Asia Cup 2023 ಪಾಕ್‌ ಎದುರಿನ ಹೈವೋಲ್ಟೇಜ್‌ ಪಂದ್ಯಕ್ಕೂ ಮುನ್ನ ಟೀಂ ಇಂಡಿಯಾಗೆ ಮತ್ತಷ್ಟು ಬಲ..!

By Naveen Kodase  |  First Published Sep 9, 2023, 12:44 PM IST

ಟೀಂ ಇಂಡಿಯಾ ವಿಕೆಟ್ ಕೀಪರ್‌ ಬ್ಯಾಟರ್ ಕೆ ಎಲ್ ರಾಹುಲ್‌ ಸಂಪೂರ್ಣ ಫಿಟ್ ಆದ ಬಳಿಕ ಇದೀಗ ತಂಡ ಕೂಡಿಕೊಂಡಿದ್ದು, ಪಾಕಿಸ್ತಾನ ಎದುರು ಕಣಕ್ಕಿಳಿಯುವುದು ಬಹುತೇಕ ಖಚಿತ ಎನಿಸಿದೆ. ಕನ್ನಡಿಗ ಕೆ ಎಲ್ ರಾಹುಲ್, ಏಷ್ಯಾಕಪ್ ಟೂರ್ನಿಗೆ ಆಯ್ಕೆಯಾಗಿದ್ದರೂ, ಗ್ರೂಪ್ ಹಂತದ ಮೊದಲೆರಡು ಪಂದ್ಯಗಳಿಗೆ ಅಲಭ್ಯರಾಗಿದ್ದರು.


ಕೊಲಂಬೊ(ಸೆ.09): ಮುಂಬರುವ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಗಾಗಿ ಏಷ್ಯಾದ ಕ್ರಿಕೆಟ್‌ ತಂಡಗಳು ತಮ್ಮ ತಯಾರಿಗಾಗಿ ಏಷ್ಯಾಕಪ್ ಟೂರ್ನಿಯಲ್ಲಿ ಪಾಲ್ಗೊಂಡು ಭರ್ಜರಿ ಕಸರತ್ತು ನಡೆಸುತ್ತಿವೆ. ಇದೀಗ ಸೆಪ್ಟೆಂಬರ್ 10ರಂದು ಸೂಪರ್ 4 ಹಂತದಲ್ಲಿ ಬದ್ದ ಎದುರಾಳಿಗಳಾದ ಭಾರತ ಹಾಗೂ ಪಾಕಿಸ್ತಾನ ತಂಡಗಳು ಮುಖಾಮುಖಿಗೆ ಕ್ಷಣಗಣನೆ ಆರಂಭವಾಗಿದೆ. ಹೀಗಿರುವಾಗಲೇ ಟೀಂ ಇಂಡಿಯಾಗೆ ಮತ್ತಷ್ಟು ಬಲ ಸಿಕ್ಕಂತೆ ಆಗಿದೆ.

ಹೌದು, ಪತ್ನಿಯ ಹೆರಿಗೆ ಹಿನ್ನೆಲೆಯಲ್ಲಿ ಭಾರತಕ್ಕೆ ಆಗಮಿಸಿದ್ದ ಟೀಂ ಇಂಡಿಯಾದ ತಾರಾ ವೇಗಿ ಜಸ್‌ಪ್ರೀತ್‌ ಬುಮ್ರಾ ಶ್ರೀಲಂಕಾಕ್ಕೆ ವಾಪಸಾಗಿದ್ದು, ತಂಡ ಕೂಡಿಕೊಂಡಿದ್ದಾರೆ. ನೇಪಾಳ ವಿರುದ್ಧದ ಪಂದ್ಯಕ್ಕೆ ಬುಮ್ರಾ ಗೈರಾಗಿದ್ದರು. ಏಕದಿನ ತಂಡಕ್ಕೆ ವಾಪಸಾದ ಬಳಿಕ ಬುಮ್ರಾ ಇನ್ನಷ್ಟೇ ಪಂದ್ಯದಲ್ಲಿ ಬೌಲ್‌ ಮಾಡಬೇಕಿದೆ. ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಮಳೆಯ ಕಾರಣ ಭಾರತ ಬೌಲ್‌ ಮಾಡಿರಲಿಲ್ಲ. ಭಾನುವಾರದ ಸೂಪರ್‌-4 ಪಂದ್ಯಕ್ಕೆ ಬುಮ್ರಾ ಆಯ್ಕೆಗೆ ಲಭ್ಯರಿರಲಿದ್ದಾರೆ.

Tap to resize

Latest Videos

ODI World Cup 2023: ಏಕದಿನ ವಿಶ್ವಕಪ್‌ ಟಿಕೆಟ್‌ ಖರೀದಿಗೆ ಮತ್ತೆ ಪರದಾಟ!

ಏಷ್ಯಾಕಪ್‌ ಟೂರ್ನಿಯನ್ನು ಅರ್ಧಕ್ಕೆ ತೊರೆದು ತವರಿಗೆ ವಾಪಾಸ್ಸಾಗಿದ್ದ ಜಸ್ಪ್ರೀತ್ ಬುಮ್ರಾ, ತಮ್ಮ ಚೊಚ್ಚಲ ಮಗುವನ್ನು ಸ್ವಾಗತಿಸಿದ್ದರು. ಪತ್ನಿ ಸಂಜನಾ ಗಣೇಶನ್ ಇದೀಗ ಗಂಡು ಮಗುವಿಗೆ ಜನ್ಮ ನೀಡಿದ್ದರು. ಈ ಕುರಿತಂತೆ ಟ್ವೀಟ್ ಮಾಡಿದ್ದ ಬುಮ್ರಾ, ನಮ್ಮ ಪುಟ್ಟ ಕುಟುಂಬ ಬೆಳೆದಿದೆ & ನಾನು ನಿರೀಕ್ಷಿಸಿದ್ದಕ್ಕಿಂತ ಹೆಚ್ಚಿನ ಸಂತೋಷವಾಗಿದೆ. ಇಂದು ಬೆಳಗ್ಗೆ ನಾವು ನಮ್ಮ ಕುಟುಂಬಕ್ಕೆ ಗಂಡು ಮಗುವನ್ನು ಸ್ವಾಗತಿಸಿದ್ದೇವೆ.'ಅಂಗದ್‌ ಜಸ್ಪ್ರೀತ್ ಬುಮ್ರಾ' ಈ ಜಗತ್ತಿಗೆ ಬಂದಿದ್ದಾನೆ. ನಮಗೀಗ ಚಂದ್ರನ ಮೇಲೆ ನಿಂತಂಥಹ ಅನುಭವವಾಗುತ್ತಿದೆ. ಇದು ನಮ್ಮ ಬದುಕಿನ ಮತ್ತೊಂದು ಹೊಸ ಅಧ್ಯಾಯಕ್ಕೆ ನಾಂದಿ ಹಾಡಿದಂತಾಗಿದೆ ಎಂದು ಬುಮ್ರಾ ಬರೆದುಕೊಂಡಿದ್ದರು. 

ರಾಹುಲ್‌ ಮೇಲೆ ಸಾಕಷ್ಟು ನಿರೀಕ್ಷೆ:

ಟೀಂ ಇಂಡಿಯಾ ವಿಕೆಟ್ ಕೀಪರ್‌ ಬ್ಯಾಟರ್ ಕೆ ಎಲ್ ರಾಹುಲ್‌ ಸಂಪೂರ್ಣ ಫಿಟ್ ಆದ ಬಳಿಕ ಇದೀಗ ತಂಡ ಕೂಡಿಕೊಂಡಿದ್ದು, ಪಾಕಿಸ್ತಾನ ಎದುರು ಕಣಕ್ಕಿಳಿಯುವುದು ಬಹುತೇಕ ಖಚಿತ ಎನಿಸಿದೆ. ಕನ್ನಡಿಗ ಕೆ ಎಲ್ ರಾಹುಲ್, ಏಷ್ಯಾಕಪ್ ಟೂರ್ನಿಗೆ ಆಯ್ಕೆಯಾಗಿದ್ದರೂ, ಗ್ರೂಪ್ ಹಂತದ ಮೊದಲೆರಡು ಪಂದ್ಯಗಳಿಗೆ ಅಲಭ್ಯರಾಗಿದ್ದರು. ಇದೀಗ ಬಲಾಢ್ಯ ಪಾಕ್ ಎದುರು ಕೆ ಎಲ್ ರಾಹುಲ್‌ಗೆ ಅಗ್ನಿ ಪರೀಕ್ಷೆ ಎದುರಾಗುವ ಸಾಧ್ಯತೆಯಿದೆ.

ಏಷ್ಯಾಕಪ್ ಟೂರ್ನಿಗೆ ಭಾರತ ಕ್ರಿಕೆಟ್ ತಂಡ ಹೀಗಿದೆ ನೋಡಿ:

ರೋಹಿತ್ ಶರ್ಮಾ(ನಾಯಕ), ಶುಭ್‌ಮನ್ ಗಿಲ್‌, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆ ಎಲ್ ರಾಹುಲ್, ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ, ಇಶಾನ್ ಕಿಶನ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಶಾರ್ದೂಲ್ ಠಾಕೂರ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಕುಲ್ದೀಪ್ ಯಾದವ್, ಪ್ರಸಿದ್ಧ್ ಕೃಷ್ಣ, ಸಂಜು ಸ್ಯಾಮ್ಸನ್(ಮೀಸಲು ಆಟಗಾರ).

Asia Cup 2023: ಭಾರತ vs ಪಾಕಿಸ್ತಾನ ಪಂದ್ಯಕ್ಕೆ ಮಾತ್ರ ಮೀಸಲು ದಿನ ಏಕೆ? ಬಾಂಗ್ಲಾ, ಲಂಕಾ ವಿರೋಧ?

ಮಳೆ ಬಿಡುವು: ಮೈದಾನದಲ್ಲಿ ಭಾರತ ಆಟಗಾರರ ಅಭ್ಯಾಸ

ಕೊಲಂಬೊ: ಏಷ್ಯಾಕಪ್‌ ಟೂರ್ನಿಯ ಸೂಪರ್‌-4 ಹಂತದ ಪಂದ್ಯಗಳಿಗೆ ಸಜ್ಜಾಗುತ್ತಿರುವ ಭಾರತೀಯ ಆಟಗಾರರು ಶುಕ್ರವಾರ ಮೈದಾನಕ್ಕೆ ಆಗಮಿಸಿ ಅಭ್ಯಾಸ ನಡೆಸಿದರು. ಕೊಲಂಬೊದಲ್ಲಿ ಕೆಲ ದಿನಗಳಿಂದ ಭಾರೀ ಮಳೆಯಾಗುತ್ತಿದ್ದು, ಹೀಗಾಗಿ ಗುರುವಾರ ಟೀಂ ಇಂಡಿಯಾ ಆಟಗಾರರು ಒಳಾಂಗಣ ಕ್ರೀಡಾಂಗಣದ ನೆಟ್ಸ್‌ನಲ್ಲೇ ಅಭ್ಯಾಸ ನಡೆಸಿದ್ದರು. ಆದರೆ ಶುಕ್ರವಾರ ಮಳೆ ಬಿಡುವು ನೀಡಿದ ಕಾರಣ ಸೂಪರ್‌-4 ಪ್ರವೇಶಿಸಿದ ಬಳಿಕ ಮೊದಲ ಬಾರಿ ಭಾರತೀಯ ಆಟಗಾರರು ಮೈದಾನಕ್ಕೆ ಆಗಮಿಸಿ ಕೆಲ ಕಾಲ ನೆಟ್ಸ್‌ನಲ್ಲಿ ಬೆವರಿಳಿಸಿದರು. ಬಾಂಗ್ಲಾದೇಶ, ಶ್ರೀಲಂಕಾ ಆಟಗಾರರು ಕೂಡಾ ನೆಟ್ಸ್‌ನಲ್ಲಿ ಕಠಿಣ ಅಭ್ಯಾಸದಲ್ಲಿ ನಿರತರಾಗಿದ್ದು ಕಂಡುಬಂತು.
 

click me!