ಕ್ರಿಕೆಟ್‌ಗೆ ತಟ್ಟಿದ ಕೊರೊನಾ ವೈರಸ್; ಸಂಕಷ್ಟದಲ್ಲಿ ಇಂಡೋ-ಪಾಕ್ ಏಷ್ಯಾಕಪ್ ಪಂದ್ಯ!

By Suvarna NewsFirst Published Mar 2, 2020, 3:33 PM IST
Highlights

ಚೀನಾದಲ್ಲಿ ಹುಟ್ಟಿಕೊಂಡ ಕೊರೊನಾ ವೈರಸ್ ಇದೀಗ ವಿಶ್ವದೆಲ್ಲೆಡೆ ಪಸರಿಸುತ್ತಿದೆ. ಹಲವರು ಪ್ರಾಣ ಕಳೆದುಕೊಂಡಿದ್ದರೆ, ಹಲವರು ಚಿಕಿತ್ಸೆ ಪಡೆಯುತ್ತಿದ್ದಾರೆ. ಕೊರೊನಾ ವೈರಸ್‌ನಿಂದ ವಾಹನ ತಯಾರಿಕೆ, ಪೆಟ್ರೋಲಿಯಂ ಸೇರಿದಂತೆ ಎಲ್ಲಾ ಕ್ಷೇತಕ್ಕೂ ತೀವ್ರ ಹೊಡೆತ ನೀಡಿದೆ. ಇದೀಗ ಕ್ರಿಕೆಟ್‌ಗೂ ಕೊರೊನಾ ವೈರಸ್ ಬಿಸಿ ತಟ್ಟಿದೆ.

ಮುಂಬೈ(ಮಾ.02): ಕೊರೊನಾ ವೈರಸ್ ಭೀತಿ ಕ್ರಿಕೆಟ್‌ಗೂ ಆವರಿಸಿದೆ. ಏಷ್ಯಾಕಪ್ ಟೂರ್ನಿ ಆಯೋಜನೆ ಈಗಾಗಲೇ ಕಗ್ಗಂಟಾಗಿದೆ. ಭದ್ರತೆ ದೃಷ್ಟಿಯಿಂದ ಆತಿಥ್ಯವಹಿಸಿರುವ ಪಾಕಿಸ್ತಾನಕ್ಕೆ ತೆರಳಲು ಭಾರತ ನಿರಾಕರಿಸಿತ್ತು. ಹೀಗಾಗಿ ಆಯೋಜನೆ ಕುರಿತು ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಸಭೆ ಕರೆದಿತ್ತು. ಇದೀಗ ಕೊರೊನಾ ವೈರಸ್‌ನಿಂದ ಸಭೆ ಮುಂದೂಡಲಾಗಿದೆ. 

ಇದನ್ನೂ ಓದಿ: ಇಂಡೋ-ಪಾಕ್ ಪಂದ್ಯ ಖಚಿತ ಪಡಿಸಿದ ಗಂಗೂಲಿ!.

ದುಬೈನಲ್ಲಿ ನಡೆಯಬೇಕಿದ್ದ ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಸಭೆ ಮುಂದೂಡಲಾಗಿದೆ. ಪ್ರಮುಖವಾಗಿ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ದುಬೈನಲ್ಲಿ ಆಯೋಜಿಸಿದ್ದ ಸಭೆಗೆ ಹಾಜರಾಗಲು ಹಿಂದೇಟು ಹಾಕಿದ್ದಾರೆ. ಹೀಗಾಗಿ ಎಸಿಸಿ ಸಭೆ ಮುಂದೂಡಲಾಗಿದೆ.

ಇದನ್ನೂ ಓದಿ: ಏಷ್ಯಾಕಪ್‌ ಆತಿಥ್ಯ ಹಕ್ಕು ಬಿಟ್ಟುಕೊಡಲು ಪಾಕ್‌ ರೆಡಿ?

ಪಾಕಿಸ್ತಾನ ಕ್ರಿಕೆಟ್ ಮಂಡಳಿ ಮುಖ್ಯಸ್ಥ ಎಹಸಾನ್ ಮಾನಿ ಸಭೆಗಾಗಿ ದುಬೈ ತಲಪಿದ್ದರು. ಪಾಕ್ ಕ್ರಿಕೆಟ್ ಸಿಇಎ ತೆರಳಲು ಸಜ್ಜಾಗಿದ್ದರು. ಅಷ್ಟರಲ್ಲಿ ಸೌರವ್ ಗಂಗೂಲಿ ಅಂಡ್ ಟೀಂ ಶಾಕಿಂಗ್ ನ್ಯೂಸ್ ರವಾನಿಸಿದ್ದಾರೆ. ಕೊರೊನಾ ವೈರಸ್ ಕಾರಣ, ಗಂಗೂಲಿ ಹಾಗೂ ಕಾರ್ಯದರ್ಶಿ ಜಯ್ ಶಾ ದುಬೈಗೆ ಸದ್ಯ ತೆರಳುತ್ತಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. 

ಏಷ್ಯಾಕಪ್ ಆಯೋಜನೆ ಕುರಿತು ಭಾರತ ಹಾಗೂ ಪಾಕಿಸ್ತಾನ ಕ್ರಿಕೆಟ್ ಮಂಡಳಿ ತದ್ವಿರುದ್ದ ಹೇಳಿಕೆ ನೀಡಿತ್ತು. ಪಾಕಿಸ್ತಾನಕ್ಕೆ ಭಾರತ ಆಗಮಿಸುವುದಿಲ್ಲ ಎಂದು ಖಚಿತವಾಗುತ್ತಿದ್ದಂತೆ ಆತಿಥ್ಯ ಬಿಟ್ಟುಕೊಡಲು ಪಾಕ್ ಮುಂದಾಗಿತ್ತು. ಇದರ ಬೆನ್ನಲ್ಲೇ ಗಂಗೂಲಿ, ದುಬೈನಲ್ಲಿ ಭಾರತ ಹಾಗೂ ಪಾಕಿಸ್ತಾನ ನಡುವಿನ ಏಷ್ಯಾಕಪ್ ಪಂದ್ಯ ನಡೆಯಲಿದೆ ಎಂದಿದ್ದರು.

ಗಂಗೂಲಿ ಹೇಳಿಕೆಗೆ ಮುನ್ನ ಪಾಕಿಸ್ತಾನದ ಕ್ರಿಕೆಟ್ ಮಂಡಳಿ, ಏಷ್ಯಾಕಪ್ ಆಯೋಜನೆ ಇನ್ನು ಖಚಿತವಾಗಿಲ್ಲ ಎಂದು ಹೇಳಿತ್ತು. 

#NewsIn100Seconds: ಈ ಕ್ಷಣದ ಪ್ರಮುಖ ಹೆಡ್‌ಲೈನ್ಸ್

"

click me!