2025ರ ಏಷ್ಯಾಕಪ್: ಟಿವಿ ಮತ್ತು ಲೈವ್ ಸ್ಟ್ರೀಮಿಂಗ್ ಕಂಪ್ಲೀಟ್ ಡೀಟೈಲ್ಸ್‌

Published : Sep 04, 2025, 05:41 PM IST
Asia cup

ಸಾರಾಂಶ

ಸೆಪ್ಟೆಂಬರ್ 9 ರಿಂದ ಯುಎಇಯಲ್ಲಿ ಆರಂಭವಾಗುವ ಏಷ್ಯಾಕಪ್ ಟಿ20 ಟೂರ್ನಿಯಲ್ಲಿ ಭಾರತ ಸೂರ್ಯಕುಮಾರ್ ಯಾದವ್ ನಾಯಕತ್ವದಲ್ಲಿ ಕಣಕ್ಕಿಳಿಯಲಿದೆ. 8 ಬಾರಿ ಚಾಂಪಿಯನ್ ಆಗಿರುವ ಭಾರತ ತಂಡವು 9ನೇ ಟ್ರೋಫಿ ಮೇಲೆ ಕಣ್ಣಿಟ್ಟಿದೆ. ಸೆಪ್ಟೆಂಬರ್ 10 ರಂದು ಯುಎಇ ವಿರುದ್ಧ ಭಾರತ ತನ್ನ ಅಭಿಯಾನ ಆರಂಭಿಸಲಿದೆ.

ಬೆಂಗಳೂರು: 2025ರ ಏಷ್ಯಾಕಪ್ ಕ್ರಿಕೆಟ್ ಟೂರ್ನಿಯು ಇದೇ ಸೆಪ್ಟೆಂಬರ್ 9ನೇ ತಾರೀಕು ಯುಎಇಯಲ್ಲಿ ಶುರುವಾಗ್ತಿದೆ. ಟಿ20 ಮಾದರಿಯಲ್ಲಿ ನಡೆಯೋ ಈ ಟೂರ್ನಿಯಲ್ಲಿ ಭಾರತ, ಶ್ರೀಲಂಕಾ, ಪಾಕಿಸ್ತಾನ, ಆಫ್ಘಾನಿಸ್ತಾನ, ಬಾಂಗ್ಲಾದೇಶ, ಯುಎಇ, ಓಮನ್ ಮತ್ತು ಹಾಂಕಾಂಗ್ ಹೀಗೆ ಒಟ್ಟು 8 ತಂಡಗಳು ಭಾಗವಹಿಸ್ತಿವೆ. ಹಾಲಿ ಚಾಂಪಿಯನ್ ಭಾರತ, ಏಷ್ಯಾಕಪ್ ಟೂರ್ನಿಯಲ್ಲಿ 8 ಬಾರಿ ಟ್ರೋಫಿಗೆ ಮುತ್ತಿಕ್ಕುವ ಮೂಲಕ ಯಶಸ್ವಿ ತಂಡವಾಗಿ ಹೊರಹೊಮ್ಮಿದೆ.

ಇದೀಗ ಟೀಂ ಇಂಡಿಯಾ 9ನೇ ಬಾರಿಗೆ ಏಷ್ಯಾಕಪ್ ಟ್ರೋಫಿ ಜಯಿಸುವ ವಿಶ್ವಾಸದಲ್ಲಿದ್ದು, ಸೂರ್ಯಕುಮಾರ್ ಯಾದವ್ ನಾಯಕನಾಗಿ ಭಾರತ ತಂಡವನ್ನು ಮುನ್ನಡೆಸಲಿದ್ದಾರೆ. ಇನ್ನು ಶುಭ್‌ಮನ್ ಗಿಲ್ ಉಪನಾಯಕನಾಗಿ ಕಾರ್ಯನಿರ್ವಹಿಸಲಿದ್ದಾರೆ. ಭಾರತ ತಂಡವು ಸೆಪ್ಟೆಂಬರ್ 10ರಂದು ಯುಎಇ ವಿರುದ್ದ ಕಣಕ್ಕಿಳಿಯುವ ಮೂಲಕ ಏಷ್ಯಾಕಪ್ ಟೂರ್ನಿಯಲ್ಲಿ ತನ್ನ ಅಭಿಯಾನವನ್ನು ಆರಂಭಿಸಲಿದೆ. ಇನ್ನು ಇದಾದ ಬಳಿಕ ಸೆಪ್ಟೆಂಬರ್ 14ರಂದು ಬದ್ದ ಎದುರಾಳಿ ಪಾಕಿಸ್ತಾನ ಎದುರು ಕಾದಾಡಲಿದೆ. ಇದಾದ ಬಳಿಕ ಸೆಪ್ಟೆಂಬರ್ 19ರಂದು ಓಮಾನ್ ವಿರುದ್ದ ಗ್ರೂಪ್ ಹಂತದ ಕೊನೆಯ ಪಂದ್ಯವನ್ನು ಆಡಲಿದೆ.

ಏಷ್ಯಾಕಪ್‌ಗೆ ಭಾರತ ತಂಡ:

ಸೂರ್ಯಕುಮಾರ್ ಯಾದವ್ (ನಾಯಕ), ಶುಭ್‌ಮನ್ ಗಿಲ್ (ಉಪನಾಯಕ), ಅಭಿಷೇಕ್ ಶರ್ಮಾ, ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ, ಶಿವಂ ದುಬೆ, ಅಕ್ಷರ್ ಪಟೇಲ್, ಜಿತೇಶ್ ಶರ್ಮಾ, ಜಸ್ಪ್ರೀತ್ ಬುಮ್ರಾ, ವರುಣ್ ಚಕ್ರವರ್ತಿ, ಅರ್ಷದೀಪ್ ಸಿಂಗ್, ಕುಲ್ದೀಪ್ ಯಾದವ್, ಸಂಜು ಸ್ಯಾಮ್ಸನ್ ಇದ್ದಾರೆ. ಪ್ರಸಿದ್ಧ್ ಕೃಷ್ಣ, ವಾಷಿಂಗ್ಟನ್ ಸುಂದರ್, ರಿಯಾನ್ ಪರಾಗ್, ಧ್ರುವ್ ಜುರೆಲ್, ಯಶಸ್ವಿ ಜೈಸ್ವಾಲ್ ರಿಸರ್ವ್ ಆಟಗಾರರು.

ಏಷ್ಯಾ ಕಪ್ 2025 ವೇಳಾಪಟ್ಟಿ ಗುಂಪು ಹಂತ

ಸೆಪ್ಟೆಂಬರ್ 9 (ಮಂಗಳವಾರ): ಅಫ್ಘಾನಿಸ್ತಾನ vs ಹಾಂಗ್ ಕಾಂಗ್

ಸೆಪ್ಟೆಂಬರ್ 10 (ಬುಧವಾರ): ಭಾರತ vs ಯುಎಇ

ಸೆಪ್ಟೆಂಬರ್ 11 (ಗುರುವಾರ): ಬಾಂಗ್ಲಾದೇಶ vs ಹಾಂಗ್ ಕಾಂಗ್

ಸೆಪ್ಟೆಂಬರ್ 12 (ಶುಕ್ರವಾರ): ಪಾಕಿಸ್ತಾನ vs ಓಮನ್

ಸೆಪ್ಟೆಂಬರ್ 13 (ಶನಿವಾರ): ಬಾಂಗ್ಲಾದೇಶ vs ಶ್ರೀಲಂಕಾ

ಸೆಪ್ಟೆಂಬರ್ 14 (ಭಾನುವಾರ): ಭಾರತ vs ಪಾಕಿಸ್ತಾನ

ಸೆಪ್ಟೆಂಬರ್ 15 (ಸೋಮವಾರ): ಶ್ರೀಲಂಕಾ vs ಹಾಂಗ್ ಕಾಂಗ್

ಸೆಪ್ಟೆಂಬರ್ 16 (ಮಂಗಳವಾರ): ಬಾಂಗ್ಲಾದೇಶ vs ಅಫ್ಘಾನಿಸ್ತಾನ

ಸೆಪ್ಟೆಂಬರ್ 17 (ಬುಧವಾರ): ಪಾಕಿಸ್ತಾನ vs ಯುಎಇ

ಸೆಪ್ಟೆಂಬರ್ 18 (ಗುರುವಾರ): ಶ್ರೀಲಂಕಾ vs ಅಫ್ಘಾನಿಸ್ತಾನ

ಸೆಪ್ಟೆಂಬರ್ 19 (ಶುಕ್ರವಾರ): ಭಾರತ vs ಓಮನ್

ಸೂಪರ್ 4 ಹಂತ

ಸೆಪ್ಟೆಂಬರ್ 20 (ಶನಿವಾರ): ಗುಂಪು B ಅರ್ಹತೆ 1 vs ಗುಂಪು B ಅರ್ಹತೆ 2

ಸೆಪ್ಟೆಂಬರ್ 21 (ಭಾನುವಾರ): ಗುಂಪು A ಅರ್ಹತೆ 1 vs ಗುಂಪು A ಅರ್ಹತೆ 2

ಸೆಪ್ಟೆಂಬರ್ 23 (ಮಂಗಳವಾರ): ಗುಂಪು A ಅರ್ಹತೆ 1 vs ಗುಂಪು B ಅರ್ಹತೆ 2

ಸೆಪ್ಟೆಂಬರ್ 24 (ಬುಧವಾರ): ಗುಂಪು B ಅರ್ಹತೆ 1 vs ಗುಂಪು A ಅರ್ಹತೆ 2

ಸೆಪ್ಟೆಂಬರ್ 25 (ಗುರುವಾರ): ಗುಂಪು A ಅರ್ಹತೆ 2 vs ಗುಂಪು B ಅರ್ಹತೆ 2

 ಸೆಪ್ಟೆಂಬರ್ 26 (ಶುಕ್ರವಾರ): ಗುಂಪು A ಅರ್ಹತೆ 1 vs ಗುಂಪು B ಅರ್ಹತೆ 1

ಫೈನಲ್: ಸೆಪ್ಟೆಂಬರ್ 28 (ಭಾನುವಾರ)

ಏಷ್ಯಾಕಪ್ ಎಲ್ಲಿ ನೋಡಬಹುದು?

ಏಷ್ಯಾಕಪ್‌ನ ಎಲ್ಲಾ ಪಂದ್ಯಗಳನ್ನೂ ಸೋನಿ ನೆಟ್‌ವರ್ಕ್‌ನಲ್ಲಿ ನೇರಪ್ರಸಾರ ನೋಡಬಹುದು. ಜೊತೆಗೆ ಸೋನಿ ಲಿವ್ ಓಟಿಟಿ ವೇದಿಕೆಯಲ್ಲೂ ನೇರಪ್ರಸಾರ ನೋಡಬಹುದು.

ಪಂದ್ಯಗಳು ಯಾವಾಗ ಶುರು?

ಏಷ್ಯಾ ಕಪ್‌ನ ಎಲ್ಲಾ ಪಂದ್ಯಗಳು ಭಾರತೀಯ ಕಾಲಮಾನ ರಾತ್ರಿ 8 ಗಂಟೆಗೆ ಶುರುವಾಗಲಿವೆ. ಸೆಪ್ಟೆಂಬರ್ 15ರಂದು ಯುಎಇ ಮತ್ತು ಓಮನ್ ನಡುವಿನ ಪಂದ್ಯ ಮಾತ್ರ ಸಂಜೆ 5.30ಕ್ಕೆ ಶುರುವಾಗಲಿದೆ.

 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಮೇಲ್ಮನವಿ ಅರ್ಜಿ ವಜಾಗೊಳಿಸಿದ ಹೈಕೋರ್ಟ್, ಡಿ.7ಕ್ಕೆ ಕರ್ನಾಟಕ ಕ್ರಿಕೆಚ್ ಸಂಸ್ಥೆ ಚುನಾವಣೆ
ಕಾಂಗರೂ ನಾಡಲ್ಲಿ ಶತಕದ ಬರ ನೀಗಿಸಿಕೊಂಡ ಜೋ ರೂಟ್! ಕೊನೆಗೂ ತಪ್ಪಿದ ಹೇಡನ್ 'ಬೆತ್ತಲೆ ಸೇವೆ'!