Asia Cup ಟೂರ್ನಿಯ ಇತಿಹಾಸ, ಚಾಂಪಿಯನ್ಸ್‌, ತಂಡಗಳ ಕಂಪ್ಲೀಟ್‌ ಡೀಟೈಲ್ಸ್‌..!

By Naveen KodaseFirst Published Aug 24, 2022, 12:00 PM IST
Highlights

ಏಷ್ಯಾಕಪ್‌ ಕ್ರಿಕೆಟ್‌ ಟೂರ್ನಿಗೆ ಕ್ಷಣಗಣನೆ ಆರಂಭ
ಏಷ್ಯಾಕಪ್ ಟೂರ್ನಿಯಲ್ಲಿ ಪ್ರಾಬಲ್ಯ ಮೆರೆದಿರುವ ಟೀಂ ಇಂಡಿಯಾ
ದಾಖಲೆಯ 8ನೇ ಏಷ್ಯಾಕಪ್ ಟೂರ್ನಿ ಮೇಲೆ ಕಣ್ಣಿಟ್ಟಿರುವ ಭಾರತ ಕ್ರಿಕೆಟ್ ತಂಡ


ದುಬೈ(ಆ.24): ಕ್ರಿಕೆಟ್ ಜಗತ್ತಿನ ಚಿತ್ತ ಈಗ 2022ರ ಏಷ್ಯಾಕಪ್ ಟೂರ್ನಿಯತ್ತ ನೆಟ್ಟಿದೆ. ಯುಎಇನಲ್ಲಿ ಇದೇ ಆಗಸ್ಟ್ 27ರಿಂದ ಏಷ್ಯಾಕಪ್ ಕ್ರಿಕೆಟ್ ಟೂರ್ನಿಯು ಆರಂಭವಾಗಲಿದ್ದು, ಭಾರತ, ಪಾಕಿಸ್ತಾನ, ಶ್ರೀಲಂಕಾ, ಬಾಂಗ್ಲಾದೇಶ ಸೇರಿದಂತೆ ಏಷ್ಯಾದ ಆರು ತಂಡಗಳು ಪ್ರಶಸ್ತಿಗಾಗಿ ಕಾದಾಡಲಿವೆ. ಈ ಬಾರಿಯ ಏಷ್ಯಾಕಪ್ ಟೂರ್ನಿಯು ಟಿ20 ಮಾದರಿಯಲ್ಲಿರಲಿದ್ದು, ಮುಂಬರುವ ಐಸಿಸಿ ಟಿ20 ವಿಶ್ವಕಪ್ ಟೂರ್ನಿಗೆ ಪೂರ್ವಭಾವಿ ಸಿದ್ದತೆ ಎನಿಸಲಿದೆ. ಏಷ್ಯಾಕಪ್ ಟೂರ್ನಿಯಲ್ಲಿ ಟೀಂ ಇಂಡಿಯಾ ಹಾಲಿ ಚಾಂಪಿಯನ್ ಎನಿಸಿಕೊಂಡಿದ್ದು, ಇದೀಗ 8ನೇ ಬಾರಿಗೆ ಏಷ್ಯಾಕಪ್ ಟ್ರೋಫಿಗೆ ಮುತ್ತಿಕ್ಕಲು ತುದಿಗಾಲಿನಲ್ಲಿ ನಿಂತಿದೆ.

ಏಷ್ಯಾಕಪ್ ಟೂರ್ನಿಯ ಇತಿಹಾಸ, ಹಿಂದಿನ ಚಾಂಪಿಯನ್‌ಗಳ ಕಂಪ್ಲೀಟ್ ಡೀಟೈಲ್ಸ್

Latest Videos

ಏಷ್ಯಾಖಂಡದ ಬಲಿಷ್ಠ ಕ್ರಿಕೆಟ್‌ ತಂಡಗಳು ಪಾಲ್ಗೊಳ್ಳುವ ಏಷ್ಯಾಕಪ್ ಟೂರ್ನಿಯು 1984ರಿಂದ ಆರಂಭವಾಯಿತು. ಚೊಚ್ಚಲ ಆವೃತ್ತಿಯ ಏಷ್ಯಾಕಪ್ ಟೂರ್ನಿಯಲ್ಲಿ ಸುನಿಲ್ ಗವಾಸ್ಕರ್ ನೇತೃತ್ವದ ಟೀಂ ಇಂಡಿಯಾ ಚಾಂಪಿಯನ್‌ ಆಗಿ ಹೊರಹೊಮ್ಮಿತ್ತು. ಇದಾದ ಬಳಿಕ ಏಷ್ಯಾಕಪ್‌ ಟೂರ್ನಿಯಲ್ಲಿ ಭಾರತ ಕ್ರಿಕೆಟ್‌ ತಂಡವು ಪ್ರಾಬಲ್ಯ ಮೆರೆಯುತ್ತಾ ಬಂದಿದೆ. ಭಾರತ ತಂಡವು 7 ಬಾರಿ ಚಾಂಪಿಯನ್ ಆಗಿದೆ. ಇದಾದ ಬಳಿಕ ಟೀಂ ಇಂಡಿಯಾ, 1988, 1990-91, 1995, 2010, 2016 ಹಾಗೂ 2018ರಲ್ಲಿ ಏಷ್ಯಾಕಪ್ ಚಾಂಪಿಯನ್ ಆಗಿ ಹೊರಹೊಮ್ಮಿದೆ.

ಇನ್ನು ಇದಾದ ಬಳಿಕ ಶ್ರೀಲಂಕಾ ಕ್ರಿಕೆಟ್ ತಂಡವು ಎರಡನೇ ಯಶಸ್ವಿ ತಂಡವಾಗಿ ಹೊರಹೊಮ್ಮಿದೆ. 1986, 1997, 2004, 2008 ಹಾಗೂ 2014ರಲ್ಲಿ ಚಾಂಪಿಯನ್‌ ಪಟ್ಟ ಅಲಂಕರಿಸಿದೆ. ಭಾರತದ ಸಾಂಪ್ರದಾಯಿಕ ಎದುರಾಳಿಯಾದ ಪಾಕಿಸ್ತಾನ ತಂಡವು 2000 ಹಾಗೂ 2012ರಲ್ಲಿ ಚಾಂಪಿಯನ್‌ ಆಗಿ ಹೊರಹೊಮ್ಮಿದೆ.

Asia Cup 2022 ಯುಎಇಗೆ ಬಂದಿಳಿದ ಟೀಂ ಇಂಡಿಯಾ..! 

2022ರ ಏಷ್ಯಾಕಪ್ ಟೂರ್ನಿಯು ಡಬಲ್‌ ರೌಂಡ್ ರಾಬಿನ್ ಮಾದರಿಯಲ್ಲಿ ನಡೆಯಲಿದೆ. ತಲಾ 3 ತಂಡಗಳ 2 ಗುಂಪುಗಳಾಗಿ ವಿಂಗಡಿಸಲಾಗಿದೆ. ಗ್ರೂಪ್ ಹಂತದಲ್ಲಿ ಎರಡು ತಂಡಗಳು ಅಂತಿಮ ನಾಲ್ಕರಘಟ್ಟ ಪ್ರವೇಶಿಸಲಿವೆ. ಅಂತಿಮ ನಾಲ್ಕರಘಟದಲ್ಲಿ ಒಂದು ತಂಡವು ಉಳಿದ ಮೂರು ತಂಡಗಳ ಎದುರು ಕಾದಾಡಲಿದ್ದು, ಮತ್ತೆ ಅಗ್ರ 2 ಸ್ಥಾನ ಪಡೆಯುವ ತಂಡಗಳು ಪ್ರಶಸ್ತಿ ಸುತ್ತಿಗೆ ಲಗ್ಗೆಯಿಡಲಿವೆ. ಈ ಬಾರಿಯ ಏಷ್ಯಾಕಪ್ ಟೂರ್ನಿಯು ಆಗಸ್ಟ್‌ 27ರಿಂದ ಆರಂಭವಾಗಲಿದ್ದು, ಭಾರತ, ಬಾಂಗ್ಲಾದೇಶ, ಪಾಕಿಸ್ತಾನ, ಶ್ರೀಲಂಕಾ, ಆಪ್ಘಾನಿಸ್ತಾನ ಹಾಗೂ ಅರ್ಹತಾ ಸುತ್ತಿನ ವಿಜೇತ ತಂಡವು ಈ ಬಾರಿಯ ಟೂರ್ನಿಯಲ್ಲಿ ಪಾಲ್ಗೊಳ್ಳಲಿವೆ.

ಏಷ್ಯಾಕಪ್ ಟೂರ್ನಿಯಲ್ಲಿ ಪಾಲ್ಗೊಳ್ಳುತ್ತಿರುವ ತಂಡಗಳ ಕಂಪ್ಲೀಟ್ ಡೀಟೈಲ್ಸ್‌

ಏಷ್ಯಾಕಪ್ ಟೂರ್ನಿಗೆ ಭಾರತ ತಂಡ ಹೀಗಿದೆ ನೋಡಿ: 

ರೋಹಿತ್‌ ಶರ್ಮಾ(ನಾಯಕ), ಕೆ.ಎಲ್‌.ರಾಹುಲ್‌(ಉಪನಾಯಕ), ವಿರಾಟ್‌ ಕೊಹ್ಲಿ, ಸೂರ್ಯಕುಮಾರ್‌ ಯಾದವ್, ದೀಪಕ್‌ ಹೂಡಾ, ದಿನೇಶ್‌ ಕಾರ್ತಿಕ್‌, ಹಾರ್ದಿಕ್‌ ಪಾಂಡ್ಯ, ರವೀಂದ್ರ ಜಡೇಜಾ, ಆರ್‌. ಅಶ್ವಿನ್‌, ಯಜುವೇಂದ್ರ ಚಹಲ್‌, ರವಿ ಬಿಷ್ಣೋಯ್‌, ಭುವನೇಶ್ವರ್‌ ಕುಮಾರ್‌, ಅಶ್‌ರ್‍ದೀಪ್‌ ಸಿಂಗ್‌, ಆವೇಶ್‌ ಖಾನ್‌.

ಮೀಸಲು ಆಟಗಾರರು: ಶ್ರೇಯಸ್‌ ಅಯ್ಯರ್‌, ದೀಪಕ್‌ ಚಹರ್‌, ಅಕ್ಷರ್‌ ಪಟೇಲ್‌.

ಏಷ್ಯಾಕಪ್ ಕ್ರಿಕೆಟ್ ಟೂರ್ನಿಗೆ ಶ್ರೀಲಂಕಾ ಕ್ರಿಕೆಟ್ ತಂಡ ಹೀಗಿದೆ ನೋಡಿ

ದಸುನ್ ಶನಕಾ(ನಾಯಕ), ದನುಷ್ಕಾ ಗುಣತಿಲಕ, ಪತುಮ್ ನಿಸ್ಸಾಂಕ, ಕುಸಾಲ್ ಮೆಂಡೀಸ್, ಚರಿತ್ ಅಸಲಂಕಾ, ಭನುಕಾ ರಾಜಪಕ್ಸಾ, ಅಸೀನ್ ಬಾಂದ್ರಾ, ಧನಂಜಯ ಡಿ ಸಿಲ್ವಾ, ವನಿಂದು ಹಸರಂಗ, ಮಹೀಶ್ ತೀಕ್ಷಣ, ಜೆಫ್ರಿ ವೆಂಡರ್ಸೆ, ಪ್ರವೀಣ್ ಜಯವಿಕ್ರಮ, ಚಮಿಕಾ ಕರುಣರತ್ನೆ, ದಿಲ್ಯ್ಷಾನ್ ಮಧುಶನಕ, ಮಹೀಶಾ ಪತಿರಣ, ನುವಾನಿದು ಫರ್ನಾಂಡೋ, ದುಸ್ಮಂತಾ ಚಮೀರ, ದಿನೇಶ್ ಚಾಂಡಿಮಲ್.

ಏಷ್ಯಾಕಪ್ ಕ್ರಿಕೆಟ್ ಟೂರ್ನಿಗೆ ಪಾಕಿಸ್ತಾನ ಕ್ರಿಕೆಟ್ ತಂಡ ಹೀಗಿದೆ ನೋಡಿ.

ಬಾಬರ್ ಅಜಂ(ನಾಯಕ), ಶಾದಾಬ್ ಖಾನ್, ಆಸಿಫ್ ಅಲಿ, ಫಖರ್ ಜಮಾನ್, ಹೈದರ್ ಅಲಿ, ಹ್ಯಾರಿಸ್ ರೌಫ್, ಇಫ್ತಿಕರ್ ಅಹಮದ್, ಕುಶ್ದೀಲ್ ಶಾ, ಮೊಹಮ್ಮದ್ ನವಾಜ್, ಮೊಹಮ್ಮದ್ ರಿಜ್ವಾನ್, ಮೊಹಮ್ಮದ್ ವಾಸೀಂ ಜೂನಿಯರ್, ನಸೀಮ್ ಶಾ, ಶಾಹೀನ್ ಶಾ ಅಫ್ರಿದಿ, ಶೆಹನವಾಜ್‌ ದಿಹಾನಿ, ಉಸ್ಮಾನ್ ಖಾದಿರ್.

ಏಷ್ಯಾಕಪ್ ಕ್ರಿಕೆಟ್ ಟೂರ್ನಿಗೆ ಬಾಂಗ್ಲಾದೇಶ ಕ್ರಿಕೆಟ್ ತಂಡ ಹೀಗಿದೆ ನೋಡಿ.

ಶಕೀಬ್ ಅಲ್ ಹಸನ್(ನಾಯಕ), ಅನ್ಮುಲ್ ಹಕ್, ಮುಷ್ಪಿಕುರ್ ರಹಿಮ್, ಅಫಿಫ್ ಹೊಸೈನ್, ಮೊಸದಕ್ ಹೊಸೈನ್, ಮೊಹಮ್ಮದುಲ್ಲಾ, ಮೆಹದಿ ಹಸನ್, ಮೊಹಮ್ಮದ್ ಸೈಫುದ್ದೀನ್, ಹಸನ್ ಮೊಹಮ್ಮದ್, ಮುಷ್ತಾಫಿಜುರ್ ರೆಹಮಾನ್, ನಸುಮ್‌ ಅಹಮ್ಮದ್, ಶಬ್ಬೀರ್ ರೆಹಮಾನ್, ಮೆಹದಿ ಹಸನ್ ಮಿರಾಜ್, ಎಬೊದತ್ ಹೊಸೈನ್, ಪರ್ವೇಜ್‌ ಹೊಸೈನ್ ಎಮೊನ್, ನುರುಲ್ ಹಸನ್, ಟಸ್ಕಿನ್ ಅಹಮದ್.

ಏಷ್ಯಾಕಪ್ ಟೂರ್ನಿಗೆ ಆಫ್ಘಾನಿಸ್ತಾನ ತಂಡ ಹೀಗಿದೆ ನೋಡಿ

ಮೊಹಮ್ಮದ್ ನಬಿ(ನಾಯಕ), ನಜಿಬುಲ್ಲಾ ಜದ್ರಾನ್, ಅಪ್ಸರ್‌ ಝಝೈ, ಅಜ್ಮತುಲ್‌ ಒಮರ್ಝೈ, ಫರಿದ್ ಅಹಮದ್ ಮಲಿಕ್, ಫಜಲ್‌ಹಕ್‌ ಫಾರೂಕಿ, ಹಸ್ಮತುಲ್ಲಾ ಶಾಹಿದಿ, ಹಜರುತುಲ್ಲಾ ಝಝೈ, ಇಬ್ರಾಹಿಂ ಜದ್ರಾನ್, ಕರಿಮ್ ಜನತ್, ಮುಜೀಬ್ ಉರ್ ರೆಹಮಾನ್, ನವೀನ್ ಉಲ್ ಹಕ್, ನೂರ್ ಅಹಮದ್,  ರೆಹಮತುಲ್ಲಾ ಗುರ್ಬಾಜ್‌, ರಶೀದ್ ಖಾನ್, ಸಮಿವುಲ್ಲಾ ಶಿನ್ವಾರಿ

click me!