Ashes 2023: ಇಂಗ್ಲೆಂಡ್‌ Bazball ಕ್ರಿಕೆಟ್ ಟ್ರೋಲ್ ಮಾಡಿದ ವಾಸೀಂ ಜಾಫರ್..! ಇಲ್ಲಿವೆ ಮತ್ತಷ್ಟು ಮೀಮ್ಸ್

By Naveen Kodase  |  First Published Jun 21, 2023, 12:58 PM IST

* ಆ್ಯಷಸ್‌ ಟೆಸ್ಟ್ ಸರಣಿಯಲ್ಲಿ ಸೋಲುಂಡ ಇಂಗ್ಲೆಂಡ್‌
* ಇಂಗ್ಲೆಂಡ್ ಎದುರು 2 ವಿಕೆಟ್‌ ರೋಚಕ ಜಯ ಸಾಧಿಸಿದ ಆಸ್ಟ್ರೇಲಿಯಾ
* ಇಂಗ್ಲೆಂಡ್‌ ಬಾಜ್‌ಬಾಲ್ ಆಟ ಟ್ರೋಲ್ ಮಾಡಿದ ವಾಸೀಂ ಜಾಫರ್


ಬರ್ಮಿಂಗ್‌ಹ್ಯಾಮ್‌(ಜೂ.21): ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ತಂಡಗಳ ನಡುವಿನ ಆ್ಯಷಸ್‌ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಆತಿಥೇಯ ಇಂಗ್ಲೆಂಡ್ ಎದುರು ಪ್ಯಾಟ್‌ ಕಮಿನ್ಸ್‌ ನೇತೃತ್ವದ ಆಸ್ಟ್ರೇಲಿಯಾ ತಂಡವು ಎರಡು ವಿಕೆಟ್ ರೋಚಕ ಜಯ ಸಾಧಿಸಿದೆ. ಈ ಮೂಲಕ 5 ಪಂದ್ಯಗಳ ಆ್ಯಷಸ್‌ ಸರಣಿಯಲ್ಲಿ ಕಾಂಗರೂ ಪಡೆ 1-0 ಮುನ್ನಡೆ ಸಾಧಿಸಿದೆ. ಏಜ್‌ಬಾಸ್ಟನ್‌ ಟೆಸ್ಟ್ ಗೆಲುವಿನ ಮೂಲಕ ಆಸ್ಟ್ರೇಲಿಯಾ ತಂಡವು ಭರ್ಜರಿ ಆರಂಭ ಪಡೆದಿದೆ. ಇನ್ನು ಈ ಪಂದ್ಯದಲ್ಲಿ ಬೆನ್ ಸ್ಟೋಕ್ಸ್ ನೇತೃತ್ವದ ಬಾಜ್‌ಬಾಲ್‌ ರಣತಂತ್ರದ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಪರ-ವಿರೋಧ ಚರ್ಚೆ ಜೋರಾಗಿದೆ. ಇನ್ನು ಆಸ್ಟ್ರೇಲಿಯಾ ಎದುರು ಇಂಗ್ಲೆಂಡ್ ತಂಡವು ರೋಚಕ ಸೋಲು ಅನುಭವಿಸುತ್ತಿದ್ದಂತೆಯೇ ಟೀಂ ಇಂಡಿಯಾ (Team India) ಮಾಜಿ ಕ್ರಿಕೆಟಿಗ ವಾಸೀಂ ಜಾಫರ್ ಟ್ರೋಲ್‌ ಮಾಡಿದ್ದಾರೆ.

ಗೆಲು​ವಿಗೆ 281 ರನ್‌ ಗುರಿ ಪಡೆ​ದಿದ್ದ ಆಸೀಸ್‌ 4ನೇ ದಿನ​ದಂತ್ಯಕ್ಕೆ 3 ವಿಕೆ​ಟ್‌ಗೆ 107 ರನ್‌ ಗಳಿ​ಸಿ​ತ್ತು. ಕೊನೆ ದಿನ ಬೇಕಿದ್ದ 174 ರನ್‌​ಗ​ಳನ್ನು ಕೇವಲ 4.3 ಓವರ್‌ ಬಾಕಿ ಇರು​ವಂತೆ ಆಸೀಸ್‌ ಬೆನ್ನ​ತ್ತಿತು. ಭಾರೀ ಮಳೆ​ಯಿಂದಾಗಿ ಪಂದ್ಯ ಮಂಗ​ಳ​ವಾರ 3 ಗಂಟೆ ತಡ​ವಾಗಿ ಆರಂಭ​ವಾ​ಯಿತು. 67 ಓವರಲ್ಲಿ ಆಸೀಸ್‌ಗೆ 174 ರನ್‌ ಬೇಕಿ​ದ್ದರೆ, ಇಂಗ್ಲೆಂಡ್‌ಗೆ 7 ವಿಕೆಟ್‌ ಬೇಕಿತ್ತು. ಮೊದಲ ಇನ್ನಿಂಗ್‌್ಸ​ನ ಶತಕ ವೀರ ಉಸ್ಮಾನ್ ಖವಾಜ 65 ರನ್‌ ಸಿಡಿ​ಸಿ​ದರೂ, ನಿರ್ಣಾ​ಯಕ ಹಂತ​ದಲ್ಲಿ ಔಟಾಗಿ ಆಸೀಸ್‌ ಪಾಳ​ಯ​ದಲ್ಲಿ ಆತಂಕ ಮೂಡಿ​ಸಿ​ದರು. ಕ್ಯಾಮರೋನ್ ಗ್ರೀನ್‌ 28, ಅಲೆಕ್ಸ್‌ ಕೇರ್ರಿ 20 ರನ್‌ ಗಳಿಸಿ ಔಟಾದ ಬಳಿಕ ಮುರಿ​ಯದ 9ನೇ ವಿಕೆ​ಟ್‌ಗೆ 54 ರನ್‌ ಸೇರಿ​ಸಿದ ಪ್ಯಾಟ್ ಕಮಿ​ನ್ಸ್‌(44) ಹಾಗೂ ನೇಥನ್ ಲಯ​ನ್‌(16) ತಂಡ​ವನ್ನು ಗೆಲ್ಲಿ​ಸಿ​ದರು. 

Latest Videos

undefined

Ashes 2023: ಅತಿಯಾದ ಆತ್ಮವಿಶ್ವಾಸಕ್ಕೆ ಬೆಲೆ ತೆತ್ತ ಇಂಗ್ಲೆಂಡ್‌..! ರೋಚಕ ಪಂದ್ಯ ಗೆದ್ದ ಆಸ್ಟ್ರೇಲಿಯಾ

ಆಸ್ಟ್ರೇಲಿಯಾ ಎದುರು ಇಂಗ್ಲೆಂಡ್‌ ತಂಡವು ಸೋಲು ಕಾಣುತ್ತಿದ್ದಂತೆಯೇ, ಸೋಷಿಯಲ್ ಮೀಡಿಯಾದಲ್ಲಿ ನೆಟ್ಟಿಗರು ಬೆನ್ ಸ್ಟೋಕ್ಸ್‌ (Ben Stokes) ಪಡೆದ ಬಾಜ್‌ಬಾಲ್‌ (Bazball) ಶೈಲಿಯ ಆಟವನ್ನು ಟ್ರೋಲ್ ಮಾಡಿದ್ದಾರೆ.

Well played Australia 👏🏽😅 pic.twitter.com/Rq8ykZwJ8L

— Wasim Jaffer (@WasimJaffer14)

Overconfidence of Ben Stokes backfired
Hyped gets out of the park pic.twitter.com/SmWErdPqL7

— 𝐌𝐫. 𝐌𝐞𝐦𝐞𝐫 𝐍𝐢𝐤𝐡𝐢𝐥 (@Nikhil_memes)

Bazball shouldn't d!e. But the occasional stupidity which comes with it should. Not everything agressive is Bazball.

— Silly Point (@FarziCricketer)

ಏನಿದು ಬಾಜ್‌ಬಾಲ್‌ ಶೈಲಿ?

‘ಬಾಜ್‌’ ಎಂದು ಕರೆಸಿಕೊಳ್ಳುವ ನ್ಯೂಜಿಲೆಂಡ್‌ ಮಾಜಿ ಕ್ರಿಕೆಟಿಗ ಬ್ರೆಂಡನ್‌ ಮೆಕ್ಕಲಂ ಪ್ರಧಾನ ಕೋಚ್‌ ಆಗಿ ನೇಮಕಗೊಂಡ ಬಳಿಕ ಇಂಗ್ಲೆಂಡ್‌ ಆಕ್ರಮಣಕಾರಿ ಆಟಕ್ಕೆ ಹೆಚ್ಚು ಒತ್ತು ನೀಡುತ್ತಿದೆ. ಪರಿಸ್ಥಿತಿ ಎಂತದ್ದೇ ಇರಲಿ, ತಂಡ ಆಕ್ರಮಣಕಾರಿ ಆಟವಾಡುವುದನ್ನು ನಿಲ್ಲಿಸುವುದಿಲ್ಲ. ಈ ಕಾರಣಕ್ಕಾಗಿಯೇ ಬಾಜ್‌ಬಾಲ್‌ ಆಟದ ಶೈಲಿ ಸಾಕಷ್ಟು ಮಹತ್ವ ಪಡೆದುಕೊಂಡಿದೆ. 

ಆಕ್ರಮಣಕಾರಿ ಆಟದ ಮೂಲಕವೇ ಈಗಾಗಲೇ ಹಲವು ಟೆಸ್ಟ್ ಪಂದ್ಯಗಳನ್ನು ಜಯಿಸಿರುವ ಬೆನ್ ಸ್ಟೋಕ್ಸ್ ನೇತೃತ್ವದ ಇಂಗ್ಲೆಂಡ್ ತಂಡವು ಇದೀಗ, ಆ್ಯಷಸ್‌ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಅತಿಯಾದ ಆತ್ಮವಿಶ್ವಾಸದಿಂದಲೇ ಪಂದ್ಯವನ್ನು ಸೋತಿತಾ ಎನ್ನುವ ಪ್ರಶ್ನೆ ಕಾಡಲಾರಂಭಿಸಿದೆ. ಇಂಗ್ಲೆಂಡ್ ತಂಡವು ಮೊದಲ ಇನಿಂಗ್ಸ್‌ನಲ್ಲಿ 78 ಓವರ್‌ಗಳಲ್ಲಿ 8 ವಿಕೆಟ್ ಕಳೆದುಕೊಂಡು 393 ರನ್ ಬಾರಿಸಿ ಮೊದಲ ದಿನವೇ ಇನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತು. ಆ ಸಂದರ್ಭದಲ್ಲಿ ಮಾಜಿ ನಾಯಕ ಜೋ ರೂಟ್‌ ಅಜೇಯ 118 ರನ್ ಬಾರಿಸಿದ್ದರು. ಈ ಸಂದರ್ಭದಲ್ಲಿ ಬೆನ್ ಸ್ಟೋಕ್ಸ್ ಇನಿಂಗ್ಸ್‌ ಡಿಕ್ಲೇರ್ ಮಾಡಿಕೊಂಡಿದ್ದರು. ಒಂದು ವೇಳೆ ಇನ್ನಷ್ಟು ಓವರ್‌ವರೆಗೆ ಜೋ ರೂಟ್ ಆಡಿದ್ದರೇ, ಫಲಿತಾಂಶ ಬೇರೆಯದ್ದೇ ಆಗುವ ಸಾಧ್ಯತೆಯಿತ್ತು. ಇದೀಗ ಇಂಗ್ಲೆಂಡ್‌ ನೆಲದಲ್ಲಿ ಇಂಗ್ಲೆಂಡ್‌ಗೆ ಸೋಲಿನ ರುಚಿ ತೋರಿಸುವಲ್ಲಿ ಪ್ಯಾಟ್ ಕಮಿನ್ಸ್‌ ನೇತೃತ್ವದ ಆಸ್ಟ್ರೇಲಿಯಾ ತಂಡವು ಯಶಸ್ವಿಯಾಗಿದೆ. 

click me!