
ದುಬೈ (ಸೆ.10) ಏಷ್ಯಾಕಪ್ ಟೂರ್ನಿ ಟೂರ್ನಿಯ ಎರಡನೇ ದಿನ ಭಾರತ ಹಾಗೂ ಯುಎಐ ಮುಖಾಮಖಿಯಾಗಿದೆ. ಟೀಂ ಇಂಡಿಯಾ ಎದುರು ಯುಎಐ ದುರ್ಬಲ ತಂಡ. ಆದರೂ ದಿಟ್ಟ ಹೋರಾಟ ನೀಡುವ ವಿಶ್ವಾಸದೊಂದಿಗೆ ಯುಎಐ ತಂಡ ಕಣಕ್ಕಿಳಿದಿತ್ತು. ಟೀಂ ಇಂಡಿಯಾ ದಾಳಿಗೆ ಕಂಗೆಟ್ಟ ಯುಎಐ ಕೇವಲ 57 ರನ್‌ಗೆ ಆಲೌಟ್ ಆಗಿದೆ. ಅಲಿಶಾನ್ ಶರಾಫು ಸಿಡಿಸಿದ 22 ರನ್ ಹೊರತುಪಡಿಸಿದರೆ ಇನ್ನುಳಿದ ಎಲ್ಲಾ ಬ್ಯಾಟರ್ ರನ್ ಗಣಿಸಲು ತಿಣುಕಾಡಿ ಪೆವಿಲಿಯನ್ ಸೇರಿಕೊಂಡರು. 13.1 ಓವರ್‌ನಲ್ಲಿ ಯುಎಐ 57 ರನ್‌ಗೆ ಆಲೌಟ್ ಆಯಿತು.
ಏಷ್ಯಾಕಪ್ ಟೂರ್ನಿಯ ತನ್ನ ಮೊದಲ ಪಂದ್ಯದಲ್ಲಿ ಭಾರತ ಟಾಸ್ ಗೆದ್ದಿತ್ತು. ಯುಎಐ ತಂಡವನ್ನು ಬ್ಯಾಟಿಂಗ್ ಆಹ್ವಾನಿಸಿದ ಸೂರ್ಯಕುಮಾರ್ ಯಾದವ್ ನಿರ್ಧಾರ ಸರಿಯಾಗಿತ್ತು. ನಾಯಕ ಮೊಹಮ್ಮದ್ ವಾಸೀಮ್ ಹಾಗೂ ಅಲಿಶನ್ ಶರಾಫು ಆರಂಭಿಕರಾಗಿ ಕಣಕ್ಕಿಳಿದಿದ್ದರು. ಈ ಜೋಡಿ ಉತ್ತಮ ಆರಂಭ ನೀಡಿತ್ತು. ಆದರೆ ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ಇರಲಿಲ್ಲ. ಮೊದಲ ವಿಕೆಟ್‌ಗೆ ಈ ಜೋಡಿ 26 ರನ್ ಜೊತೆಯಾಟ ನೀಡಿತ್ತು. 17 ಎಸೆತದಲ್ಲಿ ಅಲಿಶನ್ 22 ರನ್ ಸಿಡಿಸಿ ಔಟಾದರು. ಇದರ ಬೆನ್ನಲ್ಲೇ ವಿಕೆಟ್ ಪತನ ಆರಂಭಗೊಂಡಿತು. ವಾಸೀಮ್ 19 ರನ್ ಸಿಡಿಸಿ ನಿರ್ಗಮಿಸಿದರು.
ಆರಂಭಿಕ ಇಬ್ಬರು ಮಾತ್ರ ಎರಂಡಂಕಿ ದಾಟಿದ್ದಾರೆ. ಇನ್ನುಳಿದ ಎಲ್ಲಾ ಬ್ಯಾಟರ್ 1,2,3ಕ್ಕೆ ತೃಪ್ತಿ ಪಟ್ಟುಕೊಂಡರು. ರನ್ ಗಣಿಸಲು, ವಿಕೆಟ್ ಉಳಿಸಲು ಕೊಳ್ಳಲು ಯುಎಐ ಪರದಾಡಿತು. ಇದರ ಪರಿಣಾಮ ಯುಎಐ ಅತ್ಯಲ್ಪ ಮೊತ್ತಕ್ಕೆ ಆಲೌಟ್ ಆಯಿತು.
ಯಾರಾಗ್ತಾರೆ 2025ರ ಏಷ್ಯಾಕಪ್ ಚಾಂಪಿಯನ್? ಭವಿಷ್ಯ ನುಡಿದ ಸನ್ನಿ, ಡಿಕೆ, ಹರ್ಷಾ ಬೋಗ್ಲೆ!
ಭಾರತದ ಪರ ಅದ್ಬುತ ಬೌಲಿಂಗ್ ದಾಳಿ ಸಂಘಟಿಸಿದ ಕುಲ್ದೀಪ್ ಯಾದವ್ 4 ವಿಕೆಟ್ ಕಬಳಿಸಿದರು. ಇನ್ನು ಶಿವಂ ದುಬೆ 3, ವರುಣ್ ಚಕ್ರವರ್ತಿ 1, ಅಕ್ಸರ್ ಪಟೇಲ್ 1, ಜಸ್ಪ್ರೀತ್ ಬುಮ್ರಾ 1, ಹಾರ್ದಿಕ್ ಪಾಂಡ್ಯ 1 ವಿಕೆಟ್ ಕಬಳಿಸಿದರು.
ಅಭಿಶೇಕ್ ಶರ್ಮಾ, ಶುಭಮನ್ ಗಿಲ್, ಸೂರ್ಯಕುಮಾರ್ ಯಾದವ್ (ನಾಯಕ), ತಿಲಕ್ ವರ್ಮಾ, ಸಂಜು ಸ್ಯಾಮ್ಸ್, ಶಿವಂ ದುಬೆ, ಹಾರ್ದಿಕ್ ಪಾಂಡ್ಯ, ಅಕ್ಸರ್ ಪಟೇಲ್, ಕುಲ್ದೀಪ್ ಯಾದವ್, ಜಸ್ಪ್ರೀತ್ ಬುಮ್ರಾ, ವರುಣ್ ಚಕ್ರವರ್ತಿ,
ಮೊಹಮ್ಮದ್ ವಾಸೀಮ್ (ನಾಯಕ), ಅಲಿಶಾನ್ ಶರಾಫು, ಮೊಹಮ್ಮದ್ ಝೊಹೈಬ್, ರಾಹುಲ್ ಚೋಪ್ರಾ, ಅಸೀಫ್ ಖಾನ್, ಹರ್ಷಿತ್ ಕೌಶಿಕ್, ಧ್ರುವ್ ಪರಾಶರ್, ಹೈದರ್ ಆಲಿ, ಮೊಹಮ್ಮದ್ ರೋಹಿದ್ ಖಾನ್, ಜುಲೈನ್ ಸಿದ್ದಿಖಿ, ಸಿಮ್ರನ್‌ಜೀತ್ ಸಿಂಗ್
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.