
ನವದೆಹಲಿ(ಜೂ.29): ಕೊರೋನಾ ಸೋಂಕಿನಿಂದಾಗಿ ಕ್ರಿಕೆಟ್ ಚಟುವಟಿಕೆಗಳು ಸ್ಥಗಿತಗೊಂಡಿದ್ದು, ಬಿಸಿಸಿಐ ಖಜಾನೆಗೆ ಹಣದ ಹರಿವು ನಿಂತಿದೆ. ಇದೀಗ ಮತ್ತೊಂದು ಆರ್ಥಿಕ ಹೊಡೆತ ಬೀಳುವ ಸಾಧ್ಯತೆ ಇದೆ.
ಕಳೆದ 14 ವರ್ಷಗಳಿಂದ ಭಾರತ ತಂಡದ ಕಿಟ್ ಪ್ರಾಯೋಜಕರಾಗಿರುವ ನೈಕಿ ಕ್ರೀಡಾ ಉತ್ಪನ್ನಗಳ ಸಂಸ್ಥೆ ಸದ್ಯ ಕೊರೋನಾ ಸೋಂಕಿನಿಂದಾಗಿ ಆರ್ಥಿಕ ಸಂಕಷ್ಟದಲ್ಲಿದೆ. ಸೆಪ್ಟೆಂಬರ್‌ನಲ್ಲಿ ಬಿಸಿಸಿಐ ಜತೆಗಿನ 4 ವರ್ಷಗಳ ಒಪ್ಪಂದ ಮುಕ್ತಾಯಗೊಳ್ಳಲಿದೆ. ಸದ್ಯ ಚಾಲ್ತಿಯಲ್ಲಿರುವ ಒಪ್ಪಂದದ ಪ್ರಕಾರ ನೈಕಿ ಸಂಸ್ಥೆ, 4 ವರ್ಷಕ್ಕೆ 370 ಕೋಟಿ ರು. ಪಾವತಿಸಲಿದೆ. ಸಂಕಷ್ಟದಲ್ಲಿರುವ ಸಂಸ್ಥೆ, ಒಪ್ಪಂದ ವಿಸ್ತರಣೆ ಮಾಡಲು ಬಿಸಿಸಿಐಗೆ ಅಷ್ಟೊಂದು ಹಣ ಪಾವತಿಸುವ ಸ್ಥಿತಿಯಲ್ಲಿಲ್ಲ. ಹೀಗಾಗಿ ಒಪ್ಪಂದದಿಂದ ಹಿಂದೆ ಸರಿಯಲಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.
ತಂಡ ಕಿಂಗ್ಸ್ XI ಪಂಜಾಬ್ ತಂಡದಲ್ಲಿ ಕನ್ನಡಿಗರ ಕಲರವ!
ಗಲ್ವಾನ್ ಕಣಿವೆಯಲ್ಲಿ ನಡೆದ ಭಾರತ-ಚೀನಿ ಸೈನಿಕರ ನಡುವಿನ ಘರ್ಷಣೆ ಬಳಿಕ ಚೀನಾ ಉತ್ಪನ್ನಗಳನ್ನು ಬಹಿಷ್ಕರಿಸಬೇಕು ಹಾಗೂ ಅವುಗಳನ್ನು ಪ್ರಚಾರ ಮಾಡಬಾರದು ಎನ್ನುವ ಕೂಗು ಜೋರಾಗಿದೆ. ಬಿಸಿಸಿಐ ಈಗಾಗಲೇ ವಿವೋ ಜತೆ 5 ವರ್ಷಗಳ ಒಪ್ಪಂದ ಮಾಡಿಕೊಂಡಿದೆ. ಐಪಿಎಲ್ ಟೈಟಲ್ ಸ್ಪಾನ್ಸರ್‌ಶಿಪ್ ಪಡೆದುಕೊಂಡಿರುವ ವಿವೋ ಬಿಸಿಸಿಐಗೆ ವಾರ್ಷಿಕ ಸುಮಾರು 440 ಕೋಟಿ ರುಪಾಯಿ ನೀಡುತ್ತಿದೆ. ಒಂದು ವೇಳೆ ವಿವೋ ಜತೆಗಿನ ಒಪ್ಪಂದ ಕಡಿದುಕೊಂಡರೆ ಬಿಸಿಸಿಐ ನೂರಾರು ಕೋಟಿ ರುಪಾಯಿಗಳನ್ನು ಕಳೆದುಕೊಳ್ಳಲಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.