ಬೆನ್ ಸ್ಟೋಕ್ಸ್‌ಗೆ ಸ್ಕ್ರೂಗಳನ್ನು ಬಳಸಿ ಕಾಂಪ್ಲೆಕ್ಸ್ ಸರ್ಜರಿ: ಗುರುತೇ ಸಿಗದಷ್ಟು ಬದಲಾದ ಇಂಗ್ಲೆಂಡ್ ಕ್ಯಾಪ್ಟನ್! ಅಷ್ಟಕ್ಕೂ ಆಗಿದ್ದೇನು?

Published : Apr 26, 2026, 04:08 PM IST
Ben Stokes

ಸಾರಾಂಶ

ಇಂಗ್ಲೆಂಡ್ ಕ್ರಿಕೆಟ್ ನಾಯಕ ಬೆನ್ ಸ್ಟೋಕ್ಸ್ ಅವರ ಹೊಸ ಲುಕ್ ಎಲ್ಲರನ್ನೂ ಅಚ್ಚರಿಗೊಳಿಸಿದೆ. ಅಭ್ಯಾಸದ ವೇಳೆ ಮುಖಕ್ಕೆ ಗಾಯವಾದ ನಂತರ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಅವರ ಮುಖದ ರಚನೆ ಹಾಗೂ ದೇಹದಲ್ಲಿ ಬದಲಾವಣೆಗಳಾಗಿದ್ದು, ಇದೀಗ ಅವರು ಚೇತರಿಸಿಕೊಂಡು ಕ್ರಿಕೆಟ್‌ಗೆ ಮರಳಲು ಸಜ್ಜಾಗಿದ್ದಾರೆ.

ಲಂಡನ್: ಇಂಗ್ಲೆಂಡ್ ಟೆಸ್ಟ್ ಕ್ರಿಕೆಟ್ ತಂಡದ ನಾಯಕ ಬೆನ್ ಸ್ಟೋಕ್ಸ್ ಅವರ ಹೊಸ ಲುಕ್ ನೋಡಿ ಇಡೀ ಕ್ರೀಡಾಲೋಕವೇ ದಂಗಾಗಿದೆ. ಇತ್ತೀಚೆಗೆ ಇಂಗ್ಲೆಂಡ್ ತಂಡದ ಹೊಸ ಕಿಟ್ ಬಿಡುಗಡೆ ವಿಡಿಯೋದಲ್ಲಿ ಸ್ಟೋಕ್ಸ್ ಕಾಣಿಸಿಕೊಂಡಿದ್ದರು. ಇದರಲ್ಲಿ ಅವರ ಮುಖ ಹಾಗೂ ದೇಹದಲ್ಲಿ ಆಗಿರುವ ಬದಲಾವಣೆಗಳು ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದೆ.

ಅಭ್ಯಾಸದ ವೇಳೆ ಗಾಯಗೊಂಡಿದ್ದ ಬೆನ್ ಸ್ಟೋಕ್ಸ್

ಕಳೆದ ಫೆಬ್ರವರಿಯಲ್ಲಿ, 34 ವರ್ಷದ ಸ್ಟೋಕ್ಸ್ ತಮ್ಮ ಕೌಂಟಿ ತಂಡವಾದ ಡರ್ಹಾಮ್ ಪರ ಅಭ್ಯಾಸ ನಡೆಸುತ್ತಿದ್ದರು. ಈ ವೇಳೆ ನೆಟ್ಸ್‌ನಲ್ಲಿ ಬ್ಯಾಟಿಂಗ್ ಮಾಡುವಾಗ ಚೆಂಡು ನೇರವಾಗಿ ಅವರ ಮುಖಕ್ಕೆ ಬಡಿದಿತ್ತು. ಈ ಘಟನೆಯಲ್ಲಿ ಸ್ಟೋಕ್ಸ್ ಅವರ ಕೆನ್ನೆಯ ಮೂಳೆ ಮುರಿದುಹೋಗಿತ್ತು. ನಂತರ ಅವರಿಗೆ ಶಸ್ತ್ರಚಿಕಿತ್ಸೆ ನಡೆಸಲಾಯಿತು. ಮುರಿದ ಮೂಳೆಗಳನ್ನು ಸರಿಪಡಿಸಲು ವೈದ್ಯರು ಟೈಟಾನಿಯಂ ಪ್ಲೇಟ್‌ಗಳು ಮತ್ತು ಸ್ಕ್ರೂಗಳನ್ನು ಬಳಸಿ ಕಾಂಪ್ಲೆಕ್ಸ್ ಸರ್ಜರಿ ಮಾಡಿದ್ದರು.

ಸರ್ಜರಿ ನಂತರ ಸ್ಟೋಕ್ಸ್ ಮೊದಲಿನಿಗಿಂತ ಸಣ್ಣಗಾಗಿದ್ದು, ಅವರ ಮುಖದ ರಚನೆಯಲ್ಲೂ ಬದಲಾವಣೆ ಕಾಣಿಸುತ್ತಿದೆ. ಆದರೆ, ಇದರಲ್ಲಿ ಆತಂಕಪಡುವಂಥದ್ದೇನೂ ಇಲ್ಲ ಎಂದು ವೈದ್ಯಕೀಯ ತಜ್ಞರು ಹೇಳಿದ್ದಾರೆ. ಮುಖದ ಮೂಳೆಗಳನ್ನು ಸರಿಪಡಿಸುವಾಗ ಮುಖದ ಆಕಾರದಲ್ಲಿ ಸಣ್ಣಪುಟ್ಟ ಬದಲಾವಣೆಗಳು ಸಹಜವಂತೆ. ಸರ್ಜರಿಯಿಂದಾಗಿ ಮುಖದ ಸ್ನಾಯುಗಳ ಚಲನೆ ಕಡಿಮೆಯಾಗಿದ್ದು ಮತ್ತು ದೀರ್ಘಕಾಲದ ವಿಶ್ರಾಂತಿಯೇ ಈ ಬದಲಾವಣೆಗೆ ಕಾರಣವಾಗಿದೆ. ಗಾಯದ ಕಾರಣ ತರಬೇತಿಯಿಂದ ದೂರ ಉಳಿದಿದ್ದು ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಗಳಿಂದಲೂ ಸ್ಟೋಕ್ಸ್ ಸಣ್ಣಗಾಗಿದ್ದಾರೆ.

 

ಗಾಯದ ದೈಹಿಕ ಮತ್ತು ಮಾನಸಿಕ ಆಘಾತದಿಂದ ಚೇತರಿಸಿಕೊಂಡಿರುವ ಸ್ಟೋಕ್ಸ್, ಇದೀಗ ಮತ್ತೆ ತರಬೇತಿ ಆರಂಭಿಸಿದ್ದಾರೆ. ನ್ಯೂಜಿಲೆಂಡ್ ವಿರುದ್ಧದ ಮುಂಬರುವ ಟೆಸ್ಟ್ ಸರಣಿ ಮೂಲಕ ಕ್ರಿಕೆಟ್‌ಗೆ ಮರಳುವ ಗುರಿ ಹೊಂದಿದ್ದಾರೆ.

 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಒಂದೇ ದಿನ ನಾಲ್ಕು ಜನರ ಮುಡಿಗೇರಿದ ಆರೆಂಜ್ ಕ್ಯಾಪ್! ಈಗ ಯಾರ ಬಳಿಯಿದೆ ಆ ಕ್ಯಾಪ್?
IPL 2026 ತನ್ನ ಹೊಸ ಫೇವರೇಟ್ ಆಟಗಾರನ ಹೆಸರಿಸಿದ ಪ್ಯಾಟ್ ಕಮಿನ್ಸ್!