* ಟಿ20 ವಿಶ್ವಕಪ್ ಟೂರ್ನಿಗೆ ಶ್ರೀಲಂಕಾ ಕ್ರಿಕೆಟ್ ತಂಡ ಪ್ರಕಟ
* ಲಂಕಾ ತಂಡವನ್ನು ಮುನ್ನಡೆಸಲಿರುವ ದಶುನ್ ಶನಕಾ
* ಏಷ್ಯಾಕಪ್ ಟ್ರೋಫಿ ಗೆದ್ದು ಆತ್ಮವಿಶ್ವಾಸದಿಂದ ಬೀಗುತ್ತಿರುವ ಲಂಕಾ
ಕೊಲಂಬೊ(ಸೆ.17): ಮುಂಬರುವ ಐಸಿಸಿ ಟಿ20 ವಿಶ್ವಕಪ್ ಟೂರ್ನಿಗೆ 15 ಆಟಗಾರರನ್ನೊಳಗೊಂಡ ಬಲಿಷ್ಠ ಶ್ರೀಲಂಕಾ ಕ್ರಿಕೆಟ್ ತಂಡ ಪ್ರಕಟವಾಗಿದೆ. ಇತ್ತೀಚೆಗಷ್ಟೇ ಏಷ್ಯಾಕಪ್ ಚಾಂಪಿಯನ್ ಆಗಿ ಹೊರಹೊಮ್ಮಿರುವ ಶ್ರೀಲಂಕಾ ಕ್ರಿಕೆಟ್ ತಂಡವು ಆತ್ಮವಿಶ್ವಾಸದಿಂದ ಬೀಗುತ್ತಿದ್ದು, ದಶುನ್ ಶನಕಾ, ನಾಯಕನಾಗಿ ಲಂಕಾ ತಂಡವನ್ನು ಮುನ್ನಡೆಸಲಿದ್ದಾರೆ.
ಶ್ರೀಲಂಕಾ ಕ್ರಿಕೆಟ್ ತಂಡವು, ದುಸ್ಮಂತ್ ಚಮೀರಾ ಹಾಗೂ ಲಹಿರು ಕುಮಾರ ಅವರನ್ನು 15 ಆಟಗಾರರನ್ನೊಳಗೊಂಡ ತಂಡದಲ್ಲಿ ಮಣೆ ಹಾಕಲಾಗಿದೆ. ಆದರೆ ಈ ಇಬ್ಬರು ಆಟಗಾರರು ಗಾಯದ ಸಮಸ್ಯೆಯಿಂದ ಬಳಲುತ್ತಿದ್ದು, ಟಿ20 ವಿಶ್ವಕಪ್ ಟೂರ್ನಿಗೂ ಮುನ್ನ ಸಂಪೂರ್ಣ ಫಿಟ್ ಆದರಷ್ಟೇ ವಿಶ್ವಕಪ್ ಟೂರ್ನಿಯನ್ನಾಡಲು ಆಸ್ಟ್ರೇಲಿಯಾಗೆ ವಿಮಾನ ಏರಲಿದ್ದಾರೆ. ಇನ್ನು ಶ್ರೀಲಂಕಾ ಕ್ರಿಕೆಟ್ ತಂಡವು ಆಶೀನ್ ಬಂಡಾರ, ಪ್ರವೀಣ್ ಜಯವಿಕ್ರಮ, ದಿನೇಶ್ ಚಾಂಡಿಮಲ್, ಬಿನುರಾ ಫರ್ನಾಂಡೋ ಹಾಗೂ ನುವಾನಿದು ಫರ್ನಾಂಡೋ ಅವರನ್ನು ಮೀಸಲು ಆಟಗಾರರಾಗಿ ನೇಮಕ ಮಾಡಲಾಗಿದೆ. ಆದರೆ ಆಶೀನ್ ಬಂಡಾರ ಹಾಗೂ ಪ್ರವೀಣ್ ಜಯವಿಕ್ರಮ ಮಾತ್ರ ಲಂಕಾ ತಂಡದ ಜತೆಗೆ ಆಸ್ಟ್ರೇಲಿಯಾ ಪ್ರವಾಸ ಮಾಡಲಿದ್ದಾರೆ.
undefined
ICC T20 World Cup: ಚುಟುಕು ಕ್ರಿಕೆಟ್ ವಿಶ್ವಕಪ್ ಟೂರ್ನಿಗೆ ಪಾಕಿಸ್ತಾನ ಕ್ರಿಕೆಟ್ ತಂಡ ಪ್ರಕಟ
ಏಷ್ಯಾಕಪ್ ಟೂರ್ನಿಯಲ್ಲಿ ಪಾಲ್ಗೊಂಡ ಬಹುತೇಕ ಆಟಗಾರರು, ಟಿ20 ವಿಶ್ವಕಪ್ ಟೂರ್ನಿಗೆ ಶ್ರೀಲಂಕಾ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಏಷ್ಯಾಕಪ್ ಟೂರ್ನಿಯಲ್ಲಿ ಕಮ್‌ಬ್ಯಾಕ್ ಮಾಡಿದ್ದ ಮಧ್ಯಮ ಕ್ರಮಾಂಕದ ಬ್ಯಾಟರ್ ದಿನೇಶ್ ಚಾಂಡಿಮಲ್, ಮೀಸಲು ಆಟಗಾರರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಯುಎಇನಲ್ಲಿ ನಡೆದ ಏಷ್ಯಾಕಪ್ ಟೂರ್ನಿಯಲ್ಲಿ ಮಾರಕ ವೇಗದ ಬೌಲಿಂಗ್ ಮೂಲಕ ಮಿಂಚಿದ ಎಡಗೈ ವೇಗಿ ದಿಲ್ಷನ್ ಮಧುಶನಕ, ಟಿ20 ವಿಶ್ವಕಪ್ ಟೂರ್ನಿಗೆ ಲಂಕಾ ತಂಡದಲ್ಲಿ ಸ್ಥಾನ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನು ಧನಂಜಯ ಡಿ ಸಿಲ್ವಾ ಹಾಗೂ ಜೆಫ್ರಿ ವೆಂಡರ್‌ಸೆ ಕೂಡಾ ಲಂಕಾ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.
Here's your 🇱🇰 squad for the ICC Men's T20 World Cup! ⬇️ pic.twitter.com/GU7EIl6zOw
— Sri Lanka Cricket 🇱🇰 (@OfficialSLC)ಟಿ20 ವಿಶ್ವಕಪ್ ಟೂರ್ನಿಗೆ ಶ್ರೀಲಂಕಾ ಕ್ರಿಕೆಟ್ ತಂಡ ಹೀಗಿದೆ ನೋಡಿ
ದಶುನ್ ಶನಕಾ(ನಾಯಕ), ಧನುಷ್ಕಾ ಗುಣತಿಲಕ, ಪಥುಮ್ ನಿಸ್ಸಾಂಕ, ಕುಸಾಲ್ ಮೆಂಡಿಸ್, ಚರಿತ್ ಅಸಲಂಕಾ, ಭಾನುಕ ರಾಜಪಕ್ಸಾ, ಧನಂಜಯ ಡಿ ಸಿಲ್ವಾ, ವನಿಂದು ಹಸರಂಗ, ಮಹೀಶ ತೀಕ್ಷಣ, ಜೆಫ್ರಿ ವೆಂಡರ್‌ಸೆ, ಚಮಿಕಾ ಕರುಣಾರತ್ನೆ, ದುಸ್ಮಂತಾ ಚಮೀರಾ(ಫಿಟ್ನೆಸ್ ಅವಲಂಬಿತವಾಗಿದೆ), ಲಹಿರು ಕುಮಾರ(ಫಿಟ್ನೆಸ್ ಅವಲಂಬಿತವಾಗಿದೆ), ದಿಲ್ಷನ್ ಮಧುಶನಕ, ಪ್ರಮೋದ್ ಮದುಶನ್.
ಮೀಸಲು ಆಟಗಾರರು: ಆಶೀನ್ ಬಂಡಾರ, ಪ್ರವೀಣ್ ಜಯವಿಕ್ರಮ, ದಿನೇಶ್ ಚಾಂಡಿಮಲ್, ಬಿನುರಾ ಫರ್ನಾಂಡೋ, ನುವಾನಿದು ಫರ್ನಾಂಡೋ.