
ಲಂಡನ್: ಇತ್ತೀಚೆಗೆ ನೈಟ್‌ಕ್ಲಬ್‌ನಲ್ಲಿ ರಗ್ಬಿ ಆಟಗಾರನ ಜೊತೆಗಿನ ವಾಗ್ವಾದ, ಹಲ್ಲೆ ಘಟನೆ ಬೆನ್ನಲ್ಲೇ ಇಂಗ್ಲೆಂಡ್ ನಾಯಕ ಬೆನ್ ಸ್ಟೋಕ್ಸ್ ಹಾಗೂ ವೇಗದ ಬೌಲರ್ ಗಸ್ ಆಟ್ಕಿನ್ಸನ್ ತಂಡದಿಂದ ಹೊರಬಿದ್ದಿದ್ದಾರೆ.
ನ್ಯೂಜಿಲೆಂಡ್ ವಿರುದ್ಧ ಜೂ.17ರಿಂದ ಆರಂಭಗೊಳ್ಳಲಿರುವ 2ನೇ ಟೆಸ್ಟ್‌ಗೆ ಪ್ರಕಟಗೊಂಡ 15 ಆಟಗಾರರ ತಂಡದಲ್ಲಿ ಇವರಿಬ್ಬರಿಗೂ ಸ್ಥಾನ ಲಭಿಸಿಲ್ಲ. ಇಂಗ್ಲೆಂಡ್ ಕ್ರಿಕೆಟ್ ಮಂಡಳಿಯು ವಿವಾದದ ಬಗ್ಗೆ ತನಿಖೆ ನಡೆಸುತ್ತಿರುವುರಿಂದ ಸ್ಟೋಕ್ಸ್‌ರನ್ನು ತಂಡದಿಂದ ಹೊರಗಿಡಲಾಗಿದೆ. ಅವರ ಬದಲು ಹಿರಿಯ ಆಟಗಾರ ಜೋ ರೂಟ್ ತಂಡದ ನಾಯಕನಾಗಿ ಆಯ್ಕೆಯಾಗಿದ್ದಾರೆ. ಜೋಫ್ರಾ ಆರ್ಚರ್ ಹಾಗೂ ಜೋರ್ಡನ್ ಕಾಕ್ಸ್ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.
ಎರಡನೇ ಟೆಸ್ಟ್‌ಗೆ ಇಂಗ್ಲೆಂಡ್ ತಂಡ ಹೀಗಿದೆ:
ಜೋ ರೂಟ್(ನಾಯಕ), ರೆಹಾನ್ ಅಹಮದ್, ಜೋಫ್ರಾ ಆರ್ಚರ್, ಸೋನಿ ಬೇಕರ್, ಶೋಯೆಬ್ ಬಷೀರ್, ಜೇಕಬ್ ಬೆಥೆಲ್, ಹ್ಯಾರಿ ಬ್ರೂಕ್, ಜೋರ್ಡನ್ ಕಾಕ್ಸ್, ಬೆನ್ ಡಕೆಟ್, ಮ್ಯಾಥ್ಯೂ ಫಿಶರ್, ಎಮಿಲಿಯೋ ಗೇ, ಜೇಮ್ಸ್ ರೀವ್, ಓಲಿ ರಾಬಿನ್‌ಸನ್, ಜೇಮಿ ಸ್ಮಿತ್, ಜೋಶ್ ಟಂಗ್
ಲಂಡನ್: ನೈಟ್‌ಕ್ಲಬ್ ವಿವಾದದ ಬೆನ್ನಲ್ಲೇ ಇಂಗ್ಲೆಂಡ್ ನಾಯಕ ಬೆನ್ ಸ್ಟೋಕ್ಸ್ ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಲಿದ್ದಾರೆ ಎಂದು ವರದಿಯಾಗಿದೆ.
ಭಾನುವಾರ ರಾತ್ರಿ ಸಹ ಆಟಗಾರ ಗಸ್ ಆಟ್ಕಿನ್ಸನ್ ಜೊತೆ ಸ್ಟೋಕ್ಸ್ ನೈಟ್‌ಕ್ಲಬ್‌ನಲ್ಲಿ ಪಾರ್ಟಿ ಮಾಡಿದ್ದರು. ಈ ವೇಳೆ ರಗ್ಬಿ ಆಟಗಾರ ಜೊತೆ ವಾಗ್ವಾದ ನಡೆದಿದೆ. ಹಲ್ಲೆಯೂ ನಡೆದಿದೆ ಎನ್ನಲಾಗುತ್ತಿದ್ದು, ಈ ಬಗ್ಗೆ ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ತನಿಖೆ ಆರಂಭಿಸಿದೆ. ಇದರ ಬೆನ್ನಲ್ಲೇ ಸ್ಟೋಕ್ಸ್ ತಮ್ಮ ನಾಯಕತ್ವ ತೊರೆಯುವುದರ ಜೊತೆಗೆ ಟೆಸ್ಟ್ ಕ್ರಿಕೆಟ್‌ಗೇ ವಿದಾಯ ಘೋಷಿಸುವ ಬಗ್ಗೆ ಸುದ್ದಿ ಹರಿದಾಡುತ್ತಿದೆ.
ಅಭ್ಯಾಸ ಪಂದ್ಯದಲ್ಲಿ ಸೋತ ಭಾರತ
ಕಾರ್ಡಿಫ್: ಐಸಿಸಿ ಮಹಿಳಾ ಟಿ20 ವಿಶ್ವಕಪ್‌ನ ಸಿದ್ಧತೆಗಾಗಿ ನಡೆದ ಅಭ್ಯಾಸ ಪಂದ್ಯದಲ್ಲಿ ಬುಧವಾರ ಭಾರತ ತಂಡ ಇಂಗ್ಲೆಂಡ್ ವಿರುದ್ಧ ಸೋಲನುಭವಿಸಿದೆ. ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್ 6 ವಿಕೆಟ್‌ಗೆ 171 ರನ್ ಕಲೆಹಾಕಿತು. ದೊಡ್ಡ ಗುರಿ ಬೆನ್ನತ್ತಿದ ಭಾರತ 19.5 ಓವರ್‌ಗಳಲ್ಲಿ 166 ರನ್‌ಗೆ ಆಲೌಟಾಗಿ, 5 ರನ್‌ಗಳಿಂದ ವೀರೋಚಿತ ಸೋಲುಕಂಡಿತು. ಶುಕ್ರವಾರ ವಿಶ್ವಕಪ್ ಆರಂಭಗೊಳ್ಳಲಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.