Aus vs SL: 30 ವರ್ಷಗಳ ಬಳಿಕ ತವರಿನಲ್ಲಿ ಆಸೀಸ್ ಎದುರು ಏಕದಿನ ಸರಣಿ ಗೆದ್ದ ಶ್ರೀಲಂಕಾ..!

By Naveen KodaseFirst Published Jun 22, 2022, 2:43 PM IST
Highlights

* ಆಸ್ಟ್ರೇಲಿಯಾ ಎದುರು ಟೆಸ್ಟ್ ಸರಣಿ ಗೆದ್ದು ಬೀಗಿದ ಆತಿಥೇಯ ಶ್ರೀಲಂಕಾ
* ಬರೋಬ್ಬರಿ 30 ವರ್ಷಗಳ ಬಳಿಕ ತವರಿನಲ್ಲಿ ಕಾಂಗರೂ ಪಡೆಯನ್ನು ಮಣಿಸಿದ ಲಂಕಾ
* 99 ರನ್‌ ಬಾರಿಸಿ ವಿಕೆಟ್ ಒಪ್ಪಿಸಿ ನಿರಾಸೆ ಅನುಭವಿಸಿದ ಡೇವಿಡ್ ವಾರ್ನರ್

ಕೊಲಂಬೊ(ಜೂ.22): ದಸುನ್ ಶನಕಾ ನೇತೃತ್ವದ ಶ್ರೀಲಂಕಾ ಕ್ರಿಕೆಟ್ ತಂಡವು (Sri Lanka Cricket Team), ಆಸ್ಟ್ರೇಲಿಯಾ ಎದುರಿನ ನಾಲ್ಕನೇ ಏಕದಿನ ಪಂದ್ಯದಲ್ಲಿ 4 ರನ್‌ಗಳ ಅಂತರದ ರೋಚಕ ಗೆಲುವು ಸಾಧಿಸುವ ಮೂಲಕ 5 ಪಂದ್ಯಗಳ ಏಕದಿನ ಸರಣಿಯಲ್ಲಿ ಇನ್ನೂ ಒಂದು ಪಂದ್ಯ ಭಾಕಿ ಇರುವಂತೆಯೇ 3-1 ಅಂತರದಲ್ಲಿ ಏಕದಿನ ಸರಣಿ ಜಯಿಸುವಲ್ಲಿ ಯಶಸ್ವಿಯಾಗಿದೆ. ಈ ಮೂಲಕ ಶ್ರೀಲಂಕಾ ತಂಡವು ತವರಿನಲ್ಲಿ ಬರೋಬ್ಬರಿ 30 ವರ್ಷಗಳ ಬಳಿಕ ಆಸ್ಟ್ರೇಲಿಯಾ ಎದುರು ಏಕದಿನ ಸರಣಿಯನ್ನು ಜಯಿಸುವಲ್ಲಿ ಯಶಸ್ವಿಯಾಗಿದೆ. ಈ ಮೊದಲು ಶ್ರೀಲಂಕಾ ಕ್ರಿಕೆಟ್ ತಂಡವು 1992ರಲ್ಲಿ ಕೊನೆಯ ಬಾರಿಗೆ ತವರಿನಲ್ಲಿ ಆಸ್ಟ್ರೇಲಿಯಾ ಎದುರು ಏಕದಿನ ಸರಣಿಯನ್ನು ಜಯಿಸಿತ್ತು.

ದಸುನ್ ಶನಕಾ ನೇತೃತ್ವದ ಶ್ರೀಲಂಕಾ ಕ್ರಿಕೆಟ್ ತಂಡವು ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆಯಿತು. ಲಂಕಾ ತಂಡವು 34 ರನ್‌ ಗಳಿಸುವಷ್ಟರಲ್ಲಿ ಅಗ್ರಕ್ರಮಾಂಕದ ಮೂವರು ಬ್ಯಾಟರ್‌ಗಳು ಪೆವಿಲಿಯನ್ ಸೇರಿದ್ದರು. ಇದಾದ ಬಳಿಕ ನಾಲ್ಕನೇ ವಿಕೆಟ್‌ಗೆ ಧನಂಜಯ ಡಿ ಸಿಲ್ವಾ (Dhananjaya de Silva) ಹಾಗೂ ಚರಿತ್ ಅಸಲಂಕಾ (Charith Asalanka) ಜೋಡಿ 101 ರನ್‌ಗಳ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾದರು. ಧನಂಜಯ ಡಿ ಸಿಲ್ವಾ 61 ಎಸೆತಗಳಲ್ಲಿ 60 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು. ಮತ್ತೊಂದು ತುದಿಯಲ್ಲಿ ಸಮಯೋಚಿತ ಬ್ಯಾಟಿಂಗ್ ನಡೆಸಿದ ಚರಿತ್ ಅಸಲಂಕಾ ವೃತ್ತಿಜೀವನದ ಮೊದಲ ಏಕದಿನ ಶತಕ ಸಿಡಸಿ ಸಂಭ್ರಮಿಸಿದರು. ಅಸಲಂಕಾ 106 ಎಸೆತಗಳಣ್ನು ಎದುರಿಸಿ 10 ಬೌಂಡರಿ ಹಾಗೂ ಒಂದು ಸಿಕ್ಸರ್ ಸಹಿತ 110 ರನ್ ಬಾರಿಸಿ ಪ್ಯಾಟ್ ಕಮಿನ್ಸ್‌ಗೆ ವಿಕೆಟ್ ಒಪ್ಪಿಸಿದರು. ಇದಾದ ಬಳಿಕ ವೆಲಲಾಗೆ(19) ಹಾಗೂ ವನಿಂದು ಹಸರಂಗ(21) ಬಾರಿಸಿದ ಸಮಯೋಚಿತ ಬ್ಯಾಟಿಂಗ್ ನೆರವಿನಿಂದ ಶ್ರೀಲಂಕಾ ತಂಡವು 258 ರನ್‌ಗಳ ಸ್ಪರ್ಧಾತ್ಮಕ ಮೊತ್ತ ಕಲೆಹಾಕಿತು.

ಸರಣಿ ಜೀವಂತವಾಗಿರಿಸಿಕೊಳ್ಳಬೇಕಿದ್ದರೇ ಆಸ್ಟ್ರೇಲಿಯಾ ತಂಡಕ್ಕೆ (Australia Cricket Team) ನಾಲ್ಕನೇ ಏಕದಿನ ಪಂದ್ಯದಲ್ಲಿ ಗೆಲುವು ಅನಿವಾರ್ಯ ಎನಿಸಿತ್ತು. ಆದರೆ ಮಹತ್ವದ ಪಂದ್ಯದಲ್ಲಿ ಆಸ್ಟ್ರೇಲಿಯಾ ನಾಯಕ ಆರೋನ್ ಫಿಂಚ್ (Aaron Finch) ಖಾತೆ ತೆರೆಯುವ ಮುನ್ನವೇ ಚಮಿಕಾ ಕರುಣರತ್ನೆ ಬೌಲಿಂಗ್‌ನಲ್ಲಿ ಎಲ್‌ಬಿ ಬಲೆಗೆ ಬಿದ್ದರು. ಇನ್ನು ಮಿಚೆಲ್ ಮಾರ್ಶ್‌(26), ಮಾರ್ನಸ್ ಲಬುಶೇನ್(14), ಅಲೆಕ್ಸ್‌ ಕ್ಯಾರಿ(19), ತ್ರಾವಿಸ್ ಹೆಡ್(27) ಹಾಗೂ ಗ್ಲೆನ್ ಮ್ಯಾಕ್ಸ್‌ವೆಲ್(01) ಅವರನ್ನು ಹೆಚ್ಚುಹೊತ್ತು ಕ್ರೀಸ್‌ನಲ್ಲಿರುವ ಲಂಕಾ ಬೌಲರ್‌ಗಳು ಅವಕಾಶ ಮಾಡಿಕೊಡಲಿಲ್ಲ.

Sri Lanka hold their nerves to take an unassailable 3-1 series lead 👏

They beat Australia by 4 runs in the fourth ODI in Colombo!

Watch the series on https://t.co/WngPr0Ns1J (in select regions) 📺

📝 Scorecard: https://t.co/KsvSxzgG3U pic.twitter.com/ykSQ7Xt9DN

— ICC (@ICC)

Aus vs SL: ಅಂಪೈರ್ ಎನ್ನುವುದನ್ನೂ ಮರೆತು ಕ್ಯಾಚ್ ಹಿಡಿಯಲು ಮುಂದಾದ ಧರ್ಮಸೇನಾ..! ವಿಡಿಯೋ ವೈರಲ್‌

ಡೇವಿಡ್ ವಾರ್ನರ್‌ ಏಕಾಂಗಿ ಹೋರಾಟ: ಲಂಕಾ ಎದುರಿನ ಮೊದಲ ಮೂರು ಏಕದಿನ ಪಂದ್ಯಗಳಲ್ಲಿ ಗಮನಾರ್ಹ ಪ್ರದರ್ಶನ ತೋರಲು ವಿಫಲವಾಗಿದ್ದ ಆರಂಭಿಕ ಬ್ಯಾಟರ್ ಡೇವಿಡ್ ವಾರ್ನರ್ (David Warner) ಏಕಾಂಗಿಯಾಗಿ ಹೋರಾಟ ನಡೆಸುವ ಮೂಲಕ ಆಸೀಸ್ ಪಾಳಯದಲ್ಲಿ ಗೆಲುವಿನ ಆಸೆ ಮೂಡಿಸಿದ್ದರು. ಒಂದು ಕಡೆ ನಿರಂತರವಾಗಿ ವಿಕೆಟ್ ಬೀಳುತ್ತಿದ್ದರೂ ಸಹಾ ಮತ್ತೊಂದು ತುದಿಯಲ್ಲಿ ಜವಾಬ್ದಾರಿಯುತ ಬ್ಯಾಟಿಂಗ್ ಪ್ರದರ್ಶನ ತೋರಿದರು. ವಾರ್ನರ್ 112 ಎಸೆತಗಳನ್ನು  ಎದುರಿಸಿ 12 ಬೌಂಡರಿ ಸಹಿತ 99 ರನ್ ಬಾರಿಸಿದ್ದಾಗ ಧನಂಜಯ ಡಿ ಸಿಲ್ವಾ ಬೌಲಿಂಗ್‌ನಲ್ಲಿ ಚೆಂಡನ್ನು ಮುನ್ನುಗ್ಗಿ ಬಾರಿಸುವ ಯತ್ನದಲ್ಲಿ ಸ್ಟಂಪೌಟ್ ಆಗುವ ಮೂಲಕ ಕೇವಲ ಒಂದು ರನ್ ಅಂತರದಲ್ಲಿ ಶತಕ ವಂಚಿತರಾದರು.

ಇನ್ನು ಕೊನೆಯಲ್ಲಿ ಪ್ಯಾಟ್ ಕಮಿನ್ಸ್‌ (35 ರನ್) ಹಾಗೂ ಮ್ಯಾಥ್ಯೂ ಕುನೆಮನ್(15) ಚುರುಕಿನ ಬ್ಯಾಟಿಂಗ್ ಮೂಲಕ ತಂಡವನ್ನು ಗೆಲುವಿನ ಸಮೀಪ ಕೊಂಡೊಯ್ದರಾದರೂ ತಂಡವನ್ನು ಸೋಲಿನಿಂದ ಪಾರು ಮಾಡಲು ಸಾಧ್ಯವಾಗಲಿಲ್ಲ. 

ಶ್ರೀಲಂಕಾ ಕ್ರಿಕೆಟ್ ತಂಡದ ಬೌಲರ್‌ಗಳು ಅತ್ಯಂತ ಸಂಘಟಿತ ಪ್ರದರ್ಶನದ ಮೂಲಕ ಗಮನ ಸೆಳೆದರು. ಚಮಿಕಾ ಕರುಣರತ್ನೆ, ಧನಂಜಯ ಡಿ ಸಿಲ್ವಾ ಹಾಗೂ ಜೆಫ್ರಿ ವೆಂಡರ್ಸೆ ತಲಾ 2 ವಿಕೆಟ್ ಪಡೆದರೇ, ದಸುನ್ ಶನಕಾ, ದುನಿತ್ ವೆಲ್ಲಾಲಗೆ, ವನಿಂದು ಹಸರಂಗ ಹಾಗೂ ಮಹೀಶ್ ತೀಕ್ಷಣ ತಲಾ ಒಂದೊಂದು ವಿಕೆಟ್ ಪಡೆದರು.  

click me!