
ಬೆಂಗಳೂರು(ಜೂ.10): ಕ್ರಿಕೆಟ್‌ನಲ್ಲಿ ನಾವೆಲ್ಲರೂ ಹಲವು ಹಾಸ್ಯಮಯ ಸಂಗತಿಗಳನ್ನು ನೋಡಿರುತ್ತೇವೆ. ಸುಲಭ ಕ್ಯಾಚ್ ಕೈಚೆಲ್ಲುವುದು, ಒಂದೇ ಕಡೆ ಇಬ್ಬರು ಬ್ಯಾಟರ್‌ಗಳು ರನ್‌ಗಾಗಿ ಓಡುವುದು, ಡಿಕ್ಕಿ ಹೊಡೆದುಕೊಳ್ಳುವುದು ಹೀಗೆ ಹತ್ತು ಹಲವು ಸಂಗತಿಗಳನ್ನು ನೋಡಿರುತ್ತೇವೆ. ಆದರೆ ಕೀಪರ್‌ವೊಬ್ಬರು ಮಾಡಿದ ಒಂದು ಓವರ್ ಥ್ರೋನಿಂದಾಗಿ ಎದುರಾಳಿ ತಂಡದ ಬ್ಯಾಟರ್ ಮೂರು ರನ್ ಕದಿಯಲು ಸಾಧ್ಯವೇ ಹೇಳಿ..? ಮೇಲ್ನೋಟಕ್ಕೆ ಕಷ್ಟಸಾಧ್ಯವೇ ಸರಿ. ಆದರೆ ಯೂರೋಪಿಯನ್ ಕ್ರಿಕೆಟ್ ಲೀಗ್‌ನಲ್ಲಿ ಇಂತದ್ದೊಂದು ಅಚ್ಚರಿಯ ಕಾಮಿಡಿ ರನ್‌ಗೆ ಸಾಕ್ಷಿಯಾಗಿದೆ.
ರನೌಟ್ ಮಾಡುವ ಯತ್ನದಲ್ಲಿ ಓವರ್ ಥ್ರೋ ಮಾಡಿದ ಪರಿಣಾಮ ಎದುರಾಳಿ ತಂಡದ ಬ್ಯಾಟರ್‌ಗಳು ಚುರುಕಾಗಿ ಮೂರು ರನ್ ಕದಿಯುವಲ್ಲಿ ಯಶಸ್ವಿಯಾಗಿರುವ ವಿಡಿಯೋವೀಗ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿದೆ. ಚೆಂಡು ವಿಕೆಟ್ ಕೀಪರ್ ಬಳಿ ಹೋದರೆ ಒಂದು ರನ್ ಕದಿಯುವುದೇ ಕಷ್ಟ ಎನ್ನುವ ಸಮಯದಲ್ಲಿ ತಂಡವೊಂದರ ಆಟಗಾರರು ಒಂದಲ್ಲ ಎರಡಲ್ಲ ಬರೋಬ್ಬರಿ 3 ರನ್ ಕದ್ದಿರುವ ವಿಡಿಯೋವೀಗ ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡ್ ಆಗಲಾರಂಭಿಸಿದೆ.
ಹೌದು, ಇತ್ತೀಚೆಗಷ್ಟೇ ಜೆಕ್ ಗಣರಾಜ್ಯದಲ್ಲಿ ನಡೆದ ಯೂರೋಪಿಯನ್ ಲೀಗ್ ಸೀರಿಸ್‌ನಲ್ಲಿ ವಿನೋಹಾರ್ಡಿ ಸಿಸಿ ಹಾಗೂ ಪ್ರಗ್ಯೂ ಬಾರ್ಬೆನಿಯನ್ಸ್ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ವಿನೋಹಾರ್ಡಿ ಸಿಸಿ ತಂಡದ ಕ್ಷೇತ್ರರಕ್ಷಕರು ಮಾಡಿದ ಯಡವಟ್ಟಿನ ಲಾಭ ಪಡೆದ ಪ್ರಗ್ಯೂ ಬಾರ್ಬೆನಿಯನ್ಸ್ ತಂಡದ ಬ್ಯಾಟರ್‌ಗಳಾದ ಜಾಹನರ್ ಹಕ್ ಹಾಗೂ ಆಂಡ್ರ್ಯೂ ಸಿಮ್ಸ್ ಬರೋಬ್ಬರಿ 3 ರನ್ ಕದಿಯುವಲ್ಲಿ ಯಶಸ್ವಿಯಾಗಿದ್ದಾರೆ. ವಿನೋಹಾರ್ಡಿ ಸಿಸಿ ತಂಡದ ಆಟಗಾರರಿಗೆ ಮೂರು ಬಾರಿ ರನೌಟ್ ಮಾಡುವ ಅವಕಾಶವಿತ್ತಾದರೂ ಅದನ್ನು ಸದುಪಯೋಗ ಪಡಿಸಿಕೊಳ್ಳಲು ವಿಫಲರಾಗಿದ್ದಾರೆ. ಇದು ಕ್ರಿಕೆಟ್ ಜಗತ್ತಿನ ಅತ್ಯಂತ ಕಾಮಿಡಿ ಕ್ಷಣಗಳಲ್ಲಿ ಒಂದು ಎನಿಸಿಕೊಂಡಿದೆ.
ಈ ಕುರಿತಂತೆ ಯೂರೋಪಿಯನ್ ಕ್ರಿಕೆಟ್ ತನ್ನ ಅಧಿಕೃತ ಟ್ವಿಟರ್ ಖಾತೆಯಿಂದ ವಿಡಿಯೋವನ್ನು ಹಂಚಿಕೊಂಡಿದ್ದು, ಅವರು ಅಲ್ಲಿಯೇ ಇದ್ದೂ ಮೂರು ರನ್ ಕದಿಯುವಲ್ಲಿ ಯಶಸ್ವಿಯಾದರು ಎಂದು ಟ್ವೀಟ್ ಮಾಡಿದೆ. ಇನ್ನು ಈ ವಿಡಿಯೋವನ್ನು ಮತ್ತೆ ಮತ್ತೆ ನೋಡಿ ನಗುತ್ತಿರುವುದಾಗಿ ಆಸ್ಟ್ರೇಲಿಯಾ ಟೆಸ್ಟ್ ಕ್ರಿಕೆಟ್ ತಂಡದ ನಾಯಕ ಪ್ಯಾಟ್ ಕಮಿನ್ಸ್ ಟ್ವೀಟ್ ಮಾಡಿದ್ದಾರೆ
ಈ ಪಂದ್ಯದ ಕುರಿತಂತೆ ವೀಕ್ಷಕ ವಿವರಣೆ ನೀಡುತ್ತಿದ್ದ ಕಾಮೆಂಟೇಟರ್ಸ್ ಕೂಡಾ ಈ ಕಾಮಿಡಿ ರನ್ ಗಳಿಕೆ ನೋಡಿ ನಗು ತಡೆದುಕೊಳ್ಳಲು ಸಾಧ್ಯವಾಗಲಿಲ್ಲ. ಇನ್ನು ಅಂತಿಮವಾಗಿ ಪ್ರಗ್ಯೂ ಬಾರ್ಬೆನಿಯನ್ಸ್ ತಂಡವು 6 ರನ್‌ಗಳ ಅಂತರದ ಭರ್ಜರಿ ಗೆಲುವು ಸಾಧಿಸಿತು.
IPL ಪಂದ್ಯಗಳ ಸಂಖ್ಯೆ ಹೆಚ್ಚಳಕ್ಕೆ ಬಿಸಿಸಿಐ ಚಿಂತನೆ..!
ಅಚ್ಚರಿಯೆನ್ನುವಂತೆ ಈ ಪಂದ್ಯವನ್ನು ಕೇವಲ 3 ಓವರ್‌ಗಳಿಗೆ ಸೀಮಿತವಾಗಿತ್ತು. ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡಲಿಳಿದ ಪ್ರಗ್ಯೂ ಬಾರ್ಬೆನಿಯನ್ಸ್ ತಂಡವು 2 ವಿಕೆಟ್ ಕಳೆದುಕೊಂಡು 24 ರನ್ ಬಾರಿಸಿತ್ತು. ಪ್ರಗ್ಯೂ ಬಾರ್ಬೆನಿಯನ್ಸ್ ತಂಡ ಹಕ್ ಎನ್ನುವ ಬ್ಯಾಟರ್ 12 ರನ್ ಸಿಡಿಸಿದರು. ಇನ್ನು ಈ ಗುರಿ ಬೆನ್ನತ್ತಿದ ವಿನೋಹಾರ್ಡಿ ಸಿಸಿ ತಂಡವು ಕೇವಲ 18 ರನ್ ಗಳಿಸಲಷ್ಟೇ ಶಕ್ತವಾಯಿತು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.