ಟೀಂ ಇಂಡಿಯಾದ ಆಸ್ಟ್ರೇಲಿಯಾ ಪ್ರವಾಸ ಖಚಿತ ಪಡಿಸಿದ BCCI!

By Suvarna NewsFirst Published Jul 12, 2020, 6:10 PM IST
Highlights

ವಿಶ್ವವೇ ಕೊರೋನಾ ವೈರಸ್‌ನಿಂದ ತತ್ತರಿಸಿದೆ. ಬಹುತೇಕ ಕಡೆ ಕ್ರಿಕೆಟ್ ಸರಣಿಗಳು ಸ್ಥಗಿತಗೊಂಡಿದೆ. ಇತ್ತ ಬಿಸಿಸಿಐ ಐಪಿಎಲ್ ಆಯೋಜಿಸಲು ಸಾಧ್ಯವಾಗದೇ ಕೈಚೆಲ್ಲಿ ಕುಳಿತಿದೆ. ಇದರ ನಡುವೆ ಬಿಸಿಸಿಐ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದಾರೆ.

ಮುಂಬೈ(ಜು.12): ಕೊರೋನಾ ವೈರಸ್ ಹೊಡೆತಕ್ಕೆ ದೇಶದ ಪರಿಸ್ಥಿತಿ ಗಂಭೀರವಾಗಿದೆ. ಹೊರಗಿಳಿದರೂ, ಮನೆಯೊಳಗಿದ್ದರೂ ಕೊರೋನಾ ವಕ್ಕರಿಸುತ್ತಿದೆ. ಹೀಗಾಗಿ ಭಾರತದಲ್ಲಿ ಕ್ರಿಕೆಟ್ ಸರಣಿ ಆಯೋಜನೆ ಕಷ್ಟವಾಗುತ್ತಿದೆ. ಐಪಿಎಲ್ ಟೂರ್ನಿ ಭವಿಷ್ಯ ಕುರಿತು ಯಾವುದೇ ಸ್ಪಷ್ಟತೆ ಸಿಗುತ್ತಿಲ್ಲ. ಪ್ರಮುಖ ಕ್ರಿಕೆಟ್ ಸರಣಿಗಳು ಕೈತಪ್ಪುತ್ತಿರುವ ಬೆನ್ನಲ್ಲೇ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ, ಟೀಂ ಇಂಡಿಯಾದ ಆಸ್ಟ್ರೇಲಿಯಾ ಪ್ರವಾಸ ಖಚಿತ ಪಡಿಸಿದ್ದಾರೆ.

ಐಪಿ​ಎಲ್‌ ವಿದೇ​ಶಕ್ಕೆ ಶಿಫ್ಟ್‌ ಬಹು​ತೇಕ ಖಚಿತ

ಡಿಸೆಂಬರ್ ತಿಂಗಳಲ್ಲಿ ಟೀಂ ಇಂಡಿಯಾ ಆಸ್ಟ್ರೇಲಿಯಾ ಪ್ರವಾಸ ಕೈಗೊಳ್ಳಲಿದೆ. ಕ್ವಾರಂಟೈನ್ ಅವದಿ ಕಡಿತಗೊಳಿಸಲು ಆಸ್ಟ್ರೇಲಿಯಾಗೆ ಸೂಚಿಸಲಾಗಿದೆ. ಕಾರಣ ಆಟಗಾರರು ಆಸ್ಟ್ರೇಲಿಯಾಗೆ ತೆರಳಿ 2 ವಾರ ಹೊಟೆಲ್ ರೂಂನಲ್ಲಿ ಬಂಧಿಯಾಗಿರುವುದು ಉತ್ತಮವಲ್ಲ. ಇದು ಆಟಗಾರರ ಮೇಲೆ ಪರಿಣಾಮ ಬೀರಬಲ್ಲದು. ಹೀಗಾಗಿ ಕ್ವಾರಂಟೈನ್ ಅವದಿ ಕಡಿತಗೊಳಿಸಲು ಸೂಚಿಸಲಾಗಿದೆ ಎಂದು ಗಂಗೂಲಿ ಹೇಳಿದ್ದಾರೆ.

ಕೋಚ್‌ ಆಗಲು ಸಿದ್ಧತೆ ನಡೆಸಿದ್ರಾ ಎಂ. ಎಸ್‌ ಧೋನಿ..?

ಆಸ್ಟ್ರೇಲಿಯಾದಲ್ಲಿ ಇದುವರೆಗೆ 9,000 ಕೊರೋನಾ ವೈರಸ್ ಪ್ರಕರಣ ದೃಢಪಟ್ಟಿದೆ. ಇನ್ನು 106 ಮಂದಿನ ಸಾವನ್ನಪ್ಪಿದ್ದಾರೆ. ಕೊರೋನಾ ವೈರಸ್ ನಡುವೆ ವೆಸ್ಟ್ ಇಂಡೀಸ್ ತಂಡ, ಇಂಗ್ಲೆಂಡ್ ಪ್ರವಾಸ ಕೈಗೊಂಡಿದೆ. ಟೆಸ್ಟ್ ಸರಣಿ ಆರಂಭಿಸಿದೆ. ಸರಣಿಗೂ ಮುನ್ನ ವಿಂಡೀಸ್ ಕ್ರಿಕೆಟಿಗರು ಕ್ವಾರಂಟೈನ್‌ಗೆ ಒಳಗಾಗಿದ್ದರು. ಇದೀಗ ಟೀಂ ಇಂಡಿಯಾದ ಸಾಲು ಸಾಲು ಸರಣಿಗಳು ರದ್ದಾಗುತ್ತಿದೆ. ಇದರ ನಡುವೆ ಆಸ್ಟ್ರೇಲಿಯಾ ಪ್ರವಾಸ ಖಚಿತಗೊಂಡಿರುವುದು ಅಭಿಮಾನಿಗಳ ಸಂತಸ ಹೆಚ್ಚಿಸಿದೆ. ಇದರ ಜೊತೆಗೆ ಆತಂಕವೂ ಹೆಚ್ಚಿದೆ.

click me!
Last Updated Jul 12, 2020, 6:10 PM IST
click me!