ಭಾರತ ಪ್ರವಾಸಕ್ಕೆ ಬಲಿಷ್ಠ ಆಸ್ಟ್ರೇಲಿಯಾ ತಂಡ ಪ್ರಕಟ

By Suvarna News  |  First Published Dec 31, 2019, 10:03 AM IST

ಟೀಂ ಇಂಡಿಯಾ 3 ಪಂದ್ಯಗಳ ಏಕದಿನ ಸರಣಿಯಾಡಲು ಆಸ್ಟ್ರೇಲಿಯಾ ತಂಡವು ಜನವರಿಯಲ್ಲಿ ಭಾರತ ಪ್ರವಾಸ ಕೈಗೊಳ್ಳಲಿದೆ. ಈ ಸರಣಿಗೆ ಬಲಿಷ್ಠ ಆಸೀಸ್ ತಂಡ ಪ್ರಕಟಿಸಲಾಗಿದೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...


ಮೆಲ್ಬರ್ನ್‌[ಡಿ.31]: ಮುಂದಿನ ತಿಂಗಳು ಆಸ್ಪ್ರೇಲಿಯಾ ತಂಡ ಭಾರತ ಪ್ರವಾಸ ಕೈಗೊಳ್ಳಲಿದ್ದು, 3 ಪಂದ್ಯಗಳ ಏಕದಿನ ಸರಣಿಯನ್ನು ಆಡಲಿದೆ. ಸೋಮವಾರ 14 ಸದಸ್ಯರ ಬಲಿಷ್ಠ ತಂಡವನ್ನು ಕ್ರಿಕೆಟ್‌ ಆಸ್ಪ್ರೇಲಿಯಾ ಪ್ರಕಟಿಸಿತು.

2019ರಲ್ಲಿ ವಿರಾಟ್ ಪಡೆ ಗೆದ್ದಿದ್ದೆಷ್ಟು? ಸೋತಿದ್ದೆಷ್ಟು? ಇಲ್ಲಿವೆ ಹೆಜ್ಜೆ ಗುರುತುಗಳು

Latest Videos

ಆ್ಯರೋನ್ ಫಿಂಚ್ ತಂಡವನ್ನು ಮುನ್ನಡೆಸಲಿದ್ದಾರೆ. ವೇಗಿ ಸೀನ್‌ ಅಬೊಟ್‌ ಗಾಯಗೊಂಡಿದ್ದು, ಅವರ ಬದಲಿಗೆ ಬ್ಯಾಟ್ಸ್‌ಮನ್‌ ಡಾರ್ಚಿ ಶಾರ್ಟ್‌ಗೆ ಸ್ಥಾನ ನೀಡಲಾಗಿದೆ. ಆಸ್ಟ್ರೇಲಿಯಾ ಈಗಾಗಲೇ 4 ಪ್ರಮುಖ ವೇಗಿಗಳಾದ ಮಿಚೆಲ್ ಸ್ಟಾರ್ಕ್, ಪ್ಯಾಟ್ ಕಮಿನ್ಸ್, ಕೇನ್ ರಿಚರ್ಡ್’ಸನ್ ಹಾಗೂ ಜೋಸ್ ಹ್ಯಾಜಲ್’ವುಡ್ ಅವರನ್ನು ಹೊಂದಿದೆ. ಹೀಗಾಗಿ ಮತ್ತೋರ್ವ ಬೌಲರ್ ಬದಲಾಗಿ, ತಜ್ಞ ಆಲ್ರೌಂಡರ್’ಗೆ ಆಸೀಸ್ ಕ್ರಿಕೆಟ್ ಮಂಡಳಿ ಮಣೆ ಹಾಕಿದೆ.

IN: Labuschagne, Hazlewood, Abbott, Agar, Turner

Australia made a number of changes to their ODI squad for their tour of 🇮🇳. Find out which players missed out 👇https://t.co/LGRZkZHj1J

— ICC (@ICC)

2019ರ ಫೆಬ್ರವರಿಯಲ್ಲೂ ಆಸ್ಟ್ರೇಲಿಯಾ ತಂಡ ಭಾರತ ಪ್ರವಾಸ ಕೈಗೊಂಡಿತ್ತು. ಟಿ20 ಸರಣಿಯನ್ನು 2-0 ಅಂತರದಲ್ಲಿ ಜಯಿಸಿದ್ದ ಆಸೀಸ್, ಏಕದಿನ ಸರಣಿಯನ್ನು 3-2 ಅಂತರದಲ್ಲಿ ಕೈವಶ ಮಾಡಿಕೊಂಡಿತ್ತು. ಇದೀಗ ಅಂತಹದ್ದೇ ಪ್ರದರ್ಶನ ನೀಡುವ ನಿರೀಕ್ಷೆಯಲ್ಲಿದೆ ಕಾಂಗರೂ ಬಳಗ.

ಆಸ್ಟ್ರೇಲಿಯಾ ಸರಣಿಗೆ ಟೀಂ ಇಂಡಿಯಾ ಪ್ರಕಟ; ಕನ್ನಡಿಗ ಮಯಾಂಕ್ ಔಟ್!

ಮೂರು ಪಂದ್ಯಗಳ ಸರಣಿಯ ಮೊದಲ ಪಂದ್ಯ ಜ.14ರಂದು ಮುಂಬೈ, ಜ.17ರಂದು ರಾಜ್‌ಕೋಟ್‌ ಹಾಗೂ ಜ.19ರಂದು ಬೆಂಗಳೂರಲ್ಲಿ ಪಂದ್ಯಗಳು ನಡೆಯಲಿವೆ.

ತಂಡ: ಆ್ಯರೋನ್‌ ಫಿಂಚ್‌ (ನಾಯಕ), ಅಸ್ಟನ್‌ ಆಗರ್‌, ಅಲೆಕ್ಸ್‌ ಕಾರ್ರಿ, ಪ್ಯಾಟ್‌ ಕಮಿನ್ಸ್‌, ಪೀಟರ್‌ ಹ್ಯಾಂಡ್ಸ್‌ಕಂಬ್‌, ಜೋಶ್‌ ಹೇಜಲ್‌ವುಡ್‌, ಮಾರ್ನಸ್‌ ಲಬುಶೇನ್‌, ಕೇನ್‌ ರಿಚರ್ಡ್‌ಸನ್‌, ಡಾರ್ಚಿ ಶಾರ್ಟ್‌, ಸ್ಟೀವ್‌ ಸ್ಮಿತ್‌, ಮಿಚೆಲ್‌ ಸ್ಟಾರ್ಕ್, ಅಸ್ಟನ್‌ ಟರ್ನರ್‌, ಡೇವಿಡ್‌ ವಾರ್ನರ್‌, ಆ್ಯಡಮ್‌ ಜಂಪಾ.

ಡಿಸೆಂಬರ್ 31ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

click me!