IPL 2022 : ಹೊಸ ತಂಡಗಳಿಗೆ ಆಟಗಾರರ ಆಯ್ಕೆಗೆ ಜ. 22 ಡೆಡ್ ಲೈನ್!

By Suvarna NewsFirst Published Jan 12, 2022, 9:21 PM IST
Highlights

ಪ್ಲೇಯರ್ ಪೂಲ್ ನಿಂದ ಆಟಗಾರರ ಆಯ್ಕೆಗೆ ಅವಕಾಶ
ಜ. 22 ರ ಒಳಗಾಗಿ ಆಯ್ಕೆಯಾದ ಆಟಗಾರರ ಪಟ್ಟಿ ನೀಡಬೇಕಿರುವ ಲಖನೌ ಹಾಗೂ ಅಹಮದಾಬಾದ್ ಫ್ರಾಂಚೈಸಿ
ಸಿವಿಸಿ ಕ್ಯಾಪಿಟಲ್ಸ್ ತಂಡದ ಮಾಲೀಕತ್ವಕ್ಕೆ ಒಪ್ಪಿಗೆ ನೀಡಿದ ಬಿಸಿಸಿಐ

ಮುಂಬೈ (ಜ. 12): ಸಿವಿಸಿ ಕ್ಯಾಪಿಟಲ್ಸ್ ( CVC Capitals) ಮಾಲೀಕತ್ವದ ಅಹಮದಾಬಾದ್ (Ahmedabad ) ಫ್ರಾಂಚೈಸಿಗೆ ಬಿಸಿಸಿಐ(BCCI) ಒಪ್ಪಿಗೆ ನೀಡಿದ ಎರಡು ದಿನಗಳಲ್ಲೇ ಐಪಿಎಲ್ ಗೆ (IPL) ಹೊಸದಾಗಿ ಸೇರ್ಪಡೆಯಾಗಿರುವ ಎರಡು ತಂಡಗಳಿಗೆ ಪ್ಲೇಯರ್ ರಿಟೆನ್ಷನ್ ಗೆ (Player retention )ಡೆಡ್ ಲೈನ್ ಘೋಷಣೆ ಮಾಡಲಾಗಿದೆ. ಜನವರಿ 22ರ ಒಳಗಾಗಿ ಲಖನೌ (Lucknow ) ಹಾಗೂ ಅಹಮದಾಬಾದ್ ಫ್ರಾಂಚೈಸಿಗಳು ತಮ್ಮ ರಿಟೆನ್ಷನ್ ಆಯ್ಕೆಯನ್ನು ಬಿಸಿಸಿಐಗೆ ತಿಳಿಸಬೇಕು ಎಂದು ಸೂಚಿಸಲಾಗಿದೆ. ಈ ಎರಡು ತಂಡಗಳ ರಿಟೆನ್ಷನ್ ಆಯ್ಕೆಯ ಬಳಿಕ, ಫೆಬ್ರವರಿ 12 ಹಾಗೂ 13 ರಂದು ಬೆಂಗಳೂರಿನಲ್ಲಿ ಆಟಗಾರರ ಹರಾಜು ಪ್ರಕ್ರಿಯೆ ನಡೆಯಲಿದೆ.

ಸಿವಿಸಿ ಕ್ಯಾಪಿಟಲ್ಸ್ ಒಡೆತನದ ಅಹಮದಾಬಾದ್ ಫ್ರಾಂಚೈಸಿಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಅಂತಿಮ ಅನುಮತಿ ನೀಡಿದ ಎರಡು ದಿನಗಳ ನಂತರ ರಿಟೆನ್ಷನ್ ಕುರಿತಾಗಿ ಮಾಹಿತಿ ಬಂದಿದೆ. ಸಿವಿಸಿ ಕ್ಯಾಪಿಟಲ್ಸ್ ಕಂಪನಿಯಲ್ಲಿ ಬೆಟ್ಟಿಂಗ್ ಕಂಪನಿಗಳು ಹಣ ಹೂಡಿದ್ದು ವಿವಾದಕ್ಕೆ ಕಾರಣವಾಗಿರುವ ಕಾರಣ ಅದರ ಮೂಲವನ್ನು ಬಿಸಿಸಿಐ ವಿಚಾರಣೆ ನಡೆಸಿತ್ತು. ಇದಾದ ಬಳಿಕ ಲೆಟರ್ ಆಫ್ ಇಂಟೆಂಟ್ ನೀಡಲಾಗಿದೆ. ರಿಟೇನ್ ಮಾಡಿಕೊಳ್ಳದ ಪ್ಲೇಯರ್ ಗಳ ಪೂಲ್ ನಿಂದ ತಾವು ಆಯ್ಕೆ ಮಾಡಿಕೊಳ್ಳುವ ರಿಟೇನ್ ಪ್ಲೇಯರ್ ಗಳನ್ನು ಘೋಷಣೆ ಮಾಡಲು ಈ ಎರಡು ತಂಡಗಳಿಗೆ ಮೊದಲು ಡಿಸೆಂಬರ್ 25 ರಂದು ಅಂತಿಮ ದಿನಾಂಕ ಎಂದು ಹೇಳಲಾಗಿತ್ತು. ಆದರೆ, ಸಿವಿಸಿ ಕ್ಯಾಪಿಟಲ್ಸ್ ವಿಚಾರದಲ್ಲಿ ಕಾನೂನು ಪ್ರಕ್ರಿಯೆಗಳು ಇದ್ದ ಕಾರಣ ಈ ಪ್ರಕ್ರಿಯೆ ವಿಳಂಬವಾಗಿದೆ.

ಹೊಸ ಫ್ರಾಂಚೈಸಿಗಳ ರಿಟೆನ್ಷನ್ ನಿಯಮಗಳು: ಹೊಸ ತಂಡಗಳಿಗೆ ರಿಟೆನ್ಷನ್ ನಿಯಮಗಳನ್ನು ಬಿಸಿಸಿಐ ಈಗಾಗಲೇ ಘೋಷಣೆ ಮಾಡಿದೆ. ಎರಡೂ ತಂಡಗಳು ಗರಿಷ್ಠ ಮೂವರು ಪ್ಲೇಯರ್ ಗಳನ್ನು ಆಯ್ಕೆ ಮಾಡಬಹುದಾಗಿದೆ. ಇದರಲ್ಲಿ ಎರಡಕ್ಕಿಂತ ಹೆಚ್ಚಿನ ಭಾರತೀಯ ಆಟಗಾರರು ಹಾಗೂ 1 ಕ್ಕಿಂತ ಹೆಚ್ಚಿನ ವಿದೇಶಿ ಆಟಗಾರರು ಇರುವಂತಿಲ್ಲ. ಅದಲ್ಲದೆ, ಇನ್ನೂ ಅಂತಾರಾಷ್ಟ್ರೀಯ ಕ್ರಿಕೆಟ್ ಆಡದ ಒಬ್ಬ ಆಟಗಾರನನ್ನು ಮಾತ್ರವೇ ಆಯ್ಕೆ ಮಾಡಬಹುದಾಗಿದೆ. ರೈಟ್ ಟು ಮ್ಯಾಚ್ ಕಾರ್ಡ್ ಈ ವರ್ಷದ ಹರಾಜಿನಲ್ಲಿ ಬಳಕೆಯಾಗುವುದಿಲ್ಲ ಎಂದು ಬಿಸಿಸಿಐ ತಿಳಿಸಿದೆ.

IPL 2022 : ಹೊರಬಿದ್ದ ವಿವೋ, 2022 ಐಪಿಎಲ್ ಗೆ TATA ಪ್ರಾಯೋಜಕತ್ವ!
ಹಾಗೇನಾದರೂ ಫ್ರಾಂಚೈಸಿ ಮೂವರು ಆಟಗಾರರನ್ನು ಪೂಲ್ ನಿಂದ ಆಯ್ಕೆ ಮಾಡಿದಲ್ಲಿ, ತಂಡದ ಸ್ಯಾಲರಿ ಕ್ಯಾಪ್ ನಿಂದ 33 ಕೋಟಿ ರೂಪಾಯಿ ಕಡಿತವಾಗಲಿದೆ. (ಮೊದಲ ಪ್ಲೇಯರ್ ಗೆ 15 ಕೋಟಿ, 2ನೇ ಪ್ಲೇಯರ್ ಗೆ 11 ಕೋಟಿ ಹಾಗೂ ಮೂರನೇ ಪ್ಲೇಯರ್ ಗೆ 7 ಕೋಟಿ). ಹಾಗೇನಾದರೂ ಎರಡು ಪ್ಲೇಯರ್ ಗಳನ್ನು ಆಯ್ಕೆ ಮಾಡಿದ್ದಲ್ಲಿ ಸ್ಯಾಲರಿ ಕ್ಯಾಪ್ ನಿಂದ 24 ಕೋಟಿ ಕಡಿತವಾಗಲಿದೆ (ಮೊದಲ ಪ್ಲೇಯರ್ ಗೆ 14 ಕೋಟಿ, 2ನೇ ಪ್ಲೇಯರ್ ಗೆ 10 ಕೋಟಿ). ಹಾಗೇನಾದರೂ ಒಬ್ಬನೇ ಪ್ಲೇಯರ್ ಅನ್ನು ರಿಟೇನ್ ಮಾಡಿಕೊಂಡಲ್ಲಿ 14 ಕೋಟಿ ರೂ ಹಾಗೂ ಅಂತಾರಾಷ್ಟ್ರೀಯ ಕ್ರಿಕೆಟ್ ಆಡದ ಪ್ಲೇಯರ್ ಅನ್ನು ರಿಟೇನ್ ಮಾಡಿದಲ್ಲಿ 4 ಕೋಟಿ ರೂ. ಕಡಿತವಾಗಲಿದೆ.

IPL 2022: ಮುಂಬೈನಲ್ಲೇ ಸಂಪೂರ್ಣ ಐಪಿಎಲ್‌ ಟೂರ್ನಿ ಆಯೋಜನೆ..?
ಹೊಸ ಫ್ರಾಂಚೈಸಿಗಳು ಮೂಲತಃ ಆಟಗಾರರನ್ನು ಆಯ್ಕೆ ಮಾಡಲು ಎರಡು ವಾರಗಳ ಕಾಲಾವಕಾಶವನ್ನು ನೀಡಬೇಕಾಗಿತ್ತು. ಆದರೆ, ಬಿಸಿಸಿಐ ಹಾಗೂ ತಂಡಗಳ ಮಾಲೀಕರು ಇದಕ್ಕೆ 10 ದಿನಗಳ ಕಾಲಾವಕಾಶ ಸಾಕು ಎಂದು ಒಪ್ಪಿದೆ. ಆ ಕಾರಣದಿಂದಾಗಿ ಜನವರಿ 22ರ ಸಂಜೆ 5 ಗಂಟೆಯ ಒಳಗಾಗಿ ಈ ತಂಡಗಳು ತಮ್ಮ ರಿಟೆನ್ಷನ್ ಪ್ಲೇಯರ್ ಗಳನ್ನು ಆಯ್ಕೆ ಮಾಡಬೇಕಿದೆ.

ಹರಾಜು ಕಾರ್ಯಕ್ರಮದ ಮೇಲೆ ಕೋವಿಡ್ ಆತಂಕ: ರಾಜ್ಯದಲ್ಲಿ ಕೋವಿಡ್-19 ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ ಐಪಿಎಲ್ ಹರಾಜು (IPL mega auction)ಕಾರ್ಯಕ್ರಮದ ಮೇಲೂ ಇದು ಪರಿಣಾಮ ಬೀರಲಿದೆ. ಪ್ರಕರಣಗಳ ಏರಿಕೆಯಿಂದಾಗಿ ಲಾಕ್ ಡೌನ್ ನಂಥ ನಿರ್ಧಾರಗಳು ಘೋಷಣೆ ಆದಲ್ಲಿ ಮಾತ್ರವೇ ಬಿಸಿಸಿಐ ಪ್ಲ್ಯಾನ್ ಬಿ ಯೋಚನೆ ಮಾಡಲಿದೆ. ಸದ್ಯದ ಮಟ್ಟಿಗೆ ಫೆ. 12 ಹಾಗೂ 13ರಲ್ಲಿ ಹರಾಜು ಪ್ರಕ್ರಿಯೆ ನಡೆಯುವುದು ನಿಶ್ಚಿತವಾಗಿದೆ. ಇನ್ನು ಐಪಿಎಲ್ ವಿದೇಶದಲ್ಲಿ ನಡೆಯುವ ಸಾಧ್ಯತೆ ಇಲ್ಲ ಎಂದು ಐಪಿಎಲ್ ಚೇರ್ಮನ್ ಬ್ರಿಜೇಶ್ ಪಟೇಲ್ (IPL chairman Brijesh Patel )ಹೇಳಿದ್ದಾರೆ.

click me!