ಬೇಡದ ದಾಖಲೆ ಬರೆದ ಆಸೀಸ್.. ಬಾಂಗ್ಲಾ ವಿರುದ್ಧ 62ಕ್ಕೆ ಅಲೌಟ್!

By Suvarna NewsFirst Published Aug 9, 2021, 11:07 PM IST
Highlights

* ಆಸ್ಟ್ರೇಲಿಯಾ ವಿರುದ್ಧ ದಾಖಲೆ ಬರೆದ ಬಾಂಗ್ಲಾ
*  ಅತಿ ಕಡಿಮೆ ಮೊತ್ತಕ್ಕೆ ಆಸೀಸ್ ಆಲೌಟ್
* ಟಿಟ್ವೆಂಟಿ ಸರಣಿ ಕಳೆದುಕೊಂಡ ಕಾಂಗರೂ ಪಡೆ
* ಶಕೀಬ್ ಮ್ಯಾಜಿಕ್ ಗೆ ತಲೆಬಾಗಿದ ಆಸೀಸ್

ಢಾಕಾ(ಆ. 09)   ಬಾಂಗ್ಲಾದೇಶದ ವಿರುದ್ಧದ ಐದು ಪಂದ್ಯಗಳ ಟಿ20 ಸರಣಿಯಲ್ಲಿ ಆಸ್ಟ್ರೇಲಿಯಾ ಮತ್ತೊಂದು ಸೋಲು ಕಂಡಿದೆ.   ಈ ಸಾರಿಯ ಸೋಲು ತುಂಬಾ ಹೀನಾಯವಾದದ್ದು.

ಬಾಂಗ್ಲಾ ನೀಡಿದ 123 ರನ್‌ಗಳ ಗುರಿಯನ್ನು ಪಡೆದ ಆಸ್ಟ್ರೇಲಿಯಾ ಕೇವಲ 62 ರನ್‌ಗಳಿಗೆ ಆಲೌಟ್ ಆಗಿದೆ.  ಮೂಲಕ ಐದು ಪಂದ್ಯಗಳ ಟಿ20 ಸರಣಿಯನ್ನು ಆಸಿಸ್ ಪಡೆ 1-4 ಅಂತರದಿಂದ ಕಳೆದುಕೊಂಡಿದೆ. 

 ಶೇರ್‌ ಎ ಬಾಂಗ್ಲಾ ಸ್ಟೇಡಿಯಂನಲ್ಲಿ ನಡೆದ ಐದು ಪಂದ್ಯಗಳ ಟಿ20 ಸರಣಿಯಲ್ಲಿ ಬಾಂಗ್ಲಾ ಬೌಲಿಂಗ್  ದಾಳಿಗೆ ಆಸ್ಟ್ರೇಲಿಯಾ ಬಳಿ ಉತ್ತರವೇ ಇರಲಿಲ್ಲ.   ಟಿ 20  ಗೆ ಹೋಲಿಕೆ ಮಾಡಿದರೆ ಅತಿ ಕಡಿಮೆ ಮೊತ್ತವನ್ನು ಚೇಸ್ ಮಾಡುವಲ್ಲಿಯೂ ಆಸ್ಟ್ರೇಲಿಯಾ ವಿಫಲವಾಯಿತು.

ಚಿನ್ನ ಗೆದ್ದ ನೀರಜ್ ಗೆ ಒಂದು ಕೋಟಿ ಬಹುಮಾನ ಘೋಷಿಸಿದ ಸಿಎಸ್‌ಕೆ

 ಟಾಸ್ ಗೆದ್ದ ಬಾಂಗ್ಲಾದೇಶ ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್ ಕಳೆದುಕೊಂಡು 122 ರನ್‌ಗಳನ್ನು ಮಾತ್ರವೇ ಗಳಿಸಿತ್ತು. ಇದನ್ನು ಬೆನ್ನಟ್ಟಲು ಆರಂಭಿಸಿದ ಆಸ್ಟ್ರೇಲಿಯಾ ಎಂದಿನಂತೆಯೇ ಫೆವಿಲಿಯನ್ ಪೆರೇಡ್ ನಡೆಸಿತು. ಶಕೀಬ್ ಅಲ್ ಹಸನ್ ಮ್ಯಾಜಿಕ್ ಎದುರು ಆಸೀಸ್ ಆಟಗಾರರ ಆಟ ನಡೆಯಲೇ ಇಲ್ಲ. ಶಕೀಬ್ ಬೌಲಿಂಗ್ ದಾಳಿಗೆ ಪ್ರಮುಖ ಆಟಗಾರೆಲ್ಲ ಬಲಿಯಾದರು. 

ನಾಯಕ ಮ್ಯಾಥ್ಯೂ ವೇಡ್ 22 ರನ್‌ಗಳಿಸಿದರೆ ಬೆನ್‌ ಮೆಕ್‌ಡೆರ್ಮಾಟ್ 17 ರನ್‌ಗಳಿಸಿದ್ದು ಬಿಟ್ಟರೆ ಉಳಿದೆಲ್ಲಾ ಆಟಗಾರರು ಒಂದಂಕಿಗೆ ಆಟವನ್ನು ಅಂತ್ಯಗೊಳಿಸಿದರು. ಬಾಂಗ್ಲಾದೇಶದ ಪರವಾಗಿ ಶಕೀಬ್ ಅಲ್ ಹಸನ್ ಈ ಪಂದ್ಯದಲ್ಲಿಯೂ ಆಸ್ಟ್ರೇಲಿಯಾ ಬ್ಯಾಟ್ಸ್‌ಮನ್‌ಗಳಿಗೆ ಕಾಡಿದರು. ಈ ಪಂದ್ಯದಲ್ಲಿ ನಾಲ್ಕು ವಿಕೆಟ್ ಪಡೆದು ಮಿಂಚಿದರು.

ಬಾಂಗ್ಲಾದೇಶದ ವಿರುದ್ಧದ ಅಂತಿಮ ಟಿ20 ಪಂದ್ಯದಲ್ಲಿ ಆಸ್ಟ್ರೇಲಿಯಾ 62 ನರ್‌ಗಳಿಗೆ ಆಲೌಟ್ ಆಗಿದ್ದು ತಂಡದ ಅತ್ಯಂತ ಹೀನಾಯ ಪ್ರದರ್ಶನವಾಗಿದೆ. ಈ ವರ್ಷ ಆಸ್ಟ್ರೇಲಿಯಾ ಆಡಿದ ಮೂರು ಟಿ20 ಸರಣಿಯಲ್ಲಿಯೂ ಆಸಿಸ್ ಅತ್ಯಂತ ಆಘಾತಕಾರಿ ರೀತಿಯಲ್ಲಿ ಸೋಲು ಕಂಡಿದೆ. ಇದಕ್ಕೂ ಮುನ್ನ ವೆಸ್ಟ್ ಇಂಡೀಸ್ ವಿರುದ್ಧವೂ ಆಸ್ಟ್ರೇಲಿಯಾ 1-4 ಅಂತರದಿಂದ ಸರಣಿ ಸೋತಿತ್ತು. ಅದಕ್ಕೂ ಮುನ್ನ ನ್ಯೂಜಿಲೆಂಡ್ ವಿರುದ್ಧ ನಡೆದ ಟಿ20 ಸರಣಿಯಲ್ಲಿ ಆಸಿಸ್ ಪಡೆ 2-3 ಅಂತರದ ಸೋಲು ಕಂಡಿತ್ತು.

ಮುಂಬರುವ ಟಿ-20  ವಿಶ್ವಕಪ್ ಗೂ ಮುನ್ನ ಆಸ್ಟ್ರೇಲಿಯಾ ಕಳಪೆ ಪ್ರದರ್ಶನ ನೀಡುತ್ತಿದೆ. ತಂಡದಲ್ಲಿನ ತಾಳ-ಮೇಳ ತಪ್ಪಿದೆ. ಐಪಿಎಲ್ ಮತ್ತು ಟಿಟ್ವೆಂಟಿ ವಿಶ್ವಕಪ್ ಕ್ರಿಕೆಟ್ ಹಬ್ಬ ಈ ವರ್ಷದಲ್ಲಿಯೇ ಇವೆ.

 

click me!