Australia vs Pakistan: 2 ದಿನ ಹೋರಾಡಿ ಆಸೀಸ್ ಎದುರು ಡ್ರಾ ಸಾಧಿಸಿದ ಪಾಕಿಸ್ತಾನ

Suvarna News   | Asianet News
Published : Mar 17, 2022, 08:16 AM IST
Australia vs Pakistan: 2 ದಿನ ಹೋರಾಡಿ ಆಸೀಸ್ ಎದುರು ಡ್ರಾ ಸಾಧಿಸಿದ ಪಾಕಿಸ್ತಾನ

ಸಾರಾಂಶ

* ಆಸ್ಟ್ರೇಲಿಯಾ-ಪಾಕಿಸ್ತಾನ ತಂಡಗಳ ನಡುವಿನ ಕರಾಚಿ ಟೆಸ್ಟ್ ರೋಚಕ ಡ್ರಾನಲ್ಲಿ ಅಂತ್ಯ * ರಾವುಲ್ಪಿಂಡಿಯಲ್ಲಿ ನಡೆದ ಮೊದಲ ಟೆಸ್ಟ್ ನೀರಸ ಡ್ರಾನಲ್ಲಿ ಅಂತ್ಯವಾಗಿತ್ತು. * 4ನೇ ಇನಿಂಗ್ಸ್‌ನಲ್ಲಿ ಶತಕ ಬಾರಿಸಿ ಕರಾಚಿ ಟೆಸ್ಟ್ ಡ್ರಾ ಸಾಧಿಸಲು ನೆರವಾದ ಬಾಬರ್ ಅಜಂ, ಮೊಹಮ್ಮದ್ ರಿಜ್ವಾನ್

ಕರಾಚಿ(ಮಾ.17: ನಾಯಕ ಬಾಬರ್‌ ಆಜಂ(Babar Azam), ವಿಕೆಟ್‌ ಕೀಪರ್‌ ಮೊಹಮದ್‌ ರಿಜ್ವಾನ್‌ರ (Mohammad Rizwan) ಅಮೋಘ ಶತಕಗಳ ನೆರವಿನಿಂದ ಆಸ್ಪ್ರೇಲಿಯಾ ವಿರುದ್ಧದ 2ನೇ ಟೆಸ್ಟ್‌ನಲ್ಲಿ ಕೊನೆ 2 ದಿನ ಹೋರಾಟ ನಡೆಸಿದ ಪಾಕಿಸ್ತಾನ, ಪಂದ್ಯವನ್ನು ರೋಚಕವಾಗಿ ಡ್ರಾ ಮಾಡಿಕೊಂಡಿದೆ. ಗೆಲುವಿಗೆ ಬರೋಬ್ಬರಿ 506 ರನ್‌ಗಳ ಕಠಿಣ ಗುರಿ ಪಡೆದಿದ್ದ ಪಾಕ್‌, 7 ವಿಕೆಟ್‌ ನಷ್ಟಕ್ಕೆ 443 ರನ್‌ ಕಲೆ ಹಾಕಿತು. ಬಾಬರ್‌ 196 ರನ್‌ ಗಳಿಸಿ ಔಟಾದರೆ, ರಿಜ್ವಾನ್‌ ಔಟಾಗದೆ 104 ರನ್‌ ಗಳಿಸಿ ತಂಡವನ್ನು ಸೋಲಿನಿಂದ ಪಾರು ಮಾಡಿದರು. ಅಬ್ದುಲ್ಲಾ ಶಫೀಕ್‌ 96 ರನ್‌ ಕೊಡುಗೆ ನೀಡಿದರು.

4ನೇ ದಿನದಂತ್ಯಕ್ಕೆ 2 ವಿಕೆಟ್‌ಗೆ 192 ರನ್‌ ಗಳಿಸಿದ್ದ ತಂಡ ಕೊನೆ ದಿನವೂ ಆಸೀಸ್‌ ಬೌಲರ್‌ಗಳನ್ನು ಇನ್ನಿಲ್ಲದಂತೆ ಕಾಡಿದರು. ಬಂಡೆಯಂತೆ ಕ್ರೀಸ್‌ನಲ್ಲಿ ನೆಲೆಯೂರಿದ ಆಜಂ-ಶಫೀಕ್‌ 3ನೇ ವಿಕೆಟ್‌ 228 ರನ್‌ ಜೊಯತೆಯಾಟವಾಡಿದರು. ಆಜಂ ತಮ್ಮ ಇನ್ನಿಂಗ್ಸಲ್ಲಿ 425 ಎಸೆತಗಳನ್ನು ಎದುರಿಸಿದರು. ಪಾಕಿಸ್ತಾನ ಪಂದ್ಯದ 4ನೇ ಇನ್ನಿಂಗ್ಸಲ್ಲಿ 171.4 ಓವರ್‌ ಬ್ಯಾಟ್‌ ಮಾಡಿದ್ದು ವಿಶೇಷ. ಕೊನೆ 10 ಓವರ್‌ ಬಾಕಿ ಇದ್ದಾಗ ಸೋಲಿನತ್ತ ಮುಖ ಮಾಡಿದ್ದ ಪಾಕಿಸ್ತಾನಕ್ಕೆ ರಿಜ್ವಾನ್‌ ಆಸರೆಯಾದರು. 169ನೇ ಓವರಲ್ಲಿ ಖವಾಜ ಕ್ಯಾಚ್‌ ಬಿಟ್ಟಿದ್ದು ಪಾಕಿಸ್ತಾನಕ್ಕೆ ವರದಾನವಾಯಿತು. ಸರಣಿಯ 3ನೇ ಹಾಗೂ ಅಂತಿಮ ಪಂದ್ಯ ಮಾರ್ಚ್‌ 21ರಿಂದ ಆರಂಭಗೊಳ್ಳಲಿದೆ.

ಹೀಗಿತ್ತು ನೋಡಿ ಕರಾಚಿ ಟೆಸ್ಟ್‌: ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಆಸ್ಟ್ರೇಲಿಯಾ ತಂಡವು ಉಸ್ಮಾನ್ ಖವಾಜ(160) ಬಾರಿಸಿದ ಆಕರ್ಷಕ ಶತಕ ಹಾಗೂ ಸ್ಟೀವ್ ಸ್ಮಿತ್, ಅಲೆಕ್ಸ್ ಕ್ಯಾರಿ ಬಾರಿಸಿದ ಸಮಯೋಚಿತ ಅರ್ಧಶತಕದ ನೆರವಿನಿಂದ ಆಸ್ಟ್ರೇಲಿಯಾ ತಂಡವು 9 ವಿಕೆಟ್‌ ಕಳೆದುಕೊಂಡು 556 ರನ್ ಬಾರಿಸಿ ಮೊದಲ ಇನಿಂಗ್ಸ್‌ ಡಿಕ್ಲೇರ್ ಮಾಡಿಕೊಂಡಿತು. ಇನ್ನು ಆತಿಥೇಯ ಪಾಕಿಸ್ತಾನ ತಂಡವು ಮಿಚೆಲ್ ಸ್ಟಾರ್ಕ್ ಹಾಗೂ ಸ್ವೆಪ್ಸನ್‌ ಮಾರಕ ದಾಳಿಗೆ ತತ್ತರಿಸಿ ಕೇವಲ 148 ರನ್‌ಗಳಿಗೆ ಆಲೌಟ್ ಆಯಿತು. ಆಸ್ಟ್ರೇಲಿಯಾ ತಂಡಕ್ಕೆ ಪಾಕಿಸ್ತಾನ ಎದುರು ಫಾಲೋ ಆನ್ ಹೇರುವ ಅವಕಾಶವಿದ್ದರೂ ಸಹಾ ಹಾಗೆ ಮಾಡದೇ ಎರಡನೇ ಇನಿಂಗ್ಸ್‌ ಆರಂಭಿಸಿ ಕೇವಲ 2 ವಿಕೆಟ್ ಕಳೆದುಕೊಂಡು 97 ರನ್‌ ಬಾರಿಸಿ ಇನಿಂಗ್ಸ್‌ ಡಿಕ್ಲೇರ್ ಮಾಡಿಕೊಳ್ಳುವ ಮೂಲಕ ಕರಾಚಿ ಟೆಸ್ಟ್ ಪಂದ್ಯವನ್ನು ಗೆಲ್ಲಲು  506 ರನ್‌ಗಳ ಕಠಿಣ ಗುರಿ ನೀಡಿತ್ತು. 

Australia vs Pakistan ರೋಚಕ ಘಟ್ಟ ತಲುಪಿದ ಪಾಕಿಸ್ತಾನ-ಆಸೀಸ್‌ ಟೆಸ್ಟ್‌..!

ಸ್ಕೋರ್‌: 
ಆಸ್ಪ್ರೇಲಿಯಾ 559/9 ಮತ್ತು 97/2 ಡಿ., 
ಪಾಕಿಸ್ತಾನ 148/10 ಮತ್ತು 443/7
(ಆಜಂ 196, ರಿಜ್ವಾನ್‌ 104*, ಲಯನ್‌ 4-112)

ರಣಜಿ ಕ್ವಾರ್ಟರ್‌ಗೆ ಜಾರ್ಖಂಡ್‌ ಲಗ್ಗೆ

ಕೋಲ್ಕತಾ: ರಣಜಿ ಟ್ರೋಫಿ (Ranji Trophy) ಕ್ರಿಕೆಟ್‌ ಟೂರ್ನಿಯ ಕ್ವಾರ್ಟರ್‌ ಫೈನಲ್‌ಗೆ ಜಾರ್ಖಂಡ್‌ ಪ್ರವೇಶಿಸಿದೆ. ನಾಗಾಲ್ಯಾಂಡ್‌ ವಿರುದ್ಧದ ಪ್ರಿ ಕ್ವಾರ್ಟರ್‌ ಫೈನಲ್‌ ಡ್ರಾಗೊಂಡರೂ, ಮೊದಲ ಇನ್ನಿಂಗ್ಸ್‌ ಮುನ್ನಡೆ ಆಧಾರದಲ್ಲಿ ತಂಡ ಬಡ್ತಿ ಪಡೆದಿದೆ. ಪಂದ್ಯದಲ್ಲಿ ರನ್‌ ಹೊಳೆ ಹರಿಸಿದ ಜಾರ್ಖಂಡ್‌, ಮೊದಲ ಇನ್ನಿಂಗ್ಸಲ್ಲಿ 880 ರನ್‌ ಗಳಿಸಿದ ಬಳಿಕ 591 ರನ್‌ ಮುನ್ನಡೆ ಪಡೆದಿದ್ದ ಜಾರ್ಖಂಡ್‌, ಫಾಲೋ ಆನ್‌ ಹೇರದೆ 2ನೇ ಇನ್ನಿಂಗ್ಸ್‌ ಆರಂಭಿಸಿ 6 ವಿಕೆಟ್‌ಗೆ 417 ರನ್‌ ಕಲೆಹಾಕಿತು. ಒಟ್ಟು 1008 ರನ್‌ ಮುನ್ನಡೆ ಗಳಿಸಿತು. ಪಂದ್ಯ ಬರೋಬ್ಬರಿ 397 ಓವರ್‌ ಆಟಕ್ಕೆ ಸಾಕ್ಷಿಯಾಯಿತು. ನಾಗಾಲ್ಯಾಂಡ್‌ ಮೊದಲ ಇನ್ನಿಂಗ್ಸಲ್ಲಿ 289 ರನ್‌ಗೆ ಆಲೌಟ್‌ ಆಗಿತ್ತು.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ದೇಶದ ಅಗ್ರ ಟಿ20 ಟೂರ್ನಿಯಲ್ಲೇ ಮ್ಯಾಚ್‌ ಫಿಕ್ಸಿಂಗ್‌, ನಾಲ್ವರು ಕ್ರಿಕೆಟಿಗರ ಸಸ್ಪೆಂಡ್‌ ಮಾಡಿ ತನಿಖೆಗೆ ಆದೇಶಿಸಿದ ಬಿಸಿಸಿಐ!
ಹೃತಿಕ್‌ ರೋಶನ್‌ 'ಕ್ರಿಶ್‌' ಸಿನಿಮಾದಲ್ಲಿ ಬಾಲನಟಿಯಾಗಿದ್ರಾ ಧೋನಿ ಪತ್ನಿ ಸಾಕ್ಷಿ?