ಭಾರತ ವಿರುದ್ಧದ 3 ಪಂದ್ಯಗಳ ಟಿ20 ಸರಣಿಗೆ ಬಾಂಗ್ಲಾದೇಶ ತಂಡವನ್ನು ಪ್ರಕಟಿಸಲಾಗಿದೆ. 15 ಆಟಗಾರರನ್ನೊಳಗೊಂಡ ತಂಡದಲ್ಲಿ ಯಾರೆಲ್ಲಾ ಸ್ಥಾನ ಪಡೆದಿದ್ದಾರೆ ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ...
ಢಾಕಾ[ಅ.17]: ಭಾರತ ವಿರುದ್ಧ ನವೆಂಬರ್ 03ರಿಂದ ಆರಂಭವಾಗಲಿರುವ ಮೂರು ಪಂದ್ಯಗಳ ಟಿ20 ಸರಣಿಗೆ 15 ಆಟಗಾರರನ್ನೊಳಗೊಂಡ ಬಾಂಗ್ಲಾದೇಶ ತಂಡವನ್ನು ಪ್ರಕಟಿಸಲಾಗಿದ್ದು, ಆಲ್ರೌಂಡರ್ ಶಕೀಬ್ ಅಲ್ ಹಸನ್ ತಂಡವನ್ನು ಮುನ್ನಡೆಸಲಿದ್ದಾರೆ.
ನವೆಂಬರ್‌ವರೆಗೆ ಧೋನಿಗೆ ವಿಶ್ರಾಂತಿ; ಬಾಂಗ್ಲಾ ಸರಣಿಗೂ ಅಲಭ್ಯ?
undefined
ಸಾಕಷ್ಟು ಅನುಭವಿ ಹಾಗೂ ಯುವ ಆಟಗಾರರನ್ನೊಳಗೊಂಡ ತಂಡವನ್ನು ಪ್ರಕಟಿಸಲಾಗಿದ್ದು, ತಮೀಮ್ ಇಕ್ಬಾಲ್, ಸೌಮ್ಯ ಸರ್ಕಾರ್, ಮೊಹಮ್ಮದುಲ್ಲಾ, ಮುಷ್ಫೀಕರ್ ರಹೀಮ್ ಸೇರಿದಂತೆ ಹಲವು ಅನುಭವಿಗಳು ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಇನ್ನು ತವರಿನಲ್ಲೇ ನಡೆದ ತ್ರಿಕೋನ ಸರಣಿಯಲ್ಲಿ ಪಾದದ ಗಾಯದ ಸಮಸ್ಯೆಯಿಂದಾಗಿ ಪಂದ್ಯಾವಳಿಯಿಂದ ದೂರ ಉಳಿದಿದ್ದ ಮುಷ್ತಾಫಿಜುರ್ ರೆಹಮಾನ್ ಇದೀಗ ತಂಡಕ್ಕೆ ಕಮ್’ಬ್ಯಾಕ್ ಮಾಡಿದ್ದಾರೆ. ಫಿಟ್ನೆಸ್ ಸಾಬೀತು ಮಾಡಿರುವುದರಿಂದ ಭಾರತ ಪ್ರವಾಸಕ್ಕೆ ಗ್ರೀನ್ ಸಿಗ್ನಲ್ ಸಿಕ್ಕಿದೆ.
ಪುಲ್ವಾಮ ಹುತಾತ್ಮರ ಮಕ್ಕಳಿಗೆ ಸೆಹ್ವಾಗ್ ಶಾಲೆಯಲ್ಲಿ ಉಚಿತ ಶಿಕ್ಷಣ
ಬಾಂಗ್ಲಾದೇಶವು ನವೆಂಬರ್ 03ರಿಂದ ಮೂರು ಪಂದ್ಯಗಳ ಟಿ20 ಸರಣಿ ಹಾಗೂ ಆ ಬಳಿಕ ಎರಡು ಪಂದ್ಯಗಳ ಟೆಸ್ಟ್ ಚಾಂಪಿಯನ್ ಆಡಲಿದೆ. ನವೆಂಬರ್ 03ರಂದು ಮೊದಲ ಪಂದ್ಯ ನವದೆಹಲಿಯ ಅರುಣ್ ಜೇಟ್ಲಿ ಮೈದಾನದಲ್ಲಿ ನಡೆದರೆ, ನವೆಂಬರ್ 07ರಂದು ನಡೆಯುವ ಎರಡನೇ ಪಂದ್ಯಕ್ಕೆ ರಾಜ್’ಕೋಟ್ ಆತಿಥ್ಯ ವಹಿಸಲಿದೆ. ಇನ್ನು ನವೆಂಬರ್ 10ರಂದು ನಾಗ್ಪುರದಲ್ಲಿ ಕೊನೆಯ ಟಿ20 ಪಂದ್ಯ ನಡೆಯಲಿದೆ.
ಈ ಅಪರೂಪದ ದಾಖಲೆ ಮಾಡ್ತಾರಾ ಕೊಹ್ಲಿ..?
ಭಾರತ-ಬಾಂಗ್ಲಾದೇಶ ನಡುವಿನ ಟೆಸ್ಟ್ ಚಾಂಪಿಯನ್’ಶಿಪ್ ಪಂದ್ಯಾವಳಿಗಳು ನವೆಂಬರ್ 14ರಿಂದ ಆರಂಭವಾಗಲಿದೆ. ಮೊದಲ ಟೆಸ್ಟ್ ಪಂದ್ಯಕ್ಕೆ ಇಂದೋರ್ ಆತಿಥ್ಯ ವಹಿಸಿದರೆ, ಎರಡನೇ ಟೆಸ್ಟ್ ಪಂದ್ಯಕ್ಕೆ ಕೋಲ್ಕತಾದ ಈಡನ್ ಗಾರ್ಡನ್ ಮೈದಾನ ಸಾಕ್ಷಿಯಾಗಲಿದೆ.
ಟಿ20 ಸರಣಿಗೆ ಬಾಂಗ್ಲಾದೇಶ ತಂಡ ಹೀಗಿದೆ:
Bangladesh squad for India T20Is: Shakib Al Hasan (c), Tamim Iqbal, Litton Das, Soumya Sarkar, Naim Sheikh, Mushfiqur Rahim, Mahmudullah, Afif Hossain, Mosaddek Hossain, Aminul Islam, Arafat Sunny, Mohammad Saifuddin, Al-Amin Hossain, Mustafizur Rahman, Shafiul Islam
— Cricbuzz (@cricbuzz)