ಬೆಂಗಳೂರಲ್ಲಿ ಆರ್‌ಸಿಬಿ ಫೈನಲ್ ಜ್ವರ: ಪಬ್ ಬಾರ್ ರೆಸ್ಟೋರೆಂಟ್‌ಗಳಲ್ಲಿ 1+1 ಬಿಯರ್ ಆಫರ್

Published : Jun 03, 2025, 03:46 PM IST
RCB

ಸಾರಾಂಶ

ಆರ್‌ಸಿಬಿ ಫೈನಲ್ ಪಂದ್ಯ ಹಾಗೂ ಪ್ರಶಸ್ತಿಗೆ ಅಭಿಮಾನಿಗಳು ಕಾಯುತ್ತಿದ್ದಾರೆ. ಬೆಂಗಳೂರಿನಲ್ಲಿ ಫುಲ್ ಆರ್‌ಸಿಬಿಯದ್ದೇ ಹವಾ. ಇಂದಿನ ಆರ್‌ಸಿಬಿ ಫೈನಲ್ ಪಂದ್ಯಕ್ಕೆ ಬೆಂಗಳೂರಿನ ಕೆಲ ಪಬ್, ರೆಸ್ಟೋರೆಂಟ್ ಭರ್ಜರಿ ಆಫರ್ ನೀಡುತ್ತಿದೆ. ಉಚಿತ ಬಿಯರ್, 1+1 ಕಾಕ್‌ಟೈಲ್ ಡೀಲ್ ಸೇರಿದಂತೆ ಹಲವು ಆಫರ್ ನೀಡಲಾಗಿದೆ.

ಬೆಂಗಳೂರು(ಜೂ.03) ಎಲ್ಲಿ ನೋಡಿದರೂ ಆರ್‌ಸಿಬಿ,,ಆರ್‌ಸಿಬಿ ಕೂಗು ಮಾತ್ರ ಕೇಳಿಸುತ್ತಿದೆ. ಅದು ಸೋಶಿಯಲ್ ಮೀಡಿಯಾ ಇರಲಿ, ಬೆಂಗಳೂರಿನ ಯಾವುದೇ ರಸ್ತೆ ಇರಲಿ. ಆರ್‌ಸಿಬಿ ಘೋಷಣೆ, ಆರ್‌ಸಿಬಿ ಫ್ಲ್ಯಾಗ್, ಜರ್ಸಿಗಳು ಕಾಣಸಿಗುತ್ತಿದೆ. ಬೆಂಗಳೂರಿನೆಲ್ಲೆಡೆ ಆರ್‌ಸಿಬಿ ಹವಾ ಫೈನಲ್ ಹವಾ ಜೋರಾಗಿದೆ. ಈಗಾಗಲೇ ಹಲವು ಪಬ್, ರೆಸ್ಟೋರೆಂಟ್‌ಗಳ ಟಿಕೆಟ್ ಸೋಲ್ಡ್ ಔಟ್ ಆಗಿದೆ. ಬಿಗ್ ಸ್ಕ್ರೀನ್, ಒಂದೊಂದೆ ಗುಟುಕಿನ ಜೊತೆಗೆ ಗೆಳೆಯರ ಜೊತೆ ಹರಟುತ್ತಾ ಪಂದ್ಯ ವೀಕ್ಷಿಸಲು ಎಲ್ಲಾ ತಯಾರಿ ಮಾಡಿಕೊಳ್ಳಲಾಗಿದೆ. ಇದರ ಬೆನ್ನಲ್ಲೇ ಬೆಂಗಳೂರಿನ ಕೆಲ ಪಬ್, ರೆಸ್ಟೋರೆಂಟ್‌ಗಳು ಭರ್ಜರಿ ಆಫರ್ ನೀಡಿದೆ. 1+1 ಬಿಯರ್, 1+1 ಕಾಟ್‌ಟೈಲ್ , ಬಕೆಟ್ ಬಿಯರ್, ಮಗ್ ಬಿಯರ್ ಸೇರಿದಂತೆ ಇತರ ಅಲ್ಕೌಹಾಲ್ ಆಫರ್ ನೀಡಲಾಗಿದೆ.

ಬೌಂಡರಿ ಸಿಡಿಸಿದರೆ ಉಚಿತ ಬಿಯರ್

ಬೆಂಗಳೂರಿನ ಹಲವು ಪಬ್, ರೆಸ್ಟೋರೆಂಟ್‌ಗಳು ಇದೀಗ ಭರ್ಜರಿ ಆಫರ್ ನೀಡುತ್ತಿದೆ. ಡಿಸ್ಕೌಂಟ್ ಬೆಲೆಯಲ್ಲಿ ಅಲ್ಕೋಹಾಲ್, ವಿವಿದ ಫ್ಲೇವರ್ ಸೇರಿದಂತೆ ಒಂದಕ್ಕಿಂತ ಒಂದು ಭಿನ್ನ ಆಫರ್ ನೀಡಲಾಗುತ್ತಿದೆ. ತಾವರಿಕೆರೆಯ ನ್ಯೂ ಪಬ್‌ 404ನಲ್ಲಿ ಹೊಸ ಆಫರ್ ನೀಡಲಾಗಿದೆ. ಆರ್‌ಸಿಬಿ ಬ್ಯಾಟರ್ ಓವರ್‌ನಲ್ಲಿ 4,0,4 ಸಿಡಿಸಿದರೆ ಅಂದರೆ ಬೌಂಡರಿ, ಡಾಟ್ ಬಾಲ್ ಹಾಗೂ ಮತ್ತೊಂದು ಬೌಂಡರಿ ಸಿಡಿಸಿದರೆ ಮುಂದಿನ 3 ಎಸೆತದೊಳಗ ಪಬ್ ಬಾರ್ ಕೌಂಟರ್‌ನಲ್ಲಿ ಬಿಯರ್ ಉಚಿತವಾಗಿ ಪಡೆಯಬಗುದು. 404 ಪಬ್ ಹೆಸರಾಗಿರುವ ಕಾರಣ ಈ ಆಫರ್ ನೀಡಲಾಗಿದೆ. ಇನ್ನು ಬಗೆಯ ಫ್ಲೇವರ್ ಬಿಯರ್ ಡಿಸ್ಕೌಂಟ್ ಬೆಲೆಯಲ್ಲಿ ನೀಡಲಾಗುತ್ತಿದೆ.

ಮೂರು ಖರೀದಿಸಿದರೆ ಒಂದು ಉಚಿತ

ದೊಡ್ಡನೇಕುಂದಿ ಯಾರ್ಡ್‌ನಲ್ಲಿ ಅತೀ ದೊಡ್ಡ ಸ್ಕ್ರೀನ್ ಹಾಕಲಾಗಿದೆ. ಇನ್ನು ಕ್ರೀಡಾಂಗಣದ ಹೊರಕ್ಕೆ ಸಿಕ್ಸರ್ ಸಿಡಿಸಿದರೆ ಹಲವು ಆಫರ್ ನೀಡಲಾಗಿದೆ. ಇನ್ನು ಬೌಂಡರಿ ಬಿಯರ್ ಆಫರ್ ನೀಡಲಾಗಿದೆ. ಮೂರು ಬಿಯರ್ ಖರೀದಿಸಿದರೆ ಒಂದು ಉಚಿತ, ಇನ್ನೊಂದು ಆಫರ್ 6 ಬಿಯರ್ ಖರೀದಿಸಿದರೆ 2 ಬಿಯರ್ ಆಫರ್ ನೀಡಲಾಗಿದೆ. ಇನ್ನು ಡಿಸ್ಕೌಂಟ್ ಆಫರ್ ಮೂಲಕ 1,999 ರೂಪಾಯಿಗೆ ಎಂಟ್ರಿ ಹಾಗೂ ವೆಲ್ಕಮ್ ಆಫರ್ ನೀಡಲಾಗುತ್ತದೆ.

1+1 ಬಕೆಟ್ ಬಿಯರ್ ಆಫರ್

ಜೆಪಿ ನಗರದಲ್ಲಿರುವ ಪಬ್‌ನಲ್ಲಿ ಆರ್‌ಸಿಬಿಯ ಪ್ಲೇಯಿಂಗ್ 11 ಆಟಗಾರರ ಸಂಕೇತವಾಗಿ 11 ವಿವಿದ ಶಾಟ್ಸ್ ತಯಾರಿಸಲಾಗಿದೆ. ಹಲವು ಬಗೆಯ ಫ್ಲೇವರ್ ಶಾಟ್ಸ್ ಇದಾಗಿದೆ. ಕೆಲ ಸ್ಪೈಸಿ ಫ್ಲೇವರ್ ಕೂಡ ತಯಾರಿಸಲಾಗಿದೆ. ಇದು ಆರ್‌ಸಿಬಿ ತಂಡಕ್ಕೆ ಸೂಕ್ತವಾಗಿದೆ ಎಂದು ಪಬ್ ಮ್ಯಾನೇಜರ್ ಹೇಳಿದ್ದಾರೆ. ಇನ್ನು ಕೆಲ ಪಬ್ ಹಾಗೂ ರೆಸ್ಟೋರೆಂಟ್‌ಗಳಲ್ಲಿ 1+1 ಬಕೆಟ್ ಬಿಯರ್ ಆಫರ್, 1+1 ಕಾಕ್‌ಟೈಲ್ ಆಫರ್ ಸೇರಿದಂತೆ ಹಲವು ಆಫರ್ ನೀಡಲಾಗಿದೆ.

ಫೈನಲ್ ಪಂದ್ಯದ ಕಾತರ

2025ರ ಐಪಿಎಲ್ ಟೂರ್ನಿಯಲ್ಲಿ ಅದ್ಭುತ ಪ್ರದರ್ಶನದ ಮೂಲಕ ಆರ್‌ಸಿಬಿ ತಂಡ ಫೈನಲ್ ಪ್ರವೇಶಿಸಿದೆ. ಫೈನಲ್ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಮುಖಾಮುಖಿಯಾಗುತ್ತಿದೆ. ಇಂದು (ಜೂ.03) ಸಂಜೆ 7.30ಕ್ಕೆ ಪಂದ್ಯ ಆರಂಭಗೊಳ್ಳಲಿದೆ. ಅಹಮ್ಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಪಂದ್ಯ ನಡೆಯಲಿದೆ.

ಕ್ವಾಲಿಫೈಯರ್ ಪಂದ್ಯದಲ್ಲಿ ಪಂಜಾಬ್ ಮಣಿಸಿದ್ದ ಆರ್‌ಸಿಬಿ

ಅದ್ಭುತ ಪ್ರದರ್ಶನ ನೀಡಿದ ಆರ್‌ಸಿಬಿ ಪ್ಲೇ ಆಫ್ ಹಂತ ಪ್ರವೇಶಿಸಿತ್ತು. ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಆರ್‌ಸಿಬಿ ಪಂಜಾಬ್ ಕಿಂಗ್ಸ್ ತಂಡವನ್ನು ಮಣಿಸಿತ್ತು. ಈ ಮೂಲಕ ನೇರವಾಗಿ ಫೈನಲ್ ಪ್ರವೇಶಿಸಿತ್ತು.ಪಂಜಾಬ್ ತಂಡವನ್ನು 101 ರನ್‌ಗೆ ಆಲೌಟ್ ಮಾಡಿದ ಆರ್‌ಸಿಬಿ 2 ವಿಕೆಟ್ ಕಳೆದುಕೊಂಡು 10 ಓವರ್‌ಗಳಲ್ಲಿ ಪಂದ್ಯ ಗೆದ್ದುಕೊಂಡಿತ್ತು.

ಅಂಕಪಟ್ಟಿಯಲ್ಲಿ 2ನೇ ಸ್ಥಾನ ಪಡೆದ ಆರ್‌ಸಿಬಿ

ಲೀಗ್ ಹಂತದಲ್ಲಿ ಆರ್‌ಸಿಬಿ ಉತ್ತಮ ಹೋರಾಟ ನೀಡಿತ್ತು. 14 ಪಂದ್ಯದಲ್ಲಿ ಆರ್‌ಸಿಬಿ 9ರಲ್ಲಿ ಗೆಲುವು ಕಂಡಿತ್ತು. ಮೂಲಕ 19 ಅಂಕ ಪಡೆದಿತ್ತು. ಒಂದು ಪಂದ್ಯ ಮಳೆಯಿಂದ ರದ್ದಾದರೆ, 4 ಪಂದ್ಯದಲ್ಲಿ ಆರ್‌ಸಿಬಿ ಸೋಲು ಕಂಡಿತ್ತು. ಉತ್ತಮ ಪ್ರದರ್ಶನದ ಮೂಲಕ ಮೊದಲ ಕ್ವಾಲಿಫೈಯರ್ ಪಂದ್ಯಕ್ಕೆ ಆಯ್ಕೆಯಾಗಿತ್ತು.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಕುಲ್ದೀಪ್-ಪ್ರಸಿದ್ದ್ ಮಾರಕ ದಾಳಿ; ಏಕದಿನ ಸರಣಿ ಗೆಲ್ಲಲು ಭಾರತಕ್ಕೆ ಸ್ಪರ್ಧಾತ್ಮಕ ಗುರಿ
Ind vs SA: ಶುಭ್‌ಮನ್ ಗಿಲ್ ಫುಲ್ ಫಿಟ್; ಈ ಡೇಟ್‌ಗೆ ಟೀಂ ಇಂಡಿಯಾಗೆ ಕಮ್‌ಬ್ಯಾಕ್ ಮಾಡೋದು ಫಿಕ್ಸ್!