ಕೊರೋನಾ ವೈರಸ್ ಹಾವಳಿ, ಲಾಕ್‌ಡೌನ್ ಪರಿಣಾಮ ಹಾದಿ ಬೀದಿಗಳಲ್ಲಿ ಜನರ ಓಡಾಟವಿಲ್ಲ. ಆಂಗಡಿ ಮುಂಗಟ್ಟುಗಳು ಮುಚ್ಚಲಾಗಿದೆ. ಮನೆಯೊಳಗಿದ್ದವರು ಹೊರಗೆ ಬರುವಂತಿಲ್ಲ. ಇದೇ ಸಮಯವನ್ನು ಉಪಯೋಗಿಸಿಕೊಂಡ ಕಳ್ಳರು ಟೀಂ ಇಂಡಿಯಾ ಕ್ರಿಕೆಟಿಗನ ಮನಗೆ ಕನ್ನ ಹಾಕಿದ್ದಾರೆ.
ಕೋಲ್ಕತಾ(ಏ.25): ಕೊರೋನಾ ವೈರಸ್ ಕಾರಣ ಕಳ್ಳರು ಕೂಡ ಜೀವ ಭಯದಿಂದ ಮನೆಯೊಳಗೇ ಇರುತ್ತಾರೆ ಎಂದು ಕೊಂಡರೆ ತಪ್ಪು. ಲಾಕ್‌ಡೌನ್ ಸಮಯವನ್ನು ಉಪಯೋಗಿಸಿಕೊಂಡು ಕನ್ನ ಹಾಕುತ್ತಿದ್ದಾರೆ. ಅದರಲ್ಲೂ ನಗರ ಪ್ರದೇಶಗಳಲ್ಲಿ ಲಾಕ್‌ಡೌನ್‌ಗೂ ಮುನ್ನ ಊರಿಗೆ ತೆರಳಿದ, ಅಥವಾ ಕೆಲಸಕ್ಕಾಗಿ ತೆರಳಿ ಲಾಕ್ ಆಗಿರುವವರ ಮನೆಯನ್ನೇ ಕಳ್ಳರು ಟಾರ್ಗೆಟ್ ಮಾಡಲಾಗುತ್ತಿದೆ. ಇದೀಗ ಟೀಂ ಇಂಡಿಯಾ ಕ್ರಿಕೆಟಿಗ ವೃದ್ದಿಮಾನ್ ಸಾಹ ಅಜ್ಜನ ಮನೆಗೆ ಕಳ್ಳರು ನುಗ್ಗುವ ಪ್ರಯತ್ನ ಮಾಡಿದ್ದಾರೆ.
ಆಶೀರ್ವಾದ ಪಡೆದೆ ಸಚಿನ್‌ಗೆ ಸ್ಪೆಷಲ್ ಬರ್ತ್‌ಡೇ ಗಿಫ್ಟ್ ನೀಡಿದ ತಾಯಿ!
undefined
ಏಪ್ರಿಲ್ 24ರ ಬೆಳ್ಳಂಬೆಳಗ್ಗೆ 2 ಗಂಟೆ ಸುಮಾರಿಗೆ ಸಿಲಿಗುರಿ ಬಳಿ ಇರುವ ಸಾಹ ತಾತನ ಮನೆಗೆ 6 ಮಂದಿ ಕಳ್ಳರು ನುಗ್ಗಿದ್ದಾರೆ. ಹಿಂಬಾಗಿಲ ಬಾಗಿಲ ಒಡೆದು ಮನೆಗೆ ನುಗ್ಗುವ ಪ್ರಯತ್ನ ಮಾಡಿದ್ದಾರೆ. ತಾತನ ಮನೆಯ ಪಕ್ಕದಲ್ಲೇ ಸಾಹ ಸಂಬಂಧಿಕರ ಮನೆಯಿದೆ. ಹೀಗಾಗಿ ಕಳ್ಳರು ಬಾಗಿಲು ಒಡೆಯುವ ಶಬ್ದಕ್ಕೆ ಎಚ್ಚರಗೊಂಡ ಸಾಹ ಸಂಬಂಧಿಕರು ತಕ್ಷಣವೇ ಪೊಲೀಸರಿಗೆ ಕರೆ ಮಾಡಿದ್ದಾರೆ. ಇಷ್ಟೇ ಅಲ್ಲ ಅಕ್ಕ ಪಕ್ಕದ ಮನೆಯವರನ್ನು ಕೂಗಿ ಎಚ್ಚರಿಸಿದ್ದಾರೆ.
ಝಿವಾಳೊಂದಿಗೆ ಧೋನಿ ಬೈಕ್ ರೈಡ್! ವಿಡಿಯೋ ವೈರಲ್
ಎಲ್ಲರ ಮನೆಯಲ್ಲೂ ಬೆಳಕು ಕಂಡ ತಕ್ಷಣ ಕಳ್ಳರು ಪರಾರಿಯಾಗಿದ್ದಾರೆ. ಇತ್ತ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಸಿಸಿಟಿವಿ ದೃಶ್ಯ ಆಧರಿಸಿ ತನಿಖೆ ನಡೆಯುತ್ತಿದೆ. ಘಟನೆ ಕುರಿತ ವೃದ್ದಿಮಾನ್ ಸಾಹ ಪ್ರತಿಕ್ರಿಯೆ ನೀಡಿದ್ದಾರೆ. ಚಿಕ್ಕ ಮಯಸ್ಸಿನಲ್ಲಿ ಕಳ್ಳತನ. ಢಕಾಯಿತರು ಕುರಿತು ಕೇಳಿದ್ದೇವು. ಇದೀಗ ನಮ್ಮ ಮನೆಗೆ ಕಳ್ಳರು ನುಗ್ಗಿದ್ದಾರೆ. ಪೊಲೀಸರು ಈ ಕುರಿತು ತನಿಖೆ ನಡೆಸುತ್ತಾರೆ ಎಂದು ಸಾಹ ಹೇಳಿದ್ದಾರೆ.
ಸಾಹ ಕುಟುಂಬ ಕೋಲ್ಕತ್ತಾದಲ್ಲಿ ವಾಸವಾಗಿದ್ದರೆ. ಸಾಹ ಸಹೋದರ ಮುಂಬೈಲ್ಲಿ ನೆಲೆಸಿದ್ದಾರೆ. ರಜೆ ಕಾರಣ ಸಾಹ ಪೋಷಕರು ಮುಂಬೈಗೆ ತೆರಳಿದ್ದರು. ಲಾಕ್‌ಡೌನ್ ಕಾರಣ ಮುಂಬೈನಲ್ಲಿ ಉಳಿದುಕೊಂಡಿದ್ದಾರೆ.