
ಮುಂಬೈ (ಜು.14) ಟಿ20 ಸರಣಿಯಲ್ಲಿ ಇಂಗ್ಲೆಂಡ್ ವಿರುದ್ಧ ಹೀನಾಯ ಸೋಲು ಕಂಡ ಟೀಂ ಇಂಡಿಯಾ ವಿರುದ್ಧ ಟೀಕೆಗಳು ತೀವ್ರಗೊಂಡಿದೆ. 2026ರ ಟಿ20 ಚಾಂಪಿಯನ್ ನಾಯಕ ಸೂರ್ಯುಕುಮಾರ್ ಯಾದವ್ ತಂಡದಿಂದ ಹೊರಗಿಟ್ಟ ನಿರ್ಧಾರ ಕುರಿತು ಪರ ವಿರೋಧಗಳು ವ್ಯಕ್ತವಾಗಿತ್ತು. ಆರೋಪ, ಟೀಕೆಗಳ ನಡುವೆ ಇದೀಗ ಬಿಸಿಸಿಐ ಮಹತ್ವದ ಘೋಷಣೆ ಮಾಡಿದೆ. ಸೂರ್ಯಕುಮಾರ್ ಯಾದವ್‌ಗೆ ಟೀಂ ಇಂಡಿಯಾ ಬಾಗಿಲು ಓಪನ್ ಇದೆ ಎಂದಿದ್ದಾರೆ. ಆದರೆ ಇದರ ಜೊತೆಗೆ ಬಿಸಿಸಿಐ ಒಂದು ಕಂಡೀಷನ್ ಹಾಕಿದೆ.
ಕೆಲವೇ ತಿಂಗಳಲ್ಲಿ ಸೂರ್ಯುಕುಮಾರ್ ಯಾದವ್ 36ನೇ ವಸಂತಕ್ಕೆ ಕಾಲಿಡುತ್ತಿದ್ದಾರೆ. ಮುಂದಿನ ಟಿ20 ವಿಶ್ವಕಪ್ ಟೂರ್ನಿಗೆ ಇನ್ನೆರಡು ವರ್ಷವಿದೆ. ಈ ವೇಳೆ ಸೂರ್ಯಕುಮಾರ್ ಯಾದವ್ ವಯಸ್ಸು 38 ಆಗಲಿದೆ. ಹೀಗಾಗಿ ಮುಂಬರುವ ವಿಶ್ವಕಪ್ ಟೂರ್ನಿಗೆ ಸೂರ್ಯಕುಮಾರ್ ಯಾದವ್ ತಂಡದಲ್ಲಿರುವ ಸಾಧ್ಯತೆಗಳು ಕಡಿಮೆ. ಇದರ ನಡುವೆ ಸೂರ್ಯಕುಮಾರ್ ಮುಂಬರುವ ಟಿ20 ಸರಣಿಯಲ್ಲಿ ಸ್ಥಾನ ಪಡೆಯುವ ಅವಕಾಶದ ಬಾಗಿಲು ತೆರೆದಿದೆ. ಸೂರ್ಯಕುಮಾರ್ ಯಾದವ್ ಅವರನ್ನು ಟೀಂ ಇಂಡಿಯಾ ಆಯ್ಕೆಯಲ್ಲಿ ಪರಿಗಣಿಸಲಿದೆ ಎಂದಿದೆ. ಆದರೆ ಸೂರ್ಯಕುಮಾರ್ ಯಾದವ್ ದೇಶಿ ಕ್ರಿಕೆಟ್‌ನಲ್ಲಿ ಸ್ಥಿರ ಪ್ರದರ್ಶನ ನೀಡಬೇಕು ಎಂದು ಬಿಸಿಸಿಐ ಹೇಳಿದೆ.
ಸೂರ್ಯಕುಮಾರ್ ಸದ್ಯ ದೇಶಿ ಕ್ರಿಕೆಟ್ ಮೇಲೆ ಹೆಚ್ಚಿನ ಗಮನ ಕೇಂದ್ರೀಕರಿಸಿದ್ದಾರೆ. ಸೈಯದ್ ಮುಷ್ತಾಕ್ ಆಲಿ ಟೂರ್ನಿಯಲ್ಲಿ ದಿಟ್ಟ ಪ್ರದರ್ಶನ ನೀಡಿ ಮತ್ತೆ ಟೀಂ ಇಂಡಿಯಾ ಕದ ತಟ್ಟಲು ಪ್ಲಾನ್ ಮಾಡಿದ್ದಾರೆ. ಟಿ20 ವಿಶ್ವಕಪ್ ಟೂರ್ನಿಯಲ್ಲಿ ಸೂರ್ಯಕುಮಾರ್ ಪ್ರದರ್ಶನ ನಿರೀಕ್ಷಿತ ಪ್ರದರ್ಶನ ನೀಡಿರಲಿಲ್ಲ. ಆದರೆ ತಂಡ ಟ್ರೋಫಿ ಗೆದ್ದಿತ್ತು. ಇತ್ತ ಐಪಿಎಲ್ ಟೂರ್ನಿಯಲ್ಲೂ ಸೂರ್ಯಕುಮಾರ್ ಯಾದವ್ ಪ್ರದರ್ಶನ ತೀರಾ ಕಳಪೆಯಾಗಿತ್ತು. ಪರಿಣಾಮ ಸೂರ್ಯಕುಮಾರ್ ಯಾದವ್ ನಾಯಕತ್ವ ನೇರವಾಗಿ ಶ್ರೇಯಸ್ ಅಯ್ಯರ್‌ಗೆ ದಕ್ಕಿತ್ತು. ಜೊತೆಗೆ ಸೂರ್ಯಕುಮಾರ್ ಯಾದವ್ ತಂಡದಿಂದಲೂ ಸ್ಥಾನ ಕಳೆದುಕೊಳ್ಳಬೇಕಾಯಿತು.
ಸೂರ್ಯಕುಮಾರ್ ಯಾದವ್ ಹೊರಗಿಟ್ಟ ಆಯ್ಕೆ ಸಮಿತಿ ಶ್ರೇಯಸ್ ಅಯ್ಯರ್‌ಗೆ ನಾಯಕತ್ವ ನೀಡಿತ್ತು. ಅಯ್ಯರ್ ನಾಯಕತ್ವದ ಟೀಂ ಇಂಡಿಯಾ ನೇರವಾಗಿ ಐರ್ಲೆಂಡ್ ಪ್ರವಾಸ ಮಾಡಿತ್ತು. ಇದೇ ಮೊದಲ ಬಾರಿಗೆ ಐರ್ಲೆಂಡ್ ವಿರುದ್ಧ 2 ಪಂದ್ಯ ಸೋತು ತೀವ್ರ ಮುಖಭಂಗ ಅನುಭವಿಸಿತು. ಐರ್ಲೆಂಡ್ ಸೋಲಿನಿಂದ ಇಂಗ್ಲೆಂಡ್ ಬಂದಿಳಿದ ಅಯ್ಯರ್ ಟೀಂ ಮತ್ತೆ ಸೋಲಿನಿಂದ ಹೊರಬರಲೇ ಇಲ್ಲ. ಸತತ 4 ಪಂದ್ಯ ಸೋತು ಇಂಗ್ಲೆಂಡ್ ವಿರುದ್ದ ಸರಣಿ ಸೋತಿದೆ. ಶ್ರೇಯಸ್ ಅಯ್ಯರ್ ನಾಯಕತ್ವದ ಭಾರತ ಟಿ20 ತಂಡ ಒಟ್ಟು 6 ಪಂದ್ಯ ಸೋತು, ಎರಡು ಸರಣಿ ಕೈಚೆಲ್ಲಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.