ICC T20 World Cup: ಅಗ್ರಸ್ಥಾನಕ್ಕೆ ಇಂಗ್ಲೆಂಡ್‌, ಆಸೀಸ್‌ ನಡುವೆ ಫೈಟ್‌!

By Kannadaprabha News  |  First Published Oct 30, 2021, 7:53 AM IST

*ಹೈವೋಲ್ಟೇಜ್‌ ಪಂದ್ಯಕ್ಕೆ ಅಜೇಯವಾಗಿ  ಕಾಲಿಡಲಿರುವ ಎರಡೂ ತಂಡಗಳು
*ವೆಸ್ಟ್‌ಇಂಡೀಸ್‌, ಬಾಂಗ್ಲಾದೇಶ ವಿರುದ್ಧ ಗೆದ್ದಿರುವ ಇಂಗ್ಲೆಂಡ್‌
*ದಕ್ಷಿಣ ಆಫ್ರಿಕಾ ಹಾಗೂ ಶ್ರೀಲಂಕಾ ವಿರುದ್ಧ ಆಸ್ಪ್ರೇಲಿಯಾ ಜಯಭೇರಿ
 


ದುಬೈ(ಅ. 30): ಸೆಮಿಫೈನಲ್‌ ಪ್ರವೇಶಿಸುವ ನೆಚ್ಚಿನ ತಂಡಗಳು ಎನಿಸಿರುವ ಇಂಗ್ಲೆಂಡ್‌ (England) ಹಾಗೂ ಆಸ್ಪ್ರೇಲಿಯಾ (Australia) , ಶನಿವಾರ ಗುಂಪು-1ರ ಪಂದ್ಯದಲ್ಲಿ ಮುಖಾಮುಖಿಯಾಗಲಿವೆ. ಈ ಪಂದ್ಯದಲ್ಲಿ ಗೆಲ್ಲುವ ತಂಡ ಗುಂಪು-1ರಲ್ಲಿ ಅಗ್ರಸ್ಥಾನ ಪಡೆಯಲಿದ್ದು, ಸೆಮೀಸ್‌ ಹೊಸ್ತಿಲು ತಲುಪಲಿದೆ.

ಶ್ರೀಲಂಕಾ ಚಾಲೆಂಜ್‌ಗೆ ರೆಡಿಯಾದ ದಕ್ಷಿಣ ಆಫ್ರಿಕಾ!

Latest Videos

undefined

ಹೈವೋಲ್ಟೇಜ್‌ ಪಂದ್ಯಕ್ಕೆ ಎರಡೂ ತಂಡಗಳು ಅಜೇಯವಾಗಿ ಕಾಲಿಡಲಿವೆ. ಇಂಗ್ಲೆಂಡ್‌ ತಂಡವು ವೆಸ್ಟ್‌ಇಂಡೀಸ್‌ (West Indies), ಬಾಂಗ್ಲಾದೇಶ (Bangladesh) ವಿರುದ್ಧ ಗೆದ್ದರೆ ಆಸ್ಪ್ರೇಲಿಯಾ ತಂಡವು ದಕ್ಷಿಣ ಆಫ್ರಿಕಾ (South Africa) ಹಾಗೂ ಶ್ರೀಲಂಕಾ (Sri Lanka) ವಿರುದ್ಧ ಜಯಭೇರಿ ಬಾರಿಸಿತ್ತು. ಎರಡೂ ತಂಡಗಳಲ್ಲಿ ಸ್ಫೋಟಕ ಬ್ಯಾಟ್ಸ್‌ಮನ್‌ಗಳಿದ್ದು, ಬಲಿಷ್ಠ ಬೌಲಿಂಗ್‌ ಪಡೆಗಳನ್ನು ಹೊಂದಿವೆ. ಪ್ರಮುಖವಾಗಿ ಡೇವಿಡ್‌ ವಾರ್ನರ್‌ ಲಯ ಕಂಡುಕೊಂಡಿರುವುದು ಇಂಗ್ಲೆಂಡ್‌ ತಲೆಬಿಸಿ ಹೆಚ್ಚಿಸಿದ್ದರೆ ಅಚ್ಚರಿಯಿಲ್ಲ. ಮುಂದಿನ ತಿಂಗಳು ನಡೆಯಲಿರುವ ಆ್ಯಷಸ್‌ ಸರಣಿಗೂ ಮುನ್ನ ಈ ಪಂದ್ಯ ರಿಹರ್ಸಲ್‌ನಂತೆ ಇರಲಿದೆ. ಟಾಸ್‌ ಪ್ರಮುಖ ಪಾತ್ರ ವಹಿಸಲಿದೆ.

T20 World Cup: ಕೋಕಾ ಕೋಲಾ ಬದಿಗೆ ಸರಿಸಿ, ರೊನಾಲ್ಡೋ ನೆನಪಿಸಿದ ಡೇವಿಡ್ ವಾರ್ನರ್..!

ವಿಶ್ವಕಪ್ ಅಂಕಪಟ್ಟಿಯಲ್ಲಿ ತಲಾ 4 ಅಂಕಗಳನ್ನು ಪಡೆದು ಇಂಗ್ಲೆಂಡ್‌ ಹಾಗೂ ಆಸ್ಟ್ರೇಲಿಯಾ ಕ್ರಮವಾಗಿ ಮೊದಲನೇ ಮತ್ತು ಎರಡನೇ ಸ್ಥಾನದಲ್ಲಿವೆ. ಇಂದಿನ ಪಂದ್ಯದಲ್ಲಿ ಗೆಲುವು ಸಾಧಿಸುವ ತಂಡವು ಅಗ್ರಸ್ಥಾನ ಪಡೆಯಲಿದ್ದು, ಸೆಮಿ-ಫೈನಲ್‌ ತಲುಪಲಿದೆ. 2010 ರ ವಿಶ್ವಕಪ್‌ ನಂತರ ಇಂಗ್ಲೆಂಡ್‌ ಮತ್ತು ಆಸ್ಟ್ರೇಲಿಯಾ ಮೊದಲ ಬಾರಿಗೆ T20 ವಿಶ್ವಕಪ್ ಪಂದ್ಯದಲ್ಲಿ‌ ಇಂದು  ಮುಖಾಮಖಿಯಾಗಲಿವೆ. 

ಶ್ರೀಲಂಕಾ ಚಾಲೆಂಜ್‌ಗೆ ರೆಡಿಯಾದ ದಕ್ಷಿಣ ಆಫ್ರಿಕಾ!

ಟಿ20 ವಿಶ್ವಕಪ್‌ ಗುಂಪು-1ರ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾಕ್ಕೆ (South Africa) ಶ್ರೀಲಂಕಾ ಎದುರಾಗಲಿದೆ. ವರ್ಣಭೇದ ವಿರುದ್ಧದ ಆಂದೋಲನಕ್ಕೆ ಬೆಂಬಲಿಸಲು ಒಪ್ಪಿಗೆ ನೀಡಿರುವ ತಾರಾ ಕ್ರಿಕೆಟಿಗ ಕ್ವಿಂಟನ್‌ ಡಿ ಕಾಕ್‌ ಮೇಲೆ ಎಲ್ಲರ ಕಣ್ಣಿದೆ. ಎರಡೂ ತಂಡಗಳು ಆಡಿರುವ ಎರಡು ಪಂದ್ಯಗಳಲ್ಲಿ ತಲಾ 1 ಗೆಲುವು ಹಾಗೂ ಸೋಲು ಕಂಡಿವೆ. ಸೆಮಿಫೈನಲ್‌ ರೇಸ್‌ನಲ್ಲಿ ಉಳಿದುಕೊಳ್ಳಲು ಈ ಪಂದ್ಯದಲ್ಲಿ ಗೆಲುವು ಅನಿವಾರ್ಯವಾಗಿದೆ.

T20 World Cup 2021: ಒಂದೇ ಓವರ್‌ಲ್ಲಿ 4 ಸಿಕ್ಸರ್, ಆಫ್ಘಾನ್ ವಿರುದ್ಧ ಪಾಕ್‌ಗೆ ರೋಚಕ ಗೆಲುವು!

ದಕ್ಷಿಣ ಆಫ್ರಿಕಾ ತನ್ನ ಬೌಲಿಂಗ್‌ ಪಡೆಯ ಮೇಲೆ ಹೆಚ್ಚು ವಿಶ್ವಾಸವಿರಿಸಿದೆ. ಎರಡೂ ಪಂದ್ಯಗಳಲ್ಲಿ ತಂಡದ ಬೌಲರ್‌ಗಳು ಉತ್ತಮ ಪ್ರದರ್ಶನ ತೋರಿದ್ದಾರೆ. ಮತ್ತೊಂದೆಡೆ ಶ್ರೀಲಂಕಾ (Sri Lanka) ಕಳೆದ ಪಂದ್ಯದಲ್ಲಿ ಭರ್ಜರಿ ಆರಂಭ ಪಡೆದರೂ ದಿಢೀರ್‌ ಬ್ಯಾಟಿಂಗ್‌ ಕುಸಿತ ಕಂಡು ಸೋಲುಂಡಿತ್ತು. ತಂಡ ಸಾಂಘಿಕ ಪ್ರದರ್ಶನ ತೋರಿದರಷ್ಟೇ ಗೆಲುವು ಒಲಿಯಲಿದೆ. ಕಳೆದ 6 T20 ಪಂದ್ಯಾವಗಳಲ್ಲಿ ಶ್ರೀಲಂಕಾ ವಿರುದ್ಧ ದಕ್ಷಿಣ ಆಫ್ರಿಕಾ ಗೆಲುವು ಸಾಧಿಸಿದೆ. ತಮ್ಮ ಕಳೆದ ಪಂದ್ಯದಲ್ಲಿ ವೆಸ್ಟ್‌ ಇಂಡೀಸ್‌ ವಿರುದ್ಧ ದಕ್ಷಿಣ ಆಫ್ರಿಕಾ ಜಯ ಸಾಧಿಸಿತ್ತು. ಇತ್ತ ಶ್ರೀಲಂಕಾ ಆಸ್ಟ್ರೇಲಿಯಾ  ವಿರುದ್ಧ ಸೋಲು ಕಂಡಿತ್ತು.

ಬಾಂಗ್ಲಾ ಎದುರು ವಿಂಡೀಸ್‌ಗೆ ರೋಚಕ ಜಯ! 

ಐಸಿಸಿ ಟಿ20 ವಿಶ್ವಕಪ್‌ (ICC T20 World Cup) ಟೂರ್ನಿಯಲ್ಲಿ ಬಾಂಗ್ಲಾದೇಶ ವಿರುದ್ದ ಹಾಲಿ ಚಾಂಪಿಯನ್‌ ವೆಸ್ಟ್ ಇಂಡೀಸ್ ಕ್ರಿಕೆಟ್ ತಂಡವು (West Indies Cricket) 3 ರನ್‌ಗಳ ರೋಚಕ ಜಯ ಸಾಧಿಸಿದೆ. ಇದರೊಂದಿಗೆ ಸೆಮೀಸ್‌ ಕನಸ್ಸನ್ನು ಜೀವಂತವಾಗಿರಿಸಿಕೊಂಡಿದೆ. ಇದೇ ವೇಳೆ ಬಾಂಗ್ಲಾದೇಶ ತಂಡದ ಸೆಮೀಸ್‌ ಕನಸು ಬಹುತೇಕ ಭಗ್ನವಾಗಿದೆ.

ಆಫ್ಘಾನ್ ವಿರುದ್ಧ ಪಾಕ್‌ಗೆ ರೋಚಕ ಗೆಲುವು!

ನಿನ್ನೆ(ಅ. 29) ನಡೆದ ಪಂದ್ಯದಲ್ಲಿ ಬಾಬರ್ ಅಜಮ್(Babar Azam) ಅರ್ಧಶತಕ ಹಾಗೂ ಆಸಿಫ್ ಆಲಿ(Asif Ali) ಒಂದೇ ಓವರ್‌ನಲ್ಲಿ ಸಿಡಿಸಿದ ನಾಲ್ಕು ಸಿಕ್ಸರ್ ನೆರವಿನಿಂದ ಆಫ್ಘಾನಿಸ್ತಾನ(Afghanistan) ವಿರುದ್ಧ ಪಾಕಿಸ್ತಾನ(Pakistan) 5 ವಿಕೆಟ್ ಗೆಲುವು ದಾಖಲಿಸಿದೆ. ಈ ಮೂಲಕ T20 World Cup 2021 ಟೂರ್ನಿಯಲ್ಲಿ ಹ್ಯಾಟ್ರಿಕ್ ಗೆಲುವು ಸಾಧಿಸಿದೆ.

click me!