ಕ್ರಿಕೆಟಿಗರ ಆರೋಗ್ಯಕ್ಕಾಗಿ ಬಾಂಗ್ಲಾ ಹೊಸ ಆ್ಯಪ್‌!

By Kannadaprabha NewsFirst Published Jun 26, 2020, 4:51 PM IST
Highlights

ಆಟಗಾರರ ಆರೋಗ್ಯದ ಪರಿಸ್ಥಿತಿ ಮೇಲೆ ಹದ್ದಿನ ಕಣ್ಣಿಡಲು ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ ಹೊಸ ಆ್ಯಪ್ ಪರಿಚಯಿಸಿದೆ. ಈ ಹೊಸ ಆ್ಯಪ್ ಹೇಗೆ ಕಾರ್ಯ ನಿರ್ವಹಿಸಲಿದೆ ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.

ಢಾಕಾ(ಜೂ.26): ಕೊರೋನಾದಂತಹ ಸಂದರ್ಭದಲ್ಲಿ ತಂಡದ ಆಟಗಾರರ ಆರೋಗ್ಯ, ಮಾನಸಿಕ ಸಾಮರ್ಥ್ಯ ಹಾಗೂ ಕೊರೋನಾ ರೋಗ ಲಕ್ಷಣಗಳನ್ನು ಕಂಡುಹಿಡಿಯುವ ಸಲುವಾಗಿ ಬಾಂಗ್ಲಾದೇಶ ಕ್ರಿಕೆಟ್‌ ಮಂಡಳಿ (ಬಿಸಿಬಿ) ಕೊರೋನಾ ಆ್ಯಪ್‌ ಒಂದನ್ನು ಪರಿಚಯಿಸಿದೆ. 

ಆಟಗಾರರ ಆರೋಗ್ಯದ ಪರಿಸ್ಥಿತಿ ಹೇಗಿದೆ. ದೇಹದ ಯಾವ ಭಾಗದಲ್ಲಿ ನೋವಿದೆ. ಎಲ್ಲಿ ತೊಂದರೆ ಕಾಣಿಸಿಕೊಂಡಿದೆ ಎನ್ನುವುದನ್ನು ಆಟಗಾರರು ಆ್ಯಪ್‌ನಲ್ಲಿ ನಮೂದಿಸಬೇಕಿದೆ. ಈ ಆ್ಯಪ್‌ ನೀಡುವ ಮೌಲ್ಯ ಮಾಪನದ ಆಧಾರದಲ್ಲಿ ಆಟಗಾರರನ್ನು ಕೆಂಪು, ಕಿತ್ತಳೆ ಮತ್ತು ಹಸಿರು ಭಾಗಗಳಾಗಿ ವಿಂಗಡಿಸಿ ತರಬೇತಿ ನೀಡಲಾಗುವುದು ಎಂದು ಬಿಸಿಬಿಯ ಮಾಹಿತಿ ನಿರ್ವಹಣಾ ವ್ಯವಸ್ಥಾಪಕ ನಾಸೀರ್‌ ಅಹಮದ್‌ ಹೇಳಿದ್ದಾರೆ.

ಬಾಂಗ್ಲಾ- ಲಂಕಾ ಕ್ರಿಕೆಟ್‌ ಸರಣಿ ಮುಂದೂಡಿಕೆ

ದುಬೈ: ಬಾಂಗ್ಲಾದೇಶ ತಂಡ ಮುಂದಿನ ತಿಂಗಳು ಕೈಗೊಳ್ಳಬೇಕಿದ್ದ ಶ್ರೀಲಂಕಾ ಪ್ರವಾಸ ಕೊರೋನಾ ಹಿನ್ನೆಲೆಯಲ್ಲಿ ಮುಂದೂಡಿಕೆಯಾಗಿದೆ. 3 ಪಂದ್ಯಗಳ ಟೆಸ್ಟ್‌ ಸರಣಿಯನ್ನಾಡಲು ಬಾಂಗ್ಲಾದೇಶ ತಂಡ ಲಂಕಾಕ್ಕೆ ತೆರಳಬೇಕಿತ್ತು. 

ಟೀಂ ಇಂಡಿಯಾ ಮಾಜಿ ಸ್ಟಾರ್ ಆಲ್ರೌಂಡರ್ ಕಾರು ಸೀಜ್..!

ಅಂ.ರಾ. ಕ್ರಿಕೆಟ್‌ ಸರಣಿಯನ್ನಾಡಲು ಬಾಂಗ್ಲಾ ತಂಡ, ಲಂಕಾಕ್ಕೆ ಬರುವುದಿಲ್ಲ ಎಂದು ಲಂಕಾ ಕ್ರಿಕೆಟ್‌ ಮಂಡಳಿಗೆ ಬಾಂಗ್ಲಾ ತಿಳಿಸಿದೆ. ಬಾಂಗ್ಲಾದ ಮೂವರು ಆಟಗಾರರಲ್ಲಿ ಇತ್ತೀಚೆಗಷ್ಟೇ ಸೋಂಕು ಕಾಣಿಸಿಕೊಂಡಿತ್ತು. ಕ್ರಿಕೆಟ್‌ ವಲಯದಲ್ಲಿ ಸೋಂಕು ಪ್ರಕರಣಗಳು ಹೆಚ್ಚಾದ ಬೆನ್ನಲ್ಲೇ ಬಾಂಗ್ಲಾ ಎಲ್ಲಾ ಪ್ರವಾಸಗಳನ್ನು ಮುಂದೂಡುತ್ತಿದೆ ಎನ್ನಲಾಗಿದೆ
 

click me!