ಲೋಕಸಭಾ ಚುನಾವಣೆ ಪ್ರಯುಕ್ತ ಮಾ.16ರಿಂದ ನೀತಿ ಸಂಹಿತೆ ಜಾರಿಯಾಗಿದೆ. ಎಪ್ರಿಲ್, ಮೇ ಸಂಪೂರ್ಣ ದೇಶದಲ್ಲಿ 7 ಹಂತದಲ್ಲಿ ಮತದಾನ ನಡೆಯಲಿದೆ. ಹೀಗಾಗಿ ದೇಶದಲ್ಲಿ ಐಪಿಎಲ್ ಆಯೋಜನೆ ಬಿಸಿಸಿಐಗೆ ಸವಾಲಾಗಿದೆ. ಹೀಗಾಗಿ 2024ರ ಐಪಿಎಲ್ ದುಬೈಗೆ ಸ್ಥಳಾಂತರ ಮಾಡಲು ಬಿಸಿಸಿಐ ಪ್ಲಾನ್ ಮಾಡುತ್ತಿದೆ.
ಮುಂಬೈ(ಮಾ.16) ಲೋಕಸಭಾ ಚುನಾವಣೆ ದಿನಾಂಕ ಘೋಷಣೆಯಾಗಿದೆ. 7 ಹಂತಗಳಲ್ಲಿ ಚುನಾವಣೆ ನಡೆಯಲಿದೆ. ಇದರ ಜೊತೆಗೆ 4 ರಾಜ್ಯಗಳ ವಿಧಾನಸಭಾ ಚುನಾವಣೆ ಹಾಗೂ ಉಪಚುನಾವಣೆ ಕೂಡ ಘೋಷಣೆಯಾಗಿದೆ. ಎಪ್ರಿಲ್ 19 ರಿಂದ ಜೂನ್ 1 ರವರೆಗೆ ದೇಶದಲ್ಲಿ ಚುನಾವಣೆ ನಡೆಯಲಿದೆ. ಜೂನ್ 4 ರಂದು ಫಲಿತಾಂಶ ಹೊರಬೀಳಲಿದೆ. ಇದರ ನಡುವೆ ನೀರಿನ ಸಮಸ್ಯೆಯೂ ಭಾರತದಲ್ಲಿ ಐಪಿಎಲ್ ಆಯೋಜನೆಗೆ ಹಿನ್ನೆಡೆಯಾಗುತ್ತಿದೆ. ಹೀಗಾಗಿ 2024ರ ಐಪಿಎಲ್ ಟೂರ್ನಿಯನ್ನು ದುಬೈಗೆ ಸ್ಥಳಾಂತರಿಸಲು ಬಿಸಿಸಿಐ ಪ್ಲಾನ್ ಮಾಡುತ್ತಿದೆ. ಈಗಾಗಲೇ ಬಿಸಿಸಿಐ ಅಧಿಕಾರಿಗಳ ತಂಡ ದುಬೈನಲ್ಲಿ ಬೀಡು ಬಿಟ್ಟಿದ್ದು,ಐಪಿಎಲ್ ಆಯೋಜನೆ ಕುರಿತು ಚರ್ಚೆ ನಡೆಸುತ್ತಿದೆ.
ಸದ್ಯ ಬಿಸಿಸಿಐ ಅಧಿಕಾರಿಗಳ ತಂಡ ದುಬೈನಲ್ಲಿದೆ. ದುಬೈನಲ್ಲಿ ಐಪಿಎಲ್ ಆಯೋಜನೆ ಕುರಿತು ಪರಿಶೀಲನೆ ನಡೆಸಲಿದೆ. ಅಧಿಕಾರಿಗಳ ಜೊತೆ ಚರ್ಚಿಸಲಿದೆ. ಇತ್ತ ಐಪಿಎಲ್ 10 ಫ್ರಾಂಚೈಸಿಗಳು ತಮ್ಮ ತಮ್ಮ ತಂಡದ ಆಟಗಾರರ ಪಾಸ್‌ಪೋರ್ಟ್ ವಿವರ ಸಲ್ಲಿಸಲು ಸೂಚಿಸಿದೆ. ಇಷ್ಟೇ ಅಲ್ಲ ಲೋಕಸಭಾ ಚುನಾವಣೆ ಕಾರಣದಿಂದ ಬಿಸಿಸಿಐ 2024ರ ಐಪಿಎಲ್ ಟೂರ್ನಿಯ ಆರಂಭಿಕ 21 ಪಂದ್ಯಗಳ ವೇಳಾಪಟ್ಟಿ ಮಾತ್ರ ಪ್ರಕಟಿಸಿದೆ. ಇದೀಗ ಲೋಕಸಭಾ ಚುನಾವಣೆ ದಿನಾಂಕ ಘೋಷಣೆ ಬೆನ್ನಲ್ಲೇ ಬಿಸಿಸಿಐ ಕಾರ್ಯಚಟುವಟಿಕೆ ಚುರುಕುಗೊಂಡಿದೆ.
undefined
ಲೋಕಸಭೆಗೆ ಏಪ್ರಿಲ್ 19 ರಿಂದ 7 ಹಂತಗಳಲ್ಲಿ ಮತದಾನ, ಜೂನ್ 4 ರಂದು ಫಲಿತಾಂಶ
ಮತದಾನ ಇಲ್ಲ ದಿನಾಂಕ ಹಾಗೂ ರಾಜ್ಯಗಳಲ್ಲಿ ಐಪಿಎಲ್ ಪಂದ್ಯಗಳನ್ನು ಆಯೋಜಿಸಲು ಬಿಸಿಸಿಐ ವೇಳಾಪಟ್ಟಿ ತಂಡ ಲೆಕ್ಕಾಚಾರ ಹಾಕುತ್ತಿದೆ. ಕರ್ನಾಟಕದಲ್ಲಿ ಏಪ್ರಿಲ್ ತಿಂಗಳಲ್ಲಿ ಎಪ್ರಿಲ್ 26 ಹಾಗೂ ಮೇ 7 ರಂದು ಎರಡು ಹಂತದಲ್ಲಿ ಮತದಾನ ಮುಗಿಯಲಿದೆ. ಪ್ರಮುಖವಾಗಿ ಬೆಂಗಳೂರು ಹಾಗೂ ಬೆಂಗಳೂರುು ಗ್ರಾಮಾಂತರ ಚುನಾವಣೆ ಏಪ್ರಿಲ್ 26ರ ಮೊದಲ ಹಂತದಲ್ಲಿ ಮುಗಿಯಲಿದೆ. ಹೀಗಾಗಿ ಮೇ ತಿಂಗಳಲ್ಲಿ ಬೆಂಗಳೂರಿನಲ್ಲಿ ಐಪಿಎಲ್ ಪಂದ್ಯ, ಹೀಗೆ ಆಯಾ ರಾಜ್ಯದಲ್ಲಿ ಚುನಾವಣೆ ಆಧರಿಸಿ ವೇಳಾಪಟ್ಟಿ ತಯಾರಿಸಲು ಬಿಸಿಸಿಐ ಒಂದು ತಂಡ ಸಜ್ಜಾಗಿದೆ. ಚುನಾವಣೆ ಜೊತೆಗೆ ನೀರಿನ ಸಮಸ್ಯೆ ಕೂಡ ಎದುರಾಗುತ್ತಿದ್ದು, ಬಿಸಿಸಿಐಗೆ ಸವಾಲಾಗುತ್ತಿದೆ.
ಶೀಘ್ರದಲ್ಲೇ ಬಿಸಿಸಿಐ ಇದೀಗ ವೇಳಾಪಟ್ಟಿ ಪ್ರಕಟಿಸಲಿದೆ. ಈಗಾಗಲೇ ಐಪಿಎಲ್ ಫ್ರಾಂಚೈಸಿಗಳ ಜೊತೆ ಸಭೆ ಕರೆದಿದೆ. ಈ ಸಭೆಯಲ್ಲಿ ಮಹತ್ವದ ನಿರ್ಧಾರ ಹೊರಬೀಳುವ ಸಾಧ್ಯತೆ ಇದೆ. ಭಾರತದಲ್ಲೇ ಐಪಿಎಲ್ ನಡೆಸಲು ಫ್ರಾಂಚೈಸಿಗಳು ಮನವಿ ಮಾಡಿದೆ. ಆದರೆ ಬೆಟ್ಟದಷ್ಟು ಸವಾಲುಗಳು ಎದುರಾಗಿರುವ ಕಾರಣ ಸಮಸ್ಯೆ ಹೆಚ್ಚಾಗುತ್ತಿದೆ. ಹೀಗಾಗಿ ದುಬೈ ಮೊದಲ ಆಯ್ಕೆಯಾಗಿ ಬಿಸಿಸಿಐ ಪ್ಲಾನ್ ಮಾಡುತ್ತಿದೆ.
ಆಂಧ್ರ ಪ್ರದೇಶ ಸೇರಿ 4 ರಾಜ್ಯಗಳ ವಿಧಾನಸಭಾ ಚುನಾವಣಾ ದಿನಾಂಕ ಘೋಷಣೆ!
18ನೇ ಲೋಕಸಭಾ ಚುನಾವಣೆ ಮತದಾನ ಎಪ್ರಿಲ್ 19 ರಂದು ಆರಂಭಗೊಳ್ಳುತ್ತಿದೆ. ಎಪ್ರಿಲ್ 26ಕ್ಕೆ ಏರಡನೇ ಹಂತ, ಮೇ 7ಕ್ಕೆ ಮೂರನೇ ಹಂತ, ಮೇ 13ಕ್ಕೆ ನಾಲ್ಕನೇ ಹಂತ, ಮೇ 20ಕ್ಕೆ 5ನೇ ಹಂತ, ಮೇ 25ಕ್ಕೆ 6ನೇ ಹಂತ ಹಾಗೂ ಜೂನ್ 1 ರಂದು ಕೊನೆಯ ಹಾಗೂ 7ನೇ ಹಂತ ಮತದಾನ ನಡೆಯಲಿದೆ. ಜೂನ್ 4 ರಂದು ಫಲಿತಾಂಶ ಘೋಷಣೆಯಾಗಲಿದೆ.