IPL Broadcasting Rights: 45,000 ಕೋಟಿ ರುಪಾಯಿ ಬಂಪರ್ ನಿರೀಕ್ಷೆಯಲ್ಲಿ ಬಿಸಿಸಿಐ..!

Suvarna News   | Asianet News
Published : Feb 03, 2022, 02:27 PM ISTUpdated : Feb 03, 2022, 02:30 PM IST
IPL Broadcasting Rights: 45,000 ಕೋಟಿ ರುಪಾಯಿ ಬಂಪರ್ ನಿರೀಕ್ಷೆಯಲ್ಲಿ ಬಿಸಿಸಿಐ..!

ಸಾರಾಂಶ

* ಐಪಿಎಲ್ ಮಾಧ್ಯಮ ಹಕ್ಕು ಖರೀದಿಸಲು ಹಲವು ಕಂಪನಿಗಳ ಪೈಪೋಟಿ * ಸೋನಿ ಸ್ಪೋರ್ಟ್ಸ್ ನೆಟ್‌ವರ್ಕ್, ಡಿಸ್ನಿ ಸ್ಟಾರ್‌ ನೆಟ್‌ವರ್ಕ್ ಜೊತೆ ರಿಲಯನ್ಸ್‌ ವಿಯಾಕೊಮ್‌ 18 ಸೇರಿ ಹಲವು ಸಂಸ್ಥೆಗಳ ಪೈಪೋಟಿ *  ಬಿಸಿಸಿಐ ಪ್ರಸಾರ ಹಕ್ಕಿನಿಂದ 40ರಿಂದ 45,000 ಕೋಟಿ ರುಪಾಯಿ ಗಳಿಸುವ ನಿರೀಕ್ಷೆಯಲ್ಲಿದೆ

ನವದೆಹಲಿ(ಫೆ.03): 2 ಹೊಸ ತಂಡಗಳ ಸೇರ್ಪಡೆಯಿಂದ ಬಂಪರ್‌ ಹಣ ಸಂಪಾದಿಸಿರುವ ಬಿಸಿಸಿಐ(BCCI), ಇದೀಗ ಐಪಿಎಲ್‌ನ ಪ್ರಸಾರ ಹಕ್ಕು (IPL Broadcasting Rights) ಒಪ್ಪಂದದ ಮೂಲಕ ಮತ್ತೊಮ್ಮೆ ಬಂಪರ್‌ ಹೊಡೆಯುವ ನಿರೀಕ್ಷೆಯಲ್ಲಿದೆ. ವರದಿಗಳ ಪ್ರಕಾರ ಬಿಸಿಸಿಐ ಪ್ರಸಾರ ಹಕ್ಕಿನಿಂದ 40ರಿಂದ 45,000 ಕೋಟಿ ರು. ಗಳಿಸಲಿದೆ ಎಂದು ಹೇಳಲಾಗುತ್ತಿದೆ. ಈಗಾಗಲೇ ಬಿಸಿಸಿಐ ಪ್ರಸಾರ ಹಕ್ಕು ಬಿಡ್‌ ವಿತರಿಸಿದ್ದು, 15ನೇ ಆವೃತ್ತಿಯ ಐಪಿಎಲ್‌ಗೂ (IPL) ಮುನ್ನ ಹರಾಜು ಪ್ರಕ್ರಿಯೆ ನಡೆಯುವ ಸಾಧ್ಯತೆ ಇದೆ. 

ಸೋನಿ ಸ್ಪೋರ್ಟ್ಸ್ ನೆಟ್‌ವರ್ಕ್ (Sony Sports Network), ಡಿಸ್ನಿ ಸ್ಟಾರ್‌ ನೆಟ್‌ವರ್ಕ್ ಜೊತೆ ರಿಲಯನ್ಸ್‌ ವಿಯಾಕೊಮ್‌ 18, ಅಮೆಜಾನ್‌ ಸೇರಿದಂತೆ ಇತರೆ ಸಂಸ್ಥೆಗಳೂ ಕೂಡಾ ಪ್ರಸಾರ ಹಕ್ಕು ಪಡೆಯಲು ಪೈಪೋಟಿ ನಡೆಯುತ್ತಿದೆ. 2018-22ರ ಅವಧಿಗೆ ಪ್ರಸಾರ ಹಕ್ಕನ್ನು ಪಡೆದುಕೊಂಡಿದ್ದ ಸ್ಟಾರ್‌ ಇಂಡಿಯಾ (Star India) ಸಂಸ್ಥೆ ಇದಕ್ಕಾಗಿ ಬಿಸಿಸಿಐಗೆ 16,347 ಕೋಟಿ ರುಪಾಯಿ ಪಾವತಿಸಿತ್ತು. ಅದಕ್ಕೂ ಮೊದಲು ಸೋನಿ ಪಿಕ್ಚ​ರ್ಸ್‌ ನೆಟ್‌ವರ್ಕ್ 8,200 ಕೋಟಿಗೆ ಪ್ರಸಾರ ಹಕ್ಕನ್ನು ತನ್ನದಾಗಿಸಿಕೊಂಡಿತ್ತು. ಆದರೆ 2023-2027ರ ಅವಧಿಗೆ ಪ್ರಸಾರ ಹಕ್ಕು ಪಡೆಯುವ ಸಂಸ್ಥೆಯಿಂದ ಬಿಸಿಸಿಐ ಕಳೆದ ಬಾರಿಗಿಂತ 3 ಪಟ್ಟು ಹೆಚ್ಚಿನ ಹಣ ನಿರೀಕ್ಷಿಸುತ್ತಿದೆ. ವರದಿಗಳ ಪ್ರಕಾರ ಬಿಸಿಸಿಐ ಸುಮಾರು 45,000 ಕೋಟಿ ರುಪಾಯಿ ಪಡೆಯುವ ಸಾಧ್ಯತೆ ಇದೆ.

ಇತ್ತೀಚೆಗಷ್ಟೇ ಬಿಸಿಸಿಐ ಅಧ್ಯಕ್ಷ ಸೌರವ್‌ ಗಂಗೂಲಿ (Sourav Ganguly) ಪ್ರಸಾರ ಹಕ್ಕಿನ ಮೂಲಕ 35,000 ಕೋಟಿ ಗಳಿಸುವ ನಿರೀಕ್ಷೆಯಿದೆ ಎಂದು ಹೇಳಿದ್ದರು. ಆದರೆ 40ರಿಂದ 45,000 ಕೋಟಿ ಗಳಿಸಿದರೆ ಅಚ್ಚರಿಯಿಲ್ಲ ಎಂದು ಬಿಸಿಸಿಐ ಸದಸ್ಯರೊಬ್ಬರು ಮಾಹಿತಿ ನೀಡಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ.

ಶ್ರೇಯಸ್‌ಗಾಗಿ ಆರ್‌ಸಿಬಿ 20 ಕೋಟಿ ತೆಗೆದಿಟ್ಟಿದೆ: ಆಕಾಶ್‌

ನವದೆಹಲಿ: ಭಾರತದ ತಾರಾ ಬ್ಯಾಟರ್‌ ಶ್ರೇಯಸ್‌ ಅಯ್ಯರ್‌ರನ್ನು (Shreyas Iyer) ಹರಾಜಿನಲ್ಲಿ ರಾಯಲ್‌ ಚಾಲೆಂಜ​ರ್ಸ್‌ ಬೆಂಗಳೂರು(ಆರ್‌ಸಿಬಿ) (Royal Challengers Bangalore) ತಂಡ ಖರೀಸುವ ಬಗ್ಗೆ ಭಾರತ ಮಾಜಿ ಕ್ರಿಕೆಟಿಗ ಆಕಾಶ್‌ ಚೋಪ್ರಾ (Aakash Chopra) ಸುಳಿವು ನೀಡಿದ್ದಾರೆ. 

ತಮ್ಮ ಯೂಟ್ಯೂಬ್‌ ಚಾನೆಲ್‌ನಲ್ಲಿ ಮಾತನಾಡಿದ ಅವರು, ‘ಹರಾಜಿನಲ್ಲಿ ಶ್ರೇಯಸ್‌ 15-16 ಕೋಟಿಗೆ ಮಾರಾಟವಾಗುವ ಎಲ್ಲಾ ಸಾಧ್ಯತೆಗಳಿವೆ. ಶ್ರೇಯಸ್‌ಗಾಗಿ ಆರ್‌ಸಿಬಿ 20 ಕೋಟಿ ರು. ಮೀಸಲಿಟ್ಟಿದೆ ಎಂದು ಒಬ್ಬರು ನನಗೆ ಹೇಳಿದ್ದಾರೆ. ಕೆಕೆಆರ್‌ (KKR) ಮತ್ತು ಆರ್‌ಸಿಬಿ (RCB) ನಾಯಕನಾಗುವ ಎಲ್ಲಾ ಸಾಮರ್ಥ್ಯ ಅವರಿಗಿದೆ. ಹರಾಜಿನಲ್ಲಿ ಅವರೇ ದುಬಾರಿ ಆಟಗಾರ ಎನಿಸಿಕೊಳ್ಳಲಿದ್ದಾರೆ ಎಂದಿದ್ದಾರೆ.

IPL Auction 2022: ಹರಾಜಿನಲ್ಲಿ ಪಾಲ್ಗೊಳ್ಳಲು ಕ್ರಿಸ್‌ ಗೇಲ್‌ಗೆ ಗಾಳ ಹಾಕಿದ್ದ ಫ್ರಾಂಚೈಸಿಗಳು..!

15ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್‌ ಲೀಗ್‌ನಲ್ಲಿ (Indian Premier League) ಕೋಲ್ಕತಾ ನೈಟ್‌ ರೈಡರ್ಸ್‌(Kolkata Knight Riders), ಪಂಜಾಬ್ ಕಿಂಗ್ಸ್‌(Punjab Kings), ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಹೊಸ ನಾಯಕನ ಹುಡುಕಾಟದಲ್ಲಿವೆ. ಮುಂಬರುವ ಐಪಿಎಲ್ ಆಟಗಾರರ ಹರಾಜಿನಲ್ಲಿ ಶ್ರೇಯಸ್ ಅಯ್ಯರ್ ಹಾಗೂ ಇಶಾನ್ ಕಿಶನ್ (Ishan Kishan) ಅವರನ್ನು ಖರೀದಿಸಲು ಹಲವು ಫ್ರಾಂಚೈಸಿಗಳು ಪೈಪೋಟಿ ನಡೆಸುವ ಸಾಧ್ಯತೆಯಿದೆ ಎಂದು ಆಕಾಶ್ ಚೋಪ್ರಾ ಅಭಿಪ್ರಾಯಪಟ್ಟಿದ್ದಾರೆ.

ಬಹುನಿರೀಕ್ಷಿತ ಐಪಿಎಲ್ ಆಟಗಾರರ ಹರಾಜು (IPL Mega Auction) ಫೆಬ್ರವರಿ 12 ಹಾಗೂ 13ರಂದು ನಡೆಯಲಿದೆ. ಮಿಲಿಯನ್ ಡಾಲರ್‌ ಕ್ರಿಕೆಟ್ ಟೂರ್ನಿಯ ಆಟಗಾರರ ಹರಾಜಿಗೆ ಬೆಂಗಳೂರು ಆತಿಥ್ಯ ವಹಿಸಲಿದೆ. ಯಾವ ಆಟಗಾರರು ಯಾವ ತಂಡ ಕೂಡಿಕೊಳ್ಳಲಿದ್ದಾರೆ ಎನ್ನುವುದಕ್ಕೆ ಕಾಲವೇ ಉತ್ತರ ನೀಡಬೇಕಿದೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಸೌತ್ ಆಫ್ರಿಕಾ ವಿರುದ್ದ 3ನೇ ಟಿ20 ಗೆದ್ದ ಟೀಂ ಇಂಡಿಯಾ, ಸರಣಿಯಲ್ಲಿ 2-1 ಮುನ್ನಡೆ
U19 ಏಷ್ಯಾಕಪ್, 150 ರನ್‌ಗೆ ಪಾಕಿಸ್ತಾನ ಆಲೌಟ್ ಮಾಡಿದ ಟೀಂ ಇಂಡಿಯಾಗೆ 90 ರನ್ ಗೆಲುವು