ನೆರೆಹೊರೆಯವರನ್ನು ಪ್ರೀತಿಸಿದರೆ ತಪ್ಪೇನಲ್ಲ..! ಕೊಹ್ಲಿ ಮೇಲಿನ ಅಭಿಮಾನ ತೋರಿದ ಪಾಕ್‌ ಮಹಿಳಾ ಅಭಿಮಾನಿ

By Naveen Kodase  |  First Published Sep 3, 2023, 5:35 PM IST

ಭಾರತ ಹಾಗೂ ಪಾಕಿಸ್ತಾನ ತಂಡಗಳ ನಡುವಿನ ಏಷ್ಯಾಕಪ್ ಟೂರ್ನಿಯ ಹೈವೋಲ್ಟೇಜ್ ಕದನಕ್ಕೆ ಕೊಲಂಬೊದ ಪಲ್ಲೆಕೆಲೆ ಅಂತಾರಾಷ್ಟ್ರೀಯ ಮೈದಾನ ಆತಿಥ್ಯವನ್ನು ವಹಿಸಿತ್ತು. ವಿರಾಟ್ ಕೊಹ್ಲಿಯ ಆಟವನ್ನು ನೋಡಲು ಪಾಕಿಸ್ತಾನದಿಂದ ಮಹಿಳಾ ಅಭಿಮಾನಿಯೊಬ್ಬಳು ಲಂಕಾಗೆ ಬಂದಿದ್ದಾಳೆ. ಬದ್ದ ಎದುರಾಳಿ ಪಾಕಿಸ್ತಾನ ಎದುರು ವಿರಾಟ್ ಕೊಹ್ಲಿ ಶತಕ ಸಿಡಿಸಬಹುದು ಎನ್ನುವ ಆಸೆಯಲ್ಲಿ ಲಂಕಾಗೆ ಬಂದಿಳಿದಿದ್ದಳು. ಆದರೆ ವಿರಾಟ್ ಕೊಹ್ಲಿ ಬೇಗನೇ ವಿಕೆಟ್ ಒಪ್ಪಿಸಿದ್ದು ಆಕೆಯ ಕನಸು ನುಚ್ಚುನೂರಾಗುವಂತೆ ಮಾಡಿದೆ.


ಪಲ್ಲೆಕೆಲೆ(ಸೆ.03): ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯವನ್ನು ನೋಡಲು ಕ್ರಿಕೆಟ್ ಅಭಿಮಾನಿಗಳು ತುದಿಗಾಲಿನಲ್ಲಿ ನಿಂತಿರುತ್ತಾರೆ. ನೆರೆಹೊರೆಯ ದೇಶಗಳಾಗಿರುವ ಭಾರತ ಹಾಗೂ ಪಾಕಿಸ್ತಾನ ಕ್ರಿಕೆಟ್‌ ಜಗತ್ತಿನ ಬದ್ಧ ಎದುರಾಳಿಗಳಾಗಿ ಬಿಂಬಿತವಾಗಿವೆ. ಭಾರತ ಹಾಗೂ ಪಾಕಿಸ್ತಾನ ತಂಡಗಳು ಕ್ರಿಕೆಟ್ ಮೈದಾನದಲ್ಲಿ ಮುಖಾಮುಖಿಯಾಗುತ್ತಿವೆ ಎಂದರೆ ಬರೀ ಆಟಗಾರರಲ್ಲಿ ಮಾತ್ರವಲ್ಲ ಪ್ರೇಕ್ಷಕರಲ್ಲಿಯೂ ಒಂದು ರೀತಿಯ ಕ್ರೇಜ್‌ ಹೆಚ್ಚಾಗಿಯೇ ಇರುತ್ತದೆ. ಹೀಗಿರುವಾಗಲೇ ಪಾಕಿಸ್ತಾನದ ಮಹಿಳಾ ಕ್ರಿಕೆಟ್‌ ಅಭಿಮಾನಿಯೊಬ್ಬಳು, ಟೀಂ ಇಂಡಿಯಾ ಕ್ರಿಕೆಟಿಗ ವಿರಾಟ್ ಕೊಹ್ಲಿ ಮೇಲಿನ ತಮ್ಮ ಅಭಿಮಾನವನ್ನು ಅನಾವರಣ ಮಾಡಿದ್ದಾಳೆ. ಪಾಕಿಸ್ತಾನಿ ಮಹಿಳಾ ಫ್ಯಾನ್ ಆಡಿರುವ ಮಾತುಗಳು ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲ್ ಆಗಿವೆ.

ಹೌದು, ಭಾರತ ಹಾಗೂ ಪಾಕಿಸ್ತಾನ ತಂಡಗಳ ನಡುವಿನ ಏಷ್ಯಾಕಪ್ ಟೂರ್ನಿಯ ಹೈವೋಲ್ಟೇಜ್ ಕದನಕ್ಕೆ ಕೊಲಂಬೊದ ಪಲ್ಲೆಕೆಲೆ ಅಂತಾರಾಷ್ಟ್ರೀಯ ಮೈದಾನ ಆತಿಥ್ಯವನ್ನು ವಹಿಸಿತ್ತು. ವಿರಾಟ್ ಕೊಹ್ಲಿಯ ಆಟವನ್ನು ನೋಡಲು ಪಾಕಿಸ್ತಾನದಿಂದ ಮಹಿಳಾ ಅಭಿಮಾನಿಯೊಬ್ಬಳು ಲಂಕಾಗೆ ಬಂದಿದ್ದಾಳೆ. ಬದ್ದ ಎದುರಾಳಿ ಪಾಕಿಸ್ತಾನ ಎದುರು ವಿರಾಟ್ ಕೊಹ್ಲಿ ಶತಕ ಸಿಡಿಸಬಹುದು ಎನ್ನುವ ಆಸೆಯಲ್ಲಿ ಲಂಕಾಗೆ ಬಂದಿಳಿದಿದ್ದಳು. ಆದರೆ ವಿರಾಟ್ ಕೊಹ್ಲಿ ಬೇಗನೇ ವಿಕೆಟ್ ಒಪ್ಪಿಸಿದ್ದು ಆಕೆಯ ಕನಸು ನುಚ್ಚುನೂರಾಗುವಂತೆ ಮಾಡಿದೆ. ಇನ್ನು ಈ ಮಹಿಳಾ ಅಭಿಮಾನಿ ಒಂದು ಕೆನ್ನೆಯ ಮೇಲೆ ಪಾಕಿಸ್ತಾನದ ಧ್ವಜ ಹಾಗೂ ಇನ್ನೊಂದು ಕೆನ್ನೆಯ ಬದಿಯಲ್ಲಿ ಭಾರತದ ಧ್ವಜವನ್ನು ಚಿತ್ರಿಸಿಕೊಂಡು ಮೈದಾನಕ್ಕೆ ಕ್ರಿಕೆಟ್ ಪಂದ್ಯ ವೀಕ್ಷಿಸಲು ಬಂದಿದ್ದಾಳೆ.

Tap to resize

Latest Videos

ಭಾರತ-ಪಾಕ್ ಪಂದ್ಯದ ವೇಳೆ ಬೆಂಗಳೂರಿಗನಿಂದ 62 ಬಿರಿಯಾನಿ ಆರ್ಡರ್..! ನಾವು ಪಾರ್ಟಿಗೆ ಬರಬಹುದಾ ಎಂದ ಸ್ವಿಗ್ಗಿ ಮಾಲೀಕ!

ಏಷ್ಯಾಕಪ್ ಟೂರ್ನಿಯ ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯ ಮಳೆಯಿಂದಾಗಿ ಅರ್ಧಕ್ಕೆ ರದ್ದಾಯಿತು. ಈ ವೇಳೆ ಮಾತನಾಡಿರುವ ಪಾಕಿಸ್ತಾನದ ಮಹಿಳಾ ಅಭಿಮಾನಿ, "ನಾನು ವಿರಾಟ್ ಕೊಹ್ಲಿ ಆಟವನ್ನು ನೋಡಲು ಇಲ್ಲಿಗೆ ಬಂದಿದ್ದೇನೆ. ಯಾಕೆಂದರೆ ನಾನು ಅವರ ದೊಡ್ಡ ಅಭಿಮಾನಿ. ನಾನು ಅವರು ಶತಕ ಸಿಡಿಸಬಹುದು ಎಂದು ಬಯಸಿದ್ದೇ, ಆದರೆ ನನ್ನ ಹೃದಯ ಒಡೆದು ಹೋಯಿತು" ಎಂದು ಹೇಳಿದ್ದಾಳೆ.

A Pakistan fan came for Virat Kohli said:

"I came only for Virat Kohli, I expected a century from him. My heart is broken". pic.twitter.com/PTbfhuOT9d

— Mufaddal Vohra (@mufaddal_vohra)

 
ಇನ್ನು ಇದೇ ವೇಳೆ, "ನಾನು ಪಾಕಿಸ್ತಾನವನ್ನು ಬೆಂಬಲಿಸುತ್ತೇನೆ ಹಾಗೂ ಭಾರತವನ್ನೂ ಬೆಂಬಲಿಸುತ್ತೇನೆ. ನೆರೆಹೊರೆಯವರನ್ನು ಪ್ರೀತಿಸುವುದರಲ್ಲಿ ತಪ್ಪೇನು ಇಲ್ಲ ಅಲ್ವಾ?" ಎಂದಿದ್ದಾರೆ. ಒಂದು ವೇಳೆ ವಿರಾಟ್ ಕೊಹ್ಲಿ ಹಾಗೂ ಬಾಬರ್ ಅಜಂ ಇಬ್ಬರಲ್ಲಿ ಒಬ್ಬರನ್ನು ಆಯ್ಕೆ ಮಾಡಿ ಎಂದರೆ ಯಾರನ್ನು ಆಯ್ಕೆ ಮಾಡುತ್ತೀರಿ ಎನ್ನುವ ಪ್ರಶ್ನೆಗೆ ಪಾಕಿಸ್ತಾನದ ಮಹಿಳಾ ಅಭಿಮಾನಿ "ವಿರಾಟ್ ಕೊಹ್ಲಿಯನ್ನು" ಎಂದು ಹೇಳಿದ್ದಾಳೆ.

'ದೋಸ್ತಿ ಮೈದಾನದ ಹೊರಗಡೆ ಇಟ್ಕೊಳ್ಳಿ': ಇಂಡೋ-ಪಾಕ್ ಕ್ರಿಕೆಟಿಗರಿಗೆ ಖಡಕ್ ವಾರ್ನಿಂಗ್ ಕೊಟ್ಟ ಗೌತಮ್ ಗಂಭೀರ್

ವೆಸ್ಟ್ ಇಂಡೀಸ್ ಎದುರಿನ ಸರಣಿ ಬಳಿಕ ಒಂದು ತಿಂಗಳ ವಿಶ್ರಾಂತಿ ನಂತರ ವಿರಾಟ್ ಕೊಹ್ಲಿ ಟೀಂ ಇಂಡಿಯಾ ಕೂಡಿಕೊಂಡಿದ್ದರು. ಬಲಿಷ್ಠ ಪಾಕಿಸ್ತಾನ ಎದುರು ವಿರಾಟ್ ಕೊಹ್ಲಿ ದೊಡ್ಡ ಇನಿಂಗ್ಸ್ ಆಡಲಿದ್ದಾರೆ ಎನ್ನುವ ನಿರೀಕ್ಷೆಯಿತ್ತು. ಆದರೆ ವಿರಾಟ್ ಕೊಹ್ಲಿ 7 ಎಸತಗಳನ್ನು ಎದುರಿಸಿ ಕೇವಲ 4 ರನ್ ಗಳಿಸಿ ಶಾಹೀನ್ ಅಫ್ರಿದಿಗೆ ವಿಕೆಟ್ ಒಪ್ಪಿಸಿ ಪೆವಿಲಿಯನ್ ಸೇರಿದರು.

click me!