ಆರ್‌ಸಿಬಿ ಕಪ್‌ಗೆ ಕಾದಿರುವ ಅಭಿಮಾನಿಗಳಿಗೆ ಸತತ ಸೋಲು ಬೇಸರ ತರಿಸಿದೆ ನಿಜ. ಆದರೆ ಇದೀಗ ಬೆಂಗಳೂರು ಅಭಿಮಾನಿಗಳು ಸಂಭ್ರಮ ಪಡುವ ಸಿಹಿ ಸುದ್ದಿ ಬಂದಿದೆ. ಡೆಫ್ ಐಪಿಎಲ್ ಟೂರ್ನಿಯಲ್ಲಿ ಬೆಂಗಳೂರಿನ ಬಾದ್‌ಶಾ ತಂಡ ಟ್ರೋಫಿ ಗೆದ್ದಿದೆ.
ಶ್ರೀನಗರ(ಏ.21) ಐಪಿಎಲ್ 2024ರ ಟೂರ್ನಿಯಲ್ಲಿ ಆರ್‌ಸಿಬಿಗೆ ನಿರೀಕ್ಷಿತ ಯಶಸ್ಸು ಸಿಕಿಲ್ಲ. ಸತತ ಸೋಲುಗಳಿಂದ ತಂಡ ಕಂಗೆಟ್ಟಿದೆ. ಕೆಕೆಆರ್ ವಿರುದ್ಧ ಕೇವಲ 1 ರನ್‌ಗಳಿಂದ ಸೋಲು ಕಂಡು ನಿರಾಸೆ ಅನುಭವಿಸಿದೆ. ಆರ್‌ಸಿಬಿ ಸೋಲು, ಪ್ರದರ್ಶನ ಅಭಿಮಾನಿಗಳಲ್ಲಿ ಬೇಸರ ತರಿಸಿದೆ. ಮಹಿಳಾ ಆರ್‌ಸಿಬಿ ತಂಡ ಟ್ರೋಫಿ ಗೆದ್ದಬೆನ್ನಲ್ಲೇ ಪುರುಷರ ತಂಡವೂ ಈ ಸಾಧನೆ ಮಾಡಲಿದೆ ಅನ್ನೋ ಆಸೆ, ಆಕಾಂಕ್ಷೆಗಳು ಹೆಚ್ಚಾಗಿದೆ. ಆದರೆ ಸೋಲು ತೀವ್ರ ಹಿನ್ನಡೆ ತರುತ್ತಿದೆ. ಈ ಸೋಲಿನಿಂದ ಬೆಂಗಳೂರು ಅಭಿಮಾನಿಗಳು ಬೇಸರ ಪಡಬೇಕಾಗಿಲ್ಲ. ಸಂಭ್ರಮಿಸುವ ಸಿಹಿ ಸುದ್ದಿ ಬಂದಿದೆ. ಡೆಫ್ ಐಪಿಎಲ್ ಟೂರ್ನಿಯಲ್ಲಿ ಬೆಂಗಳೂರು ಬಾದ್‌ಶಾ ಫ್ರಾಂಚೈಸಿ ಟ್ರೋಫಿ ಗೆದ್ದು ಸಂಭ್ರಮಿಸಿದೆ.
ಶ್ರವಣದೋಷ ಆಟಗಾರರ ಐಪಿಎಲ್ ಟೂರ್ನಿಯಲ್ಲಿ ಬೆಂಗಳೂರಿನ ಬಾದ್‌ಶಾ ತಂಡ ಇತಿಹಾಸ ರಚಿಸಿದೆ. ಡೆಫ್ ಐಪಿಎಲ್ 2024ರ ಫೈನಲ್ ಪಂದ್ಯ ಜಮ್ಮು ಮತ್ತು ಕಾಶ್ಮೀರದ ಮೌಲನಾ ಅಜಾದ್ ಕ್ರೀಡಾಂಗಣದಲ್ಲಿ ಆಯೋಜನೆಗೊಂಡಿತ್ತು. ಫೈನಲ್ ಪಂದ್ಯದಲ್ಲಿ ಡೆಫ್ ಬೆಂಗಳೂರು ಬಾದ್‌ಶಾ ಹಾಗೂ ಡೆಫ್ ಹೈದರಾಬಾದ್ ಈಗಲ್ಸ್ ಮುಖಾಮುಖಿಯಾಗಿತ್ತು.
undefined
IPL 2024 ದಿನೇಶ್ ಕಾರ್ತಿಕ್ ಒಂದು ನಿರ್ಧಾರದಿಂದ ಆರ್‌ಸಿಬಿ ಸೋಲು ಕಂಡಿತಾ? ಏನಿದು ವಿವಾದ!
ತೀವ್ರ ಪೈಪೋಟಿಯ ಪಂದ್ಯದಲ್ಲಿ ಡೆಫ್ ಬೆಂಗಳೂರು ಬಾದ್‌ಶಾ ಗೆಲುವಿನ ನಗೆ ಬೀರಿದೆ. ಬೆಂಗಳೂರು ಬಾದ್‌ಶಾ ತಂಡದ ವಿರೇಂದ್ರ ಸಿಂಗ್, ಉಮರ್ ಅಶ್ರಫ್ ಬೇಗ್ ಅದ್ಭುತ ಪ್ರದರ್ಶನ ತಂಡಕ್ಕೆ ನೆರವಾಯಿತು. ಇತ್ತ ಹೈದರಾಬಾದ್ ಈಗಲ್ಸ್ ತಂಡಕೂಡ ಅಷ್ಟೇ ಹೋರಾಟ ನೀಡಿತ್ತು. ಟೂರ್ನಿಯುದ್ದಕ್ಕೂ ಹೈದರಾಬಾದ್ ಈಗಲ್ಸ್ ಅತ್ಯುತ್ತಮ ಪ್ರದರ್ಶನ ನೀಡಿ ಫೈನಲ್ ಪ್ರವೇಶಿಸಿತ್ತು. ಆಧರೆ ಪೈನಲ್ ಪಂದ್ಯದಲ್ಲಿ ಬೆಂಗಳೂರು ಬಾದ್‌ಶಾ ಪ್ರದರ್ಶನದ ಮುಂದೆ ಸೋಲೊಪ್ಪಿಕೊಂಡಿತು. ಈ ಮೂಲಕ ಬೆಂಗಳೂರು ಬಾದ್‌ಶಾ ಡೆಫ್ ಐಪಿಎಲ್ ಟ್ರೋಫಿ ಗೆದ್ದುಕೊಂಡಿದೆ.
Specially-abled athletes shine at the 5th Deaf Closing Ceremony in MAStadium, Jammu.
Congratulations to Deaf Bengaluru Badshahs & Deaf Hyderabad Eagles for their joint victory. pic.twitter.com/ySbJZLHQKW
ಇಂಡಿಯನ್ ಡೆಫ್ ಕ್ರಿಕೆಟ್ ಅಸೋಸಿಯೇಶನ್ ಆಯೋಜಿಸಿದ ಈ ಡೆಫ್ ಐಪಿಎಲ್ ಟೂರ್ನಿ ಅತ್ಯಂತ ಯಶಸ್ವಿಯಾಗಿ ಪೂರ್ಣಗೊಂಡಿದೆ. ವಿಶೇಷ ಚೇತನರ ಈ ಟೂರ್ನಿ ವೀಕ್ಷಿಸಲು ಅಪಾರ ಸಂಖ್ಯೆ ಅಭಿಮಾನಿಗಳು ಕ್ರೀಡಾಂಗಣದಲ್ಲಿ ಹಾಜರಾಗಿದ್ದರು.
ಆರ್‌ಸಿಬಿ ಸತತ ಸೋಲಿನಿಂದ ಕಂಗೆಟ್ಟಿರುವ ಬೆಂಗಳೂರು ಅಭಿಮಾನಿಗಳಿಗೆ ಇದೀಗ ಬೆಂಗಳೂರಿನ ಬಾದ್‌ಶಾ ತಂಡ ಡೆಫ್ ಐಪಿಎಲ್ ಟೂರ್ನಿ ಗೆಲ್ಲುವ ಮೂಲಕ ಸಮಾನಧಾನ ತಂದಿದ್ದಾರೆ.
ಕೆಕೆಆರ್ ಎದುರು 1 ರನ್ ರೋಚಕ ಸೋಲು ಕಂಡ ಆರ್‌ಸಿಬಿ..! ಪ್ಲೇ ಆಫ್ ಕನಸು ಬಹುತೇಕ ಭಗ್ನ