Ashes 2021: ಇಂಗ್ಲೆಂಡ್ ದಿಢೀರ್ ಕುಸಿತ, ಆಸ್ಟ್ರೇಲಿಯಾದ ಬಿಗಿ ಹಿಡಿತದಲ್ಲಿ ಜೋ ರೂಟ್ ಪಡೆ..!

Suvarna News   | Asianet News
Published : Dec 18, 2021, 06:53 PM IST
Ashes 2021: ಇಂಗ್ಲೆಂಡ್ ದಿಢೀರ್ ಕುಸಿತ, ಆಸ್ಟ್ರೇಲಿಯಾದ ಬಿಗಿ ಹಿಡಿತದಲ್ಲಿ ಜೋ ರೂಟ್ ಪಡೆ..!

ಸಾರಾಂಶ

* ಆಸ್ಟ್ರೇಲಿಯಾದ ಬಿಗಿ ಹಿಡಿತದಲ್ಲಿ ಅಡಿಲೇಡ್ ಟೆಸ್ಟ್ ಪಂದ್ಯ * ಎರಡನೇ ಇನಿಂಗ್ಸ್‌ನಲ್ಲಿ 282 ರನ್‌ಗಳ ಮುನ್ನಡೆ ಸಾಧಿಸಿದ ಆಸೀಸ್ * ಬ್ಯಾಟಿಂಗ್‌ನಲ್ಲಿ ದಿಢೀರ್ ವೈಫಲ್ಯ ಅನುಭವಿಸಿದ ಇಂಗ್ಲೆಂಡ್

ಅಡಿಲೇಡ್(ಡಿ.18): ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ (Australia vs England) ತಂಡಗಳ ನಡುವಿನ ಪಿಂಕ್ ಬಾಲ್ ಟೆಸ್ಟ್‌ ಪಂದ್ಯದ ಮೂರನೇ ದಿನದಾಟದಲ್ಲೂ ಆತಿಥೇಯ ಆಸ್ಟ್ರೇಲಿಯಾ ತಂಡವು ಬಿಗಿ ಹಿಡಿತ ಸಾಧಿಸಿದೆ. ಇದರೊಂದಿಗೆ ಆ್ಯಷಸ್ ಟೆಸ್ಟ್ ಸರಣಿಯ (Ashes Test Series) ಅಡಿಲೇಡ್ ಟೆಸ್ಟ್ (Adelaide Test) ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಇಂಗ್ಲೆಂಡ್ 236 ರನ್‌ಗಳಿಗೆ ಸರ್ವಪತನ ಕಂಡಿದೆ. ಇನ್ನು ಎರಡನೇ ಇನಿಂಗ್ಸ್ ಆರಂಭಿಸಿದ ಆಸ್ಟ್ರೇಲಿಯಾ ತಂಡವು ಮೂರನೇ ದಿನದಾಟದಂತ್ಯದ ವೇಳೆಗೆ ಒಂದು ವಿಕೆಟ್ ಕಳೆದುಕೊಂಡು 45 ರನ್ ಬಾರಿಸಿದ್ದು ಒಟ್ಟಾರೆ, 282 ರನ್‌ಗಳ ಮುನ್ನಡೆ ಸಾಧಿಸಿದೆ.

ಅಡಿಲೇಡ್‌ ಟೆಸ್ಟ್ ಪಂದ್ಯದ ಎರಡನೇ ದಿನದಾಟದಂತ್ಯಕ್ಕೆ 2 ವಿಕೆಟ್ ಕಳೆದುಕೊಂಡು ಕೇವಲ 17 ರನ್ ಬಾರಿಸಿದ್ದ ಇಂಗ್ಲೆಂಡ್ ತಂಡಕ್ಕೆ ಮತ್ತೊಮ್ಮೆ ನಾಯಕ ಜೋ ರೂಟ್ (Joe Root) ಹಾಗೂ ಡೇವಿಡ್ ಮಲಾನ್ (Dawid Malan) ಆಸರೆಯಾದರು. ಮೂರನೇ ದಿನದಾಟದ ಆರಂಭದಲ್ಲಿ ಈ ಜೋಡಿ ಉಪಯುಕ್ತ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾಯಿತು. ಮೂರನೇ ವಿಕೆಟ್‌ಗೆ ಈ ಜೋಡಿ 237 ಎಸೆತಗಳನ್ನು ಎದುರಿಸಿ 138 ರನ್‌ಗಳ ಜತೆಯಾಟವಾಡಿ ಮಿಂಚಿತು. ಈ ಜೋಡಿಯನ್ನು ಬೇರ್ಪಡಿಸುವಲ್ಲಿ ಕ್ಯಾಮರೋನ್ ಗ್ರೀನ್‌ ಯಶಸ್ವಿಯಾದರು. ಜೋ ರೂಟ್ 116 ಎಸೆತಗಳನ್ನು ಎದುರಿಸಿ 7 ಬೌಂಡರಿ ಸಹಿತ 62 ರನ್ ಬಾರಿಸಿ ಸ್ಟೀವ್ ಸ್ಮಿತ್‌ಗೆ (Steve Smith) ಕ್ಯಾಚಿತ್ತು ಪೆವಿಲಿಯನ್ ಸೇರಿದರು. ಇದರ ಬೆನ್ನಲ್ಲೇ ಡೇವಿಡ್ ಮಲಾನ್‌ 80 ರನ್ ಬಾರಿಸಿ ಮಿಚೆಲ್ ಸ್ಟಾರ್ಕ್‌ಗೆ ವಿಕೆಟ್‌ ಒಪ್ಪಿಸಿದರು.

ಮತ್ತೊಮ್ಮೆ ದಿಢೀರ್ ಕುಸಿತ ಕಂಡ ಇಂಗ್ಲೆಂಡ್: ಒಂದು ಹಂತದವರೆಗೂ 150 ರನ್‌ಗಳಿಗೆ ಕೇವಲ 2 ವಿಕೆಟ್ ಕಳೆದುಕೊಂಡಿದ್ದ ಇಂಗ್ಲೆಂಡ್ ತಂಡವು ಜೋ ರೂಟ್ ವಿಕೆಟ್‌ ಪತನವಾಗುತ್ತಿದ್ದಂತೆಯೇ ಮತ್ತೊಮ್ಮೆ ನಾಟಕೀಯ ಕುಸಿತ ಕಂಡಿತು. ಇಂಗ್ಲೆಂಡ್ ತನ್ನ ಖಾತೆಗೆ 86 ರನ್ ಸೇರಿಸುವಷ್ಟರಲ್ಲಿ ಉಳಿದ 8 ವಿಕೆಟ್ ಕಳೆದುಕೊಳ್ಳುವ ಮೂಲಕ ಫಾಲೋ ಆನ್ ಭೀತಿಗೆ ಸಿಲುಕಿತು. ಮಧ್ಯಮ ಕ್ರಮಾಂಕದಲ್ಲಿ ಬೆನ್ ಸ್ಟೋಕ್ಸ್‌ 34 ಹಾಗೂ ಕ್ರಿಸ್‌ ವೋಕ್ಸ್ 24 ರನ್‌ ಬಾರಿಸಿದ್ದು ಬಿಟ್ಟರೆ ಉಳಿದ್ಯಾವ ಬ್ಯಾಟರ್‌ಗಳು ಸಹಾ ಎರಡಂಕಿ ಮೊತ್ತ ದಾಖಲಿಸಲು ಯಶಸ್ವಿಯಾಗಲಿಲ್ಲ. ಓಲಿ ಪೋಪ್ 5 ರನ್ ಬಾರಿಸಿದರೆ, ಜೋಸ್ ಬಟ್ಲರ್ ಶೂನ್ಯ ಸುತ್ತಿ ನಿರಾಸೆ ಮೂಡಿಸಿದರು.  ಅಂತಿಮವಾಗಿ ಇಂಗ್ಲೆಂಡ್ ತಂಡವು ಮೊದಲ ಇನಿಂಗ್ಸ್‌ನಲ್ಲಿ 236 ರನ್‌ಗಳಿಗೆ ಆಲೌಟ್ ಆಗುವ ಮೂಲಕ ಇನ್ನೂ 237 ರನ್‌ಗಳ ಹಿನ್ನೆಡೆ ಅನುಭವಿಸಿತು. ಆಸ್ಟ್ರೇಲಿಯಾ ತಂಡಕ್ಕೆ ಫಾಲೋ ಆನ್ ಹೇರುವ ಅವಕಾಶವಿದ್ದರೂ ಸಹಾ, ಸ್ಟೀವ್ ಸ್ಮಿತ್ ಎರಡನೇ ಇನಿಂಗ್ಸ್‌ನಲ್ಲಿ ಬ್ಯಾಟಿಂಗ್ ಮಾಡಲು ಮುಂದಾದರು.

Ashes 2021: ಬೃಹತ್ ಮೊತ್ತ ಗಳಿಸಿದ ಆಸೀಸ್‌, ಸಂಕಷ್ಟಕ್ಕೆ ಸಿಲುಕಿದ ಇಂಗ್ಲೆಂಡ್

ಆಸೀಸ್ ಉತ್ತಮ ಆರಂಭ: ಮೊದಲ ಇನಿಂಗ್ಸ್‌ನಲ್ಲಿ 237 ರನ್‌ಗಳ ಬೃಹತ್ ಮುನ್ನಡೆ ಪಡೆದು ಎರಡನೇ ಇನಿಂಗ್ಸ್ ಆರಂಭಿಸಿದ ಆಸ್ಟ್ರೇಲಿಯಾ ತಂಡಕ್ಕೆ ಡೇವಿಡ್ ವಾರ್ನರ್ ಹಾಗೂ ಮಾರ್ಕಸ್ ಹ್ಯಾರಿಸ್ ಉತ್ತಮ ಆರಂಭ ಒದಗಿಸಿಕೊಟ್ಟರು. ಮೊದಲ ವಿಕೆಟ್‌ಗೆ ಈ ಜೋಡಿ 41 ರನ್‌ಗಳ ಜತೆಯಾಟ ನಿಭಾಯಿಸಿತು. ಮೊದಲ ಇನಿಂಗ್ಸ್‌ನಲ್ಲಿ ಕೇವಲ 5 ರನ್‌ಗಳಿಂದ ಶತಕ ವಂಚಿತರಾಗಿದ್ದ ಡೇವಿಡ್ ವಾರ್ನರ್ 13 ರನ್‌ ಗಳಿಸಿದ್ದಾಗ ಇಲ್ಲದ ರನ್ ಕದಿಯಲು ಹೋಗಿ ರನೌಟ್ ಆದರು. ಇದೀಗ ಮಾರ್ಕಸ್ ಹ್ಯಾರಿಸ್(21) ಹಾಗೂ ನೈಟ್‌ ವಾಚ್‌ಮನ್‌ ಮಿಚೆಲ್ ನೀಸರ್(2) ನಾಲ್ಕನೇ ದಿನಕ್ಕೆ ಕ್ರೀಸ್ ಕಾಯ್ದುಕೊಂಡಿದ್ದಾರೆ

ಸಂಕ್ಷಿಪ್ತ ಸ್ಕೋರ್

ಆಸ್ಟ್ರೇಲಿಯಾ: 473/9 ಡಿ (ಮೊದಲ ಇನಿಂಗ್ಸ್)
ಮಾರ್ನಸ್ ಲಬುಶೇನ್: 103
ಬೆನ್ ಸ್ಟೋಕ್ಸ್: 113/3

ಇಂಗ್ಲೆಂಡ್‌: 236/10 (ಮೊದಲ ಇನಿಂಗ್ಸ್)
ಡೇವಿಡ್ ಮಲಾನ್: 80
ಮಿಚೆಲ್ ಸ್ಟಾರ್ಕ್‌: 37/4

ಆಸ್ಟ್ರೇಲಿಯಾ: 45/1
ಮಾರ್ಕಸ್ ಹ್ಯಾರಿಸ್: 21

(* ಮೂರನೇ ದಿನದಾಟದಂತ್ಯದ ವೇಳೆಗೆ)
 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಡಿಕಾಕ್‌ ಡ್ಯಾಶಿಂಗ್‌ ಆಟದ ಮುಂದೆ ಥಂಡಾ ಹೊಡೆದ ಟೀಮ್‌ ಇಂಡಿಯಾ!
ಭಾರತ-ಪಾಕಿಸ್ತಾನ ಟಿ20 ವಿಶ್ವಕಪ್ ಪಂದ್ಯದ ಟಿಕೆಟ್ ಮಾರಾಟ ಆರಂಭ, 450 ರೂಗೆ ಬುಕಿಂಗ್ ಹೇಗೆ?