ಐಪಿಎಲ್ ಹೊಸ 2 ತಂಡಗಳ ಖರೀದಿಗೆ ಭಾರೀ ಡಿಮ್ಯಾಂಡ್‌..!

By Suvarna News  |  First Published Oct 14, 2021, 10:00 AM IST

* ಐಪಿಎಲ್‌ನಲ್ಲಿ 2 ಹೊಸ ತಂಡಗಳ ಖರೀದಿಗೆ ಏರ್ಪಟ್ಟಿದೆ ಭಾರೀ ಪೈಪೋಟಿ

* ಒಂದು ಡಜನ್‌ಗೂ ಅಧಿಕ ಕಂಪನಿಗಳಿಂದ 2 ತಂಡಗಳ ಖರೀದಿಗೆ ಆಸಕ್ತಿ

* ಟೆಂಡರ್‌ ಪತ್ರಗಳನ್ನು ಪಡೆಯಲು ಬಿಸಿಸಿಐ ಕಾಲಾವಕಾಶ ವಿಸ್ತರಣೆ


ನವದೆಹಲಿ(ಅ.14): 2022ರ ಐಪಿಎಲ್‌ನಿಂದ (IPL) 2 ಹೊಸ ತಂಡಗಳು ಸೇರ್ಪಡೆಗೊಳ್ಳಲಿದ್ದು, ತಂಡಗಳ ಖರೀದಿಗೆ ಭಾರೀ ಬೇಡಿಕೆ ಕಂಡುಬಂದಿದೆ. ಇದೇ ಕಾರಣದಿಂದಾಗಿ ಟೆಂಡರ್‌ ಪತ್ರಗಳನ್ನು ಪಡೆಯಲು ಬಿಸಿಸಿಐ (BCCI) ಕಾಲಾವಕಾಶವನ್ನು 10 ದಿನಗಳ ಕಾಲ ವಿಸ್ತರಿಸಿದೆ. ಅಕ್ಟೋಬರ್ 10 ಇದ್ದ ಗಡುವನ್ನು ಅಕ್ಟೋಬರ್ 20ಕ್ಕೆ ವಿಸ್ತರಿಸಲಾಗಿದೆ ಎಂದು ಬುಧವಾರ ಬಿಸಿಸಿಐ ಪ್ರಕಟಣೆ ಮೂಲಕ ತಿಳಿಸಿದೆ.

ತಂಡ ಖರೀದಿಗೆ ಮೂಲಬೆಲೆಯನ್ನು 2,000 ಕೋಟಿ ರುಪಾಯಿಗೆ ನಿಗದಿಪಡಿಸಿದ್ದರೂ ಈಗಾಗಲೇ 14 ಸಂಸ್ಥೆಗಳು ಟೆಂಡರ್‌ ಪತ್ರಗಳನ್ನು ಪಡೆದಿವೆ. ಈ ಪೈಕಿ ಅದಾನಿ (Adani Group), ಗೋಯೆಂಕಾ, ಕೋಟಕ್‌, ಬಿರ್ಲಾ, ಅರಬಿಂದೋ ಫಾರ್ಮ್‌‍, ಟೋರೆಂಟ್‌ ಫಾರ್ಮ್‌ ಸಂಸ್ಥೆಗಳಿವೆ ಎನ್ನಲಾಗಿದೆ. ಎರಡು ತಂಡಗಳ ಹಕ್ಕನ್ನು ಪಡೆದುಕೊಳ್ಳಲು ಒಂದು ಡಜನ್‌ಗೂ ಅಧಿಕ ಸಂಸ್ಥೆಗಳು ಆಸಕ್ತಿ ತೋರಿವೆ. ಟೆಂಡರ್‌ ಪತ್ರಗಳನ್ನು ಪಡೆಯಲು ಬಿಸಿಸಿಐ ಬರೋಬ್ಬರಿ 10 ಲಕ್ಷ ರುಪಾಯಿ ಶುಲ್ಕವನ್ನು ವಿಧಿಸಲಾಗಿದೆ. ಈ ಶುಲ್ಕವನ್ನು ಮರುಪಾವತಿ ಮಾಡಲಾಗುವುದಿಲ್ಲ ಎನ್ನುವ ನಿಯಮವನ್ನು ಬಿಸಿಸಿಐ ರೂಪಿಸಿದೆ.

Tap to resize

Latest Videos

undefined

ಐಪಿಎಲ್‌ ಹೊಸ ತಂಡಗಳ 3,500 ಕೋಟಿ ರುಪಾಯಿ ಬಿಕರಿ?

ಈ ಮೊದಲು ಪಂಜಾಬ್ ಕಿಂಗ್ಸ್ (Punjab Kings) ತಂಡದ ಸಹ ಮಾಲೀಕ ನೆಸ್ ವಾಡಿಯಾ, ಐಪಿಎಲ್ ಹೊಸ ತಂಡಗಳನ್ನು ಖರೀದಿಸಲು 2 ಸಾವಿರ ಕೋಟಿ ರುಪಾಯಿ ಮೂಲ ಬೆಲೆ ನಿಗದಿಪಡಿಸಲಾಗಿದೆಯಾದರೂ, ಅದಕ್ಕಿಂತ ಕನಿಷ್ಠ ಶೇ 50 ರಿಂದ ಶೇ.75ರಷ್ಟು ಹೆಚ್ಚಿಗೆ ಮೊತ್ತಕ್ಕೆ ಬಿಡ್‌ ಆಗಲಿದೆ ಎಂದು ಅಭಿಪ್ರಾಯಪಟ್ಟಿದ್ದರು. ಹೊಸ ತಂಡಗಳ ಖರೀದಿಗೆ ಮೂಲಬೆಲೆ 2 ಸಾವಿರ ಕೋಟಿ ರುಪಾಯಿಯಾಗಿದ್ದರು, ಅದು ಬಹಳ ಕಡಿಮೆ ಎನಿಸುತ್ತದೆ. ಐಪಿಎಲ್‌ ವಿಶ್ವದ ಶ್ರೇಷ್ಠ ಟಿ20 ಲೀಗ್ ಆಗಿದ್ದು, ಎರಡು ಹೊಸ ತಂಡಗಳ ಸೇರ್ಪಡೆ ಟೂರ್ನಿಗೆ ಮತ್ತಷ್ಟು ಲಾಭ ತಂದುಕೊಡಲಿದೆ ಎಂದು ಹೇಳಿದ್ದರು.

IPL 2021 ಡೇನಿಯಲ್‌ ಕ್ರಿಶ್ಚಿಯನ್ ಗರ್ಭಿಣಿ ಪತ್ನಿಯನ್ನು ಕೀಳಾಗಿ ಟೀಕಿಸಿದ ಫ್ಯಾನ್ಸ್‌, ಕಿಡಿಕಾರಿದ ಮ್ಯಾಕ್ಸ್‌ವೆಲ್‌..!

ಐಪಿಎಲ್‌ನ ನೂತನ ಫ್ರಾಂಚೈಸಿಗಳಾಗುವವರು ವಾರ್ಷಿಕ 3,000 ಕೋಟಿ ರುಪಾಯಿ ವ್ಯವಹಾರ ನಡೆಸಿರಬೇಕು ಎನ್ನುವ ನಿಬಂಧನೆಯನ್ನು ವಿಧಿಸಿದೆ. ಆದರೆ ಕೆಲವು ಕಂಪನಿಗಳು ಈ ನಿಯಮವನ್ನು 3 ಸಾವಿರ ಕೋಟಿ ರುಪಾಯಿಯಿಂದ ಎರಡೂವರೆ ಸಾವಿರ ಕೋಟಿ ರುಪಾಯಿಗೆ ತಗ್ಗಿಸಬೇಕೆಂದು ಬಿಸಿಸಿಐಗೆ ಮನವಿ ಸಲ್ಲಿಸಿವೆ. ಆದರೆ ಈ ಮನವಿಯನ್ನು ಬಿಸಿಸಿಐ ತಳ್ಳಿ ಹಾಕಿದೆ ಎಂದು ಕ್ರಿಕ್‌ಬಜ್‌ ವರದಿ ಮಾಡಿದೆ.

ಅಕ್ಟೋಬರ್ 25ರಂದು ದುಬೈನಲ್ಲಿ ಬಿಡ್ಡಿಂಗ್‌ ನಡೆಯಲಿದ್ದು, ಅಂದೇ ಹೊಸ ತಂಡಗಳ ಘೋಷಣೆ ಆಗಲಿದೆ. ಪ್ರತಿ ತಂಡವು ಕನಿಷ್ಠ 3,500 ಕೋಟಿ ರುಪಾಯಿಗೆ ಬಿಕರಿಯಾಗುವ ನಿರೀಕ್ಷೆ ಇದ್ದು, ಬಿಸಿಸಿಐ ಅಂದಾಜು 7,000 ಕೋಟಿ ಸಂಪಾದಿಸುವ ವಿಶ್ವಾಸದಲ್ಲಿದೆ. ಅಹಮದಾಬಾದ್‌, ಲಖನೌ, ಗುವಾಹಟಿ, ಧರ್ಮಶಾಲಾ, ರಾಂಚಿ ಹಾಗೂ ಕಟಕ್‌ ಇವುಗಳ ಪೈಕಿ ಎರಡು ನಗರಗಳು ಹೊಸದಾಗಿ ಸೇರ್ಪಡೆಗೊಳ್ಳಲಿರುವ ತಂಡಗಳ ತವರು ನಗರಗಳಾಗಲಿವೆ. ಈ ಪೈಕಿ ಅಧಾನಿ ಗ್ರೂಪ್‌ ಹೊಸ ತಂಡ ಖರೀದಿಸುವ ನಿಟ್ಟಿನಲ್ಲಿ ಪ್ರಬಲ ಆಕಾಂಕ್ಷಿಯಾಗಿದೆ ಎಂದು ವರದಿಯಾಗಿದೆ.

IPL 2021: ಆರ್‌ಸಿಬಿ ನಾಯಕತ್ವಕ್ಕೆ ಭಾವನಾತ್ಮಕವಾಗಿ ವಿದಾಯ ಹೇಳಿದ ವಿರಾಟ್ ಕೊಹ್ಲಿ

ಸದ್ಯ 8 ತಂಡಗಳು ಐಪಿಎಲ್‌ನಲ್ಲಿ ಪ್ರಶಸ್ತಿಗಾಗಿ ಕಾದಾಡುತ್ತಿವೆ. 2022ನೇ ಸಾಲಿನ ಐಪಿಎಲ್‌ ಟೂರ್ನಿಯಲ್ಲಿ ಇನ್ನೆರಡು ತಂಡಗಳ ಸೇರ್ಪಡೆಯೊಂದಿಗೆ ಒಟ್ಟು 10 ತಂಡಗಳು ಪ್ರಶಸ್ತಿಗಾಗಿ ಸೆಣಸಾಡಲಿವೆ. ಎರಡು ತಂಡಗಳ ಸೇರ್ಪಡೆಯಿಂದ ಪಂದ್ಯಗಳ ಸಂಖ್ಯೆಯೂ ಹೆಚ್ಚಳವಾಗಲಿವೆ. ಒಟ್ಟಿನಲ್ಲಿ ಕ್ರಿಕೆಟ್‌ ಅಭಿಮಾನಿಗಳಿಗೆ ಭರಪೂರ ಮನರಂಜನೆ ಸಿಗುವುದಂತೂ ಗ್ಯಾರಂಟಿ. 

click me!