ಶ್ರೀಲಂಕಾ ಸರಣಿಗೆ ಭಾರತ ತಂಡ ಪ್ರಕಟ; ಬುಮ್ರಾ ವಾಪಾಸ್, ರೋಹಿತ್‌ಗೆ ರೆಸ್ಟ್!

By Suvarna News  |  First Published Dec 23, 2019, 7:27 PM IST

ಶ್ರೀಲಂಕಾ ವಿರುದ್ಧದ 3 ಪಂದ್ಯಗಳ ಟಿ20 ಸರಣಿಗೆ ಟೀಂ ಇಂಡಿಯಾ ಪ್ರಕಟಗೊಂಡಿದೆ. ತಂಡದಲ್ಲಿ ಮಹತ್ವದ ಬದಲಾವಣೆಗಳು ಆಗಿವೆ. ಇಂಜುರಿಯಿಂದ ಚೇತರಿಸಿಕೊಂಡಿರುವ ಕ್ರಿಕೆಟಿಗರು ತಂಡ ಸೇರಿಕೊಂಡಿದ್ದರೆ, ರೋಹಿತ್ ಶರ್ಮಾ ಟಿ20 ಸರಣಿಯಿಂದ ಹೊರಗುಳಿದಿದ್ದಾರೆ. ತಂಡದ ವಿವರ ಇಲ್ಲಿದೆ.


ಮುಂಬೈ(ಡಿ.23): ಹೊಸ ವರ್ಷದಲ್ಲಿ ಟೀಂ ಇಂಡಿಯಾ ಬಿಡುವಿಲ್ಲದ  ಸರಣಿ ಆಡಲಿದೆ. ಆರಂಭದಲ್ಲಿ ಶ್ರೀಲಂಕಾ ವಿರುದ್ಧ ಟಿ20 ಸರಣಿ ಆಡಿದರೆ, ಬಳಿಕ ಆಸ್ಟ್ರೇಲಿಯಾ ವಿರುದ್ದ ಏಕದಿನ ಸರಣಿ ಆಡಲಿದೆ. ಇದೀಗ ಈ ಎರಡೂ ಸರಣಿಗೆ ಟೀಂ ಇಂಡಿಯಾ ಪ್ರಕಟಗೊಂಡಿದೆ.  ಲಂಕಾ ವಿರುದ್ಧದ 3 ಪಂದ್ಯಗಳ ಸರಣಿಗೆ ಪ್ರಕಟಿಸಲಾಗಿರುವ ತಂಡದಲ್ಲಿ ಮಹತ್ವದ ಬದಲಾವಣೆಗಳಿವೆ.

ಇದನ್ನೂ ಓದಿ: ಭಾರತದಲ್ಲಿ ಭದ್ರತೆಯೇ ಇಲ್ಲ, ಪಾಕಿಸ್ತಾನ ಅತ್ಯಂತ ಸುರಕ್ಷಿತ ದೇಶ; ಪಿಸಿಬಿ ಮುಖ್ಯಸ್ಥ!

Tap to resize

Latest Videos

ಗಾಯಗೊಂಡು ತಂಡದಿದ ಹೊರಬಿದ್ದ ವೇಗಿ ಜಸ್ಪ್ರೀತ್ ಬುಮ್ರಾ ಹಾಗೂ ಶಿಖರ್ ಧವನ್ ತಂಡಕ್ಕೆ ಕಮ್‌ಬ್ಯಾಕ್ ಮಾಡಿದ್ದಾರೆ. ಟಿ20 ಸರಣಿಯಿಂದ ರೋಹಿತ್ ಶರ್ಮಾಗೆ ವಿಶ್ರಾಂತಿ ನೀಡಲಾಗಿದೆ. ಈ ಸರಣಿಗೂ ಹಿರಿಯ ಕ್ರಿಕೆಟಿಗ ಎಂ.ಎಸ್.ಧೋನಿಯನ್ನು ಪರಿಗಣಿಸಲಾಗಿಲ್ಲ. ಹೀಗಾಗಿ ರಿಷಬ್ ಪಂತ್  ಹಾಗೂ ಸಂಜು ಸಾಮ್ಸನ್‌ಗೆ ತಂಡದಲ್ಲಿ ಅವಕಾಶ ನೀಡಲಾಗಿದೆ.

ಇದನ್ನೂ ಓದಿ:  ಆಸ್ಟ್ರೇಲಿಯಾ ಸರಣಿಗೆ ಟೀಂ ಇಂಡಿಯಾ ಪ್ರಕಟ; ಕನ್ನಡಿಗ ಮಯಾಂಕ್ ಔಟ್!

ತಂಡದಲ್ಲಿ ಇಬ್ಬರು ಕನ್ನಡಿಗರು ಸ್ಥಾನ ಪಡೆದಿದ್ದಾರೆ. ಆರಂಭಿಕ ಕೆಎಲ್ ರಾಹುಲ್ ಹಾಗೂ ಮಧ್ಯಮ ಕ್ರಮಾಂಕ ಬ್ಯಾಟ್ಸ್‌ಮನ್ ಮನೀಶ್ ಪಾಂಡೆ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. 

ಲಂಕಾ ಸರಣಿಗೆ ಭಾರತ ತಂಡ:
ವಿರಾಟ್ ಕೊಹ್ಲಿ(ನಾಯಕ), ಶಿಖರ್ ಧವನ್, ಕೆಎಲ್ ರಾಹುಲ್, ಶ್ರೇಯಸ್ ಅಯ್ಯರ್, ರಿಷಬ್ ಪಂತ್, ರವೀಂದ್ರ ಜಡೇಜಾ, ಶಿವಂ ದುಬೆ, ಯಜುವೇಂದ್ರ ಚಹಾಲ್, ಕುಲ್ದೀಪ್ ಯಾದವ್, ಜಸ್ಪ್ರೀತ್ ಬುಮ್ರಾ, ನವದೀಪ್ ಸೈನಿ, ಶಾರ್ದೂಲ್ ಠಾಕೂರ್, ಮನೀಶ್ ಪಾಂಡೆ, ವಾಶಿಂಗ್ಟನ್ ಸುಂದರ್, ಸಂಜು ಸಾಮ್ಸನ್

ಭಾರತ-ಶ್ರೀಲಂಕಾ ಸರಣಿ
ಜ.5, 1ನೇ ಟಿ20 (ಗುವಹಾಟಿ)
ಜ.7, 2ನೇ ಟಿ20(ಇಂದೋರ್)
ಜ.10, 3ನೇ ಟಿ20(ಪುಣೆ)

click me!