* ವೆಸ್ಟ್ ಇಂಡೀಸ್ ವಿರುದ್ದದ ಏಕದಿನ ಸರಣಿಗೆ ತಂಡ ಕೂಡಿಕೊಂಡ ಮಯಾಂಕ್ ಅಗರ್‌ವಾಲ್
* ಮೂರು ಪಂದ್ಯಗಳ ಏಕದಿನ ಸರಣಿಯು ಫೆಬ್ರವರಿ 06ರಿಂದ ಆರಂಭ
* ಏಕದಿನ ಸರಣಿ ಆರಂಭಕ್ಕೂ ಮುನ್ನವೇ ಟೀಂ ಇಂಡಿಯಾ ಪಾಳಯದಲ್ಲಿ ಕೋವಿಡ್ ಭೀತಿ
ಅಹಮದಾಬಾದ್(ಫೆ.03): ವೆಸ್ಟ್ ಇಂಡೀಸ್ ವಿರುದ್ದ ತವರಿನಲ್ಲಿ ಫೆಬ್ರವರಿ 06ರಿಂದ ಟೀಂ ಇಂಡಿಯಾ (Team India) ಮೂರು ಪಂದ್ಯಗಳ ಏಕದಿನ ಸರಣಿಯನ್ನು ಆಡಲಿದೆ. ವಿಂಡೀಸ್ ಎದುರಿನ ಏಕದಿನ ಸರಣಿ ಆರಂಭಕ್ಕೂ ಮುನ್ನವೇ ಟೀಂ ಇಂಡಿಯಾ ಪಾಳಯದಲ್ಲಿ ಕೋವಿಡ್ ಭೀತಿ (COVID Threat) ಎದುರಾಗಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಕನ್ನಡಿಗ ಮಯಾಂಕ್ ಅಗರ್‌ವಾಲ್ (Mayank Agarwal) ಅವರನ್ನು ಭಾರತ ಸೀಮಿತ ಓವರ್‌ಗಳ ತಂಡಕ್ಕೆ ಸೇರಿಸಿಕೊಳ್ಳಲಾಗಿದೆ.
ಟೀಂ ಇಂಡಿಯಾ ಆರಂಭಿಕ ಬ್ಯಾಟರ್‌ಗಳಾದ ಶಿಖರ್ ಧವನ್(Shikhar Dhawan), ಋತುರಾಜ್ ಗಾಯಕ್ವಾಡ್ (Ruturaj Gaikwad) ಹಾಗೂ ಮಧ್ಯಮ ಕ್ರಮಾಂಕದ ಬ್ಯಾಟರ್ ಶ್ರೇಯಸ್ ಅಯ್ಯರ್ (Shreyas Iyer) ಅವರಿಗೆ ಕೋವಿಡ್ 19 ಸೋಂಕು ತಗುಲಿದೆ ಎಂದು ಬಿಸಿಸಿಐ (BCCI) ಈಗಾಗಲೇ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ. ಈ ಮೂವರು ಕ್ರಿಕೆಟಿಗರು ಮಾತ್ರವಲ್ಲದೇ ಮೀಸಲು ಆಟಗಾರನಾಗಿ ತಂಡದಲ್ಲಿ ಸ್ಥಾನ ಪಡೆದಿರುವ ವೇಗಿ ನವದೀಪ್ ಸೈನಿ(Navdeep Saini), ಪೀಲ್ಡಿಂಗ್ ಕೋಚ್ ಟಿ. ದಿಲಿಪ್, ಹಾಗೂ ಸಹಾಯಕ ಸಿಬ್ಬಂದಿಗಳಾದ ಬಿ. ಲೋಕೇಶ್ ಹಾಗೂ ರಾಜೀವ್ ಕುಮಾರ್ ಅವರ ಕೋವಿಡ್ ಟೆಸ್ಟ್ ರಿಪೋರ್ಟ್ ಪಾಸಿಟಿವ್ ಬಂದಿದೆ ಎಂದು ಬಿಸಿಸಿಐ ತಿಳಿಸಿದೆ.
undefined
ಟೀಂ ಇಂಡಿಯಾ ಮೂವರು ಕ್ರಿಕೆಟಿಗರು ಸೇರಿದಂತೆ ಒಟ್ಟು 7 ಮಂದಿಗೆ ಕೋವಿಡ್ 19 ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ಮಯಾಂಕ್ ಅಗರ್‌ವಾಲ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ ಎಂದು ಭಾರತೀಯ ಕ್ರಿಕೆಟ್ ಆಯ್ಕೆ ಸಮಿತಿಯು ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ವೆಸ್ಟ್ ಇಂಡೀಸ್ ವಿರುದ್ದದ ಮೂರು ಪಂದ್ಯಗಳ ಏಕದಿನ ಸರಣಿ ಹಾಗೂ ಮೂರು ಪಂದ್ಯಗಳ ಟಿ20 ಸರಣಿಯನ್ನು ಪಾಲ್ಗೊಳ್ಳುವ ಆಟಗಾರರಿಗೆ ಜನವರಿ 31ರಂದು ಅಹಮದಾಬಾದ್‌ನಲ್ಲಿ ಆಟಗಾರರಿಗೆ ಕೋವಿಡ್ ಟೆಸ್ಟ್ (COVID Test) ಮಾಡಿಸಿಕೊಳ್ಳಲು ತಿಳಿಸಲಾಗಿತ್ತು. ಅಹಮದಾಬಾದ್‌ಗೆ ತೆರಳುವ ಮುನ್ನ RT-PCR ಟೆಸ್ಟ್ ಮಾಡಿಸಿಕೊಳ್ಳಲು ತಿಳಿಸಲಾಗಿತ್ತು. ಈ ವೇಳೆ ಆಟಗಾರರ ಕೋವಿಡ್ ರಿಪೋರ್ಟ್ ನೆಗೆಟಿವ್ ಬಂದಿತ್ತು ಎಂದು ಬಿಸಿಸಿಐ ತನ್ನ ಪ್ರಕಟಣೆಯಲ್ಲಿ ತಿಳಿಸಿತ್ತು.
ಕೋವಿಡ್ ಪಾಸಿಟಿವ್ ಬಂದ ಆಟಗಾರರನ್ನು ಬಿಸಿಸಿಐ ವೈದ್ಯಕೀಯ ಸಿಬ್ಬಂದಿ ನಿಗಾಯಿಟ್ಟಿದ್ದು, ಎಲ್ಲಾ ಆಟಗಾರರನ್ನು ಐಸೋಲೇಷನ್‌ನಲ್ಲಿಡಲಾಗಿದೆ. ಸಂಪೂರ್ಣ ಗುಣಮುಖರಾದ ಬಳಿಕ ಆ ಎಲ್ಲಾ ಆಟಗಾರರನ್ನು ತಂಡದೊಳಗೆ ಸೇರಿಸಿಕೊಳ್ಳಲಾಗುವುದು ಎಂದು ಬಿಸಿಸಿಐ ತಿಳಿಸಿದ್ದಾರೆ.
Ind vs WI: ಐತಿಹಾಸಿಕ 1000ನೇ ಏಕದಿನ ಪಂದ್ಯವನ್ನಾಡಲು ಸಜ್ಜಾದ ಟೀಂ ಇಂಡಿಯಾ..!
ಭಾರತ ಹಾಗೂ ವೆಸ್ಟ್ ಇಂಡೀಸ್ (India vs West Indies) ತಂಡಗಳ ನಡುವಿನ ಮೂರು ಪಂದ್ಯಗಳ ಏಕದಿನ 6, 9 ಹಾಗೂ 11 ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂ ನಡೆಯಲಿದೆ. ಇದಾದ ಬಳಿಕ ಫೆಬ್ರವರಿ 16, 18 ಹಾಗೂ 20 ರಂದು ಕೋಲ್ಕತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ಟಿ20 ಪಂದ್ಯಗಳು ನಡೆಯಲಿವೆ.
ಧವನ್, ಶ್ರೇಯಸ್, ಗಾಯಕ್ವಾಡ್‌ಗೆ ಸೋಂಕು
ವೆಸ್ಟ್‌ಇಂಡೀಸ್ ವಿರುದ್ಧದ ಏಕದಿನ ಸರಣಿಗೂ ಮುನ್ನ ಟೀಂ ಇಂಡಿಯಾಗೆ ಕೋವಿಡ್ ಕಾಟ ಎದುರಾಗಿದ್ದು, ತಂಡದ ಮೂವರು ಆಟಗಾರರು ಸೋಂಕಿಗೆ ತುತ್ತಾಗಿದ್ದಾರೆ. ಬ್ಯಾಟರ್‌ಗಳಾದ ಶಿಖರ್ ಧವನ್, ಶ್ರೇಯಸ್ ಅಯ್ಯರ್ ಹಾಗೂ ಮೀಸಲು ಆಟಗಾರ ಋುತುರಾಜ್ ಗಾಯಕ್ವಾಡ್‌ಗೆ ಮಂಗಳವಾರ ಸೋಂಕು ದೃಢಪಟ್ಟಿದೆ. ಮೂವರು ಸಹಾಯಕ ಸಿಬ್ಬಂದಿಗೂ ಪಾಸಿಟಿವ್ ಬಂದಿದೆ ಎಂದು ಬಿಸಿಸಿಐ ಮೂಲಗಳಿಂದ ತಿಳಿದುಬಂದಿದೆ. ಆಟಗಾರರು ಐಸೋಲೇಸನ್‌ಗೆ ಒಳಗಾಗಿದ್ದು, ಮೀಸಲು ಆಟಗಾರರಾದ ಶಾರುಖ್ ಖಾನ್, ಸಾಯಿ ಕಿಶೋರ್ ಹಾಗೂ ರಿಷಿ ಧವನ್ ತಂಡಕ್ಕೆ ಸೇರ್ಪಡೆಯಾಗುವ ಸಾಧ್ಯತೆ ಇದೆ.