ವಿದೇಶಿ ಟಿ20 ಲೀಗ್‌ಗಳಿಗೆ ಭಾರತದ ಕ್ರಿಕೆಟಿಗರಿಗೆ ಅವಕಾಶ?

By Naveen Kodase  |  First Published Jul 23, 2022, 12:23 PM IST

* ವಿದೇಶಿ ಟಿ20 ಲೀಗ್‌ಗಳಿಗೆ ಭಾರತದ ಆಟಗಾರರು ಪಾಲ್ಗೊಳ್ಳಲು ಬಿಸಿಸಿಐ ಅವಕಾಶ ನೀಡುವ ಸಾಧ್ಯತೆ
* ಸೆಪ್ಟೆಂಬರ್‌ನಲ್ಲಿ ನಡೆಯಲಿರುವ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಬಿಸಿಸಿಐ ತೀರ್ಮಾನ
* ಐಪಿಎಲ್‌ ಫ್ರಾಂಚೈಸಿಗಳಿಂದ ಬಿಸಿಸಿಐ ಮೇಲೆ ಒತ್ತಡ 


ನವದೆಹಲಿ(ಜು.23): ಐಪಿಎಲ್‌ ಫ್ರಾಂಚೈಸಿಗಳಿಂದ ಒತ್ತಡವಿರುವ ಕಾರಣ ವಿದೇಶಿ ಟಿ20 ಲೀಗ್‌ಗಳಲ್ಲಿ ಆಡಲು ಭಾರತೀಯ ಕ್ರಿಕೆಟಿಗರಿಗೆ ಬಿಸಿಸಿಐ ಅನುಮತಿ ನೀಡುವ ಸಾಧ್ಯತೆ ಇದೆ. ಈ ಬಗ್ಗೆ ಸೆಪ್ಟೆಂಬರ್‌ನಲ್ಲಿ ನಡೆಯಲಿರುವ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಬಿಸಿಸಿಐ ನಿರ್ಧರಿಸಲಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ. ದಕ್ಷಿಣ ಆಫ್ರಿಕಾ ಕ್ರಿಕೆಟ್‌ ಮಂಡಳಿ ಹೊಸದಾಗಿ ಆರಂಭಿಸುತ್ತಿರುವ ಟಿ20 ಲೀಗ್‌ನ ಎಲ್ಲಾ 6 ತಂಡಗಳನ್ನು ಖರೀದಿಸಿದ ಐಪಿಎಲ್‌ ಫ್ರಾಂಚೈಸಿಗಳು, ಬಿಸಿಸಿಐ ಮೇಲೆ ಒತ್ತಡ ಹೇರುತ್ತಿವೆ ಎನ್ನಲಾಗಿದೆ. ಸದ್ಯ ಭಾರತೀಯ ಕ್ರಿಕೆಟಿಗರು ವಿದೇಶಿ ಲೀಗ್‌ಗಳಲ್ಲಿ ಆಡಬೇಕಿದ್ದರೆ, ಬಿಸಿಸಿಐ ನಿಯಮದ ಪ್ರಕಾರ ಭಾರತೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಬೇಕಿದೆ.

ಯಾರ್ಯಾರಿಗೆ ಅನುಮತಿ?: ಬಿಸಿಸಿಐ ಕೇಂದ್ರ ಗುತ್ತಿಗೆ ಹೊಂದಿರದ, ರಾಜ್ಯ ತಂಡಗಳಲ್ಲಿ ಖಾಯಂ ಸ್ಥಾನ ಪಡೆಯದ ಆಟಗಾರಿರಿಗೆ ಆಸ್ಪ್ರೇಲಿಯಾದ ಬಿಗ್‌ಬ್ಯಾಶ್‌, ಇಂಗ್ಲೆಂಡ್‌ನ ದಿ ಹಂಡ್ರೆಡ್‌, ದಕ್ಷಿಣ ಆಫ್ರಿಕಾ ಟಿ20 ಲೀಗ್‌, ಬಾಂಗ್ಲಾ ಮತ್ತು ಕೆರಿಬಿಯನ್‌ ಪ್ರೀಮಿಯರ್‌ ಲೀಗ್‌ಗಳಲ್ಲಿ ಆಡಲು ಅನುಮತಿ ಸಿಗಬಹುದು. ಇದರರ್ಥ ವಿರಾಟ್ ಕೊಹ್ಲಿ, ರೋಹಿತ್ ರೋಹಿತ್‌, ಜಸ್ಪ್ರೀತ್ ಬುಮ್ರಾ ಇಲ್ಲವೇ ರಿಷಭ್ ಪಂತ್‌ರಂತಹ ತಾರಾ ಆಟಗಾರರನ್ನು ಐಪಿಎಲ್‌ ಹೊರತುಪಡಿಸಿ ಉಳಿದ್ಯಾವ ಟಿ20 ಲೀಗ್‌ಗಳಲ್ಲಿ ನೋಡಲು ಸಾಧ್ಯವಿಲ್ಲ.

Tap to resize

Latest Videos

undefined

ಮಹಿಳಾ ಕ್ರಿಕೆಟಿಗರಿಗೆ ಬಿಸಿಸಿಐ ವಿದೇಶಿ ಲೀಗ್‌ಗಳಲ್ಲಿ ಆಡಲು ಅನುಮತಿ ನೀಡಿದಂತೆ ಪುರುಷರ ಕ್ರಿಕೆಟಿಗರಿಗೂ ಸಹ ಅವಕಾಶ ಸಿಗಬಹುದು. ಈಗಾಗಲೇ ಹರ್ಮನ್‌ಪ್ರೀತ್ ಕೌರ್, ಶಫಾಲಿ ವರ್ಮಾ ಸೇರಿದಂತೆ ಹಲವು ಆಟಗಾರ್ತಿಯರು ಬಿಗ್‌ಬ್ಯಾಶ್ ಟೂರ್ನಿಯಲ್ಲಿ ಪಾಲ್ಗೊಂಡಿದ್ದಾರೆ. 

ದಕ್ಷಿಣ ಆಫ್ರಿಕಾದಲ್ಲೂ ಐಪಿಎಲ್ ಹವಾ; ಎಲ್ಲಾ 6 ತಂಡ ಐಪಿಎಲ್ ಫ್ರಾಂಚೈಸಿ ಪಾಲು..!

ಐಪಿಎಲ್‌ ಫ್ರಾಂಚೈಸಿಗಳು ವಿದೇಶಿ ಲೀಗ್‌ನಲ್ಲಿ ಮಾಲೀಕರಾಗಿರುವುದು

1. ಮುಂಬೈ ಇಂಡಿಯನ್ಸ್‌: ಸೌಥ್ ಆಫ್ರಿಕಾ ಟಿ20 ಲೀಗ್, ಯುಎಇ ಟಿ20 ಲೀಗ್
2. ಕೋಲ್ಕತಾ ನೈಟ್‌ ರೈಡರ್ಸ್‌: ಕೆರಿಬಿಯನ್‌ ಪ್ರೀಮಿಯರ್ ಲೀಗ್, ಯುಎಇ ಟಿ20 ಲೀಗ್, ಯುಎಎ
3. ರಾಜಸ್ಥಾನ ರಾಯಲ್ಸ್‌: ಸಿಎಸ್‌ಎ ಟಿ20 ಲೀಗ್, ಕೆರಿಬಿಯನ್ ಪ್ರೀಮಿಯರ್ ಲೀಗ್
4. ಲಖನೌ ಸೂಪರ್ ಜೈಂಟ್ಸ್‌: ಸೌಥ್ ಆಫ್ರಿಕಾ ಟಿ20 ಲೀಗ್
5. ಡೆಲ್ಲಿ ಕ್ಯಾಪಿಟಲ್ಸ್‌: ಯುಎಇ ಟಿ20 ಲೀಗ್, ಸೌಥ್ ಆಫ್ರಿಕಾ ಟಿ20 ಲೀಗ್
6. ಪಂಜಾಬ್ ಕಿಂಗ್ಸ್: ಕೆರಿಬಿಯನ್‌ ಪ್ರೀಮಿಯರ್ ಲೀಗ್
7. ಸನ್‌ರೈಸರ್ಸ್‌ ಹೈದರಾಬಾದ್: ಸೌಥ್ ಆಫ್ರಿಕಾ ಟಿ20 ಲೀಗ್
8. ಚೆನ್ನೈ ಸೂಪರ್ ಕಿಂಗ್ಸ್‌: ಸೌಥ್ ಆಫ್ರಿಕಾ ಟಿ20 ಲೀಗ್

ಆಸ್ಪ್ರೇಲಿಯಾ ಟಿ20 ಮ್ಯಾಕ್ಸ್‌: ಟೂರ್ನಿಗೆ ಚೇತನ್‌, ಮುಕೇಶ್‌

ಬ್ರಿಸ್ಬೇನ್‌: ಭಾರತದ ಇಬ್ಬರು ಯುವ ವೇಗಿಗಳಾದ ಚೇತನ್‌ ಸಕಾರಿಯಾ ಮತ್ತು ಮುಕೇಶ್‌ ಚೌಧರಿ ಆಸ್ಪ್ರೇಲಿಯಾದ ಕ್ವೀನ್ಸ್‌ಲ್ಯಾಂಡ್‌ನಲ್ಲಿ ನಡೆಯಲಿರುವ ಉದ್ಘಾಟನಾ ಆವೃತ್ತಿಯ ‘ಟಿ20 ಮ್ಯಾಕ್ಸ್‌’ ಟೂರ್ನಿಯಲ್ಲಿ ಆಡಲಿದ್ದಾರೆ. ಐಪಿಎಲ್‌ನಲ್ಲಿ ಕ್ರಮವಾಗಿ ಡೆಲ್ಲಿ ಮತ್ತು ಚೆನ್ನೈ ಪರ ಆಡಿದ್ದ ಈ ಆಟಗಾರರು, ಎಂಆರ್‌ಎಫ್‌ ಪೇಸ್‌ ಫೌಂಡೇಶನ್‌ ಮತ್ತು ಕ್ರಿಕೆಟ್‌ ಆಸ್ಪ್ರೇಲಿಯಾ ಸಹಭಾಗ್ವಿತದಲ್ಲಿ ನಡೆಯಲಿರುವ ಟೂರ್ನಿಯಲ್ಲಿ ಪಾಲ್ಗೊಳ್ಳಲು ಬಿಸಿಸಿಐ ಅನುಮತಿ ನೀಡಿದೆ. ಮುಂದಿನ ತಿಂಗಳು ಟೂರ್ನಿ ನಡೆಯಲಿದ್ದು ಸಕಾರಿಯಾ, ಸನ್‌ಶೈನ್‌ ಕೋಸ್ಟ್‌ ಮತ್ತು ಮುಕೇಶ್‌ ವೈನ್ನಮ್‌-ಮ್ಯಾನ್ಲಿ ತಂಡಗಳ ಪರ ಆಡಲಿದ್ದಾರೆ.

click me!