
ಮೆಲ್ಬರ್ನ್(ಆ.18): ಆಸ್ಪ್ರೇಲಿಯಾದ ಮಹಿಳಾ ಕ್ರಿಕೆಟ್ ಆಟಗಾರ್ತಿಯರಾದ ಲೌರಾ ಹ್ಯಾರಿಸ್ ಹಾಗೂ ಡೆಲಿಸ್ಸಾ ಕಿಮಿನ್ಸ್ ಅವರು ಸಲಿಂಗ ಮದುವೆಯಾಗಿದ್ದಾರೆ. ಕಳೆದ 4 ವರ್ಷದಿಂದ ಈ ಇಬ್ಬರೂ ಆಟಗಾರ್ತಿಯರು ಪರಸ್ಪರ ಡೇಟಿಂಗ್ ನಡೆಸಿದ್ದರು.
ಭಾನುವಾರ ಕ್ರಿಶ್ಚಿಯನ್ ಸಂಪ್ರದಾಯದಂತೆ ಮದುವೆಯಾಗಿದ್ದು, ಜಾಲತಾಣಗಳಲ್ಲಿ ವಿಷಯ ಬಹಿರಂಗಪಡಿಸಿದ್ದಾರೆ. ಈ ಜೋಡಿ ಬ್ರಿಸ್ಬೇಟ್ ಹೀಟ್ ತಂಡವನ್ನು ಪ್ರತಿನಿಧಿಸುತ್ತಾರೆ. ಈ ಆಟಗಾರ್ತಿಯರ ಅಮೋಘ ಪ್ರದರ್ಶನದ ನೆರವಿನಿಂದ ಮಹಿಳಾ ಬಿಗ್ ಬ್ಯಾಷ್ ಲೀಗ್‌ನಲ್ಲಿ ಬ್ರಿಸ್ಬೇನ್ ಹೀಟ್ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿತ್ತು.
ಡೆಲಿಸ್ಸಾ ಕಿಮಿನ್ಸ್ ಅನುಭವಿ ಆಟಗಾರ್ತಿಯಾಗಿದ್ದು, ಆಸ್ಟ್ರೇಲಿಯಾ ಪರ 16 ಏಕದಿನ ಹಾಗೂ 41 ಟಿ20 ಪಂದ್ಯಗಳನ್ನಾಡಿದ್ದಾರೆ. ಈ ವರ್ಷ ಮಾರ್ಚ್ 08ರಲ್ಲಿ ಮಾರ್ಚ್‌ನಲ್ಲಿ ಮೆಲ್ಬೊರ್ನ್ ಕ್ರಿಕೆಟ್ ಮೈದಾನದಲ್ಲಿ ನಡೆದ ಐಸಿಸಿ ಮಹಿಳಾ ಟಿ20 ವಿಶ್ವಕಪ್‌ನಲ್ಲಿ ಭಾರತ ವನಿತೆಯರ ತಂಡವನ್ನು ಮಣಿಸಿ ಆಸ್ಟ್ರೇಲಿಯಾ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಡೆಲಿಸ್ಸಾ ಕಿಮಿನ್ಸ್ ಈ ಚಾಂಪಿಯನ್ ತಂಡದ ಸದಸ್ಯೆಯಾಗಿದ್ದಾರೆ. ಇನ್ನು 29 ವರ್ಷದ ಲೌರಾ ಹ್ಯಾರಿಸ್ ಇನ್ನು ರಾಷ್ಟ್ರೀಯ ತಂಡಕ್ಕೆ ಪಾದಾರ್ಪಣೆ ಮಾಡಿಲ್ಲ, ಆದರೆ ದೇಸಿ ಕ್ರಿಕೆಟ್ ಹಾಗೂ ಬಿಗ್ ಬ್ಯಾಷ್ ಲೀಗ್‌ನಲ್ಲಿ ಸಕ್ರಿಯ ಆಟಗಾರ್ತಿಯಾಗಿದ್ದಾರೆ.
ಕ್ರಿಕೆಟ್ ಪಂದ್ಯ ವೀಕ್ಷಣೆ ನಿಲ್ಲಿಸಲು ನಿರ್ಧರಿಸಿದ ಧೋನಿಯ ಪಾಕಿಸ್ತಾನ ಅಭಿಮಾನಿ ಚಾಚಾ!
ಈ ಹಿಂದೆ 2017ರಲ್ಲಿ ನ್ಯೂಜಿಲೆಂಡ್ ಆಟಗಾರ್ತಿ ಲೀ ತಹುಹು- ಆ್ಯಮಿ ಸಟ್ಟತ್‌ರ್‍ವೇಟ್, 2018ರಲ್ಲಿ ದ.ಆಫ್ರಿಕಾದ ಡೇನ್ ವಾನ್ ನಿಕೆರ್ಕ್- ಮರಿಜನ್ನೆ ಕಾಪ್, ಆಸ್ಪ್ರೇಲಿಯಾದ ಮಹಿಳಾ ಆಟಗಾರ್ತಿಯರಾದ ಅಲೆಕ್ಸ್ ಬ್ಲಾಕ್‌ವೆಲ್ ಮತ್ತು ಲಿನ್ಸೆ ಆಸ್ಕಿವ್, ಮೆಗನ್ ಸ್ಚಾಟ್ ಮತ್ತು ಜೆಸ್ ಹೊಲ್ಯೊಕೆ, ಜೆಸ್ ಜಾನ್ಸನ್ ಮತ್ತು ಸರಾ ವೆರ್ನ್ ಸಲಿಂಗ ಮದುವೆಯಾಗಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.