ಟಿ20 ವಿಶ್ವಕಪ್ 2023 ಟೂರ್ನಿಗೆ ಭಾರತ ಮಹಿಳಾ ತಂಡ ಪ್ರಕಟ, ಕನ್ನಡತಿಗೆ ಸ್ಥಾನ!

By Suvarna NewsFirst Published Dec 28, 2022, 9:10 PM IST
Highlights

2023ರ ಟಿ20 ವಿಶ್ವಕಪ್ ಟೂರ್ನಿಗೆ ಬಿಸಿಸಿಐ ಭಾರತ ಮಹಿಳಾ ತಂಡ ಪ್ರಕಟಿಸಿದೆ. ಹರ್ಮನ್ ಪ್ರೀತ್ ಕೌರ್ ನಾಯಕತ್ವದ ಭಾರತ ಮಹಿಳಾ ತಂಡದಲ್ಲಿ ಒಂದು ಅಚ್ಚರಿಯ ಆಯ್ಕೆಯೂ ಇದೆ.

ಮುಂಬೈ(ಡಿ.28): ಹೊಸ ವರ್ಷ ಬರಮಾಡಿಕೊಳ್ಳಲು ವಿಶ್ವವೇ ಸಜ್ಜಾಗಿದೆ. ಹೊಸ ವರ್ಷದಲ್ಲಿ ಮಹತ್ವದ ಟಿ20 ವಿಶ್ವಕಪ್ ಟೂರ್ನಿಯೂ ನಡೆಯಲಿದೆ. ಇದಕ್ಕಾಗಿ ಬಿಸಿಸಿಐ ಬಲಿಷ್ಠ ಭಾರತ ಮಹಿಳಾ ತಂಡ ಪ್ರಕಟಿಸಿದೆ. ಹರ್ಮನ್ ಪ್ರೀತ್ ಕೌರ್ ನಾಯಕತ್ವದ ಭಾರತ ಮಹಿಳಾ ಟಿ20 ತಂಡ ಪ್ರಕಟಗೊಂಡಿದೆ. ಟಿ20 ವಿಶ್ವಕಪ್ ಟೂರ್ನಿಗೆ ಜೊತೆಗೆ  ತ್ರಿಕೋನ ಟಿ20 ಸರಣಿಗೂ ಭಾರತ ತಂಡ ಪ್ರಕಟಿಸಲಾಗಿದೆ. ಟಿ20 ವಿಶ್ವಕಪ್ ಟೂರ್ನಿಗೆ ಆಯ್ಕೆ ಮಾಡಿರುವ ತಂಡದಲ್ಲಿ ಕನ್ನಡತಿ ರಾಜೇಶ್ವರಿ ಗಾಯಕ್ವಾಡ್ ಸ್ಥಾನ ಪಡೆದಿದ್ದಾರೆ. 

2023ರ ಟಿ20 ವಿಶ್ವಕಪ್ ಟೂರ್ನಿಗೆ ಭಾರತ ಮಹಿಳಾ ತಂಡ ಪ್ರಕಟ:
ಹರ್ಮನ್ ಪ್ರೀತ್ ಕೌರ್(ನಾಯಕಿ), ಸ್ಮೃತಿ ಮಂದನಾ(ಉಪ ನಾಯಕಿ), ಶೆಫಾಲಿ ವರ್ಮಾ, ಯಾಸ್ತಿಕಾ ಭಾಟಿಯಾ, ರಿಚಾ ಘೋಷ್, ಜೇಮೆಯಾ ರೋಡ್ರಿಗೆಸ್, ಹರ್ಲೀನ್ ದಿಯೋಲ್, ದೀಪ್ತಿ ಶರ್ಮಾ, ದೇವಿಕಾ ವೈದ್ಯಾ, ರಾಧಾ ಯಾದವ್, ರೇಣುಕಾ ಠಾಕೂರ್, ಅಂಜಲಿ ಸರ್ವಾನಿ, ಪೂಜಾ ವಸ್ತ್ರಾರ್ಕರ್, ರಾಜೇಶ್ವರಿ ಗಾಯಕ್ವಾಡ್, ಶಿಖಾ ಪಾಂಡೆ

ಸ್ಮೃತಿ ಮಂಧನಾ ಸ್ಪೋಟಕ ಬ್ಯಾಟಿಂಗ್, ಇಂಗ್ಲೆಂಡ್ ಮಣಿಸಿ ಸರಣಿ ಸಮಬಲ ಮಾಡಿದ ಭಾರತ

2023ರ ಮಹಿಳಾ ಟಿ20 ವಿಶ್ವಕಪ್ ಟೂರ್ನಿ ಫೆಬ್ರವರಿ 10, 2023ರಿಂದ ಆರಂಭಗೊಳ್ಳುತ್ತಿದೆ. ಭಾರತ ಮಹಿಳಾ ತಂಡ ತನ್ನ ಮೊದಲ ಪಂದ್ಯದಲ್ಲೇ ಬದ್ಧವೈರಿ ಪಾಕಿಸ್ತಾನ ವಿರುದ್ದ ಹೋರಾಟ ನಡೆಸಲಿದೆ. ಫೆಬ್ರವರಿ 12ರಂದು ಭಾರತ ಹಾಗೂ ಪಾಕಿಸ್ತಾನ ಮುಖಾಮುಖಿಯಾಗುತ್ತಿದೆ. ಫೆಬ್ರವರಿ 15 ರಂದು ವೆಸ್ಟ್ ಇಂಡೀಸ್ ವಿರುದ್ಧ ಹೋರಾಟ ನಡೆಸಲಿದೆ. ಫೆಬ್ರವರಿ 18 ರಂದು ಇಂಗ್ಲೆಂಡ್ ವಿರುದ್ಧ ಹೋರಾಟ ನಡೆಸಲಿರುವ ಭಾರತ ಮಹಿಳಾ ತಂಡ, ಫೆಬ್ರವರಿ 20 ರಂದು ಐರ್ಲೆಂಡ್ ವಿರುದ್ಧ ಹೋರಾಟ ನಡೆಸಲಿದೆ.

ಜನವರಿ 19 ರಿಂದ ಭಾರತ, ಸೌತ್ ಆಫ್ರಿಕಾ ಹಾಗೂ ವೆಸ್ಟ್ ಇಂಡೀಸ್ ನಡುವಿನ ತ್ರಿಕೋನ ಟಿ20 ಸರಣಿ ಆರಂಭಗೊಳ್ಳಲಿದೆ. ಫೆಬ್ರವರಿ 2 ರಂದು ಫೈನಲ್ ಪಂದ್ಯ ಆಯೋಜಿಸಲಾಗಿದೆ. ಈ ಸರಣಿಗೂ ಭಾರತ ಮಹಿಳಾ ತಂಡ ಪ್ರಕಟಿಸಲಾಗಿದೆ.

 

ತ್ರಿಕೋನ ಟಿ20 ಸರಣಿಗೆ ಭಾರತ ಮಹಿಳಾ ತಂಡ ಪ್ರಕಟ:
ಹರ್ಮನ್‌ಪ್ರೀತ್ ಕೌರ್(ನಾಯಕಿ), ಸ್ಮೃತಿ ಮಂದನಾ(ಉಪ ನಾಯಕಿ), ಯಾಸ್ತಿಕಾ ಭಾಟಿಯಾ, ಜೇಮಿಯ ರೋಡ್ರಿಗೆಸ್, ಹರ್ಲೀನ್ ದಿಯೋಲ್, ದೀಪ್ತಿ ಶರ್ಮಾ, ದೇವಿಕಾ ವೈದ್ಯಾ, ರಾಜೇಶ್ವರಿ ಗಾಯಕ್ವಾಡ್, ರಾಧಾ ಯಾದವ್, ರೇಣುಕಾ ಠಾಕೂರ್, ಮೇಘನಾ ಸಿಂಗ್, ಅಂಜಲಿ ಸರ್ವಾನಿ, ಸುಶ್ಮಾ ವರ್ಮಾ, ಅಮನಜೋತ್ ಕೌರ್, ಪೂಜಾ ವಸ್ತ್ರಾರ್ಕರ್, ಶಬ್ಬನೇನಿ ಮೇಘನಾ, ಸ್ನೇಹ ರಾಣ, ಶಿಖಾ ಪಾಂಡೆ

Isa Guha double meaning comment: 'ನಿಮ್ಮದು ತೋರಿಸಿ' ಎಂದ ಇಂಗ್ಲೆಂಡ್ ಆಟಗಾರ್ತಿ..!

ಆಸೀಸ್‌ ವಿರುದ್ಧ 1-4ರಲ್ಲಿ ಸರಣಿ ಸೋತ ಭಾರತ!
ಆಸ್ಪ್ರೇಲಿಯಾ ವಿರುದ್ಧ 5ನೇ ಹಾಗೂ ಅಂತಿಮ ಟಿ20 ಪಂದ್ಯದಲ್ಲಿ ಭಾರತ ಮಹಿಳಾ ತಂಡ 54 ರನ್‌ ಸೋಲು ಅನುಭವಿಸಿ, ಸರಣಿಯನ್ನು 1-4ರಲ್ಲಿ ಪ್ರವಾಸಿ ತಂಡಕ್ಕೆ ಬಿಟ್ಟುಕೊಟ್ಟಿದೆ. ಸರಣಿಯುದ್ದಕ್ಕೂ ಉತ್ತಮ ಹೋರಾಟ ಪ್ರದರ್ಶಿಸಿದರೂ ಹರ್ಮನ್‌ಪ್ರೀತ್‌ ಪಡೆಗೆ ಒಂದಕ್ಕಿಂತ ಹೆಚ್ಚು ಪಂದ್ಯ ಗೆಲ್ಲಲು ಸಾಧ್ಯವಾಗಲಿಲ್ಲ. ಮಂಗಳವಾರದ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ ಆಸ್ಪ್ರೇಲಿಯಾ 67 ರನ್‌ಗೆ 4 ವಿಕೆಟ್‌ ಕಳೆದುಕೊಂಡರೂ, ಆಶ್ಲೆ ಗಾಡ್ರ್ನರ್‌(32 ಎಸೆತದಲ್ಲಿ 66) ಹಾಗೂ ಗ್ರೇಸ್‌ ಹ್ಯಾರಿಸ್‌(35 ಎಸೆತದಲ್ಲಿ 64)ರ ಸ್ಫೋಟಕ ಆಟದ ನೆರವಿನಿಂದ 20 ಓವರಲ್ಲಿ 4 ವಿಕೆಟ್‌ಗೆ 196 ರನ್‌ಗಳ ಬೃಹತ್‌ ಮೊತ್ತ ಪೇರಿಸಿತು.

ದೊಡ್ಡ ಗುರಿ ಬೆನ್ನತ್ತಿದ ಭಾರತ ಆರಂಭದಲ್ಲೇ ಸ್ಮೃತಿ ಮಂಧನಾ(04), ಶಫಾಲಿ ವರ್ಮಾ(13)ರ ವಿಕೆಟ್‌ ಕಳೆದುಕೊಂಡಿತು. 88 ರನ್‌ಗೆ 7 ವಿಕೆಟ್‌ ಕಳೆದುಕೊಂಡಿದ್ದ ತಂಡದ ಮಾನವನ್ನು ದೀಪ್ತಿ ಶರ್ಮಾ(34 ಎಸೆತದಲ್ಲಿ 53 ರನ್‌) ಅರ್ಧಶತಕ ಸಿಡಿಸಿ ಕಾಪಾಡಿದರು. ಭಾರತ 20 ಓವರಲ್ಲಿ 142 ರನ್‌ಗೆ ಆಲೌಟ್‌ ಆಯಿತು. 13ನೇ ಓವರ್‌ನ ಕೊನೆ 2 ಎಸೆತ, 20ನೇ ಓವರ್‌ನ ಮೊದಲ ಎಸೆತದಲ್ಲಿ ವಿಕೆಟ್‌ ಪಡೆದ ಹೀಥರ್‌ ಗ್ರಹಾಮ್‌ ಹ್ಯಾಟ್ರಿಕ್‌ ಪೂರೈಸಿದರು.

ಸ್ಕೋರ್‌: ಆಸ್ಪ್ರೇಲಿಯಾ 20 ಓವರಲ್ಲಿ 196/4(ಗಾಡ್ರ್ನರ್‌ 66*, ಹ್ಯಾರಿಸ್‌ 64*, ಶಫಾಲಿ 1-17), ಭಾರತ 20 ಓವರಲ್ಲಿ 142/10(ದೀಪ್ತಿ 53, ಹರ್ಲೀನ್‌ 24, ಹೀಥರ್‌ 4-8)
 

click me!