ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಗೂ ಮುನ್ನವೇ ಟೀಂ ಇಂಡಿಯಾಗೆ ವಾರ್ನಿಂಗ್ ಕೊಟ್ಟ ನೇಥನ್ ಲಯನ್..!

By Naveen Kodase  |  First Published Aug 19, 2024, 11:27 AM IST

ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಬಾರ್ಡರ್-ಗವಾಸ್ಲರ್ ಟೆಸ್ಟ್ ಸರಣಿ ಆರಂಭಕ್ಕೂ ಮುನ್ನ ಆಸೀಸ್‌ ಅನುಭವಿ ಸ್ಪಿನ್ನರ್ ನೇಥನ್ ಲಯನ್ ಎಚ್ಚರಿಕೆ ಕೊಟ್ಟಿದ್ದಾರೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ


ಸಿಡ್ನಿ: ಭಾರತ ವಿರುದ್ಧದ 5 ಪಂದ್ಯಗಳ ಟೆಸ್ಟ್ ಸರಣಿಗೂ ಇನ್ನೂ 3 ತಿಂಗಳು ಬಾಕಿ ಇರುವಾಗಲೇ ಆಸ್ಟ್ರೇಲಿಯಾ ಆಟಗಾರರು ಮೈಂಡ್‌ಗೇಮ್ ಆರಂಭಿಸಿದ್ದಾರೆ. ತಮ್ಮ ಹೇಳಿಕೆಗಳ ಮೂಲಕ ಭಾರತದ ಆಟಗಾರರ ಗಮನ ಸೆಳೆಯುವ ಪ್ರಯತ್ನ ಶುರು ಮಾಡಿದ್ದಾರೆ.

ಈ ಬಗ್ಗೆ ಮಾತನಾಡಿರುವ ಸ್ಪಿನ್ನರ್‌ ನೇಥನ್ ಲಯನ್, 'ಈ ಹಿಂದೆ ಇದ್ದ ಆಸೀಸ್ ತಂಡವಲ್ಲ ಈಗ ಇರುವುದು. ಆದರೆ 10 ವರ್ಷಗಳಿಂದ ಭಾರತ ವಿರುದ್ಧ ಸರಣಿ ಗೆಲುವಿನ ಗುರಿ ಈಡೇರಿಲ್ಲ. ಹೀಗಾಗಿ ಈ ಬಾರಿಯ ಸರಣಿ ಗೆಲುವಿಗೆ ಮನ ತುಡಿಯುತ್ತಿದೆ. ಭಾರತದ 'ಬಿ' ತಂಡ ಅವರ ಶ್ರೇಷ್ಠ ತಂಡಕ್ಕಿಂತ ಬಲಿಷ್ಠವಾಗಿರುತ್ತದೆ' ಎಂದಿದ್ದಾರೆ.

Tap to resize

Latest Videos

2014-15ರ ಬಾರ್ಡರ್‌-ಗವಾಸ್ಕರ್ ಸರಣಿಯ ಬಳಿಕ ಆಸ್ಟ್ರೇಲಿಯಾ ತಂಡವು ಈ ಟ್ರೋಫಿ ಎತ್ತಿ ಹಿಡಿಯಲು ಸಾಧ್ಯವಾಗಿಲ್ಲ. 2014-15ರ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯಲ್ಲಿ ಆಸ್ಟ್ರೇಲಿಯಾ ತಂಡವು 2-0 ಅಂತರದಲ್ಲಿ ಟೆಸ್ಟ್ ಸರಣಿ ಜಯಿಸಿತ್ತು. ಇದಾದ ಬಳಿಕ ಕಳೆದ ಎರಡು ಸೀಸನ್‌ಗಳಲ್ಲಿ ಆಸ್ಟ್ರೇಲಿಯಾ ತಂಡವು ತವರಿನಲ್ಲಿಯೇ ಬಾರ್ಡರ್-ಗವಾಸ್ಕರ್ ಸರಣಿ ಸೋತು ಮುಖಭಂಗ ಅನುಭವಿಸಿದೆ. 

ವಿಂಡೀಸ್ ವಿರುದ್ಧ ಸತತ 10 ಟೆಸ್ಟ್‌ ಸರಣಿ ಜಯಿಸಿ ದ.ಆಫ್ರಿಕಾ ವಿಶ್ವದಾಖಲೆ!

ಪ್ರಾವಿಡೆನ್ಸ್ (ಗಯಾನ) : ವೆಸ್ಟ್ ಇಂಡೀಸ್ ವಿರುದ್ಧದ 2ನೇ ಟೆಸ್ಟ್‌ನಲ್ಲಿ 40 ರನ್ ಗೆಲುವು ಸಾಧಿಸಿದ ದಕ್ಷಿಣ ಆಫ್ರಿಕಾ, 2 ಪಂದ್ಯಗಳ ಸರಣಿಯನ್ನು 1-0ಯಲ್ಲಿ ವಶಪಡಿಸಿಕೊಂಡಿತು. ಇದರೊಂದಿಗೆ ವಿಂಡೀಸ್ ವಿರುದ್ಧ ಸತತ 10ನೇ ಟೆಸ್ಟ್ ಸರಣಿ ಗೆದ್ದು ವಿಶ್ವ ದಾಖಲೆ ನಿರ್ಮಿಸಿತು. ಒಂದು ತಂಡದ ವಿರುದ್ಧ ಸತತವಾಗಿ ಅತಿ ಹೆಚ್ಚು ಟೆಸ್ಟ್ ಸರಣಿ ಗೆದ್ದ ತಂಡ ಎನ್ನುವ ದಾಖಲೆ ಬರೆಯಿತು. 

ವಿನೇಶ್‌ ಫೋಗಟ್‌ಗೆ ತವರಲ್ಲಿ ಸಿಕ್ತು ಚಿನ್ನದ ಪದಕ..! ಈ ಪ್ರೀತಿ 1000 ಚಿನ್ನದ ಪದಕಕ್ಕೂ ಮಿಗಿಲು ಎಂದ ಕುಸ್ತಿಪಟು

ವಿಂಡೀಸ್ ವಿರುದ್ಧ 1998ರಿಂದ 2024ರ ವರೆಗೂ ದ.ಆಫ್ರಿಕಾ ಸತತ 10 ಸರಣಿ ಗೆದ್ದಿದೆ. ವಿಂಡೀಸ್ ವಿರುದ್ಧ 2002ರಿಂದ 2023ರ ವರೆಗೂ ಭಾರತ, 2000-2022ರ ವರೆಗೂ ಆಸ್ಟ್ರೇಲಿಯಾ ಸತತ 9 ಸರಣಿಗಳನ್ನು ಗೆದ್ದಿವೆ. ಶನಿವಾರ ಕೊನೆಗೊಂಡ ಪಂದ್ಯದಲ್ಲಿ ವೆಸ್ಟ್ ಇಂಡೀಸ್ 263 ರನ್ ಗುರಿ ಪಡೆದಿತ್ತು. ಆದರೆ 222ಕ್ಕೆ ಆಲೌಟಾಯಿತು.

ಮಹಾರಾಜ ಟ್ರೋಫಿ ಟಿ20: ಸ್ಮರಣ್‌ ಸ್ಫೋಟಕ ಶತಕ, ಗೆದ್ದ ಗುಲ್ಬರ್ಗಾ

ಬೆಂಗಳೂರು: ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆ ಆಯೋಜಿಸುತ್ತಿರುವ 3ನೇ ಆವೃತ್ತಿ ಮಹಾರಾಜ ಟ್ರೋಫಿ ಟಿ20 ಟೂರ್ನಿಯಲ್ಲಿ ಗುಲ್ಬರ್ಗಾ ಮಿಸ್ಟಿಕ್ಸ್‌ ತಂಡ ಮೊದಲ ಗೆಲುವು ದಾಖಲಿಸಿತು. ಆರಂಭಿಕ 2 ಪಂದ್ಯಗಳಲ್ಲಿ ಸೋತಿದ್ದ ತಂಡ ಭಾನುವಾರ ಮೈಸೂರು ವಾರಿಯರ್ಸ್‌ ವಿರುದ್ಧ 3 ವಿಕೆಟ್‌ ರೋಚಕ ಜಯಗಳಿಸಿತು. ಮೈಸೂರಿಗೆ ಟೂರ್ನಿಯಲ್ಲಿ ಇದು ಸತತ 2ನೇ ಸೋಲು. ಆರಂಭಿಕ ಪಂದ್ಯದಲ್ಲಿ ತಂಡ ಗೆದ್ದಿದ್ದರೂ ಬಳಿಕ ಸೋಲಿನ ಮುಖಭಂಗಕ್ಕೊಳಗಾಗುತ್ತಿದೆ.

ಧೋನಿಗಾಗಿ ಐಪಿಎಲ್‌ ರೂಲ್ಸ್ ಅನ್ನೇ ಬದಲಿಸಲು ಮುಂದಾಯ್ತಾ ಬಿಸಿಸಿಐ..? ಇಲ್ಲಿದೆ ಹೊಸ ಅಪ್‌ಡೇಟ್ಸ್

ಮೊದಲು ಬ್ಯಾಟ್‌ ಮಾಡಿದ ಮೈಸೂರು 8 ವಿಕೆಟ್‌ಗೆ 196 ರನ್‌ ಗಳಿಸಿತು. ನಾಯಕ ಕರುಣ್‌ ನಾಯರ್‌ 35 ಎಸೆತಗಳಲ್ಲಿ 66, ಸುಚಿತ್‌ 13 ಎಸೆತಗಳಲ್ಲಿ 40 ರನ್‌ ಸಿಡಿಸಿದರು. ಸುಮಿತ್‌ ದ್ರಾವಿಡ್‌ 33 ರನ್‌ ಕೊಡುಗೆ ನೀಡಿದರು. ಬೃಹತ್‌ ಗುರಿ ಬೆನ್ನತ್ತಿದ ಗುಲ್ಬರ್ಗಾ ಕೊನೆ ಎಸೆತದಲ್ಲಿ ಬೌಂಡರಿ ಬಾರಿಸಿ ಗೆಲುವು ಒಲಿಸಿಕೊಂಡಿತು. ಸ್ಮರಣ್‌ ಆರ್‌. 60 ಎಸೆತಗಳಲ್ಲಿ 11 ಬೌಂಡರಿ, 4 ಸಿಕ್ಸರ್‌ನೊಂದಿಗೆ ಔಟಾಗದೆ 104 ರನ್‌ ಸಿಡಿಸಿದರು. ಪ್ರವೀಣ್‌ ದುಬೆ 37, ಅನೀಶ್‌ 24 ರನ್‌ ಕೊಡುಗೆ ನೀಡಿದರು.

ಇಂದಿನ ಪಂದ್ಯಗಳು

ಬೆಂಗಳೂರು-ಹುಬ್ಬಳ್ಳಿ, ಮಧ್ಯಾಹ್ನ 3ಕ್ಕೆ

ಮೈಸೂರು-ಮಂಗಳೂರು, ಸಂಜೆ 7ಕ್ಕೆ

click me!