ ಆಯೋಜಿಸುತ್ತೇವೆ’ ಎಂದಿದ್ದಾರೆ.

ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಸಂಸ್ಕರಿಸಿದ ನೀರು ಪೂರೈಕೆ

ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಐಪಿಎಲ್‌ ಕ್ರಿಕೆಟ್‌ ಪಂದ್ಯಾವಳಿ ಸಂದರ್ಭದಲ್ಲಿ ಸಂಸ್ಕರಿಸಿದ ನೀರು ಪೂರೈಸಲು ಕ್ರಮ ಕೈಗೊಳ್ಳಲಾಗುವುದು ಎಂದು ಜಲಮಂಡಳಿ ಅಧ್ಯಕ್ಷ ಡಾ। ರಾಮ್‌ಪ್ರಸಾತ್‌ ಮನೋಹರ್‌ ತಿಳಿಸಿದ್ದರು.

ಕ್ರೀಡಾಂಗಣಕ್ಕೆ ಸಂಸ್ಕರಿಸಿದ ನೀರು ಒದಗಿಸುವಂತೆ ಕೆಎಸ್‌ಸಿಎ ಆಡಳಿತ ಮಂಡಳಿ ಪದಾಧಿಕಾರಿಗಳು ಕಳೆದ ಬುಧವಾರ ಡಾ। ರಾಮ್‌ಪ್ರಸಾತ್‌ ಮನೋಹರ್‌ ಅವರನ್ನು ಭೇಟಿಯಾಗಿ ಮನವಿ ಮಾಡಿದ್ದರು. ಪಂದ್ಯಾವಳಿ ಸಂದರ್ಭದಲ್ಲಿ ದಿನಕ್ಕೆ ₹75 ಸಾವಿರ ಲೀಟರ್‌ ನೀರು ಅವಶ್ಯಕತೆಯಿದ್ದು, ಕಬ್ಬನ್‌ ಉದ್ಯಾನದ ತ್ಯಾಜ್ಯ ನೀರು ಸಂಸ್ಕರಣಾ ಘಟಕದಲ್ಲಿ ಸಂಸ್ಕರಿಸಲಾದ ನೀರನ್ನು ಕ್ರೀಡಾಂಗಣಕ್ಕೆ ಪೂರೈಸುವಂತೆ ಕೋರಿದರು.

ಮಹಾಪರಾಧ ಮಾಡಿದ ರಿಷಭ್ ಪಂತ್, ನಿಷೇಧದ ಭೀತಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ನಾಯಕ..!

ಅದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ರಾಮ್‌ಪ್ರಸಾತ್‌ ಮನೋಹರ್‌, ಸದ್ಯ ನಗರದಲ್ಲಿ ನೀರಿನ ಸಮಸ್ಯೆಯಿದೆ. ಕಾವೇರಿ ನೀರು ಮತ್ತು ಕೊಳವೆಬಾವಿ ನೀರು ಪೂರೈಸಲು ಸಾಧ್ಯವಿಲ್ಲ. ಹೀಗಾಗಿ ಸಂಸ್ಕರಿಸಿದ ನೀರು ಪೂರೈಸಲು ಕ್ರಮ ಕೈಗೊಳ್ಳುತ್ತೇವೆ. ಅಲ್ಲದೆ ಮುಂದಿನ ದಿನಗಳಲ್ಲೂ ಕ್ರೀಡಾಂಗಣದಲ್ಲಿ ಸಂಸ್ಕರಿಸಿದ ನೀರು ಬಳಸುವುದು ಒಳ್ಳೆಯದು ಎಂದಿದ್ದರು.

click me!