ಬಿಸಿಸಿಐ ವಾರ್ಷಿಕ ಪ್ರಶಸ್ತಿ ಪ್ರದಾನ; ಬುಮ್ರಾ, ಶ್ರೀಕಾಂತ್‌ಗೆ ಪ್ರತಿಷ್ಠಿತ ಪ್ರಶಸ್ತಿ!

By Suvarna NewsFirst Published Jan 12, 2020, 9:11 PM IST
Highlights

2018-19ರ ಸಾಲಿನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಕ್ರಿಕೆಟಿಗರು ಹಾಗೂ ಜೀವನಮಾನ ಶ್ರೇಷ್ಠ ಸಾಧನೆ ಮಾಡಿದ ಮಾಜಿ ಕ್ರಿಕೆಟಿಗರಿಗೆ ಬಿಸಿಸಿಐ ವಾರ್ಷಿಕ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ವೇಗಿ ಜಸ್ಪ್ರೀತ್ ಬುಮ್ರಾ, ಮಾಜಿ ಕ್ರಿಕೆಟಿಗ ಕೃಷ್ಣಮಾಚಾರಿ ಶ್ರೀಕಾಂತ್ ಪ್ರತಿಷ್ಠಿತ ಪ್ರಶಸ್ತಿ ಸ್ವೀಕರಿಸಿದ್ದಾರೆ. 

ಮುಂಬೈ(ಜ.12): ಬಿಸಿಸಿಐ ವಾರ್ಷಿಕ ಪ್ರಶಸ್ತಿ ಸಮಾರಂಭ ಯಶಸ್ವಿಯಾಗಿ ನಡೆದಿದೆ. 2018-19ರ ಸಾಲಿನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ ಐತಿಹಾಸಿಕ ಗೆಲುವಿಗೆ ಕಾರಣರಾದ ವೇಗಿ ಜಸ್ಪ್ರೀತ್ ಬುಮ್ರಾ ಹಾಗೂ ಮಹಿಳಾ ತಂಡದ ಪೂನಮ್ ಯಾದವ್ ಪ್ರತಿಷ್ಠಿತ ಪಾಲಿ ಉಮ್ರಿಗರ್ ಪ್ರಶಸ್ತಿ ಸ್ವೀಕರಿಸಿದ್ದಾರೆ.

ಇದನ್ನೂ ಓದಿ: ಆಸೀಸ್ ಸರಣಿಗೂ ಮುನ್ನ ಶುರುವಾಯ್ತು ವಿರಾಟ್‌ಗೆ ಟೆನ್ಷನ್..!.

ಮುಂಬೈನಲ್ಲಿ ನಡೆದ ನಮಾನ್ ಪ್ರಶಸ್ತಿ ಸಮಾರಂಭದಲ್ಲಿ ಬುಮ್ರಾ ಹಾಗೂ ಪೂನಮ್ ಯಾದವ್ ಪ್ರಶಸ್ತಿ ಸ್ವೀಕರಿಸಿದರು. 2018-19 ಸಾಲಿನಲ್ಲಿ ಟೆಸ್ಟ್ ಕ್ರಿಕೆಟ್‌ನ ಗರಿಷ್ಠ ವಿಕೆಟ್ ಟೇಕರ್ ಪ್ರಶಸ್ತಿಗೆ ಬುಮ್ರಾ ಪಾತ್ರರಾದರೆ, ಚೇತೇಶ್ವರ್ ಪೂಜಾರ ಗರಿಷ್ಠ ರನ್ ಸಿಡಿಸಿ ಪ್ರಶಸ್ತಿ ಸ್ವೀಕರಿಸಿದ್ದಾರೆ.

ಬೆಸ್ಟ್ ಡೆಬ್ಯೂ ಆಟಗಾರ ಪ್ರಶಸ್ತಿ ಕನ್ನಡಿಗ ಮಯಾಂಕ್ ಅಗರ್ವಾಲ್ ಪಾಲಾಗಿದೆ. ಮಾಜಿ ಕ್ರಿಕೆಟಿಗ ಕೃಷ್ಣಮಾಚಾರಿ ಶ್ರೀಕಾಂತ್ ಹಾಗೂ ಮಹಿಳಾ ಆಟಗಾರ್ತಿ ಅಂಜುಮ್ ಚೋಪ್ರಾಗೆ ಸಿಕೆ ನಾಯ್ದು ಜೀವಮಾನ ಶ್ರೇಷ್ಠ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. 

ಇದನ್ನೂ ಓದಿ: ಟಿ20 ಮಹಿಳಾ ವಿಶ್ವಕಪ್ ಟೂರ್ನಿಗೆ ಭಾರತ ತಂಡ ಪ್ರಕಟ; ಕರ್ನಾಟಕದ ಇಬ್ಬರಿಗೆ ಸ್ಥಾನ!

2018-19ರ ಸಾಲಿನ ರಣಜಿ ಟೂರ್ನಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಶಿವಂ ದುಬೆ, ಅತ್ಯುತ್ತಮ ದೇಸಿ ಅಲ್ರೌಂಡರ್ ಪ್ರಶಸ್ತಿ ಪಡೆದರು. ನಿಗದಿತ ಓವರ್ ದೇಸಿ ಟೂರ್ನಿಗಳಲ್ಲಿ ನಿತೀಶ್ ರಾಣ ಅತ್ಯುತ್ತಮ ಆಲ್ರೌಂಡರ್ ಪ್ರಶಸ್ತಿ ಸ್ವೀಕರಿಸಿದರು.

ಕಳೆದ ಸಾಲಿನ ರಣಜಿ ಟೂರ್ನಿಯಲ್ಲಿ ಗರಿಷ್ಠ ರನ್ ಸಿಡಿಸಿದ ಪ್ರಶಸ್ತಿಗೆ ಮಿಲಿಂದ್ ಕುಮಾರ್ ಪಾತ್ರರಾಗಿದ್ದಾರೆ. ಗರಿಷ್ಠ ವಿಕೆಟ್ ಟೇಕರ್ ಪ್ರಶಸ್ತಿ ಅಶುತೋಶ್ ಅಮನ್ ಪಾಲಾಗಿದೆ. 

ಇದನ್ನೂ ಓದಿ: ಕ್ರಿಕೆಟಿಂದ ಧೋನಿ ದೂರ ಇರುವುದೇಕೆ: ಗವಾಸ್ಕರ್‌ ಪ್ರಶ್ನೆ

ಇದೇ ವೇಳೆ ಮಾಜಿ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್ 7ನೇ ಮನ್ಸೂರ್ ಆಲಿ ಖಾನ್ ಪಟೌಡ್ ಉಪನ್ಯಾಸ ನೀಡಿದರು. ಆಸ್ಟ್ರೇಲಿಯಾ ವಿರುದ್ಧದ ಸರಣಿಗೆ ಆಯ್ಕೆಯಾಗಿರುವ ಟೀಂ ಇಂಡಿಯಾ ಕ್ರಿಕೆಟಿಗರು, ರಣಜಿ ಕ್ರಿಕಿಟಗರು ಸೇರಿದಂತೆ ಹಲವು ಗಣ್ಯರು ಸಮಾರಂಭದಲ್ಲಿ ಪಾಲ್ಗೊಂಡಿದ್ದರು.

 

COL. C.K. NAYUDU LIFETIME ACHIEVEMENT AWARD pic.twitter.com/cWwnxpQjv2

— BCCI (@BCCI)

BCCI LIFE TIME ACHIEVEMENT AWARD FOR WOMEN

She is the first Indian to play 100 WODIs. pic.twitter.com/6OM45MkEt7

— BCCI (@BCCI)

BCCI SPECIAL AWARD pic.twitter.com/wz4SvQUC19

— BCCI (@BCCI)

POLLY UMRIGAR AWARD BEST INTERNATIONAL CRICKETER- MEN pic.twitter.com/Z05DDz1NGq

— BCCI (@BCCI)

BEST INTERNATIONAL CRICKETER - WOMEN pic.twitter.com/u2Kjll1N8r

— BCCI (@BCCI)

BEST INTERNATIONAL DEBUT - MEN pic.twitter.com/ujQLBGzMZ3

— BCCI (@BCCI)

BEST INTERNATIONAL DEBUT- WOMEN. pic.twitter.com/2T7A3GMGV5

— BCCI (@BCCI)

DILIP SARDESAI AWARD - HIGHEST RUN GETTER IN TEST CRICKET- 2018-19. pic.twitter.com/xIxlKYdyXL

— BCCI (@BCCI)

DILIP SARDESAI AWARD - HIGHEST WICKETS IN TEST CRICKET- 2018-19. pic.twitter.com/SBZEMmUT8o

— BCCI (@BCCI)

HIGHEST RUN GETTER IN ONE DAY INTERNATIONALS -2018-19- WOMEN pic.twitter.com/twm2IsB9NF

— BCCI (@BCCI)

HIGHEST WICKETS IN ONE DAY INTERNATIONALS - 2018-19 - WOMEN. pic.twitter.com/efw0RdecjV

— BCCI (@BCCI)

Mr. Virender Sehwag delivers the 7th MAK Pataudi Lecture at pic.twitter.com/M0yJBLZDmv

— BCCI (@BCCI)

BEST UMPIRE IN DOMESTIC CRICKET IN 2018-19. pic.twitter.com/Z3DqT8vhYK

— BCCI (@BCCI)

Vidarbha Cricket Association receives the BEST PERFORMANCE IN BCCI DOMESTIC TOURNAMENTS OF 2018-19 season award. pic.twitter.com/eOtWrd8p7m

— BCCI (@BCCI)

Shivam Dube receives the LALA AMARNATH AWARD FOR THE BEST ALL-ROUNDER IN THE RANJI TROPHY, 2018-19. pic.twitter.com/z0MeDZXkPw

— BCCI (@BCCI)

Nitish Rana receives the LALA AMARNATH AWARD FOR THE BEST ALL-ROUNDER IN DOMESTIC LIMITED-OVERS COMPETITIONS, 2018-19. pic.twitter.com/8leN6HSubS

— BCCI (@BCCI)
click me!