ಬಿಸಿಸಿಐ ಅಧ್ಯಕ್ಷನ ಬಿಂದಾಸ್ ಸ್ಟೆಪ್, ದಾದಾಗೆ ಭಜ್ಜಿ ಸಾಥ್!

Suvarna News   | Asianet News
Published : Jan 13, 2020, 03:51 PM IST
ಬಿಸಿಸಿಐ ಅಧ್ಯಕ್ಷನ ಬಿಂದಾಸ್ ಸ್ಟೆಪ್, ದಾದಾಗೆ ಭಜ್ಜಿ ಸಾಥ್!

ಸಾರಾಂಶ

ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ತಮ್ಮ ಬ್ಯುಸಿ ಶೆಡ್ಯೂಲ್‌ನಲ್ಲೂ ಭರ್ಜರಿ ಡ್ಯಾನ್ಸ್ ಮೂಲಕ ಗಮನ ಸೆಳೆದಿದ್ದಾರೆ. ಗಂಭೀರವಾಗಿ ಕಾಣಿಸುವ ಗಂಗೂಲಿ, ತಮ್ಮ ಖಡಕ್ ಮಾತಿನಿಂದಲೇ ತಿರುಗೇಟು ನೀಡುತ್ತಾರೆ. ಆದರೆ ದಾದಾ ಇದೀಗ ಭಿನ್ನವಾಗಿ ಕಾಣಿಸಿಕೊಂಡಿದ್ದಾರೆ. ಗಂಗೂಲಿ ಜೊತೆ ಹರ್ಭಜನ್ ಸಿಂಗ್ ಕೂಡ ಡ್ಯಾನ್ಸ್‌ನಲ್ಲಿ ಮಿಂಚಿದ್ದಾರೆ. ಇದೀಗ ಈ ವಿಡಿಯೋ ವೈರಲ್ ಆಗಿದೆ

ಕೋಲ್ಕತಾ(ಜ.13): ಕ್ರಿಕೆಟಿಗನಾಗಿ ಬಳಿಕ ವೀಕ್ಷಕ ವಿವರಣೆಗಾರನಾಗಿ ಇದೀಗ ಬಿಸಿಸಿಐ ಅಧ್ಯಕ್ಷನಾಗಿ ಸೌರವ್ ಗಂಗೂಲಿ ನೇರ ನುಡಿ, ಖಡಕ್ ಮಾತು, ಧರ್ಯದಿಂದ ಮುನ್ನಗ್ಗುವ ಛಾತಿಯಲ್ಲಿ ಯಾವುದೇ ಬದಲಾವಣೆ ಇಲ್ಲ. ಹೀಗಾಗಿ ಗಂಗೂಲಿ ಹೆಚ್ಚು ಗಂಭೀರವಾಗಿ ಕಾಣಿಸಿಕೊಳ್ಳುತ್ತಾರೆ. ಬಿಸಿಸಿಐ ಅಧ್ಯಕ್ಷನಾದ ಬಳಿಕ ಗಂಗೂಲಿ ಜವಾಬ್ದಾರಿ ಹೆಚ್ಚಾಗಿದೆ. ಇದರ ನಡುವೆ ಗಂಗೂಲಿ ಭರ್ಜರಿ ಡ್ಯಾನ್ಸ್ ಮಾಡಿ ಎಲ್ಲರ ಗಮನಸೆಳೆದಿದ್ದಾರೆ.

ಇದನ್ನೂ ಓದಿ: ರಜಾ ದಿನ ಕೆಲಸ ಇಷ್ಟವಿಲ್ಲ; ಗಂಗೂಲಿಗೆ ಫ್ಯಾನ್ಸ್ ಭರ್ಜರಿ ಪ್ರತಿಕ್ರಿಯೆ!

ಬಂಗಳಾದಲ್ಲಿ ಸೌರವ್ ಗಂಗೂಲಿ ದಾದಾಗಿರಿ ಅನ್‌ಲಿಮಿಟೆಡ್ ಕ್ವಿಝ್ ಕಾರ್ಯಕ್ರಮವನ್ನು ಸ್ವತಃ ಗಂಗೂಲಿ ನಿರೂಪಿಸಿದ್ದರು. ಈ ವಿಶೇಷ ಕಾರ್ಯಕ್ರಮಕ್ಕೆ ಗಂಗೂಲಿ ನಾಯಕತ್ವದಲ್ಲಿ ಆಡಿದ ಹಾಗೂ ಆಪ್ತರಾದ ವಿವಿಎಸ್ ಲಕ್ಷಣ್, ಹರ್ಭಜನ್ ಸಿಂಗ್, ವಿರೇಂದ್ರ ಸೆಹ್ವಾಗ್, ಜಹೀರ್ ಖಾನ್, ಮೊಹಮ್ಮದ್ ಕೈಫ್ ಹಾಗೂ ಆರ್ ಅಶ್ವಿನ್ ಆಹ್ವಾನಿಸಲಾಗಿತ್ತು. 

ಇದನ್ನೂ ಓದಿ: ಕೇವಲ 40 ನಿಮಿಷದಲ್ಲಿ ಹೃದಯ ಗೆದ್ದ ನಾಯಕ; ಗಂಗೂಲಿ ಹೊಗಳಿದ ಪಾಕ್ ದಿಗ್ಗಜ!

ಈ ಕಾರ್ಯಕ್ರಮದಲ್ಲಿ ಪಾಪ್ ಸಿಂಗರ್ ಉಶಾ ಉತ್ತಪ್ಪ ಕೂಡ ಹಾಜರಿದ್ದರು. ಕಾರ್ಯಕ್ರಮದ ನಡುವೆ ಉಶಾ ಉತ್ತಪ್ಪ ಬಾಲಿವುಡ್ ಹಾಡೊಂದನ್ನು ಹಾಡಿದರು. ಈ ವೇಳೆ ಹರ್ಭಜನ್ ಸಿಂಗ್ ಡ್ಯಾನ್ಸ್‌ ಮಾಡಲು ಮುಂದಾದರು. ಡ್ಯಾನ್ಸ್ ವೇಳೆ ಭಜ್ಜಿ, ಗಂಗೂಲಿಯನ್ನು ಕರೆತಂದು ಜೊತೆಯಾಗಿ ಡ್ಯಾನ್ಸ್ ಮಾಡಿದರು. ಗಂಗೂಲಿ ಕೂಡ ಅಷ್ಟೇ ಉತ್ತಮವಾಗಿ ಡ್ಯಾನ್ಸ್ ಮಾಡಿ ಎಲ್ಲರ ಗಮನಸೆಳೆದರು.

 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಡಿಕಾಕ್‌ ಡ್ಯಾಶಿಂಗ್‌ ಆಟದ ಮುಂದೆ ಥಂಡಾ ಹೊಡೆದ ಟೀಮ್‌ ಇಂಡಿಯಾ!
ಭಾರತ-ಪಾಕಿಸ್ತಾನ ಟಿ20 ವಿಶ್ವಕಪ್ ಪಂದ್ಯದ ಟಿಕೆಟ್ ಮಾರಾಟ ಆರಂಭ, 450 ರೂಗೆ ಬುಕಿಂಗ್ ಹೇಗೆ?